Saturday, January 31, 2009

ದ ರಾ ಬೇಂದ್ರೆ ಜನ್ಮ ದಿನ ಸ್ಮರಣೆ .

ಜನವರಿ ೩೧ಕನ್ನಡ ಸಾಹಿತ್ಯ ಕ್ಷೇತ್ರ ದಲ್ಲಿ ಒಂದು ಚಿರ ಸ್ಮರಣಿಯ ದಿನ .
ಸಾಹಿತಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಧಾರವಾಡ ದಲ್ಲಿ ಜನನ .
ಇವರು ಕಾವ್ಯ ನಾಮ ಅಂಬಿಕಾ ತನಯ ದತ್ತ ಎಂಬ ಹೆಸರಿನಲ್ಲಿ ಕರ್ನಾಟಕ ವಲ್ಲದೆ ರಾಷ್ಟ್ರ ದಲ್ಲಿ ಕನ್ನಡವನ್ನು ಮೇರು ಶಿ ಖ ರ ಕ್ಕೆ ಕೊಂಡೊಯ್ದ ಮಹಾನ ಕವಿ .
ಇವರು ದೇಶದ ಸ್ವಾತಂತ್ರ್ಯ ಸಂಗ್ರಾಮ ಬಾಪೂಜಿ ಯವರ ಸ್ವದೇಶಿ ಚಳವಳಿ ರವಿಂದ್ರ ನಾಥ್ ಠಾಗೋರ್ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಬೆ ಗೆ ಒಳಗಾಗಿ ತಮ್ಮ ಜೀವನ ಪೂರ್ತಿ ಕನ್ನಡ ಸಾಹಿತ್ಯ ಕ್ಕಾಗಿ ಧಾರೆಎರೆದ ಮಹಾ ಪುರುಷರನ್ನು ಇ ದಿನ ಸ್ಮರಿಸ ಬೇಕಾದ ಕರ್ತವ್ಯ ೫.೫ ಕೋಟಿ ಕನ್ನಡಿಗರದ್ದಾಗಿದೆ .
ನಾನು ಹೈ ಸ್ಕೂಲ್ ವಿದ್ಯಾ ಭ್ಯಾಸ ಮಾಡುವಾಗ ಸಂಗೀತ ಸ್ಪರ್ಧೆ ಯಲ್ಲಿ ಇವರ ಗರಿ ಕವನ ಸಂಕಲನ ಬಹುಮಾನ ಸಿಕ್ಕಿರುವುದನ್ನು ಇಲ್ಲಿ ಸಮರಿಸುತ್ತೇನೆ.
ಚಲನ ಚಿತ್ರ ದಲ್ಲಿ ಇವರು ಬರೆದ 'ಮೂಡಲ ಮನೆಯ ಮುತ್ತಿನ ನೀರಿನ ಎರಕ ವ ಹೊಯಿದ '
ತುಂಬ ಪ್ರಸಿದ್ದಿ ಯಾಗಿ ಕನ್ನಡಿಗರ ಬಾಯಲ್ಲಿ ಕಂಠ ಪಾಠ ವಾಗಿ ಬರುವ ಹಾಡಾಗಿದೆ.
ನಾವೆಲ್ಲರೂ ಅವರು ಬರೆದ ಕವನಗಳನ್ನು ಹೆಚ್ಚಿನ ಸಂಖ್ಯೆ ಯಲ್ಲಿ ಓದಿ ಸಾಹಿತ್ಯ ಆಸಕ್ತಿ ಯನ್ನು ಬೆಳೆಸಿ ಕೊಂಡಾಗಮಾತ್ರ ಶ್ರೀಯುತ ಬೇಂದ್ರೆ ಯವರಿಗೆ ಸಂಪೂರ್ಣ ಗೌರವ ಕೊಟ್ಟು ಕನ್ನಡ ಭಾಷೆ ಗಾಗಿ ನಾವು ಶಾಸ್ತ್ರಿಯ ಸನ್ಮಾನ ಸಿಕ್ಕಿದ ಇ ಸಂಧರ್ಭ ದ ಲಾಭ ಪಡೆಯ ಬಹುದು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ
ಶುಭ ವಾಗಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Thursday, January 29, 2009

ಬಾಪೂಜಿ ಯವರ ೬೦ ನೇ ಪುಣ್ಯ ತಿಥಿ

ಇಂದು ಸರ್ವೋದಯ ದಿನ -ಮಹಾತ್ಮ ಗಾಂಧೀಜಿ ಯವರ ೬೦ ನೇಪುಣ್ಯ ಸ್ಮರಣೆ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಂದಾಳು ತನ ವಹಿಸಿ ಹುತಾತ್ಮ ರಾದ ಬಾಪೂಜಿ ಯವರ ನಿಧನದ ದಿನ .
ಅಮೇರಿಕಾದ ನೂತನ ಅಧ್ಯಕ್ಷ ಬರಾಕ ಒಬಾಮ ಕೂಡಾ ಬಾಪೂಜಿ ಯವರ ತತ್ವ ಸಿದ್ಧಾಂತ ದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ .ವಿಶ್ವ ದೆಲ್ಲೆಡೆ ಸತ್ಯ ,ಅಹಿಂಸೆ ಮತ್ತು ಶಾಂತಿ ಯಮಾರ್ಗ ದರ್ಶನ ಮಾಡಿದ್ದಾರೆ.
ಸ್ವದೇಶಿ ಖಾಧಿ ಬಟ್ಟೆ ಯನ್ನು ಉಡುವ ಬಗ್ಗೆ ಆಂದೋಲನ ಮಾಡಿ ಭಾರತದ ಜನತೆ ಗೆ ದಾರಿ ದೀಪ ವಾಗಿದ್ದಾರೆ.
ಇವರ ನಿಸ್ವಾರ್ಥ ಭಾವನೆ ಯನ್ನು ಸಿದ್ಧಾಂತ ವಾಗಿಟ್ಟುಕೊಂಡು ಸೆಪ್ಟೆಂಬರ್ ೫ ೨೦೦೮ ರಂದು ಯುವ ಜನಾಂಗ ವನ್ನು ಒಂದು ಕಡೆ ಸೇರಿಸುವ ನಮ್ಮ ಚಿಕ್ಕ ಪ್ರಯತ್ನ
ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಬಾಪೂಜಿ ಯವರ ನೆನಪು ಸದಾ ನಮ್ಮಲ್ಲಿರಲಿ .
ಅವರ ಆದರ್ಶ ಸಿದ್ಧಾಂತ ಈಗಿನ ಸಮಸ್ಯೆ ಗಳ ಸಮಾಧಾನವು ಹೌದು .
ಪ್ರಯತ್ನ ನಮ್ಮದು ಫಲಿತಾಂಶ ನಿರೀಕ್ಷಿಸಿ .
ಶುಭವಾಗಲಿ .
ಜೈ ಹಿಂದ್ .

Monday, January 26, 2009

ಮೈಸೂರು ನಗರ ಸರ್ವತೋಮುಖ ಅಭಿವ್ರದ್ಧಿ ಬೇಕಾಗಿದೆ

ನಮ್ಮ ಸುಂದರ ಮೈಸೂರು ನಗರ ಮಹಾರಾಜರ ಗತ ವೈಭವದ ಚಾರಿತ್ರಿಕ ಅರಮನೆಗಳ ಉರಾಗಿದೆ.
ಇಲ್ಲಿ ಸಾಹಿತ್ಯ ಸ್ತಳ ಪುರಾಣಕ್ಕೆ ಶಿಕ್ಷಣಕ್ಕೆ ,ಸಂಗೀತ ,ಕಲೆ ಆಟ ಓಟ ,ಮಲ್ಲ ಯುದ್ಧ ಮತ್ತು ಆರೋಗ್ಯ ಇತ್ಯಾದಿ ಗಳನ್ನೂ ಒಳಗೊಂಡ ಪ್ರವಾಸವನ್ನು ಮಹಾರಾಜರು ಪ್ರೋತ್ಸಾಹಿಸಿದ್ದಾರೆ.
ಇದರಿಂದಾಗಿ ಪ್ರಪಂಚದಲ್ಲಿ ದಸರಾ ಮಹೋತ್ಸವ ಇಗಲೂ ತನ್ನ ಮಹತ್ವ ವನ್ನು ಉಳಿಸಿಕೊಂಡಿದೆ .
ಇ ವರ್ಷದ ಗಣ ರಾಜ್ಯೋತ್ಸವದ ಸಮಾರಂಭ ದಲ್ಲಿ ಉಸ್ತು ವಾರಿ ಸಚಿವರು ,ಜಿಲ್ಲಾಧಿಕಾರಿ ಯವರು ಅಭಿವ್ರದ್ಧಿ ಯ ಬಗ್ಗೆ ಭರವಸೆ ನೀಡಿದ್ದನ್ನು ಇಲ್ಲಿ ಸ್ಮರಿಸ ಬಹುದು .
ಯಾವ ರಾಜಕೀಯ ಬಿನ್ನಾಭಿ ಪ್ರಾಯ ವಿಲ್ಲದೆ ಸರಕಾರ /ಜನತೆ ದುಡಿದಾಗ ಯಶಸ್ಸು ನಮಗೆ ಖಂಡಿತ .
ಒಗ್ಗಟ್ಟಿನಲ್ಲಿ ಬಲವಿದೆ .
ಶಿಕ್ಷಣ ,ಪ್ರವಾಸೋಧ್ಯಮ ಮತ್ತು ಆರೋಗ್ಯ ಸುಧಾರಣೆ ಯಿಂದ ಆದಾಯ ಹೆಚ್ಚಿಸಲು ಸಾಧ್ಯ.
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಗಾಗಿ
ನಾಗೇಶ್ ಪೈ .

Sunday, January 25, 2009

ಇಂದು ಗಣ ರಾಜ್ಯೋತ್ಸವ ದಿನಾಚರಣೆ .

೬೦ ನೇ ಗಣ ರಾಜ್ಯೋತ್ಸವ ಸಮಾರಂಭಕ್ಕೆ ಹಾರ್ದಿಕ ಶುಭಾಶಯಗಳು .
ಪ್ರಧಾನಿ ರಹಿತ ಸಮಾರಂಭ ನಡೆಯೋದು ಇದೇಮೊದಲ ಬಾರಿ.
ಭಯೋತ್ಪಾದನೆ ರಹಿತ ರಾಷ್ಟ್ರ ವನ್ನಾಗಿ ಮಾಡುವ ಛಲ ನಮ್ಮ ಯುವ ಯುವ ಜನಾಂಗದ ಮೇಲೆ ಮಹತ್ತರ ಹೆಜ್ಜೆ ಯಾಗಿದೆ .ಜಾತಿ ,ಧರ್ಮ ಪಕ್ಷ ಬೇಧ ವನ್ನು ಬಿಟ್ಟು ಸಂಘಟನೆ ಯ ಅವಶ್ಯಕತೆ ನಮಗಿದೆ .
ಸೆಪ್ಟೆಂಬರ್ ೫ ರಂದು ಸ್ಥಾಪನೆ ಮಾಡಿದ ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ ಮೂಲ ಮಂತ್ರ ವಾಗಿದೆ .ಇದಕ್ಕೆ ಬೇಕು ಯುವ ಶಕ್ತಿ ಯ ಸಾಮೂಹಿಕ ಬೆಂಬಲ
ಆರ್ಕುಟ್ ಸಮುದಾಯ [ಕಮ್ಯುನಿಟಿ ]
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ
ಜೈ ಹಿಂದ್ .

Saturday, January 24, 2009

ಭಾರತದ ಗಣ ರಾಜ್ಯೋತ್ಸವ ದಿನಾಚರಣೆ .ಶುಭಾಶಯಗಳು

ನಾಳೆ ಜನವರಿ ೨೬ ಭವ್ಯ ಭಾರತದ ಗಣ ರಾಜ್ಯೋತ್ಸವ ದಿನ ಆಚರಣೆ .
ಇ ಸುಸಂದರ್ಭ ದಲ್ಲಿ ದೇಶದ ಪ್ರಜೆ ಗಳು ಪಣ ತೊಡಬೇಕು .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ .
ದೇಶದ ಸ್ವಾತಂತ್ರ್ಯ ರಕ್ಷಣೆ ,ಹುತಾತ್ಮರಿಗೆ ಗೌರವ ಮತ್ತು ಸ್ಮರಣೆ ಅತೀ ಅಗತ್ಯ .
ನಮ್ಮ ದೇಶದ ಮುಂದಿನ ಪೀಳಿಗೆ ಯ ಜವಾಬ್ದಾರಿ ಹೆಚ್ಚಿಸಿದೆ .
ಉತ್ತಮ ಸಮಾಜ /ಮಾದರಿ ರಾಜ್ಯ ಹಾಗೂ ಭವ್ಯ ಭಾರತದ ನಿರ್ಮಾಣ ವಾಗ ಬೇಕಾಗಿದೆ .
ನಮ್ಮ ಯುವಕರು ಹೆಚ್ಚಿನ ಸಂಖ್ಯೆ ಯಲ್ಲಿ ನವ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸದಸ್ಯ ರಾಗಬೇಕು .
ಯುವ ಶಕ್ತಿ ಯೇ ದೇಶದ ಬೆನ್ನೆಲುಬು ಆಗಿದೆ ಎನ್ನುವುದು ಸತ್ಯ .
ಸತ್ಯ ಮೇವ : ಜಯತೆ :
ಗಣ ರಾಜ್ಯೋತ್ಸವದ ಶುಭಾಶಯಗಳು .
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್ :

Friday, January 23, 2009

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ -೨೪ ಜನವರಿ ೨೦೦೯ . ಹೆಣ್ಣು ಮಕ್ಕಳ ಭವಿಷ್ಯ ಸುಭದ್

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ -೨೪ ಜನವರಿ ೨೦೦೯ .
ಹೆಣ್ಣು ಮಕ್ಕಳ ಭವಿಷ್ಯ ಸುಭಧ್ರ ಗೊಳಿಸಲು ,ಹೆಣ್ಣು ಭ್ರೂಣ ಹತ್ಯೆ ನಿಷೇಧ ಕಾನೂನೂ ಯಶಸ್ವಿ ಯಾಗಲು
ಮತ್ತು ಹೆಣ್ಣು ಮಗುವಿಗೆ ನ್ಯಾಯ ದೊರಕಿಸಲು ಸಮಾನ ಹಕ್ಕನ್ನು ಖಾತರಿ ಪಡಿಸುವ ಉದ್ದೇಶ ದಿಂದ ಭಾರತ ಸರಕಾರವು ಪ್ರತಿ ವರ್ಷ ಜನವರಿ ೨೪ ನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಎಂದು ಘೋಷಿಸಿದೆ .ಹೆಣ್ಣು ಮಗುವಿನ ರಕ್ಷಣೆ ಪೋಷಣೆ ಸಬಲೀಕರಣ ,ವರ ದಕ್ಷಿಣೆ ನಿರ್ಮೂಲನೆ ಇತ್ಯಾದಿ ಹಲವಾರು ಯೋಜನೆ ಗಳ ಬಗ್ಗೆ ಸ್ತ್ರೀ ಸಮಾಜಕ್ಕೆ ಕಾನೂನು ಸಲಹೆ ಕೊಡಬೇಕಾದ ಅವಶ್ಯಕತೆ ಕಂಡು ಬಂದಿದೆ .ಸ್ವತಂತ್ರ ಳಾಗಿ ಬದುಕುವ ಹಕ್ಕು ಅವಳಿಗೆ ಇದೆ .ಆರೋಗ್ಯ ಮತ್ತು ವಿಧ್ಯಾಭ್ಯಾಸ ದಲ್ಲಿ ಪರಿಪೂರ್ಣ ಳಾಗಿರಬೇಕು .
ರಾಜ್ಯ ಮತ್ತು ಕೇಂದ್ರ ಸರಕಾರಗಳು ಇದಕ್ಕೆ ಸಹಕರಿಸಿದಾಗ ನಮ್ಮ ಭವ್ಯ ಭಾರತದ ನಿರ್ಮಾಣವಾಗುವ ಕನಸು ನೆನಸಾಗುವುದು ನಿಸ್ಸಂದೇಹ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನ ಶುಭಾಶಯಗಳು

ಜನವರಿ ೨೩ ಶುಭಾಶ್ ಚಂದ್ರ ಬೋಸ್ ಜಯಂತಿ .
ಭಯೋತ್ಪಾದನೆ ಅಳಿಸಿ -ದೇಶ ಉಳಿಸಿ ಅಭಿಯಾನ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಪತ್ರಿಕೆ ವಿತರಕರ ಹಿತದ್ರಸ್ಟ್ಟಿಯನ್ನು ಗಮನದಲ್ಲಿ ಇಟ್ಟು ಅವರ ವಿಮಾ ಸೌಲಭ್ಯ ಇತ್ಯಾದಿ ಕಲ್ಯಾಣ ಯೋಜನೆ ಗಳನ್ನೂ ಮುಖ್ಯ ಮಂತ್ರಿ ಯವರ ಆಪ್ತ ಸಚಿವರು ಹಮ್ಮಿ ಕೊಂಡಿದ್ದಾರೆ .
ಪತ್ರಿಕೆ ವಿತರಕರು ಸರಕಾರ ಮತ್ತು ರಾಜ್ಯದ ಕನ್ನಡಿಗರ ಸಂಪರ್ಕ ಸೇತುವೆ ಯಾಗಿ ತಮ್ಮನ್ನು ತೊಡಗಿಸಿ ಅಭಿವ್ರದ್ದಿಗೆ ಸಹಕಾರಿ ಆಗಿದ್ದಾರೆ.
ಕೊನೆಗೂ ಬೆಳಗಾವಿ ಅಧಿವೇಶನ ಅಭಿವ್ರದ್ದಿಗೆ ನಾಂದಿಯಾಗಲಿ .
ಉತ್ತರ ಕರ್ನಾಟಕ ಭಾಗದ ರೈತರ ಪಾಲಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತರಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
೨ ನಮ್ಮ ಸುಂದರ ಮೈಸೂರು
ಬೆಳಗಾವಿ ನಮ್ಮದು
ಜೈ ಕರ್ನಾಟಕ
ಸಿರಿ ಕನ್ನಡಂ ಗೆಲ್ಗೆ . .

Tuesday, January 20, 2009

ಬೆಳಗಾವಿ ಅಧಿವೇಶನ ೪ ನೇ ದಿನ -ಕೋಲಾಹಲ

ಬೆಳಗಾವಿ ವಿಧಾನ ಮಂಡಲ ೪ ನೇದಿನದ ಕಲಾಪ ಕೋಲಾಹಲ [ ಶಾಸಕರ ] ಅಸಿಶ್ತು ಮತ್ತು ಅಸಭ್ಯ ವರ್ತನೆ ಉದಯ ವಾರ್ತೆಗಳು ವಾಹಿನಿಯಲ್ಲಿ ನೇರ ಪ್ರಸಾರವನ್ನುವೀಕ್ಷಿಸಿ ರಾಜ್ಯದ ಜನತೆಗೆ ಬೇಸರವನ್ನು ಉಂಟು ಮಾಡಿದೆ .
ತಾವೇ ಮಾರ್ಗ ದರ್ಶಕರಾಗಿ ನಡೆಯ ಬೇಕಾದ ಸದಸ್ಯರು ಇ ರೀತಿಯ ಕೀಳು ನಡತೆ ಪ್ರದರ್ಶಿಸಿದ್ದಾರೆ .
ಕೇವಲ ೧೦ ದಿನಗಳ ಕಲಾಪವನ್ನು ರಾಜ್ಯದ ಜನತೆ ಯ ಅಭಿವ್ರದ್ಧಿ ಗಾಗಿ ಉಪಯೋಗಿಸಬೇಕು .ಇದನ್ನು ಬಿಟ್ಟು ಜಗಳವಾಡುವುದು ಮತ್ತು ಸಭಾಧ್ಯಕ್ಕ್ಷರ ಮಾತಿಗೆ ಬೆಲೆಕೊಡದಿರುವುದು ವಿಷಾದನೀಯ.
ಶಾಸಕರ ಸ್ಥಾನಕ್ಕೆ ಟಿಕೆಟ್ ನೀಡುವ ಮೊದಲು ಗಣಕೀಕರಣ [ಕಂಪ್ಯೂಟರ್ ,ಶಿಸ್ತಿನ ತರಬೇತಿ ] ಅಗತ್ಯ .
ಇಲ್ಲವಾದರೆ ಸದನದಲ್ಲಿ ಮರ್ಯಾದೆ ಎನ್ನುವ ಪದ ವಿಧಾನ ಸಭೆಯ ಗೌರವವನ್ನು ಇ ಶಾಸಕರು ಹರಾಜು ಹಾಕುವ ದಿನಗಳು ದೂರವಿಲ್ಲ .ತೆರಿಗೆ ಯಿಂದ ವಸೂಲಾದ ಖಜಾನೆ ಬರಿದು ಮಾಡಿ,ಅಭಿವ್ರದ್ಧಿ ಹೇಗೆ ಮಾಡಬಹುದು .ದ್ವೇಷ ಅಸೂಹೆ ಮತ್ತು ರಾಜಕೀಯ ಲಾಭ ಪಡೆಯುವ ಪಕ್ಷಗಳ ವರ್ತನೆಗೆ ಧಿಕ್ಕಾರ .
ಆಡಳಿತ ಪಕ್ಷ ತಿರುಗಿಬಿದ್ದಾಗ ಪ್ರತಿಪಕ್ಷ ನಾಯಕರು ಗೈರು .ಅಸಂಸದಿಯ ಪದ ಪ್ರಯೋಗ .
ಕೆಸರೆರಚಾಟ .ಇದು ಸರಿಯಲ್ಲ .
ನಮ್ಮ ಪಕ್ಷಗಳ ಒಳಗೆ ಭಿನ್ನಾಭಿಪ್ರಾಯ ಇರುವಾಗ ನಾವು ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯದ ಜೊತೆ ಗಡಿ ವಿವಾದ /ಹೊಗೆನಕಲ್ ವಿವಾದ ಇತ್ಹ್ಯ್ಯರ್ಥ ಸಾಧ್ಯವೇ ನೀವೇ ಯೋಚಿಸಿ ನೋಡಿ .
ಸಂಯಮ ಧಕ್ಷ್ಯತೆ ಸುಧಾರಣೆ ಮಾಡುವ ಯೋಗ್ಯತೆ ನಮ್ಮಲ್ಲಿ ಇರಬೇಕು .
ಮುಂದಿನ ಲೋಕ ಸಭಾ ಚುನಾವಣೆ ಮನಸ್ಸಿನಲ್ಲಿ ಇಟ್ಟುರಾಜ್ಯದ ಅಭಿವ್ರದ್ಧಿ ಯನ್ನುಬಲಿ ಕೊಡು ವುದರಲ್ಲಿ ಅರ್ಥ ವಿಲ್ಲ.
ಮುಂದಿನ ೪ ದಿನಗಳು ಸದುಪಯೋಗವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ .

Saturday, January 17, 2009

ಸುಗಮ ಸಂಗೀತ ಗಾರ/ನಟ ರಾಜು ಅವರ ನಿಧನ

ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ದಿವಂಗತ ಕೆ ಎಸ್ ಅನಂತಸ್ವಾಮಿ ಅವರ ಪುತ್ರ ರಾಜು ಅವರ ಅಕಾಲಿಕ ನಿಧನ ದಿಂದಾಗಿ ಸುಗಮ ಸಂಗೀತ ಮತ್ತು ಚಲನ ಚಿತ್ರ ಕ್ಷೇತ್ರ ಅನಾಥ ವಾಗಿರುವುದನ್ನು ಸಂತಾಪ ಸೂ ಚಿಸುತ್ತಿದೆ ಹಾಗೂ ಮ್ರತ ರಾಜೂ ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸುತ್ತಿದೆ .
ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾವು ಬರಬಾರದಾಗಿತ್ತು .
ಇ ಸಾವೂ ನ್ಯಾಯವೇ ?
ಅವರ ಕುಟುಂಬ ಮತ್ತು ರಾಜ್ಯದ ಜನತೆಗೆ ತುಂಬ ಲಾರದ ನಷ್ಟವಾಗಿದೆ .
ವಿಧಿ ಬರಹದ ಮುಂದೆ ಮನುಷ್ಯನ ಪ್ರಯತ್ನ ಯಶಸ್ವಿ ಯಾಗಿಲ್ಲ .
ನಾಗೇಶ್ ಪೈ .

Friday, January 16, 2009

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ . ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬ

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ
ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ .
ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬಲಿದಾನಕ್ಕೆ ಹೆಸರುವಾಸಿ ಯಾಗಿದ್ದಾರೆ .ಈಗಲೂ ರೈತ ,ವೀರ ಯೋಧ ಮತ್ತು ಕಾರ್ಮಿಕ ಜನಾಂಗ ದೇಶ /ರಾಜ್ಯ ಕಲ್ಯಾಣ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ .ಪ್ರಮುಕ ರಾಜಕಾರಣಿಗಳು /ಮಂತ್ರಿಗಳು /ಮುಖ್ಯ ಮಂತ್ರಿಗಳು ಆರಿಸಿ ಬಂದಿದ್ದಾರೆ .ವಿಷಾದನೀಯ ವಿಷಯ ಇಲ್ಲಿಂದ ಆರಿಸಿಬಂದ ವಿಧಾನ ಸಭಾ ಸದಸ್ಯರು /ಸಂಸದರು ಇ ಭಾಗದ ಜನತೆಗೆ ಕೊಟ್ಟಿದ್ದೇನು ಮತ್ತು ಇನ್ನೂ ಏಕೆ ಹಿಂದುಳಿದಿದೆ ?
ಪ್ರಕ್ರತಿ ವಿಕೋಪವು ಕಾರಣವೇ
ರಾಜಕೀಯ ಪಕ್ಷಗಳು ಮತ್ತು ಅವರ ಲಾಭ /ನಷ್ಟ ವು ಕಾರಣವೇ ಅಥವಾ ಆಡಳಿತ ಸರಕಾರಗಳ ನಿರ್ಲಕ್ಷ ವೇ
ಇದರ ಬಗ್ಗೆ ಚಿಂತನೆ ಅಗತ್ಯ .
ಈಗ ನಡೆಯುವ ಸದನದ ಕಲಾಪದಲ್ಲಿ ಶಕ್ತಿ ಪ್ರದರ್ಶನ /ದ್ವೇಷ ಮಾಡದೇ ಎಲ್ಲಾ ಪಕ್ಷಗಳು ಒಟ್ಟಾಗಿ ಇ
ಭಾಗದ ಜನರಿಗೆ ನ್ಯಾಯ ಕೊಡಿಸಿ ಆತ್ಮ ಹತ್ಯೆ ಚಳವಳಿ ತಡೆದು ನಂಜುಂಡಪ್ಪ ವರದಿ ಅನುಷ್ಟಾನ ,ಅತಿವ್ರಷ್ಟಿ ,ಬರಗಾಲ ಕ್ಕೆ ಸರಿಯಾದ ಸಮಯದಲ್ಲಿ ಸಹಾಯ ಹಸ್ತ ಕೊಟ್ಟು ೧೪ ವಿಧೇಯಕಗಳನ್ನು
ಮಂಡಿಸಿದ್ದಾರೆ .
ರಾಜ್ಯಪಾಲರ ಭಾಷಣಕ್ಕೆ ಮರ್ಯಾದೆ ಕೊಟ್ಟು ರಾಜ್ಯದ ಸರ್ವತೋಮುಖ ಅಭಿವ್ರದ್ದಿ ಗಾಗಿ ದುಡಿಯಬೇಕು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ ಮಾತೆ :

Wednesday, January 14, 2009

ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು

ನನ್ನ ಪ್ರೀತಿಯ ವಾಚಕರೆ ,
ನಿಮಗೆಲ್ಲರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು .
ಸ್ವಾಮಿಯೇ ಶರಣಂ ಅಯ್ಯಪ್ಪ :
ಶಬರೀಮಲೈ ಅಯ್ಯಪ್ಪ ಸ್ವಾಮಿ ಮಕರ ಜ್ಯೋತಿ ನಿಮ್ಮೆಲ್ಲರ ಜೀವನ ಸದಾ ಬೆಳಗಿಸಲಿ .
ಜಡತ್ವ ಅಳಿಸಿ ನಿಮ್ಮ ಬದುಕು ನಿತ್ಯ ಚೇತನ ವಾಗಿರಲಿ .
ಎಳ್ಳು -ಬೆಲ್ಲ ಮತ್ತು ಕಬ್ಬಿನ ರುಚಿ ಸವಿಯುತ್ತ ಸಿಹಿಯಾದ ಮಾತಾಡಿ .
ಶತ್ರು ಗಳಿಲ್ಲದ ಮಿತ್ರ ರ ಒಡನಾಟ ವೇ ಲೇಸು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಸದಾ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸುತ್ತಿದೆ .
ನಾಗೇಶ್ ಪೈ .

Sunday, January 11, 2009

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ

ಸ್ವಾಮಿ ವಿವೇಕಾನಂದರ ಜನನ ಜನವರಿ ೧೨ ೧೮೬೩ .
ಪ್ರತಿ ವರ್ಷದ ಜನವರಿ ೧೨ ರಾಷ್ಟ್ರಿಯ ಯುವ ದಿನವನ್ನಾಗಿ ಆಚರಿಸಲಾಗುತ್ತಿದೆ .
ಅವರು ಅಮೇರಿಕಾದ ಚಿಕಾಗೋ ನಲ್ಲಿ ಮಾಡಿದಭಾಷಣ ಇಂದಿಗೂ ಚಿರ ಸ್ಮರಣಿಯ .
ಯುವ ಜನಾಂಗದಲ್ಲಿ ನನ್ನ ನಂಬಿಕೆ ಇದೆ .ಅಧುನಿಕ ಜನಾಂಗದಲ್ಲಿ ನನ್ನ ನಂಬಿಕೆ ಯಿದೆ .ಅವರೊಳಗಿಂದಲೇ ನನ್ನ ಜನರು ಹೊರಬರುತ್ತಾರೆ (ಸಿಂಹ ಸದ್ರಶರಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ )
ಸ್ವಾಮಿ ವಿವೇಕಾನಂದರಿಗೆ ಯುವ ಜನಾಂಗ ದಲ್ಲಿದ್ದ ವಿಶ್ವಾಸ ದ ಧ್ಯೋತಕ ಈ ಮಾತು .
ನೂರು ಮಂದಿ ಯುವಕರನ್ನು ಕೊಡಿ ಅದ್ಭುತವಾದುದನ್ನು ಸಾಧಿಸಿ ತೋರುತ್ತೇನೆ .ಎಂದಿದ್ದರು ಗುರೂಜಿ.
ಈಗ ಭಾರತದ ಎಲ್ಲೆಡೆಗಳಲ್ಲೂ ಭಯೋತ್ಪಾದಕರ ಭೀತಿ ಎದುರಾಗಿದೆ .
ಕನ್ಯಾಕುಮಾರಿಯ ಲ್ಲಿ ಕಪ್ಪು ಶಿಲೆಯಾಗಿ ನಿಂತ ವಿವೇಕಾನಂದರು ನಮ್ಮ ಯುವ ಸಮುದಾಯಕ್ಕೆ ಸ್ಪೂರ್ತಿ ಯಾಗಿ ಪರಿಣಿಸಲಿ.
ಇಲ್ಲಿ ಯಾವ ರಾಜಕೀಯ /ಪಕ್ಷ ಭೇಧವನ್ನು ಮರೆತು .ಮುಂದಿನ ಸಮಸ್ಯೆ ಗಳನ್ನೂ ಎದಿರಿಸೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಹಿಂದ್
ಇದನ್ನು ಸಾಬೀತುಪಡಿಸುವುದರಿಂದ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಿ ದ್ದಕ್ಕೆ ಸಾರ್ಥಕ ವಾಗುತ್ತದೆ .

Saturday, January 10, 2009

ಚಳವಳಿಗಳು ಮತ್ತು ನಮ್ಮ ಸರಕಾರ

ನಮ್ಮ ಆಡಳಿತ ಸರಕಾರ ಮತ್ತು ಪ್ರಜೆಗಳ ಸಂಬಂಧ ತಾಯಿ ಮತ್ತು ಮಗುವಿನ ಸಂಬಂಧ ಇದ್ದ ಹಾಗೆ.
ಹೇಗೆ ತಾಯಿ ಮಗುವಿನ ಆರೈಕೆ ಯ ವಿಚಾರ ಅತ್ತಾಗ ಹಾಲು ಕೂಡಿಸಿ ಅಲ್ಲದೆ ಆರೋಗ್ಯದ ಗಮನ ತೆಗೆದು ಕೊಂಡು ಬೆಳೆಸಿ ಮುಂದೆ ಭಾರತದ ಪ್ರಜೆ ಯಾಗಿ ಮಾಡುವಳು .ಇದೇ ರೀತಿಯಾಗಿ ನಮ್ಮ ಸರಕಾರವೂ ತನ್ನ ಪ್ರಜೆಗಳ ಸರ್ವತೋಮುಖ ಅಭಿವ್ರದ್ಧಿ ಗಾಗಿ ಯೋಜನೆ ಮಾಡಿ ಕಾರ್ಯರೂಪಕ್ಕೆ ತರಬೇಕು .
ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕರು /ಕಾರ್ಮಿಕರು ಚಳವಳಿ ಮಾಡಿ ತಮ್ಮ ಬೇಡಿಕೆ ಗಳನ್ನೂ ಒಪ್ಪಿಸ ಬೇಕಾಗಿದೆ .
ಪೆಟ್ರೋಲ್ /ಡೀಸೆಲ್ ಬಗ್ಗೆ ನಡೆದ ಚಳವಳಿ ಉದಾರಣೆ.
ಕಾಳಸಂತೆ ಮತ್ತು ಅವಶ್ಯಕತೆ ಗಿಂತ ಹೆಚ್ಚು ದಾಸ್ತಾನು .ಬೆಲೆಏರಿಕೆ ವಿವಾದ ಇತ್ಯಾದಿ ನಾಗರೀಕರ ನಿದ್ದೆ ಕೆಡಿಸಿದೆ .
ನಮ್ಮ ಮೈಸೂರಿನಲ್ಲಿ ಜಿಲ್ಲಾಧಿಕಾರಿಯವರ ಕಾರ್ಯ ದಕ್ಷತೆಯಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ .ಆದರೆ ಲಾರಿ ಮಾಲೀಕರ ಸಂಪು ನಿಲ್ಲಿಸುವುದರಲ್ಲಿ ವಿಜಯಿ ಯಾಗಬೇಕು .
ಇದರಿಂದಾಗಿ ದಿನ ನಿತ್ಯದ ಆಗತ್ಯ/ಬಳಕೆ ವಸ್ತುಗಳ ಸರಬರಾಜು ಇಲ್ಲದೇ ಕಷ್ಟ ಪಡುವಂತಾಗಿದೆ .
ಪತ್ರಿಕೆ /ಮಾಧ್ಯಮ/ವಿರೋಧ ಪಕ್ಷಗಳ ಆರೋಗ್ಯಕರ ಟೀಕೆ ಗಳನ್ನು ಸರಿ ಪಡಿಸುವುದನ್ನು ಆಡಳಿತ ಪಕ್ಷವು ಕಲಿಯಬೇಕು .ಆದರೆ ಇದನ್ನು ಮುಂದೆ ಬರುವ ಲೋಕ ಸಭೆಯ ಚುನಾವಣೆಗೆ ಅಸ್ತ್ರವಾಗಿ ರಾಜಕೀಯ ಪಕ್ಷಗಳು ಉಪಯೋಗಿಸಬಾರದು.
೧ ನಮ್ಮ ಸುಂದರ ಮೈಸೂರು .೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ನಿವೇದನೆ .
ನಾಗೇಶ್ ಪೈ
ಸರ್ವೇ : ಜನ ಸುಕಿನೋ ಭವಂತು :

Thursday, January 8, 2009

ಕನ್ನಡ ಭಾಷೆ ಅಭಿವ್ರದ್ಧಿ ಪ್ರಚಾರ ಅಭಿಯಾನ ಚಾಲನೆ .

ಸುವರ್ಣ ಕನ್ನಡ ಭಾಷೆ ಯ ಅಭಿವ್ರದ್ಧಿ ಯ ಪ್ರಚಾರ ಅಭಿಯಾನ ಚಾಲನೆ.
ಕೇಂದ್ರ ಸರಕಾರವು ಈಗ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ಕೊಟ್ಟು ಭಾಷೆ ಒಂದೇ ಅಲ್ಲದೇ ಕನ್ನಡಿಗರಿಗೆ ಗೌರವಿಸಿದಂಥಾಗಿದೆ.
ಈ ಭಾಷೆಗೆ ಕೊಟ್ಟ ಸನ್ಮಾನ ವನ್ನು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯದ ೫.೫ ಕೋಟಿ ಜನರ ಮೇಲೆ ಇದೆ .
ಈ ವಿಷಯದಲ್ಲಿ ಯಾವ ಪಕ್ಷ /ಜಾತಿ /ಧರ್ಮದ ರಾಜಕೀಯ ಇರ ಬಾರದು.
ನಾನು ಉದ್ಯೋಗ ದಲ್ಲಿ ಇರುವಾಗ ನೇರೆ ರಾಜ್ಯಗಳಾದ ಆಂಧ್ರ /ತಮಿಳುನಾಡು ನಲ್ಲಿ ಸೇವೆ ಯಲ್ಲಿ ಇರುವಾಗ ನನ್ನ ಅನುಭವವನ್ನು ನಿಮ್ಮೆಲ್ಲರ ಜೊತೆ ಹಂಚಿ ಕೊಳ್ಳುತ್ತಿದ್ದೇನೆ .
ಆ ಎರಡು ರಾಜ್ಯ ಗಳಲ್ಲಿ ಎಸ್ಟೆ ಕಷ್ಟ ಪಟ್ಟರು ನಾನು ಕನ್ನಡ ಪ್ರಚಾರ ಮಾಡಲೂ ಆಗಲಿಲ್ಲಾ .
ಭಾಷೆ ಕಲಿಯುವ ಆಸಕ್ತಿ ಇದ್ದ ನಾನು ಸುಲಭ ವಾಗಿ ಆ ಎರಡು ಭಾಷೆಯಲ್ಲಿ ಮಾತಾಡಬಲ್ಲೆ.
ಇ ಯೋಜನೆ ಯನ್ನು ಕರ್ನಾಟಕ ದಲ್ಲಿ ಸರಕಾರವು ಬಳಸಬೇಕು .
ಅಂಗ್ಲ ಭಾಷೆ ಶಬ್ದ ಉಪಯೋಗಿಸಿ ಮಾತಾಡುವ ಜನರಿಗೆ ಕನ್ನಡ ಭಾಷೆ ಯಲ್ಲಿ ಮಾತಾಡುವ /ಓದುವ /ಬರೆಯುವ ಹವ್ಯಾಸ ಇಟ್ಟುಕೊಂಡರೆ .ರಾಜ್ಯದಲ್ಲಿ ವಾಸಿಸುವಜನರ , ಬೇರೆ ಭಾಷೆ ಗಳಾದ ತೆಲುಗು ,ಮರಾಠಿ ,ತಮಿಳು ,,ಮಾರವಾಡಿ ,ಇತ್ಯಾದಿ ಜನರು ಕಡ್ಡಾಯವಾಗಿ ಕನ್ನಡ ಕಲಿಯ ಬೇಕಾಗಿದೆ .
ವ್ಯವಹಾರದಲ್ಲಿ ಕನ್ನಡ ಬಂದಾಗ ತಮಿಳುನಾಡು ,ಮಹಾರಾಷ್ಟ್ರ ವನ್ನು ಮಾದರಿ ಯಾಗಿ ಇಟ್ಟರೆ
ಕನ್ನಡ ಅಭಿವ್ರದ್ಧಿ ಯಾಗುವುದು ನಿಸ್ಸಂದೇಹ .
ದಯವಿಟ್ಟು ಕನ್ನಡವನ್ನು ಉಳಿಸಿ /ಬೆಳಸಿ .
ಭಾಷೆಗೆ ರಾಜಕೀಯ ಪಕ್ಷಗಳು ಒಂದಾಗಬೇಕು .
ಸಿರಿ ಕನ್ನಡಂ ಗೆಲ್ಗೆ .
ಜೈ ಕರ್ನಾಟಕ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Wednesday, January 7, 2009

ಬುದ್ಧ ವಿಹಾರ ಗುಲ್ಬರ್ಗ -ಲೋಕಾರ್ಪಣೆ

ಇಂದು ಜನವರಿ ೭ ಭಾರತದ ಚರಿತ್ರೆ ಯಲ್ಲಿ ಸುವರ್ನಾಕ್ಷರ ಗಳಲ್ಲಿ ಬರೆಯುವ ಸುದಿನವಾಗಿದೆ.
ಭವ್ಯ ಭಾರತದ ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಅವರಿಂದ
ಕರ್ನಾಟಕ ರಾಜ್ಯದ ಗುಲ್ಬರ್ಗಾದಲ್ಲಿ
ಬುದ್ಧ ವಿಹಾರ ಹಾಗೂ ಪ್ರಾರ್ಥನಾ ಮಂದಿರ ಜನ ಸಾಮಾನ್ಯರಿಗೆ ಅರ್ಪಿಸಲಾಗಿದೆ .
ಮನು ಕುಲದ ಬಾಳಿಗೆ ಅಹಿಂಸೆ ಎಂಬ ಭವ್ಯ ದೀಪ ವನ್ನು ನೀಡಿದ ಮಹಾತ್ಮ ಗೌತಮ ಬುದ್ಧ ಅವರ ಸ್ಮರಣೆ ಮಾಡಬೇಕಾಗಿದೆ .
ಚಂದನ ವಾಹಿನಿ ಇದರ ಉದ್ಘಾಟನೆ ಯನ್ನು ನೇರ ಪ್ರಸಾರ ಮಾಡಿ ಕರ್ನಾಟಕದ ಮನೆ ಮನೆ ಯಲ್ಲಿ ನೋಡುವ ಸೌಭಾಗ್ಯ ಕಲ್ಪಿಸಿದೆ .
ಈ ಮಹಾನ್ ತೇಜಸ್ಸು ಇಂದಿನ ಜಗತ್ತಿ ನೊಂದಿಗೆ ಸಮಾಗಮವಾಗಿ ಎಲ್ಲೆಲ್ಲಲೂ ಶಾಂತಿ ನೆಲಸು ವಂತಾಗಲಿ ಎಂಬ ಮಹದಾಸೆ ಯೊಂದಿಗೆ ನಿರ್ಮಿಸಲಾದ ದೇಶದಲ್ಲೇ ಅತಿ ದೊಡ್ಡ ಬುದ್ಧ ವಿಹಾರ.ಇದಾಗಿದೆ .
ಇದನ್ನು ಸಂದರ್ಶಿಸಿ ಜನತೆ ತಮ್ಮ ಜೀವನದಲ್ಲಿ ಸುಖ :ಶಾಂತಿ ಮತ್ತು ನೆಮ್ಮದಿ ಸಿಗುವ ಹಾಗೆ ಅಗಲಿ ಎಂದು ಕೋರುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Tuesday, January 6, 2009

ಕನ್ನಡ ಚಲನ ಚಿತ್ರ ಮತ್ತು ನಟರು /ಸಾಹಿತಿ ಗಳು

ವರನಟ ಕನ್ನಡದ ಮೇರು ನಟ ನಟ ಸಾರ್ವಭೌಮ ಡಾ ರಾಜಕುಮಾರ್ ಅವರಿಂದ ಸಾಹಿತಿ /ಬುದ್ಧಿ ಜೀವಿ ಗಳು ಪಾಠ ಕಲಿಯ ಬೇಕಾಗಿದೆ .ಅವರು ಜೀವನ ಪೂರ್ತಿ ರಾಜಕೀಯ ದಲ್ಲಿ ಸೇರದೆ .ಕನ್ನಡ ಭಾಷೆಗೆ ಮೆರುಗು ತಂದ ನಟ ಮತ್ತು ಮಹಾನ್ ಕಲಾವಿದ .ಇತ್ತೀಚೆಗಿನ ದಿನಗಳಲ್ಲಿ ರಾಜಕೀಯ ಮುಖಂಡರು ತಮ್ಮ ಪಕ್ಷದ ಪ್ರಚಾರ ಕ್ಕಾಗಿ ಚುನಾವಣೆಯಲ್ಲಿ ಇಂಥಹ ಸ್ವಾರ್ಥಿ ಸಾಹಿತಿ ಮತ್ತು ಬುದ್ಧಿ ಜೀವಿ ಗಳನ್ನೂ ಬಳಸಿ ಕೊಂಡು ಮುಂದೆ ಬರುವ ಲೋಕ ಸಭೆ ಗೆ ಉಪಯೋಗಿಸಲು ಹವಣಿಸಿದರೆ ಕನ್ನಡದ /ರಾಜ್ಯದ ಬೇಸರದ ಸಂಗತಿ .
ಸ್ವಾರ್ಥ ಮನೋಭಾವ ಇರುವ ಜನರು ಕೇವಲ ಧನಲಾಭ ಕ್ಕಾಗಿ /ಖುರ್ಚಿ ಗಾಗಿ ಪಕ್ಷ ಬದಲಾಯಿಸು ತ್ತಲೇ ಇರುವಾಗ ಅಭಿವ್ರದ್ದಿ ಯ ಅಪೇಕ್ಷೆ ಹೇಗೆ ಮಾಡ ಬಹುದು ನೀವೇ ಹೇಳಿ ?
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

Saturday, January 3, 2009

ಭಯೋತ್ಪಾದಕರ ವಿರುದ್ಧ ಹೋರಾಟಅಭಿಯಾನ ಚಾಲನೆ.

ಸೆಪ್ಟೆಂಬರ್ ೫ ರಂದು ನಮ್ಮ ಸುಂದರ ಮೈಸೂರಿನಲ್ಲಿ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಸ್ಥಾಪನೆ .
ಇಂದು ಭಯೋತ್ಪಾದಕರ ಬೇರು ಸಮೇತ ನಿರ್ಮೂಲನೆ ಅಭಿಯಾನ ಚಾಲನೆ.
ನಮ್ಮ ರಾಜ್ಯದ ಎಲ್ಲಾ ಶಾಲೆ /ಕಾಲೇಜ್ ನ ವಿಧ್ಯಾರ್ಥಿ /ವಿಧ್ಯಾರ್ಥಿನಿ ಯರಿಗೆ ಭಾಗವಹಿಸಲು ಸುಸ್ವಾಗತ .
ಸಾರ್ವಜನಿಕರು ಎಲ್ಲಾ ಪಕ್ಷ /ಜಾತಿ ಭೇಧವನ್ನು ಮರೆತು ಹೋರಾಟದ ಸಂಘಟನೆ ಯನ್ನು ಮನಸ್ಸಿನಲ್ಲಿ ಇಡುತ್ತಾ ಜನವರಿ ೧ ರಂದು ಭಾರತದ ಈಶಾನ್ಯ ರಾಜ್ಯ ಒರಿಸ್ಸಾ ದ ಗುವಹಾಟಿ ಯ ೩ ಸ್ಪೋಟಗಳು ನಡೆದ ೫ ಜನರ ಸಾವು ಹ್ರದಯ ವಿದ್ರಾವಕ ಘಟನೆ ಯಾಗಿದೆ .
ಇತ್ತೀಚೆಗಿನ ಹೊಸ ಕಾನೂನು ಉಗ್ರರ ಭಂಧನಕ್ಕೆ ಸಹಾಯಕ ವಾಗ ಬಹುದು .
ನೀವೆಲ್ಲರೂ ಸೇರಿ ಈ ಕಾರ್ಯ ಕ್ರಮವು ಯಶಸ್ವಿ ಆಗಲಿ ಎಂದು ಹಾರೈಸುವ
ನಾಗೇಶ್ ಪೈ
ಕನ್ನಡ ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಭಾರತ ಸುರಕ್ಷಿತ ರಾಷ್ಟ್ರ ವಾಗಲಿ ಎಂದೆಂದಿಗೂ .
ಜೈ ಭಾರತ್

Thursday, January 1, 2009

೨೦೦೯ -ಕನ್ನಡ ಭಾಷೆಯ ಅಭಿವ್ರದ್ಧಿಯ ಹೊಸ ವರ್ಷ

೨೦೦೯ ಕನ್ನಡ ಜಾಗ್ರತಿ ವರ್ಷ -ಕರ್ನಾಟಕ ಸರಕಾರದ ಘೋಷಣೆ .
ನಮ್ಮ ಭಾಷೆ ಕನ್ನಡ .ಆಡಳಿತವು ಕನ್ನಡ
ನಾವು ಕನ್ನಡಗಿರು.ನಮ್ಮ ಶಿಕ್ಷಣ ಕನ್ನಡವಾಗಿರಲಿ.
ಕನ್ನಡ ಆಡೋಣ ಮತ್ತು ಬರೆಯಲು /ಓದಲು ಕಲಿಯೋಣ .
ನಾವೆಲ್ಲರೂ ಕನ್ನಡಿಗರು .ನಮ್ಮ ಸಂಸ್ಕ್ರತಿ ಕನ್ನಡ .
ಎಲ್ಲಿಂದಾದರೂ ಬಂದಿರಿ .ಆದರೆ ಕನ್ನಡಿಗ ರಾಗಿರಿ.
ನೆಲ ನಮ್ಮದು ಜಲ ನಮ್ಮದು ಉಸಿರು ನಮ್ಮದು ಸದಾ ಕನ್ನಡ ವಾಗಿರಲಿ .
ಕನ್ನಡ ಆರ್ಕುಟ್ ಸಮುದಾಯ [ಕಮ್ಯುನಿಟಿ ]
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಸುಸ್ವಾಗತ ಕೋರುವ
ನಾಗೇಶ್ ಪೈ
ಸಿರಿ ಕನ್ನಡಂ ಗೇಲ್ಗೆ /ಬಾಳ್ಗೆ
ಹೊಸ ವರ್ಷದಲ್ಲಿ ಕನ್ನಡ ಭಾಷೆಯ ಅಭಿವ್ರದ್ಧಿಗೆ ದುಡಿಯೋಣ ಬನ್ನಿ .