Thursday, July 30, 2009

munde baruva habbagalu mattu Acharane.-sugamavagali.

ಭವ್ಯ ಭಾರತದ ದಲ್ಲಿ ಧರ್ಮ ಗಳು ಮತ್ತು ಸಂಬಂಧ ಪಟ್ಟ ಹಬ್ಬಗಳ ಆಚರಣೆ .
ಭಾರತದ ಪ್ರತಿಯೊಬ್ಬ ಪ್ರಜೆಗೆ ತಮ್ಮ ತಮ್ಮ ಧರ್ಮ ಹಾಗೂ ಅವುಗಳ ಸಂಬಂಧ ಪಟ್ಟ ಹಬ್ಬಗಳನ್ನು ಆಚರಣೆ ಮಾಡುವ ಅಧಿಕಾರ ವನ್ನು ಸಂವಿಧಾನ ದಲ್ಲಿ ಕೊಡಲಾಗಿದೆ .ಆದರೆ ಕೆಲವು ಕಿಡಿ ಗೇಡಿಗಳು ಇದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿ ಸಮಾಜ /ರಾಷ್ಟ್ರ ದ್ರೋಹ ಬಗೆದಿರುವುದನ್ನು ಅಲ್ಲದೆ ಆಸ್ತಿ /ಜೀವ ಹಾನಿ ಮಾಡಿರುವುದು ಇತ್ತೀಚೆಗಿನ ದಿನ ಗಳಲ್ಲಿ ಕಂಡು ಬಂದಿದೆ .ಪೋಲಿಸ್ ವ್ಯವಸ್ಥೆ ಮತ್ತು ಜಿಲ್ಲಾಧಿಕಾರಿ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ .ಸಫಲರಾಗಿ ಶಾಂತಿ ಯನ್ನು ಕಾಪಾಡಿ ಕೊಂಡು ಬಂದಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ತಪ್ಪಿತಸ್ತರನ್ನು ಭಂಧಿಸಿ ಶಿಕ್ಷೆ ಕೊಟ್ಟರೆ ಭಯದ ವಾತಾವರಣ ಉಂಟಾಗಿ ಅಪರಾಧ ಗಳ ಸಂಖ್ಯೆ ಇಳಿಮುಖ ವಾಗಬಹುದು .ಇಲ್ಲಿ ಮುಖ್ಯವಾಗಿ ರಾಜಕಾರಣಿ /ರಾಜಕೀಯ ಪ್ರವೇಶ ನಿಷೇಧ .
ಹಿಂದೂ ಧರ್ಮ ದಲ್ಲಿ ಹಬ್ಬ ಗಳ ಮತ್ತು ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಯಲ್ಲಿ ಹೆಚ್ಚು ಸಂಖ್ಯೆ ಯಲ್ಲಿ ಕಾಣಬಹುದು .
ನಮ್ಮ ಸಂಸ್ಕ್ರತಿ ಯನ್ನು ಉಳಿಸಿಕೊಳ್ಳಲು ಹಬ್ಬಗಳು ಸಹಾಯ ಕಾರಿಯಾಗಿದೆ.ದೈವಿಕ ಭಾವನೆ ಹೆಚ್ಚಿಸುತ್ತಿದೆ .
ಇಲ್ಲಿ ನಾಗರೀಕರಿಗೆ ವಿಶ್ವದ ಅರ್ಥಿಕ ಹಿನ್ನಡೆ ಬಲವಾದ ಪೆಟ್ಟು ಕೊಟ್ಟಿದೆ .
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗ ಹಾಗೂ ಕೆಳಗಿನವರಿಗೆ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೆ ಹಬ್ಬ ಆಚರಣೆ ಕಷ್ಟ ಕರ .
ಕೆಲವು ರಾಜ್ಯ ಮತ್ತು ಪ್ರದೇಶ ಗಳಲ್ಲಿ ಎಲ್ಲಾ ಧರ್ಮದವರು ಎಲ್ಲಾ ಹಬ್ಬ ಗಳನ್ನೂ ಒಟ್ಟಿಗೆ ಸೇರಿ ಆಚರಿಸುವ ಪದ್ಧತಿ ಕಂಡು ಬಂದಿದೆ .ಸರ್ವ ಧರ್ಮ ಸಮ್ಮಿಲನ ಆಗಿರುವುದು ವಿವಿಧತೆ ಯಲ್ಲಿ ಏಕತೆ ಯ ಧ್ಯೋತಕ ವಾಗಿದೆ .
ಎಲ್ಲರೂ ಸೇರಿ ವಿಚಾರ ಮಾಡಿ ಹಿತ ದ್ರಸ್ಟಿಯಿಂದ ಒಮ್ಮತಕ್ಕೆ ಬರಬೇಕು .ಸರಕಾರವೂ ಕೈ ಜೋಡಿಸಿದಾಗ ಇದು ಕಷ್ಟ ಸಾಧ್ಯ ವೇನೂ ಅಲ್ಲ .
ಧರ್ಮ ಗುರುಗಳ ಸಹಕಾರವು ಬೇಕಾಗದೆ .
ಮುಂದೆ ಬರುವ ಎಲ್ಲಾ ಹಬ್ಬಗಳು ಜನರ ನೆಮ್ಮದಿಯನ್ನು ಕೆಡಿಸದೆ ಶಾಂತಿ ,ಸೌಹಾರ್ದ ಬೆಳಸಿ ಅಭ್ಯುದಯದ ಕಡೆ ಸಾಗಲಿ ಇದು ನಮ್ಮ ಹಾರೈಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .
ಜೈ ಹಿಂದ್

Sunday, July 26, 2009

manava janma idu doddadu

ಮಾನವ ಜನ್ಮ ಇದು ದೊಡ್ಡದು .ಇದು ಶ್ರೀ ಪುರಂದರ /ಕನಕ ದಾಸರು ತಮ್ಮ ಕೀರ್ತನೆ ಗಳಲ್ಲಿ ವಿವರವಾಗಿ ಬಳಸಿರುತ್ತಾರೆ .
ಬಸವ /ಸರ್ವಜ್ಞ ಮತ್ತು ಅಕ್ಕ ಮಹಾದೇವಿ ಕರ್ನಾಟಕ ವಚನ ಸ್ಹಾಹಿತ್ಯಗಳಲ್ಲಿ ಇದನ್ನು ಓದುವ ಭಾಗ್ಯ ಕನ್ನಡಿಗರಿಗೆ ಲಭಿಸಿದೆ .
ಇದನ್ನು ಚಲನ ಚಿತ್ರ ಗಳಲ್ಲಿ ವರ ನಟ ಡಾ ರಾಜ್ ಕುಮಾರ್ /ಶ್ರೀ ನಾಥ್ /ವಿಷ್ಣು ವರ್ಧನ್ ಮತ್ತು ಅನಂತ ನಾಗ್ ಚೆನ್ನಾಗಿ ಅಭಿನಯಿಸಿ ಇ ಜನ್ಮ ಹೇಗೆ ಸಾರ್ಥಕ ಮಾಡಿಕೊಳ್ಳ ಬೇಕು ಎಂದು ಜನರಿಗೆ ಮನವರಿಕೆ ಮಾಡಿರುತ್ತಾರೆ .
ಪುನರ್ಜನ್ಮ ದ ಮೇಲೆ ನಂಬಿಕೆ ಇರುವವರಿಗೆ ೭ ಜನ್ಮ ಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ .ಇಲ್ಲಿ ಭಗವಂತ ನನ್ನು ಬಹು ಸಮೀಪ ಸಂಪರ್ಕ ಇಡಲು ಸಾಧ್ಯ.ಮೋಕ್ಷ ಮಾರ್ಗ ತಲುಪಲು ಧ್ಯಾನ /ಆರಾಧನೆ ಗಳ ಅಗತ್ಯ ವಿದೆ .ನಿಯಮಿತ ವ್ಯಾಯಾಮ ,ಸಮತೋಲನ ಆಹಾರ ದ ಜೊತೆ ಮಾನಸಿಕ ಅರೋಗ್ಯ ಇತ್ತೀಚೆಗಿನ ವಿಜ್ಞಾನ /ಅಂತರ್ಜಾಲ ಜಗತ್ತಿನಲ್ಲಿ ತುಂಬಾ ಅವಶ್ಯ ಕತೆ ಇದೆ .ಇನ್ಫೋಸಿಸ್ ನಂತ ಬಹು ದೊಡ್ಡ ಸಾಫ್ಟ್ವೇರ್ ಕಂಪನಿ ಗಳಲ್ಲಿ ರವಿಶಂಕರ್ ಗುರೂಜಿ ರಾಮದೇವ್ ಅವರ ಯೋಗ ದ ಜೊತೆ ಧ್ಯಾನ ದ ತರಬೇತಿ ನೀಡುತ್ತಾರೆ .
ಭಗವದ್ಗೀತೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮನು ಅರ್ಜುನ ನಿಗೆ ಮನುಷ್ಯ ಜನ್ಮ ದ ಬಗ್ಗೆ ವಿವರಣೆ ನೀಡಿದ್ದು ರಾಮಾಯಣ ದಲ್ಲಿ ಶ್ರೀರಾಮನಾಗಿ ತಂದೆಯ ಪಿತ್ರ ವಾಕ್ಯ ಪರಿಪಾಲನೆ ಹೆತ್ತವರ ಬಗ್ಗೆ ಹೇಗೆ ವರ್ತನೆ .ಇದು ಕೇವಲ ಪುರಾಣ ಮತ್ತು ಚರಿತ್ರೆ ಪುಟಗಳಲ್ಲಿ ಉಳಿದಿದೆ .ಮುಂದಿನ ಜನಾಂಗ ಇದನ್ನು ಸ್ವೀಕರಿಸಲಾರದು .
ಹೀಗಿರುವಾಗ ನಾವೆಲ್ಲರೂ ಮನುಷ್ಯ ಜನ್ಮ ಸಿಕ್ಕಿರುವಾಗ ಸದ್ಬಳಕೆ ಮಾಡಿ ಮೊಕ್ಷ್ಸಕ್ಕೆ ದಾರಿ ಮಾಡೋಣ .
ಜನ್ಮ ಸಾವು ನಮ್ಮ ಕೈ ಯಲ್ಲಿ ಇಲ್ಲಾ ಎಂದು ತಿಳಿದಿರುವಾಗ ಇರುವಷ್ಟು ದಿನಗಳನ್ನು ಒಳ್ಳೆಯ ಕೆಲಸ ಮಾಡಿ ಸತ್ಸಂಗ ದಲ್ಲಿ ಏಕೆ ಕಳೆಯ ಬಾರದು.
ವಿವಾಹ ,ಸಂತತಿ /ಹೆತ್ತವರು ಮೊದಲೇ ನಿರ್ಧರಿಸಲಾಗಿದೆ .
ಕರ್ಮಣ್ಯೇ ವಾಧಿಕಾರಿಸ್ತೆ ಮಾ ಫಲೇಶು ಕಧಾಚನ;
ಧರ್ಮ ರಕ್ಷಣೆ ಯಾಗ ಬೇಕು .
ಯೋಗ ದ ಜೊತೆ ಧ್ಯಾನ
ಅರೋಗ್ಯ ಜೀವನ .
ದೇಶ ಸಂಪತ್ ಭರಿತ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ

Sunday, July 19, 2009

ದೇಶದ ಮಕ್ಕಳು ಮುಂದಿನ ಭಾರತದ ಪ್ರಜೆಗಳು .

ಭವ್ಯ ಭಾರತದ ನವ ನಿರ್ಮಾಣ ಮತ್ತು ವಿದ್ಯಾರ್ಥಿ ಜೀವನ ಒಂದಕ್ಕೊಂದು ಪರಸ್ಪರ ಸಂಬಂಧ ಇರುವ ವಿಷಯ ಗಳಾಗಿವೆ .
ಹೊಸ ಹೊಸ ವಿಷಯ ಕಲಿತು ಜ್ಞಾನಾರ್ಜನೆ ಮಾಡಲು ಆಸಕ್ತಿ ಹುಟ್ಟಿನಿಂದಲೇ ಬರ ಬೇಕು .
ಹುಟ್ಟಿದ ಮಗುವು ತಾಯಿ ಯಿಂದಲೇ ಕಲಿಯಲು ಪ್ರಾರಂಭಿಸುವುದು.
ಪ್ರಾಣಿ /ಪಕ್ಷಿ ಗಳು ಕೂಡ ಇದೇರೀತಿ ಕಲಿಯುವುದನ್ನು ನೀವು ಪ್ರಕ್ರತಿ ಸುತ್ತಲು ದ್ರಶ್ಯಗಳು ಕಾಣಲುಸಿಗುತ್ತವೆ .
ಮನುಷ್ಯನು ಇ ಪ್ರಾಣಿ ಸಂಕುಲ ದಲ್ಲಿ ಸೇರಿರುವುದರಿಂದ ನಮ್ಮ ವಿಧ್ಯಾರ್ತಿಜೀವನ ಪ್ರಾರಂಭ .
ಎರಡು ವರೇವರ್ಷ ವಾಗುತ್ತಲೇಶಾಲೆಗೆ ಸೇರಿಸುವುದು ನಗರ ಪ್ರದೇಶ ಗಳಲ್ಲಿ ವಾಡಿಕೆ ಯಾಗಿದೆ .ಇಲ್ಲಿ ಆಟ ಮುಖ್ಯ ಓದುವುದು ಸ್ವಲ್ಪ ,ನೆಪ ಮಾತ್ರ .ಆದರೆ ಪುಸ್ತಕ ,ಟಿಫನ್ ,ನೀರು ತೆಗೆದು ಕೊಂಡುಹೋಗ ಬೇಕು .
ಪ್ರಾಥಮಿಕ ಶಿಕ್ಷಣ ಒಂದು ಹೆಜ್ಜೆ ಮುಂದೆ .ಸಹ ಪಾಟಿಗಳ ಪರಿಚಯ ಸಾಮೂಹಿಕ ವರ್ತನೆ ,ಹಂಚಿ ಕೊಂಡು ಜೀವನ ಹೇಗೆ ನಡೆಸುವುದು ಕಲಿಯ ಬಹುದು .ಸ್ಪರ್ಧಾತ್ಮಕ ಚಟುವಟಿಕೆ ಗಳು ಪ್ರರಂಭ ವಾಗುವವು.
ಇಲ್ಲಿ ಹೆತ್ತವರು /ಶಿಕ್ಷಕರು ತುಂಬಾ ಜಾಗರೂಕತೆವಹಿಸ ಬೇಕು ಭಾರತ ನವನಿರ್ಮಾಣ ಮಾಡುವಾಗ ಇದು ಅಡಿ ಗಲ್ಲು ಆಗುತ್ತದೆ .
ಮುಂದೆ ಪ್ರೌಢ ಶಾಲೆ ಶಿಕ್ಷಣ ಮಗುವಿನ ಶಿಸ್ತು ,ಸಂಯಮ ಬೆಳೆಸುವುದು .ಇಲ್ಲಿ ಏನ್ ಸಿ ಸಿ ಸ್ಕೌಟ್ಸ್ /ಗರ್ಲ್ಸ್ ಗೈಡ್ ತುಂಬಾ ಮುಂದೆ ಭಾರತದ ಸತ್ಪ್ಸಜೆ ಮಾಡುವುದರಲ್ಲಿ ಸಹಕಾರಿ ಯಾಗುತ್ತದೆ .ಈಗ ಮನೆ ಪಾಟಕ್ಕೆ ಹೋಗುವ ಚಾಲ್ತಿಯಲ್ಲಿದೆ .ಉತ್ತಮ ಅಂಕ ಪಡೆದು ವ್ಯಾಸಂಗ ಮಾಡಿ ಮುಂದಿನ ಜೀವನ ರೂಪಿಸಿ ಕೊಳ್ಳುವ ಜವಾಬ್ದಾರಿ ಚಿಕ್ಕ ವಯಸ್ಸಿನಲ್ಲಿ ಬರುತ್ತದೆ .
ಮುಂದೆ ಪದವಿ ಪಡೆಯುವ ಆಸಕ್ತಿ ಇರುವವರು ಹೆಚ್ಚು ಓದುತ್ತಾರೆ .ಇದರಿಂದ ಶ್ರದ್ಧೆ ಇಟ್ಟುಓದಿದವರಿಗೆ ಶುಭ ವಾಗುವುದು. .ಆದರೆ ಇತ್ತೀಚೆಗಿನ ದಿನ ಗಳಲ್ಲಿ ಶಿಕ್ಷಣ ಕ್ಷೇತ್ರ ದಲ್ಲಿ ರಾಜಕೀಯ ಮಾಡುವುದು ಹಣ ಸಂಪಾದನೆ ಮತ್ತು ವೋಟ್ ಬ್ಯಾಂಕ್ ಗಾಗಿ ಕೀಳು ಮಟ್ಟಕ್ಕೆ ಇಳಿದಿರುವುದು ಶೋಚನಿಯ .
ವಿದ್ಯಾರ್ಥಿ ಜೀವನ ಸುಗಮ ವಾಗಲುದಯವಿಟ್ಟು ರಾಜಕೀಯ /ರಾಜಕಾರಣಿ ಗಳನ್ನೂ ಪ್ರಾಮುಖ್ಯತೆ ಕೊಡದೆ ವಿಧ್ಯಾಭ್ಯಾಸ ದ ಕಡೆ ಗಮನ ಕೊಡಿ ಉತ್ತಮ ಅಂಕ ಪಡೆದು ಉತ್ತಿರ್ಣ ರಾಗಿರಿ. ದೇಶದ ಭವಿಷ್ಯ ನಿಮ್ಮ ಕೈ ಯಲ್ಲಿದೆ .
ಭವ್ಯ ಭಾರತದ ನವ ನಿರ್ಮಾಣ ಮಾಡಿರಿ .
ಶುಭ ಹಾರೈಕೆ .
ನಾಗೇಶ್ ಪೈ .

Tuesday, July 14, 2009

ಭ್ರಷ್ಟಾಚಾರ ನಿರ್ಮೂಲನೆ ನಮ್ಮ ರಾಜ್ಯದಲ್ಲಿ ಹೇಗೆ ಸಾಧ್ಯ .

ನಮ್ಮ ಸುವರ್ಣ ಕರ್ನಾಟಕ ರಾಜ್ಯದಲ್ಲಿ ದಿನ ಬೆಳಗಾಗು ತ್ತಿದಂತೆ ನಿವ್ರತ್ತ ನ್ಯಾಯ ಮೂರ್ತಿ ಲೋಕಾಯುಕ್ತ ಡಾಸಂತೋಷ್ ಹೆಗ್ಡೆ ಮತ್ತು ಅವರ ಪಂಗಡ ದವರು ಕಾರ್ಯ ನಿರತ ರಾಗುತ್ತಾರೆ.ಇದು ಕರಾವಳಿ ಯಲ್ಲಿ ಬೆಸ್ತರುಸಮುದ್ರ ,ಸಾಗರಗಳಲ್ಲಿ ಮೀನು ಹಿಡಿಯಲು ಹೋದ ಹಾಗೆ.ಇಲ್ಲಿ ಅಜ ಗಜಾಂತರ ವೈತ್ಯಾಸಇರುವುದನ್ನು ನಾವು ಕಾಣಬಹುದು. ಬೆಸ್ತರು ಜೀವನೋಪಾಯ ಕ್ಕಾಗಿ ದಿನವಿಡೀ ದುಡಿಯುವುದರಿಂದ ಸಿಗುವುದು ಅಷ್ಟಕ್ಕಷ್ಟೆ .ಆದರೆ ಇಲ್ಲಿ ಲೋಕಾಯುಕ್ತ ರ ಬಲೆ ಗೆ ಸಿಕ್ಕಿರುವ ತಿಮಿಂಗಿಲ ಗಳ ಸಂಖ್ಯೆ ಅಪಾರ .
ಭ್ರಷ್ಟಾಚಾರ ದಲ್ಲಿ ಸಿಕ್ಕಿ ಬಿದ್ದಿರುವ ಸರಕಾರಿ ನೌಕರ/ಪೋಲಿಸ್ ಉನ್ನತ ಅಧಿಕಾರಿ ವರ್ಗ ಇವರ ಬಲೆಗೆ ಬಿದ್ದು ವಿಲ ವಿಲನೆ ಒದ್ದಾಡಿ ಕೊನೆಗೆ ನ್ಯಾಯಾಲಯ ಒಪ್ಪಿಸಿರುವುದನ್ನುದಿನ ನಿತ್ಯ ಪತ್ರಿಕೆ /ಮಾಧ್ಯಮಗಳಲ್ಲಿ ಓದಬಹುದು.
ನಿಂತ ನೀರಿನಲ್ಲಿ ಯಾವಾಗಲು ಸೊಳ್ಳೆ ಗಳ ಉತ್ಪತ್ತಿ ಯಾಗುತ್ತದೆ .ಇದರಿಂದ ಸಾಂಕ್ರಾಮಿಕ ರೋಗ ಗಳು ಹರಡುವುದು ಡೆಂಗ್ಯು ,ಚಿವರ ಕನ್ ಗುನ್ಯ ಮತ್ತು ಇತ್ತೀಚಿಗೆ ಹಂದಿ ಜ್ವರ ಪ್ರಪಂಚ ದಲ್ಲಿ ಹರಡುತ್ತಿದೆ .ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಸೇರಿ ನಿರ್ಮೂಲನೆಗೆ ಪ್ರಯತ್ನ ಮಾಡಬೇಕು .ಸೊಳ್ಳೆ ಗಳ ಸಂಪೂರ್ಣ ನಾಶ ವಾಗಬೇಕು.
ನಮ್ಮ ರಾಜ್ಯ ದಲ್ಲಿ ಇದಕ್ಕಿಂತ ದೊಡ್ಡ ಮಹಾಮಾರಿ ರೋಗ ಭ್ರಷ್ಟಾಚಾರ .ಇಲ್ಲಿ ರಾಜ್ಯದ ವಿಧಾನ ಸಭಾ ಸದಸ್ಯ ಮತ್ತು ಸಂಸದ ರು ಸುಮ್ಮನಿರುವುದೇಕೆ .ಇವರ ಪರೋಕ್ಷ ಸಹಕಾರ ವೇಕೆ .ಲಾಭ ದಲ್ಲಿ ಸಿಂಹ ಪಾಲು ಇರುವ ಲಕ್ಷಣ ಗಳು ಕಂಡು ಬರುವುದಿಲ್ಲವೆ ?
ನಿಧಾನವಾಗಿ ಯೋಚಿಸಿ ನಿಮ್ಮ ಉತ್ತರ ಇ ನನ್ನ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯಲ್ಲಿ ಪ್ರಕಟಿಸಿ.
ಸರಕಾರ ಶ್ರೀಯುತ ಸಂತೋಷ್ ಹೆಗ್ಡೆ ಯವರ ಕಾರ್ಯ ವೈಖರಿ ಪ್ರಶಂಸಿಸಿ ಅವರ ಕೆಲಸ ಸುಗುಮ ವಾಗಿ ಮಾಡಿ ತಪ್ಪಿತ್ತಸ್ತರನ್ನುಶಿಕ್ಷೆ ಗೆ ಗುರಿ ಪಡಿಸ ಬೇಕು .
ಬಡತನ ರೇಖೆ ಗಿಂತ ಕೆಳಗೆ ಇರುವ ಜನರು ಒಂದು ತುತ್ತಿನ ಜೀವನಕ್ಕಾಗಿ ಹೊರಡುವ ಇ ಸಮಯದಲ್ಲಿ ಇ ಭ್ರಷ್ಟಾಚಾರ ಜೀವನ ನಡೆಸುವ ಇ ಶ್ರೀಮಂತರನ್ನು ಪಾಟ ಕಲಿಸ ಬೇಡವೇ?
ನಾಗೇಶ್ ಪೈ .

Friday, July 10, 2009

ಮೈಸೂರಿನ ನಾಗರೀಕರುಶಾಂತಿ ಪ್ರೀಯರು

ನಮ್ಮ ಸುಂದರ ಮೈಸೂರಿನ ಶಾಂತಿ ಪ್ರಿಯ ಜನತೆಗೆ ಇ ಗಲಭೆ ಬೇಕಾಗಿತ್ತೆ ?
ಈಗ ಕರ್ನಾಟಕ ರಾಜ್ಯದ ೫.೫ ಕೋಟಿ ಕನ್ನಡಿಗರಲ್ಲಿ ಉದ್ಭವಿಸಿದ ಪ್ರಮುಖ ಪ್ರಶ್ನೆ ಆಗಿದೆ .
ಇಲ್ಲಿ ಇ ಗಲಭೆ ಮಾಡಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುವವರು ಯಾರಿರಬಹುದು .
ಪ್ರಪಂಚ ದಲ್ಲಿ ಹೆಚ್ಚಿನ ಪ್ರವಾಸಿಗರನ್ನು ದಸರಾ ಮತ್ತು ಅರಮನೆ ಗಳಿಂದ ವಿದೇಶಿಯರನ್ನು ಆಕರ್ಷಿಸುವ ನಗರ ನಮ್ಮ ಮೈಸೂರು .ಇಲ್ಲಿ ನಾಗರೀಕರು ಪ್ರೇಮ ಮತ್ತು ಸೌಹಾರ್ದತೆಗಾಗಿ ಮೆರೆದಿರುವುದನ್ನು ಇಲ್ಲಿ ಸ್ಮರಿಸಬಹುದು .
ವಿಧಾನ ಮಂಡಲ ಅಧಿ ವೇಶನ ದಲ್ಲಿ ಆಡಳಿತ ಮತ್ತು ವಿರೋಧ ಪಕ್ಷ ಗಳು ಕೆಸರೆರಚಾಟ ವನ್ನು ತೊರೆದು ಪೋಲಿಸ್ ಮತ್ತು ಇನ್ನಿತರ ಶಕ್ತಿ ಗಳೊಂದಿಗೆ ಸಹಕರಿಸಿ ದುಸ್ಟಸಮಾಜ ಗಾತುಕ ಕಿಡಿ ಗೆಡಿಗಳ ದಮನಕ್ಕೆ ಕಾರ್ಯ ತತ್ಪರ ರಾಗುವುದು ಒಳಿತು .ಸರ್ವ ಧರ್ಮ ಲಿಂಗ /ಜಾತಿ ಯವರ ಒಗ್ಗಟ್ಟು ಬೇಕಾಗಿರುವ ಇ ಸಮಯ ಕೆಡಿಸಿ ಸ್ವಾರ್ಥ ಮನೋ ಭಾವನೆ ಇರಬಾರದು .ವಿದೇಶ ದಲ್ಲಿ ಇರುವ ಎಲ್ಲಾ ಕನ್ನಡಿಗರು ಇದನ್ನೇ ಬಯಸುತ್ತಾರೆ ಎನ್ನುವ ಭಾವನೆ ನನ್ನ ದಾಗಿದೆ .
ಸರ್ವೇ ಜನ ಸುಕಿನೋ ಭವಂತು :
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ./ನಮ್ಮ ಸುಂದರ ಮೈಸೂರು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ .

Monday, July 6, 2009

ಕೊಟ್ಟ ಮಾತಿಗೆ ತಪ್ಪಲಾರೆನು

'ಕೊಟ್ಟ ಮಾತಿಗೆ ತಪ್ಪಲಾರೆನು '
ಇಂದು ವಿಜಯ ಕರ್ನಾಟಕ ದೈನಿಕ ದಲ್ಲಿ ಪ್ರಕಟವಾದ ಮುಕ ಪುಟ ದ ವರದಿ
ಇದು ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿ ಯವರು ರಾಜ್ಯದ ಜನತೆಗೆ ಕೊಟ್ಟ ವಾಗ್ದಾನ ಪುನರುಚ್ಚಿರಿಸಿದ್ದಾರೆ.
ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರು ವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ತಂದಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಇದನ್ನು ತುಂಬು ಹ್ರದಯ ದಿಂದ ಸ್ವಾಗತಿಸುತ್ತಿದೆ .
ರಾಜ್ಯದ ೫.೫ ಕೋಟಿ ಜನತೆಯ ಹಿತ ದ್ರಸ್ಟ್ಟಿಇ ಮಾತಿಗೆ ಮತ್ತು ಇದನ್ನು ಕಾರ್ಯ ರೂಪಕ್ಕೆ ತರಲು ಸಂಪುಟ ಯಾವ ರೀತಿಯ ಯೋಜನೆ ಹಾಕಿ ಕೊಂಡಿದೆ .ಇ ಯೋಜನೆ ಯಶಸ್ವಿ ಯಾಗಲುವಿರೋಧ ಪಕ್ಷ ಮತ್ತು ಕೇಂದ್ರ ಸರಕಾರ ಸ್ಪಂದಿಸುವುದು ಕೂಡ ಬಹು ಮುಖ್ಯ ವಾಗಿದೆ .
ಮುಂದೆ ಮಂಡಿಸಲಾಗುವ ರಾಜ್ಯ ಬಜೆಟ್ ನಲ್ಲಿ ವ್ಯಕ್ತ ವಾಗುವ ಅಂಕಿ ಅಂಶ ದಲ್ಲಿ ಚಿತ್ರಣ ಸಿಗುತ್ತದೆ .
ಕುಡಿಯುವ ನೀರು ವಿಧ್ಯುತ್ ,ಇತ್ಯಾದಿ ಮೂಲ ಭೂತ ಸೌಕರ್ಯದ ಬಗ್ಗೆ ಸರಕಾರದ ಗಮನ ವಿಧ್ಯೆ ,ಅರೋಗ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಪ್ರವಾಸೋಧ್ಯಮ ವಿಷಯ ರಾಜ್ಯದ ಬೊಕ್ಕಸ ಕ್ಕೆ ಹೆಚ್ಚು ಆದಾಯ ತರುವುದು .
ವಿದೇಶದಲ್ಲಿ ವಾಸಿಸುವ ಕನ್ನಡಿಗರು ಕನ್ನಡ ಭಾಷೆ ಮತ್ತು ರಾಜ್ಯಕ್ಕೆ ಕೊಡುಗೆ ನೀಡುವ ವಿಚಾರ ಇಲ್ಲಿ ಪ್ರಸ್ತುತ ಪಡಿಸ ಬೇಕಾಗಿದೆ .ರಾಜ್ಯ ಸರಕಾರ ಕೂಡ ಇವರ ಬಗ್ಗೆ ಕಾಳಜಿ ,ಗಮನಿಸ ಬೇಕಾದ /ಸಹಕರಿಸುವಂತಹ ಪ್ರಾಮುಖ್ಯತೆ ಇದೆ .
ಜೈ ಕರ್ನಾಟಕ /ಭಾರತ್
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ನಾಗೇಶ್ ಪೈ
ವಂದನೆ ಗಳು .
ಸರ್ವೇ ಜನ ಸುಖಿನೋ ಭವಂತು :

Sunday, July 5, 2009

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು

ಸೆಪ್ಟೆಂಬರ್ ೫ ೨೦೦೮ ರಂದು ಸ್ಥಾಪಿಸಲ್ಪಟ್ಟ ಇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಈಗ ಚಟುವಟಿಕೆ ಯನ್ನು ಪ್ರಪಂಚ ದಾದ್ಯಂತವಿಸ್ತರಿಸುವ ಯೋಜನೆ ಯನ್ನು ಹಾಕಿ ಕೊಂಡಿದೆ ಅಂತರ ರಾಷ್ಟೀಯ ಮಟ್ಟದಲ್ಲಿ ಕನ್ನಡ ಭಾಷೆ ಯ ಪ್ರಚಾರ ಬೆಳವಣಿಗೆ ಹೆಚ್ಚಿಸುವುದು ಮತ್ತು ಉತ್ತಮ ಆದರ್ಶ ಸಮಾಜದ /ಮಾದರಿ ರಾಜ್ಯದ ರಚನೆ ಹಾಗೂ ಯುವಜನತೆ ಯಿಂದ ಭವ್ಯ ಭಾರತದ ನಿರ್ಮಾಣ .ಉದ್ದೇಶ ಇಟ್ಟುಕೊಂಡಿದೆ .ಇದಕ್ಕೆ ಅಮೆರಿಕ ,ಇಂಗ್ಲಂಡ್ ,ಸಿಂಗಪುರ ಇತ್ಯಾದಿ ದೇಶ ಗಳಿಂದ ಲೇಖನಕ್ಕೆ ಒಳ್ಳೆ ಪ್ರತಿಕ್ರಿಯೆ ಬಂದಿದೆ .ಇನ್ನು ಮುಂದಿನ ಲೇಖನ ಗಳನ್ನೂ ನಾನು ಸಿಂಗಾಪುರಿನಿಂದ ಬರೆಯಲು ಪ್ರಯತ್ನಿಸುತ್ತೇನೆ .ನನ್ನ ಕನ್ನಡಿಗ ಮಿತ್ರರು ಸಂಪೂರ್ಣ ಸಹಕಾರ ನೀಡುತ್ತಾರೆ ಎನ್ನುವ ಬರವಸೆ ನನಗಿದೆ .
ನಿಮ್ಮ ಸಲಹೆ ಮತ್ತು ಸೂಚನೆ ಯನ್ನು ಪ್ರತಿಕ್ರಿಯೆ ವ್ಯಕ್ತ ಪಡಿಸಿ .
ಕನ್ನಡ ಬ್ಲಾಗ್ಗೆರ್ಸ್ಸದಸ್ಯತ್ವ ನೊಂದಾಯಿಸಿ .
ನಿಮ್ಮವನೇ ಆದ
ನಾಗೇಶ್ ಪೈ ಕುಂದಾಪುರ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಜೈ ಕರ್ನಾಟಕ /ಭಾರತ್ .