Wednesday, December 31, 2008

೨೦೦೯ -ಹೊಸ ವರ್ಷದ ಶುಭಾಶಯಗಳು

ಆಪರೇಷನ್ ಕಮಲ ಮತ್ತು ಮರು ಚುನಾವಣೆ -೨೦೦೮
೧ ಭಾರತಿಯ ಜನತಾ ಪಕ್ಷದ ಕಮಲ ಈಗ ಅರಳಿದೆ .೫ ಸ್ಥಾನಗಳನ್ನು ಗೆದ್ದು ಸದಸ್ಯರ ಸಂಖ್ಯೆ ೧೧೫ ಏರಿಸಿ ತನ್ನ ಸ್ವಂತ ಬಲದಿಂದ ಮುಂದಿನ ೪.೫ ವರ್ಷ ಆಡಳಿತ ವನ್ನು ಪೂರ್ಣ ಗೋಳಿಸಲಿದೆ.
ಆದರೆ ಪಕ್ಷ ದೊಳಗೆ ಏನೂ ಒಳ ಜಗಳ ವಿಲ್ಲದೆ ಸಂಘಟನೆ ಯಿಂದ ಅಭಿವ್ರದ್ಧಿ ಕಡೆಗೆ ಹೆಚ್ಚು ಗಮನ ಕೊಟ್ಟು ಜನರ ಮೆಚ್ಚುಗೆ ಪಾತ್ರವಾಗಿ ವಿಕಾಸ ದತ್ತ ಸಾಗಬೇಕು .
೨ ಕಾಂಗ್ರೆಸ್ ಪಕ್ಷ ಕೆಲವು ಮುಖಂಡರನ್ನು ತಮ್ಮ ಜೊತೆ ಬಿಟ್ಟು ಅವರಿಗೆ ಪಕ್ಷ ದಲ್ಲಿ ಸೂಕ್ತ ಸ್ಥಾನ ಕೊಡದೆ ಚುನಾವಣೆಯಲ್ಲಿ ಸೋಲನ್ನು ಅನುಭವಿಸ ಬೇಕಾಯಿತು .ಅತ್ಮಾವಲೋಕನ ಮಾಡಿ ಮುಂದಿನ ಲೋಕ ಸಭಾ ಚುನಾವಣೆ ಎದುರಿಸ ಬೇಕಾಗಿದೆ .ಜನತೆ ಕೈ ಬಿಟ್ಟಿದೆ .
೩ ಜನತಾ ದಳದ ತೆನೆ ಹೊತ್ತ ಮಹಿಳೆ ಗೌಡರ ಕುಟುಂಬ ಪ್ರತ್ಹಿಸ್ತೆ ಉಳಿಸಿದೆ .
ಶ್ರೀಮತಿ ಅನಿತಾ ಕುಮಾರಸ್ವಾಮಿ ಗೆಲುವು ಗೌಡರ ಮುಖ ದಲ್ಲಿ ಸಂತಸ ತಂದಿದೆ .
ಇದು ಆಕಸ್ಮಿಕ ವೋ ಅಥವಾ ಗ್ರಹ ಬಲ ಚೆನ್ನಾಗಿದೆ ಯೋ ಹೇಳಲಾಗದು .
ಹಿಂದೆ ಇದೇ ಸನ್ನಿವೇಶದಲ್ಲಿ ಶ್ರೀ ಎಚ್ ಡಿ ದೇವೇ ಗೌಡರು ಭಾರತದ ಪ್ರಧಾನಿ ಹುದ್ದೆ ಯನ್ನು ಅಲಂಕರಿಸಿ ದಕ್ಷಿಣ ಭಾರತದ ಕರ್ನಾಟಕ ದವರು ಎನ್ನುವ ಹೆಮ್ಮೆ ಎಲ್ಲಾ ಕನ್ನಡಿಗರಿಗೆ ಇದೇ .
ದಂಪತಿ ಸಮೇತ ರಾಗಿ ವಿಧಾನ ಸಭೆ ಪ್ರವೇಶ ಮಾಡುವ ಮೊದಲನೇ ದಂಪತಿ ಎನ್ನುವ ಖ್ಯಾತಿ ಇವರಿಗೆ ಇದೆ.
ರೈತರ ಮನ ವೋಲಿಸುವ ಗ್ರಾಮ ವಾಸ್ತವ್ಯ ದಂಪತಿ ಸಮೇತ ಮಾಡುವುದು ಪಕ್ಷಕ್ಕೆ ಹೆಚ್ಚು ಪ್ರಯೋಜನಕಾರಿ .
ಭಯೋತ್ಪಾದಕರ ಕರಾಳ ಛಾಯೆ ಇಂದ ೨೦೦೮ ತುಂಭಾ ನೋವು ಜನತೆಗೆ ತಂದಿದೆ .ವಿದಾಯ
ವರ್ಷ ೨೦೦೯ ಭವ್ಯ ಭಾರತದ ಜನತೆಗೆ ಸುಖ :ಶಾಂತಿ : ನೆಮ್ಮದಿ ತರಲಿ ಎಂದು ಎಂದು ಪರಮಾತ್ಮನನ್ನು ಬೇಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ನನ್ನ ಆರ್ಕುಟ್ ಸಮುದಾಯ [ಕಮ್ಯುನಿಟಿ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಹೊಸ ವರ್ಷ ದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಸದಸ್ಯ ರಾಗಿ
ಸುಸ್ವಾಗತ
ಶುಭಾಶಯ

Sunday, December 28, 2008

ಕು ವೆಂಪು ಜನ್ಮ ದಿನಾಚರಣೆ

ಜ್ಞಾನ ಪೀಠ ಪ್ರಶಸ್ತಿ ವಿಜೇತ ರಾಷ್ಟ್ರ ಕವಿ ಕು ವೆಂಪು ಅವರ ೧೦೫ ನೇ ಜನ್ಮ ದಿನಾಚರಣೆ .
ಕನ್ನಡ ಸಾಹಿತ್ಯ ಲೋಕ ದಲ್ಲಿ ಉತ್ತಮ ಸಾಧನೆ ಮತ್ತು ಕೊಡುಗೆ ಯಲ್ಲಿ ಹೆಸರು ವಾಸಿ ಮಹಾನ್ ಪುರುಷರನ್ನು ಅವರ ಹುಟ್ಟಿದ ದಿನವನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯು
ಅವರ ಕನ್ನಡ ಭಾಷೆ ಗಾಗಿ ಶ್ರಮಿಸಿದ ಗುಣ ಗಾನ ವನ್ನು ಮಾಡುತ್ತಿದೆ .
ಅವರ ಸ್ಮರಣೆ ಮಾಡುತ್ತ ದೆ.
ಕರ್ನಾಟಕದ ೫.೫ ಕೋಟಿ ಕನ್ನಡಿಗರು ಇದನ್ನು ಆಚರಿಸಲಿ
ಸ್ಮರಣೆ ನಿರಂತರ ವಾಗಲಿ .
ನಮ್ಮ ರಾಜ್ಯ ಸರಕಾರವೂ ಜನ್ಮ ದಿನವನ್ನು ವಿಜೃಂಭಣೆ ಯಾಗಿ ಆಚರಿಸಿ ಕವಿ ಗಳನ್ನೂ ನಮನ ಸಲ್ಲಿಸಲಿ.
ನಾಗೇಶ್ ಪೈ
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Friday, December 26, 2008

ಹುತಾತ್ಮ ರಿಗೆ ನಮನ

ನವೆಂಬರ್ ೨೬ ಮುಂಬೈ ನಗರ ದಲ್ಲಿ ಕರಾಳ ದಿನ/ ಭಯೋತ್ಪಾದಕರ ಗುಂಡೇಟಿಗೆ ೧೭೩ ಜನರ ಬಲಿ.
ಇಂದಿಗೂ /ಎಂದೆಂದಿಗೂ ಮರೆಯಲಾಗದ ದಿನವಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಪರವಾಗಿ ಹುತಾತ್ಮರಿಗೆ ನಮನ .
ಈಗ ಮುಂಬೈ ನಗರ ಸಾಮಾನ್ಯ ಸ್ಥಿತಿ ಗೆ ಮರಳುತ್ತಿದೆ .ಆದರೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟ ವೀರ ಯೋಧರ ಜೀವ ಮರಳುವುದು ಅಸಾಧ್ಯ .ಅವರ ಸ್ಮರಣೆ ,ತ್ಯಾಗ ಮತ್ತು ಬಲಿದಾನ ಚರಿತ್ರೆಯ ಪುಟಗಳಲ್ಲಿ ಚಿರಂತನ.ಇದನ್ನು ಪ್ರತಿಯೊಬ್ಬ ಭಾರತೀಯನ ಮನಗೊಂಡು ಅವರ ತ್ಯಾಗಕ್ಕಾಗಿ ಸ್ಮರಣೆ ಮಾಡುವುದು /ನಮಿಸುವುದು ಕರ್ತವ್ಯ .
ಆದರೆ ಭಾರತ -ಪಾಕಿಸ್ತಾನ ಭಾಂಧವ್ಯ ಯುದ್ಧದ ಭೀತಿ ಯಲ್ಲಿ ಅಂತ್ಯ .
ಭಾರತದ ಪ್ರಜೆಗಳ ನಿದ್ದೆ ಕೆಡಿಸಿದ ಸಂಧರ್ಭ .
ವಿಶ್ವದ ಪ್ರಮುಖ ರಾಷ್ಟ್ರಗಳು ಭಾರತದ ಪರವಾಗಿ ಪಾಕಿಸ್ತಾನಕ್ಕೆ ಬುದ್ಧ್ಹಿವಾದ ಹೇಳಿದ್ದರೂ ಪಾಕಿಸ್ತಾನ ದಿನಕ್ಕೊಂದು ಹೇಳಿಕೆ ಕೊಟ್ಟು ದಿಕ್ಕು ಬದಲಾಹಿಸುತ್ತಿದೆ.
ಈಗ ಪ್ರವಾಸಿಗರು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವುದು ಉಚಿತವಲ್ಲ ಎಂದು ವಿದೇಶಾಂಗ ಖಾತೆ ಪ್ರಕಟಿಸಿದೆ .
ಇದೆ ವೇಳೆ ಉಗ್ರರ /ಪಾಕಿಸ್ತಾನದ ಧಾಳಿ ಭೀತಿಯ ಹಿನ್ನೆಲೆ ಯಲ್ಲಿ ವಿಮಾನ ನಿಲ್ದಾಣ ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ .ಸಾರ್ವಜನಿಕರ ಸಹಕಾರ ಮುಖ್ಯ ವಾಗಿದೆ .
ಮುಂದಿನ ವರ್ಷ ೨೦೦೯ ನಿಮಗೆಲ್ಲರಿಗೂ ಸುಖ :ಶಾಂತಿ ಮತ್ತು ನೆಮ್ಮದಿಯ ಜೀವನ ಕೊಡಲಿ .
ನಾಗೇಶ್ ಪೈ
ಜೈ ಹಿಂದ್

ಅಟಲ್ ಬಿಹಾರಿ ವಾಜಪೇಯಿ-ಜನ್ಮ ದಿನಾಚರಣೆ .

ಡಿಸೆಂಬರ್ ೨೫ ಕ್ರಿಸ್ಮಸ್ ದಿನಾಚರಣೆ -ವಿಶ್ವ ದಾದ್ಯಂತ ಆಚರಣೆ ಮಾಡುವ ಸಾಮೂಹಿಕ ಹಬ್ಬವಾಗಿದೆ .
ಶಾಂತಿ ದೂತ ಯೇಸುವಿನ ಜನ್ಮ ದಿನವಾಗಿದೆ .ಇಲ್ಲಿ ಭಯೋತ್ಪದಕರ ವಿರುದ್ಧ ಸಮರ ಸಾರಿರುವುದು ವಿಶೇಷ .
೨ ಭಾರತಿಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪೂರ್ವ ಪ್ರಧಾನಿ ಬ್ರಹ್ಮಚಾರಿ ಅಟಲ್ ಬಿಹಾರಿ ವಾಜಪೇಯೀ ಅವರ ಜನ್ಮ ದಿನವೂ ಹೌದು .ನಿಸ್ವಾರ್ಥಿ ,ಅಭಿವ್ರದ್ಧಿ ಯೇ ನನ್ನ ಗುರಿ ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿ .ಭಾರತದ ನವ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ
ಇವರ ಜನ್ಮ ದಿನದಂದು ಶುಭಾಶಯ .
ಇವರಲ್ಲಿ ಕುಟುಂಬ ರಾಜಕೀಯ ವಿಲ್ಲ .ಇತ್ತೀಚೆಗಿನ ರಾಜಕೀಯ ಗಮನಿಸಿದಾಗ ಕುಟುಂಬಕ್ಕೆ ಹೆಚ್ಚು ಹೆಚ್ಚು ಪ್ರಾತಿನಿಧ್ಯ ಕೊಟ್ಟು ಅಭಿವ್ರದ್ಧಿ ನಿರ್ಲಕ್ಷ ಮಾಡುವ ಮುಖಂಡರ ಸಂಖ್ಯೆ ಏರುತ್ತಾ ಇದೆ .
ಇದು ವಿಷಾದನೀಯ ಬೆಳವಣಿಗೆಯಾಗಿದೆ .
ಸರ್ವರಿಗೂ ನವ ವರ್ಷ ಆರೋಗ್ಯ ,ಸಂಪತ್ತು ಮತ್ತು ಶ್ರೇಯಸ್ಸು ಪರಮಾತ್ಮನು ಕರುಣಿಸಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ಸರ್ವೇ ಜನ :ಸುಕಿನೋ ಭವಂತು :
ಸುಸ್ವಾಗತ ೨೦೦೯ :

Wednesday, December 24, 2008

ಹೀಗಾಗಬಾರದಿತ್ತು.? ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ . ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರ

ಹೀಗಾಗಬಾರದಿತ್ತು.?
ವಿಶ್ವದಲ್ಲಿ ಪ್ರಜಾಪ್ರಭುತ್ವ ಸರಕಾರ ಭವ್ಯ ಭಾರತ ವು ಎನ್ನುವ ಹೆಮ್ಮೆ ನಮ್ಮ ದಾಗಿದೆ .
ಅದರೂ ನಿನ್ನೆ ನಡೆದ ಉಪ ಚುನಾವಣೆ ಸಮಯದಲ್ಲಿ ಹಣ ,ಹೆಂಡ ಮತ್ತು ಸೀರೆ ಸರಬರಾಜು ಬಗ್ಗೆ ಮಾಧ್ಯಮದಲ್ಲಿ ನೇರ ಪ್ರಸಾರ ಮಾಡಿದನ್ನು ಗಮನಿಸಿದರೆ ರಾಜಕೀಯ ಪಕ್ಷಗಳು ಎಷ್ಟರ ಮಟ್ಟಿಗೆ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ .ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇದ್ದರೂ ಏನೂ ಪ್ರಯೋಜನ ವಾಗಿಲ್ಲ .
ಕರ್ನಾಟಕ ರಾಜ್ಯ ದಲ್ಲಿ ಈಗೆ ನಡೆಯುವುದು ನೋಡಿದಾಗ ರಾಜ್ಯದ ೫.೫ ಕೋಟಿ ಕನ್ನಡಿಗರಿಗೆ ಅವಮಾನವು ಹೌದು /ಹಾಸ್ಯಸ್ಪದವು ಕೂಡ .
ಈ ರೀತಿಯ ರಾಜಕೀಯ ಪಕ್ಷಗಳ ಕ್ಹುರ್ಚಿಗಾಗಿ ಮಾಡುವ ಪಕ್ಷಗಳ ಪ್ರಚಾರ ಖಂಡಿಸುವುದು ಜನತೆಯ ಕರ್ತವ್ಯ /ಧರ್ಮ ವಾಗಿದೆ .
ಇದಕ್ಕಾಗಿ ಶನಿವಾರ ನಡೆಯುವ ವೋಟು ಮಾಡುವಾಗ ಜನತೆ ತಕ್ಕ ಉತ್ತರ ನೀಡಲಿದೆ.
ನಾವು ನಮ್ಮ ರಾಜ್ಯವನ್ನು ಮಾದರಿ ರಾಜ್ಯ ಮಾಡುವ ಕನಸು ಭಗ್ನ ವಾಗಿದೆ .
೩೦ ನೇ ತಾರೀಕಿನ ಫಲಿತಾಂಶ ಕ್ಕಾಗಿ ಕಾದು ನೋಡುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ಕುಂದಾಪುರ ನಾಗೇಶ್ ಪೈ .
ಶುಭ ಚಿಂತಕ
ಕ್ರಿಸ್ಮಸ್ ಶುಭಾಶಯ ಗಳು .

ಭಾರತ್ -ಪಾಕಿಸ್ತಾನ್ ಯುದ್ಧ ಸಂಭವ

ಭವ್ಯ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಸೇನೆ ಯುದ್ಧ ಕ್ಕಾಗಿ ಸಿದ್ಧವಾಗಿದೆ .
ಭಾರತ ಪಾಕಿಸ್ತಾನಕ್ಕೆ ನೀಡಿದ ಡಿಸೆಂಬರ್ ೨೬ ಸಮೀಪಿಸಿದೆ .
ಪಾಕಿಸ್ತಾನಕ್ಕೆ ತಾಲಿಬಾನ್ ತನ್ನ ಸಹಾಯ ಹಸ್ತ ಕೊಡುವ ನಿರ್ಧಾರ ಮಾಡಿದೆ .
ನಮ್ಮ ಪ್ರಧಾನಿ ಯವರು ಉಗ್ರರ ನೆಲೆ ದ್ವಂಸ ಗೊಳಿಸಲು ಪಾಕ್ ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಭಾರತ ಬಯಸುತ್ತಿದೆ .
ಯುದ್ಧ ಶುರು ವಾಗುವ ಸಾಧ್ಯತೆ ಗಳನ್ನೂ ತಳ್ಳಿ ಹಾಕುವಂತಿಲ್ಲ ಎಂದು ಅಮೇರಿಕಾದ ಗುಪ್ತ ಚರ ಸಂಸ್ಥೆ ಮುನ್ಸೂಚನೆ ಕೊಟ್ಟಿದೆ .
ಈಗ ಭಾರತದ ಪ್ರಜೆಗಳು ಒಗ್ಗಟ್ಟಿನಿಂದ ಪಕ್ಶಾತಿತ ವಾಗಿ ದುಡಿಯಬೇಕು .
ಯುದ್ಧ ಅನಿವಾರ್ಯವೇ ?
ಭಾರತದ ಬೇಡಿಕೆ ಗಳನ್ನೂ ಸ್ಪಂದಿಸುವಂತೆ ಪಾಕಿಸ್ತಾನಕ್ಕೆ ಅಮೇರಿಕಾ ಹಾಗೂ ಇತರ ರಾಷ್ಟ್ರಗಳು ತಾಕೀತು
ಮಾಡಿವೆ .
ಇದರ ಬಗ್ಗೆ ಚರ್ಚೆ ಮಾಡಲು ನಿಮ್ಮ ಉಪಯುಕ್ತ ಸಲಹೆ /ಸೂಚನೆ ಕೊಡಿ .
ಇದು ಪ್ರಿಯ ಓದುಗರಿಗೆ ಉಪಯುಕ್ತ ವಾಗಬಹುದು ಎಂದು ಭಾವಿಸಿದ್ದೇನೆ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್

Monday, December 22, 2008

ಪೋಲಿಯೋ ಲಸಿಕೆ /ಪರಿಣಾಮ /ವದಂತಿ

ಕರ್ನಾಟಕ ರಾಜ್ಯದಲ್ಲಿ ಪೋಲಿಯೋ ಲಸಿಕೆ ಯ ಬಗ್ಗೆ ಪ್ರಯೋಜನ /ದುಷ್ಪರಿನಾಮ ವದಂತಿ ಪತ್ರಿಕೆ /ಮಾಧ್ಯಮ
ವನ್ನು ಈಗ ಚಿಂತೆ ಗಿಡು ಮಾಡುವುದಲ್ಲದೆ ಪೋಷಕ ವರ್ಗ ದವರಿಗೆ ಗಾಬರಿ ಮಾಡಿ ಆಸ್ಪತ್ರೆ ಗಳಲ್ಲಿ ವೈದ್ಯರನ್ನು ಕೊಡ ದಿನವೀಡಿ ಶ್ರಮಿಸಿ ನಿಜವಾಗಿ ಆದದ್ದೇನು ಎಂದು ಪ್ರಕಟಿಸಲು ಹರ ಸಾಹಸ ಮಾಡ ಬೇಕಾಯಿತು .
ಪೋಲಿಯೋ ಹನಿ ಹಾಕಿಸಿಕೊಂಡ ಮಕ್ಕಳಿಗೆ ಜ್ವರ ಬರುತ್ತಿದೆ .ತೀವ್ರ ಹೊಟ್ಟೆ ನೋವಿನಿಂದ ಅಳುತ್ತಾರೆ .
ವೈದ್ಯಕೀಯ ದ್ರಸ್ಟಿಯಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಮಕ್ಕಳ ಮೈ ಬಿಸಿ ಇರುತ್ತದೆ .ಬೆಚ್ಚಗಿನ ಉಡುಪು ಧರಿಸಿ ಮೈ ವಾತಾವರಣಕ್ಕೆ ಬಿಡದೆ ರಕ್ಷಣೆ ಕೊಡಬೇಕು .ಇದೆ ಸಂಧರ್ಭ ದಲ್ಲಿ ವದಂತಿ ಪೋಷಕರ ತಪ್ಪು ತಿಳುವಳಿಕೆಗೆ ಕಾರಣವಾಯಿತು .ಆಸ್ಪತ್ರೆಗೆ ಒಡಲು ಕಾರಣ.ಮಾತಾಡಲು /ಬರೆಯಲು ಇದು ಸುಲಭ .ಇದನ್ನು ಅನುಭವಿಸಿದ ಪೋಷಕರ ಸ್ಥಿತಿ ಹೇಗಿರಬೇಕು ನೀವೇ ಯೋಚಿಸಿ .ಸಾರ್ವಜನಿಕರ /ವೈದ್ಯರ ಸಮಯ ಪ್ರಜ್ಞೆ ಇಲ್ಲಿ ಕೆಲಸ ಮಾಡಿ ಈಗ ಪರಿಸ್ತಿತಿ ಶಾಂತ ವಾಗಿದೆ .ಇದರ ಬಗ್ಗೆ ತನಿಕೆ ಮಾಡಿ ಇಂತಹ ವರದಿ ಗಳು ಮುಂದೆ ಮರುಕಳಿಸದಂತೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡಬೇಕು.
ಯಾವುದೇ ಮಗುವಿನ ಮೇಲೆ ಪೋಲಿಯೋ ಲಸಿಕೆ ದುಸ್ಪರಿನಾಮ ಮಾಡಿಲ್ಲ /ಮಾಡುವುದು ಇಲ್ಲ .
ಪ್ರಪಂಚದ ವಿಜ್ಞಾನಿ ಗಳಿಂದ ಇದು ಸ್ಪಷ್ಟ ವಾಗಿದೆ .
ಕಿಡಿಗೇಡಿಗಳು ಹರಡಿದ ವರದಿ ಯಲ್ಲದೆ ಬೇರೆ ಏನೂ ಇಲ್ಲ .
ಸರ್ವೇ ಜನ : ಸುಕಿನೋ ಭವಂತು :
ಉಪ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ದಯವಿಟ್ಟು ಇದರ ಲಾಭ ಪಡೆಯಲು ಯತ್ನಿಸಬೇಡಿ
ನಮಸ್ಕಾರ
ಶುಭಂ :
ನಾಗೇಶ್ ಪೈ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Friday, December 19, 2008

ಎ .ಅರ್ ಅಂತುಲೆ .ವಿವಾದ ಜನರ ತೀರ್ಪು .

ಇಡೀ ಭಾರತ ಒಗ್ಗಟ್ಟಿನಲ್ಲಿ ಸಂಸತ್ತಿನ ಉಭಯ ಸದನಗಳು ಪಕ್ಷ ಭೇಧ ವನ್ನು ಮರೆತು ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .ಇದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ತೋರಿಸಿದೆ .ಮಾತ್ರ ವಲ್ಲದೆ ಉಭಯ ಸದನಗಳು ಸಂವಿಧಾನದಲ್ಲಿ ಉಗ್ರರ /ನಕ್ಷಲಿಯರ ಸಂಪೂರ್ಣ ನಾಶ ಕ್ಕಾಗಿ ಕಾನೂನು ಮಂಡಿಸಿ ಈಗ ಭವ್ಯ ಭಾರತದ ರಾಷ್ಟ್ರ ಪತಿ ಯವರ ಸಮ್ಮುಖ ದಲ್ಲಿ ಹಸ್ತಾಕ್ಷರ ಕ್ಕಾಗಿ ಕಾಯುತ್ತಿದೆ .
ಈ ತನ್ಮಧ್ಯೆ ಕೇಂದ್ರದ ಅಲ್ಪ ಸಂಖ್ಯಾತರ ಕಲ್ಯಾಣ ಮಂತ್ರಿ ಆಗಿರುವ ಎ .ಅರ್ ಅಂತುಲೆ ಯವರ ವಿವಾದಾತ್ಮಕ [ಉಗ್ರ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ ಕರ್ಕರೆ ಯವರ ಸಾವು ] ಹೇಳಿಕೆ ದೇಶದ ಜನರ ಒಗ್ಗಟ್ಟಿನಲ್ಲಿ ಬಿರುಕು ತಂದಿದೆ .ಇದು ಕಾಂಗ್ರೆಸ್ ಪಕ್ಷದ ನಿರ್ಧಾರವೋ ಅಥವಾ ಅಂತುಲೆಯವರ ಸ್ವಂತ ಅಭಿಪ್ರಾಯವೋ ಎಂದು ಜನತೆಗೆ ಕಾಡುತ್ತಿದೆ .
ಇವರು ಹಗರಣ ಗಳಲ್ಲಿ ಯಾವಾಗಲು ಇರುತ್ತಾರೆ .೧೯೮೨ ರಲ್ಲಿ ಮಹಾರಾಷ್ಟ್ರ ಮುಖ್ಯ ಮಂತ್ರಿಯಾಗಿದ್ದಾಗ ಸಿಮೆಂಟ್ ಹಗರಣದಲ್ಲಿ ಅವರು ರಾಜಿನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .ಬಾಂಬೆ ಹೈಕೋರ್ಟ್ ತಪ್ಪಿತಸ್ಥ ಎಂದು ಘೋಷಿಸಿದೆ .ಈಗ ಪುನಃ ರಾಜಿನಾಮೆ ನೀಡಿ ದ್ದಾರೆ .
ಇವರ ಆದರ್ಶದ ಬಗ್ಗೆ ಜನರೇ ತೀರ್ಪು ನೀಡಲಿ .
ಇದರಿಂದಾಗಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಷ್ಟೆ ಗೆ ಲಾಭ ವಾಗುವುದೇ ಅಥವಾ ವಿರುದ್ದ ಜನರು ಬೇರೆ ಪಕ್ಷದ ಕಡೆಗೆ ವಾಲುವರೇ ಸಮಯ ನಿರ್ಧರಿಸಲಿದೆ .
ಕಾಂಗ್ರೆಸ್ ಪಕ್ಷವು ಅಂತುಲೆಯವರ ರಾಜಿ ನಾಮೇ ಸ್ವಿಕರಿಸಿದರೆ ಮಾತ್ರ ಸ್ವಲ್ಪ ಮಟ್ಟಿಗೆ ಜನರ ಮೆಚ್ಚುಗೆ ಪಡೆಯಬಹುದು .
ಮಂತ್ರಿ ಮಂಡಲ ದಲ್ಲಿ ನಿಸ್ವ್ವಾರ್ತಿ ದೇಶ ಪ್ರೇಮಿ ಇರಬೇಕೆ ವಿನಃ
ಇಂಥವರು ಇರ ಬಾರದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಸರ್ವತೋಮುಖ ಬೆಳವಣಿಗೆ ಯನ್ನು ಬಯಸುತ್ತಿದೆ .
ನಾಗೇಶ್ ಪೈ
ಇಲ್ಲಿ ರಾಜಕೀಯಕ್ಕೆ ಪ್ರವೇಶವಿಲ್ಲ .

Tuesday, December 16, 2008

ಆಟೋ ನಲ್ಲಿ ಪ್ರಯಾಣ ಮತ್ತು ದರದಲ್ಲಿ ಸುಧಾರಣೆ

ಈಗ ಕರ್ನಾಟಕ ರಾಜ್ಯದಲ್ಲಿ ಬಸ್ ನಲ್ಲಿ ನೂಕು ನುಗ್ಗಲು ಇರುವುದರಿಂದ ಮತ್ತು ಆರೋಗ್ಯ ವಂಥರಲ್ಲದವರು ,ಮಹಿಳೆಯರು /ಹಿರಿಯ ನಾಗರಿಕರು ಆಟೋ ನಲ್ಲಿ ಪ್ರಯಾಣ ಮಾಡಬೇಕಾದ ಪ್ರಸಂಗ ಬಂದಿದೆ .
ಇಲ್ಲಿ ನಮ್ಮ ಮನೆಯ ಗೇಟ ನಿಂದ ನಗರದ ಬಸ್ ನಿಲ್ದಾಣ ಅಥವಾ ರೈಲ್ವೆ ಸ್ಟೇಷನ್ ಗೆ ಹೋಗಲು ೩ ಆಟೋ ಗಳಲ್ಲಿ ಅಳವಡಿಸಿದ ಮೀಟರ್ ೩ ರೀಡಿಂಗ್ ತೋರಿಸುವುದು .ಆಟೋ ಚಾಲಕರು ತಮ್ಮ ತಪ್ಪನ್ನು ಒಪ್ಪಿದ್ದಾರೆ .
ತಪ್ಪಿನ ವಿವರ ಕೊಟ್ಟಿದ್ದಾರೆ .ಮೋಸ ವನ್ನು ಬಹಿರಂಗ ಗೊಳಿಸಿದ್ದಾರೆ .
ಪ್ರತಿ ದಿನವೂ ಚಾಲಕನೊಡನೆ ಚರ್ಚೆ /ಜಗಳ ಸಾಮಾನ್ಯ ವಾಗಿದೆ .ಇದಕ್ಕಾಗಿ ನಗರದ ಪೋಲಿಸ್ ಸಹಾಯ ಕೊಡುತ್ತಾ ಇದೆ .
ಇದಕ್ಕೆ ಸುಧಾರಣೆ ತರುವ ನಾಗರಿಕರಿದ್ದಾರೆ.
ಸ್ಟಾರ್ ಆಫ್ ಮೈಸೂರ್ ನಲ್ಲಿ ಪ್ರಕಟವಾದ ಬೋಗಾದಿ ಯಿಂದ ಶ್ರೀಯುತ ಕೆ .ಅರ್ ಶೇಷಾದ್ರಿ ಯವರ ಸಲಹೆ ಇಲ್ಲಿ ಇದೆ .
೧ ದರದ ಬದಲು ಅತಿ ಕ್ರಮಿಸಿದ ದೂರ ವನ್ನು ಮೀಟರ್ ತೋರಿಸ ಬೇಕು .
ಇದರಿಂದಾಗಿ ದರ ಪರಿಷ್ಕರಣೆ ಯಾದಾಗ ಆ ದರ ಮತ್ತು ದೂರಕ್ಕೆ ಗುಣಿಸಿದಾಗ ನಾವು ಕೊಡಬೇಕಾದ ಮೊತ್ತ
ಸಿಗುತ್ತದೆ .
ನಗರ ಬಸ್ ಸ್ಟ್ಯಾಂಡ್ ನಿಂದ ಪ್ಪ್ರತಿಯೊಂದು ಪಾಯಿಂಟ್ ಗೆ ಅತ್ಹಿಕ್ರಮಿಸುವ ದೂರವಿರುವ ಚಾರ್ಟ್ ನ್ನು ನಾಗರೀಕರಿಗೆ ಸುಲಭ ವಾಗಿ ಕೈ ಗೆ ಸಿಗುವ ಪ್ರಚಾರ ಮಾಡ ಬೇಕು .
ಆಟೋ ಚಾಲಕರು ಮಾಡುವ ಮೋಸವನ್ನು ತಡೆಯ ಬಹುದು.
ನಗರ ಪೋಲಿಸ್ ಆಯುಕ್ತರ ಗಮನಕ್ಕೆ ತರಲಾಗಿದೆ ಮತ್ತು ರಾಜ್ಯದ ಸಾರಿಗೆ ಮಂತ್ರಿ ಯವರು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ
ಆಟೋ ಮೀಟರ್ ನಲ್ಲಿ ಸುಧಾರಣೆ ತರಬೇಕು .
ನಾಗರೀಕರ ಕಷ್ಟ ಪರಿಹರಿಸಿದರೆ ಮೈಸೂರಿನ ಸಾರ್ವಜನಿಕರು ಸುಖ ಪ್ರಯಾಣ ಮಾಡಬಹುದು .
ಸಂಭಂಧ ಪಟ್ಟವರು ಕ್ರಮ ಜರುಗಿಸಲಿ
ಸರ್ವೇ ಜನ ಸುಕಿನೋ ಭವಂತು :
ಲೇಖನ ಬರೆದ ಶ್ರೀಯುತ ಶೇಷಾದ್ರಿ /ಪ್ರೊ ಎಂ ಏನ್ ಗೋಪಾಲನ್ ಅವರಿಗೆ ಹ್ರತ್ಪೂರ್ವಕ ಧನ್ಯವಾದಗಳು .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

Monday, December 15, 2008

ನಮ್ಮ ಸುಂದರ ಮೈಸೂರು

ಇದು ನಮ್ಮ ಸುಂದರ ಮೈಸೂರು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ] ರಚನೆ .
ಇಲ್ಲಿ ಮೈಸೂರಿನ ನಾಗರೀಕರು ನಮ್ಮ ನಗರದ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯಬೇಕು .
ಇ ನಗರಕ್ಕೆ ನುರಿತ ಯುವ ಮೇಯರ್ ಅವರು ಇರುವುದರಿಂದ ,ಅಲ್ಲದೆ ದಕ್ಷ ಜಿಲ್ಲಾಧಿಕಾರಿ ಇದ್ದಾರೆ.
ನಗರದ ಪೋಲಿಸ್ ಆಯುಕ್ತರು ಮೈಸೂರು ನಗರದ ಶಿಸ್ತು ಕ್ರಮ ಜರಗಿಸುವುದರಲ್ಲಿ ಪರಿಣಿತ ರಾಗಿರುವುದರಿಂದ
ಮುಂದೆ ಮೈಸೂರು ನಗರವು ಮಾದರಿ ನಗರವಾಗಬಹುದು.
ನಾವು ಇನ್ನು ಮುಂದೆ ನಗರಪಾಲಿಕೆ /ಜಿಲ್ಲಾಡಳಿತ ಮತ್ತು ಉಸ್ತುವಾರಿ ಸಚಿವರು ತೆಗೆದು ಕೊಳ್ಳ ಬೇಕಾದ ಕ್ರಮ ಗಳ ಬಗ್ಗೆ ಸುಧೀರ್ಗ ಚರ್ಚೆ ಮಾಡ ಬೇಕಾಗಿದೆ .
ಪ್ರಿಯ ಓದುಗರೇ ದಯವಿಟ್ಟು ನೀವೆಲ್ಲರೂ ಭಾಗವಹಿಸಿ ನಿಮ್ಮ ಅನಿಸಿಕೆ ಗಳನ್ನೂ ಪ್ರಕಟಿಸಿ .
೧ ಸಾರ್ವಜನಿಕರು ಮನೆಯ ಕಸವನ್ನು [ಚಿಕ್ಕ ಗಾತ್ರದ್ದು ] ಸಂಗ್ರಹಿಸುವ ವ್ಯವಸ್ಥೆ ಇದೆ .
ಆದರೆ ಕಡಿದ ಗಿಡ /ಮರ ಇತ್ಯಾದಿ ಸಾಗಿಸಲು ವ್ಯವಸ್ಥೆ ಮಾಡ ಬೇಕಾಗಿದೆ .
ದೂರವಾಣಿ ಮಾಡಿದಾಗ ಸರಿಯಾದ ಜವಾಬು /ಕ್ರಮ ಸಿಗಲಿಲ್ಲ .
ಮಹಿಳೆಯರು ಕಷ್ಟ ಕ್ಕೆ ಒಳಗಾಗಿದ್ದಾರೆ .
ಇ ಮೂಲಕ ವಾರ್ಡಿನ ಪಾಲಿಕೆ ಸದಸ್ಯರು ಕ್ರಮವನ್ನು ಕೂಡಲೇ ತೆಗೆದುಕೊಳ್ಳಲಿ .ಎಂದು ನಿವೇದನೆ
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಶುಭಂ .

Thursday, December 11, 2008

ಭಯೋತ್ಪಾದಕರ ಸಂಪೂರ್ಣ ನಾಶ .

ಅಮೇರಿಕಾದ ಪತ್ರಿಕೆ ನ್ಯೂ ಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ಸಮಾಚಾರ ೨೦ ಶಂಕಿತ ಉಗ್ರರು ಪಾಕಿಸ್ತಾನದವರು ಅಲ್ಲಿ ತರಬೇತು ಹೊಂದಿದ ಮೇಲೆ ಭಾರತ ಪ್ರವೇಶ ಮಾಡಿದ್ದಾರೆ.ಆತ್ಮಾಹುತಿ ಧಾಳಿಗೆ ತಮ್ಮನ್ನು ತಯ್ಯಾರಿ ಮಾಡಿಕೊಂಡಿರುತ್ತಾರೆ .ಎಲ್ಲಾ ರೀತಿಯ ಸಂಚು ನಡೆಸಿ ಅವರಿಂದ ಭೀಕರ ಅನಾಹುತ ಕಾದಿದೆ ಇದನ್ನು ಭಂಧಿತ ಉಗ್ರ ಅಫ್ಜಲ್ ಕಸಬ್ ತನ್ನ ಹೇಳಿಕೆ ಕೊಟ್ಟಿರುವುದು ಮುಂದಿನ ಭಯಾನಕ ಘಟನೆಗೆ ಎಚ್ಚರಿಕೆ ಘಂಟೆ ಯಾಗಿದೆ .ಇದು ಈಗ ನಡೆಯುವ ಲೋಕ ಸಭೆ ಯಲ್ಲಿ ಚರ್ಚೆಯ ವಿಷಯ ವಾಗಿದೆ .ಗ್ರಹ ಮಂತ್ರಿಗಳ ಮುಂದಿನ ಕ್ರಮ ಗಳನ್ನೂ ಷಿಗ್ರ ವಾಗಿ ಜಾರಿಗೆ ತರಲು ಎಲ್ಲಾ ಪಕ್ಷಗಳು ಪಕ್ಷ ಭೇಧವನ್ನು ಮರೆತು ಸ್ವಾಗತಿಸಿದ್ದಾರೆ .ಈಗ ಬೇಕು ಸಂಪೂರ್ಣವಾಗಿ ಭಯೋತ್ಪಾದಕರ ನಾಶ .
ಅಮೇರಿಕಾದ ಫೆಡೆರಲ್ ಏಜನ್ಸಿ [ಎಫ್ ಬಿ ಆಯಿ ] ಮಾದರಿ ಯಲ್ಲಿ ಕೇಂದ್ರದ ಪಡೇ ರಚನೆ ಪೋಟ ಕಾನೂನು ಅದರ ಬಳಕೆ ಯಾಗಬೇಕು .
ರಾಜ್ಯದ ರಾಜಧಾನಿ ಗಳಲ್ಲಿ ಏನ್ ಎಸ್ ಜೀಗಳ ಸ್ಥಾಪನೆ .
ಈಗೇ ಮುಂದಿನ ಬಜೆಟ್ನಲ್ಲಿ ಹಣ ವನ್ನು ಕಾದಿರಿಸಬೇಕು .
ಉಗ್ರರ ದಮನವೇ ನಮ್ಮ ಮುಂದಿನ ಗುರಿಯಾಗಿರಲಿ.
ವಿಜಯವು ನಮ್ಮದೇ .
ಜೈ ಹಿಂದ್
ಭವ್ಯ ಭಾರತದ ನವ ನಿರ್ಮಾಣ ವೇದಿಕೆಗಾಗಿ
ನಾಗೇಶ್ ಪೈ
ನಮಸ್ಕಾರ .
ಸಮರ ಜಾರಿಯಿರಲಿ.

Sunday, December 7, 2008

ಪಾಕಿಸ್ತಾನಕ್ಕೆ ೪೮ ಘಂಟೆಗಳ ಸಮಯಾವಕಾಶ

ಭಾರತ ೨೬/೧೧ ಮುಂಬೈ ನಗರದಲ್ಲಿ ನಡೆದ ಉಗ್ರರ ಧಾಳಿ ಈಗ ವಿಶ್ವದ ಪ್ರಮುಖ ರಾಷ್ಟ್ರ ಗಳಾದ ಅಮೇರಿಕಾ ,ರಶ್ಶಿಯಾ ಮತ್ತು ಇಂಗ್ಲೆಂಡ್ ,ಇತ್ಯಾದಿ ಗಳ ಗಮನಕ್ಕೆ ಬಂದಿದೆ .ಮಾತ್ರವಲ್ಲದೆ ಅಮೇರಿಕಾ /ಭಾರತ ಪಾಕಿಸ್ತಾನಕ್ಕೆ ೪೮ ಘಂಟೆಗಳ ಸಮಯದ ಗಡುವು ಕೊಟ್ಟಿದೆ .ಒಂದು ವೇಳೆ ಪಾಕ್ ತ್ವರಿತ ಕ್ರಮ ಜರುಗಿಸದಿದ್ದರೆ ಅಮೇರಿಕಾ ರಾಷ್ಟ್ರವು ಸರಿಯಾದ ಮುಂದಿನ ಕ್ರಮ ತೆಗೆದು ಕೊಳ್ಳುವ ಕಟು ಎಚ್ಚರಿಕೆ ನೀಡಿದೆ .
ಭಯೋತ್ಪಾದಕರ ಧಾಳಿಯಲ್ಲಿ ಪಾಕಿಸ್ತಾನದ ಶಕ್ತಿಗಳ ಕೈವಾಡ ಇರುವುದನ್ನು ನಿರೂಪಿಸಿದೆ .
ಪಾಕಿಸ್ತಾನಕ್ಕೆ ಒತ್ತಡ ಗಳ ಮಹಾಪೂರ ಇರುವುದರಿಂದ ಇನ್ನು ಮಣಿಯಲೇ ಬೇಕಾಗಿದೆ .
ಇ ಸಮಯದಲ್ಲಿ ನಮ್ಮ ಒಗ್ಗಟ್ಟಿನ ಪ್ರದರ್ಶನ ವಾಗಬೇಕು .
'ಮಾಡು ಇಲ್ಲವೇ ಮಡಿ '
ಸತ್ವ ಪರೀಕ್ಷೆ ಯಾಗಿದೆ
ವಿಜಯ ನಮ್ಮದೇ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ
ಜೈ ಹಿಂದ್

Wednesday, December 3, 2008

ಭಯೋತ್ಪಾದಕರ ವಿರುದ್ದ ಸಮರ ಬೇಕಾಗಿದೆ

ಇಂದು ಭವ್ಯ ಭಾರತದ ಜನತೆ ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .
ಈಗ ಜನತೆಗೆ ಬೇಕು ಸುರಕ್ಷತೆ .ಇದಕ್ಕಾಗಿ ಹೋರಾಡಲು ನಾಗರಿಕರು ತನು,ಮನ ಮತ್ತು ಧನಗಳಿಂದ ಸನ್ನದ್ಧ ರಾಗಿದ್ದಾರೆ .ಎಲ್ಲಾ ರೀತ್ಹೀಯ ತಯ್ಯಾರಿ ಯಲ್ಲಿದೆ .
ಜಾತಿ ,ಧರ್ಮ ,ಪಕ್ಷ ಭೇಧ ವನ್ನು ಮರೆತು ಯುದ್ಧ ವನ್ನು ಗೆಲ್ಲೆಲಲೇ ಬೇಕಾಗಿದೆ .
ಇದಕ್ಕೆ ನಾವೆಲ್ಲರೂ ಸಹಕರಿಸಿ ಭಾರತದ ವಿಜಯ ಪತಾಕೆ ಹಾರಿಸೋಣ ಬನ್ನಿ .
ಈಗ ಬೇಕು ಒಗಟ್ಟಿನ ಪ್ರದರ್ಶನ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್

Tuesday, December 2, 2008

ಕೊಟ್ಟ ಮಾತನ್ನು ಉಳಿಸಿಕೊಳ್ಳಿ

ಕನ್ನಡದ ಪ್ರಸಿದ್ಧ ಪುಣ್ಯಕೋಟಿ ಕಥೆಯ ಸಾರಾಂಶ ವಾದ ಕೊಟ್ಟ ಮಾತಿಗೆ ತಪ್ಪಲಾರೆನು
ಮೆಚ್ಚನಾ ಆ ಜಗದೀಶನು ಎಂಬ ಸದ್ಬುದ್ದಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಬರಲಿ ಸದಾ
ಚುನಾವಣೆ ಹತ್ತಿರ ಬಂದಂತೆ ತಮ್ಮ ರಾಜಕೀಯ ಲಾಭಕ್ಕಾಗಿ ಆಶ್ವಾಸನೆಗಳ ಸುರಿಮಳೆ .ತಾವು ಗೆದ್ದು ಆಡಳಿತಕ್ಕೆ ಬಂದ ಮೇಲೆ ಪರಿಣಾಮ ಶೂನ್ಯ .ಇದನ್ನು ತಿಳಿದ ಅನುಭವಿ ನಾಗರಿಕ ವೋಟನ್ನು ಸರಿಯಾದ ಉಮೆದ್ವಾರನಿಗೆ ಹಾಕುವನು .
ದಯೆಯೇ ಧರ್ಮದ ಮೂಲ
ಆಶೆಯೇ ದುಃಖದ ಮೂಲವೈಯ್ಯ
ದೇಶದ ಸುರಕ್ಷತೆ ಗಾಗಿ ತಮ್ಮ ಪ್ರಾಣವನ್ನೇ ಕೊಟ್ಟ ಯೋಧರ ಸಲುವಾಗಿ ಕೊಟ್ಟ ಮಾತನ್ನು ಉಳಿಸಿ ಅವರ ಕುಟುಂಬ ಕ್ಕೆ ಸಹಾಯ ಮಾಡಬೇಕು .
ಮಾತನ್ನು ಉಳಿಸಿಕೊಂಡರೆ ಇವರು ಪೂರ್ತಿ ೫ ವರ್ಷ ಆಡಳಿತ ಮಾಡಿ ಜನರ ಮನಸ್ಸನ್ನು ಗೆಲ್ಲುವುದರಲಿ ನಿಸ್ಸಂದೇಹ .
ಈಗ ಚುನಾವಣೆಯ ಸಮಯ
ಇದನ್ನು .
ಪ್ರತಿಯೊಬ್ಬ ಉಮೆದ್ವಾರನು ಗಮನಿಸಿ ಪ್ರಾಚಾರ ಮಾಡಲಿ .
ಸರ್ವೇ ಜನ ; ಸುಕಿನೋ ಭವಂತು :
ನಾಗೇಶ್ ಪೈ
ಜೈ ಕರ್ನಾಟಕ
ನಮ್ಮ ಸುಂದರ ಮೈಸೂರು
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಭವ್ಯ ಭಾರತದ ನವ ನಿರ್ಮಾಣ ವೇದಿಕೆ

Monday, December 1, 2008

ಭ್ರಸ್ತಾಚಾರ ಎಷ್ಟರ ಮಟ್ಟಿಗೆ ,ಕೇರಳ ಮುಖ್ಯ ಮಂತ್ರಿ ಬಹಿರಂಗ ಹೇಳಿಕೆ

ಇಂದಿನ ಮಾಧ್ಯಮದ ೨ ವರದಿಗಳು ಭವ್ಯ ಭಾರತದ ಜನತೆಗೆ ತಲ್ಲಣ ವನ್ನು ಉಂಟು ಮಾಡಿದೆ ಹಾಗೂ ಇದು ಸತ್ಯ ಎಂದು ಸಾಬಿತು ಆದರೆ ಖಂಡನೀಯ .
ಇದಕ್ಕೆ ಸಾರ್ವಜನಿಕರ ಚರ್ಚೆಯ ಅವಶ್ಯಕತೆ ಇದೆ .ಸಂಭಂದ ಪಟ್ಟ ಅಧಿಕಾರಿಗಳು ಸತ್ಯಾಸತ್ಯ ವನ್ನು ಕಂಡು ಹುಡುಕ ಬೇಕು ಉನ್ನತ ಮತ್ತು ಅಧಿಕಾರ ಸ್ಥಾನದಲ್ಲಿ ಇರುವಾಗ ಬಹಿರಂಗ ಹೇಳಿಕೆ ಕೊಡಬಾರದು.
ಲಂಚ ಕೊರ ಅಧಿಕಾರಿ ಗಳನ್ನೂ ಗುರುತಿಸಿ ಶಿಕ್ಷೆ ೩ ತಿಂಗಳೊಳಗೆ ವಿಧಿಸಬೇಕು .
ಇ ವಿಚಾರ ದಲ್ಲಿ ಸಿಂಗಾಪುರ್ ಮತ್ತು ಅಮೇರಿಕಾ ದೇಶ ಗಳು ಮಾದರಿಯಾಗಲಿ .
ವರದಿಗಳು ಹೀಗಿವೆ .
೧ ರಕ್ಷಾ ಕವಚಗಳು ಕಳಪೆ ದರ್ಜೆ ಯವು ಹುತಾತ್ಮ ವಿಜಯ್ ಸಾರಸ್ಕರ್ರಂಥ ದಕ್ಷ ಅಧಿಕಾರಿ ಗಳು ಧರಿಸಲಿಲ್ಲ .
೨ ಕೇರಳದ ಮುಖ್ಯ ಮಂತ್ರಿ ಯವರು ಶ್ರೀಯುತ ಉನ್ನಿಕೃಷ್ಣ ಅವರ ನಿವಾಸದ ಸಂದರ್ಶನ ದ ಬಗ್ಗೆ ಬಹಿರಂಗ ಹೇಳಿಕೆ .
ಇವೆರಡು ವಿಷಯ ಕೇಳುವಾಗ ನನಗೆ ಇ ಲೇಖನ ಬರೆಯಬೇಕು ಅನ್ನಿಸಿದೆ .
ನೀವು ನಿಮ್ಮ ಅನಿಸಿಕೆಗಳನ್ನು ಬರೆಯಿರಿ .
ನಮ್ಮ ಕರ್ನಾಟಕ ರಾಜ್ಯವು ಸರ್ವ ಪಕ್ಷಗಳ ಸಭೆ ಕರೆದು ಒಮ್ಮತಕ್ಕೆ ಬಂದ ವಿಷಯ ಸ್ವಾಗತಾರ್ಹ .
ಇದನ್ನು ಶೀಘ್ರವೇ ಕಾರ್ಯ ರೂಪಕ್ಕೆ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .
ಜೈ ಹಿಂದ್