Tuesday, January 26, 2010

ಕಡಲಿನ ಸ್ನೇಹಿತ ಮೀನು ಗಾರ ಗಣ ರಾಜ್ಯೋತ್ಸವ ಶುಭಾಶಯಗಳು

ಕರಾವಳಿ ಮೀನುಗಾರರು ಕಡಲಿನ ಸ್ನೇಹಿತರು -ವ್ಯಕ್ತಿತ್ವ ವಿಕಾಸ ಮಾಲಿಕೆ -೭ [ಸಂಗ್ರಹ ]
ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ
ದೂರದ ತೀರವಸೇರುವುದೊಂದೇ ಬಾಳಿನ ಗುರಿಯಮ್ಮ .
ಇದು ಪ್ರಣಯರಾಜ ಶ್ರೀನಾಥ್ ,ಆರತಿ ,ಅಂಬರೀಶ್ ಮತ್ತು ಶಿವರಾಂ ನಟಿಸಿರುವ [ಶುಭಮಂಗಳ ]ಕನ್ನಡ ಚಲನ ಚಿತ್ರದ ಕವಿ ಬರೆದ ಸಾಲುಗಳು ರಾಜ್ಯದ ಜನತೆಗೆ ಕರಾವಳಿ ಕಡಲಿಗೂ ಮನುಷ್ಯನ ವ್ಯಕ್ತಿತ್ವಕ್ಕೂ ಅವನ ಪ್ರೇಮ ಗೆಳೆತನ ವನ್ನು ಸೂಚಿಸಿರುತ್ತಾನೆ . ಮಲೆಯಾಳಂ ಚಿತ್ರ ಚೆಮ್ಮೀನ್ ಸಹ ಕಡಲಿನ ಮೀನಿನ ಪ್ರೇಮದ ಭಾಷೆ ಬರೆಯುತ್ತಿದೆ .ಹೀಗೆ ಚಲನ ಚಿತ್ರಗಳಲ್ಲಿ ಕಡಲು ಮತ್ತು ಮನುಷ್ಯನಿಗಿರುವ ಸಂಭಂಧವನ್ನು ಹೊರಾಂಗಣ ದಲ್ಲಿ ಸುಂದರವಾಗಿ ಚಿತ್ರಿಕರಿಸಲಾಗಿದೆ .
ಮೀನುಗಾರ ಮುಂಜಾನೆ ಎದ್ದ ಬಳಿಕ ಬಲೆಯನ್ನು ಹೆಗಲ ಮೇಲೆ ಹೊತ್ತು ತನ್ನ ನಾಡದೋಣಿಯ ಕಡೆ ಧಾವಿಸುವ ಚಿತ್ರವನ್ನು ನೀವು ನೋಡಿರುತ್ತೀರಿ .
ಈಗಿನ ಸಾಫ್ಟ್ವೇರ್ ಉಧ್ಯೋಗಿಗಳು ಲ್ಯಾಪ್ಟಾಪ್ ಬ್ಯಾಗ್ ಹೆಗಲ ಮೇಲೆ ಹೋಲಿಸಬಹುದು .ಏಕೆಂದರೆ ಇಬ್ಬರೂ ಜೀವನೋಪಾಯ ,ಹಣ ಸಂಪಾದನೆ ದುಡಿಮೆ .
ಕಡಲಿನ ಜೊತೆ ಆಟ ಮಾರಕವೂ ಹೌದು .ನಿಸರ್ಗದ ಪ್ರಕೋಪಕ್ಕೆ ಬಿರುಗಾಳಿ ಬರುವಾಗ ದೋಣಿಗೆ ಹುಟ್ಟುವಾಗ ಅವರು ಸಂಕಷ್ಟಕ್ಕೆ ಒಳ ಪಡುತ್ತಾರೆ ಸಮುದ್ರದ ತೆರೆಗಳ ಏರು ಇಳಿತ ಎದುರಿಸುವಾಗ ಜೀವ ಹಾನಿ ಸಂಭವವಿದೆ .ಹೆಚ್ಚಿನ ವಿವರಗಳನ್ನು ಪತ್ರಿಕೆ /ಮಾಧ್ಯಮಓದಿ /ನೋಡಿರುತ್ತೀರಿ .ಇದು ಪ್ರಪಂಚದ ಎಲ್ಲಾಕರಾವಳಿ ಗಳ ಮೀನುಗಾರರ ಸಮಸ್ಯೆ .
ವಿಜ್ಞಾನ ಮುಂದುವರಿಯುವಾಗ ಸರಕಾರಗಳು /ಹವಾಮಾನ ಇಲಾಖೆ ಮೀನುಗಾರರ ಉಜ್ವಲ ಭವಿಷ್ಯಕ್ಕಾಗಿ ಸಹಾಯ ಮಾಡುತ್ತಿದೆ .
ಅದರೂ ಮೀನುಗಾರರು ಕಡಲನ್ನು ತಾಯಿಯಾಗಿ ಭಗವಂತನ ಸ್ಥಾನದಲ್ಲಿ ಪೂಜಿಸುತ್ತಾರೆ .ದೇವರನ್ನು ನಮಸ್ಕರಿಸಿ ದಿನದ ಶುಭಾರಂಭ .
ಕೋಳಿ ಸಾಕಣೆ,ಮೀನು ವ್ಯವಸಾಯ ,ಪ್ರಪಂಚದ ಅತೀಹೆಚ್ಚು ಧನ ಲಾಭ ಮತ್ತು ಮಾಂಸಹಾರಿ ಗಳ ನ್ನು ಅಕರ್ಷಿಸಿದೆ.
ರುಚಿಯಲ್ಲಿ ನದಿ ,ಕೆರೆ ಮತ್ತು ಸಮುದ್ರ ವಿಭಿನ್ನ .
ಕುಂದಾಪುರ ದಲ್ಲಿ ಖಾರ್ವಿ ಜನಾಂಗ ಮೀನುಗಾರರು .
ಕೆಲವರು ಮೋಜಿಗಾಗಿ ಮೀನು ಹಿಡಿಯಲು ಕೆರೆ ,ನದಿ ತೀರದಲ್ಲಿ ಗಟ್ಟಲೆ ನಿಶಬ್ದವಾಗಿ ಗಾಳ ಹಿಡಿದು ಗಾಳಕ್ಕೆ ಎರೆ ಹುಳು ಆಹಾರ ಸಿಕ್ಕಿಸಿ ಕಾಯುವ ದ್ರಶ್ಯ ಸರ್ವೇ ಸಾಮಾನ್ಯ .
ಕಡಲಿನ ಪ್ರೇಮಕ್ಕಾಗಿ ತಮ್ಮ ಜೀವ ತೆತ್ತ ಮೀನು ಗಾರರನ್ನು ನಿರ್ಲಕ್ಷಿಸ ಬೇಡಿ .
ಗಣ ರಾಜ್ಯೋತ್ಸವದ ಶುಭಾಶಯ ಗಳೊಂದಿಗೆ
ನಿಮ್ಮ ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ನಮಸ್ಕಾರ .
ಕುಂದಾಪುರ ನಾಗೇಶ್ ಪೈ .
ಜೈ ಜವಾನ್ ಜೈ ಕಿಸಾನ್ .

Sunday, January 24, 2010

ಕಂಬಳ ಕರಾವಳಿ ರೈತರ ಒಂದು ಮನೋರಂಜನ್

ಕಂಬಳ ಇದು ಒಂದು ಕರಾವಳಿ ರೈತರ ಮನೋರಂಜನೆ ಮತ್ತು ಅಧಿಕ ಭತ್ತದ ಪಸ ಲಿಗೆ ಭಗವಂತನಲ್ಲಿ ಸಲ್ಲಿಸುವ ಹರಕೆಯಾಗಿದೆ
ಕರಾವಳಿ ಯಲ್ಲಿ ವಾಸಿಸುವ ರೈತರು ನಮ್ಮ ರಾಜ್ಯದ ಅನ್ನದಾತ .
ಇವರು ರಾಜ್ಯದಲ್ಲಿ ತೆಂಗು ,ಗೇರುಮತ್ಸ್ಯ ,ಭತ್ತಇತ್ಯಾದಿ ಕೃಷಿ ಯಿಂದ ರಾಜ್ಯದ ಜನತೆ ಗೆ ಆಹಾರ ಉತ್ಪಾದನೆಯಲ್ಲಿ ನೆರವಾಗುತ್ತಾರೆ .
ಮುಂಜಾನೆಯಿಂದ ಸಾಯಂಕಾಲ ದುಡಿಯುವಾಗ ರೈತರಿಗೆ ದಣಿವು ಆಗಿ ಸಂಪೂರ್ಣ ಮನೋರಂಜನೆಯ ಅಗತ್ಯ ವಿದೆ ..
ನ್ರತ್ಯ ,ಹಾಡು ಯಕ್ಷಗಾನ ,ತಾಳಮದ್ದಲೆ ,ಹೂವಿನ ಕೋಲು ,ಗೊಂಬೆಯಾಟ ಇತ್ಯಾದಿ ಸರಳ ಮಾಧ್ಯಮದಿಂದ ಸಾಮೂಹಿಕವಾಗಿ ಸೇರಿ ರಾತ್ರಿ ಕಳೆದು ಮಾರನೇ ದಿನದ ದುಡಿಮೆ ಗೆ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ .ಅ
ನನ್ನ ಚಿಕ್ಕಂದಿನಲ್ಲಿ ವಿಧ್ಯುತ್ ದೀಪದ ಬೆಳಕು ಕರಾವಳಿ ಜನರಿಗೆ ಇರಲಿಲ್ಲಾಸೀಮೆ ಎಣ್ಣೆ ,ಗಾಸ್ ಲೈಟ್ ನಲ್ಲಿ ಕಾರ್ಯ ಕ್ರಮ ಗಳು ನಡೆಯುತಿದ್ದವು
ಮೊದಲನೆಯದು ಯಕ್ಷಗಾನ .ಇಲ್ಲಿ ಜ್ಞಾನ ಪೀಟ ಪ್ರಶಸ್ತಿ ವಿಜೇತ ಕವಿ ಡಾಕೋಟ ಶಿವರಾಮ ಕಾರಂತರ ಹೆಸರು ಕೇಳದವರಿಲ್ಲ .ಸ್ವತಃ ಯಕ್ಷಗಾನ ಪಾತ್ರ ಧಾರಿಯಾಗಿ ನಟಿಸಿ ಕಲೆಯನ್ನು ಜನರಿಗೆ ಪರಿಚಯಿಸಿದ್ದಾರೆ .
ಕರಾವಳಿ ಜನತೆಗೆ ಕಲೆ ನೀರುಕುಡಿದಸ್ಟು ಸುಲಭ .ಇಲ್ಲಿ ಧರ್ಮಸ್ಥಳ ,ಸಾಲಿಗ್ರಾಮ ,ಪೆರ್ಡೂರುಮೇಳಗಳು ಪ್ರಮುಖವಾಗಿವೆ .
೨ ನೆಯ ದು ಹೂ ಕೋಲು ಇಲ್ಲಿ ಬಣ್ಣ ವಿಲ್ಲ ರಂಗ ಸ್ಥಳ ಕುಣಿತ ವಿಲ್ಲದೆ ಭಾಗವತರು ಪುರಾಣದ ಕೆಲವು ಭಾಗಗಳನ್ನು ಆರಿಸಿ ಸಾರ್ವಜನಿಕರಿಗೆ ಪರಿಚಯ ಮಾಡುತ್ತಾರೆ .ಪಾತ್ರ ಧಾರಿಗಳು ಇರುತ್ತಾರೆ .ಗದ್ದೆಯಲ್ಲಿ
೩ ನೆಯದು ಗೊಂಬೆಯಾಟ .ಇದು ಒಂದು ಯಕ್ಷಗಾನವೇ .ಆದರೆ ಮನುಷ್ಯರ ಬದಲು ಗೊಂಬೆ ಗಳು ಪೌರಾಣಿಕ ಪ್ರಸಂಗಗಳನ್ನು ಜನರ ಮುಂದಿಡುತ್ತಾರೆ .ಇಲ್ಲಿ ಭಾಗವತರು ಪ್ರಸಂಗ ಹೇಳುವಾಗ ಪುರಾಣ ದಲ್ಲಿ ಬರುವ ಪಾತ್ರಗಳನ್ನುಗೊಂಬೆಗಳು ಕುಣಿದು ತೋರಿಸುತ್ತಿವೆ .
ಈಗ ಕಂಬಳಗಳ ಬಗ್ಗೆ ತಿಳಿಯೋಣವೆ ?
ನೂರಾರು ವರ್ಷಗಳ ಇತಿಹಾಸ ಇರುವ ಕರ್ನಾಟಕ ಕರಾವಳಿ ರೈತರ ಪಂದ್ಯವಾಗಿದೆ .ಸಾಮಾನ್ಯವಾಗಿ ಮನುಷ್ಯರ ಓಟ ಮತ್ತು ಪಂದ್ಯದ ಬಗ್ಗೆ ನೀವೆಲ್ಲರೂ ಕೇಳಿದ್ದಿರಿ .ಆದರೆ ಇ ಕಂಬಳದಲ್ಲಿ ರೈತರು ಮತ್ತು ಕೋಣಗಳಜೊತೆಯಾದ ಪಾತ್ರವಿದೆ .ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವಿನ ಪಂದ್ಯವಾಗಿರುತ್ತದೆ.ಒಂದನೇ ಪಸಲು ತೆಗೆದ ನಂತರ ಗದ್ದೆಯ ಮಣ್ಣು ಹದ ಮಾಡಬೇಕಾಗುತ್ತದೆ ..ಮಳೆ ಬರುವುದರಿಂದ ಗದ್ದೆಯಲ್ಲಿ ಕೆಸರು ತುಂಬಿರುತ್ತದೆ ಹಲ ಓಡಿಸಲು ಕಷ್ಟಕರ .ರೈತನು ಕೋಣ ಸೇರಿ ಮಣ್ಣು ಭತ್ತದ ಬಿತ್ತನೆಗಾಗಿ ಒಂದು ಓಟದ ಸ್ಪರ್ದೆ ಇಟ್ಟಿರುತ್ತಾರೆ .೨ ಜೊತೆ ಕೋಣ ಇಬ್ಬರು ರೈತರು ಬಾರುಕೋಲಿನ ಸಹಾಯದಿಂದ ಎತ್ತನ್ನು ಒಡಿಸಿತಾವೂ ಓಡುತ್ತಾರೆ.ಪ್ರಥಮ ಜೋಡಿಗೆ ಬಹುಮಾನ ಘೋಷಿಸುತ್ತಾರೆ .
ಇಲ್ಲಿ ಕಂಬಳ ಸಮಿತಿ ರಚಿಸಿದ್ದಾರೆ .ಸಮಿತಿಯ ಕಡೆಯಿಂದ ೧೭ ಕಂಬಳಗಳುನಡೆಯಲಿವೆ .ವಂಡಾರ [[ ಕುಂದಾಪುರ ]ಕದ್ರಿ [ಮಂಗಳೂರು] ಕೆಲವು ರೈತರು ಒಳ್ಳೆಯ ಪಸಲು ಬಂದು ನಮ್ಮ ನಾಡಿಗೆಶುಭ ವಾಗಲಿ ಎಂದು ಭಗವಂತ ನಿಗೆ ಹರಕೆ ಹೊತ್ತು ಹರಕೆ ಪೂರೈಸುವ ಸಲುವಾಗಿ ಕಂಬಳ ಪಂದ್ಯದ ಏರ್ಪಾಡು ಮಾಡಿರುತ್ತಾರೆ .ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಕೋಳಿ ,ಕುದುರೆಯಿಂದ ಕಂಬಳದ ಕೋಣಗಳ ಮೇಲೂ ಬಂದಿದೆ .
ಜನರು ಹುಚ್ಚರೋ ಜಾತ್ರೆ ,ಕಂಬಳ ಅಥವಾ ಕೈ ಯಲ್ಲಿ ಆಡುವ ಲಕ್ಷ್ಮಿ ಮಹಿಮೆಯೋ ತಿಳಿಯ ಲಾಗದು .
ಇದು ನಮ್ಮ ಭವ್ಯ
ಭಾರತದ ನವ ನಿರ್ಮಾಣ ವೇದಿಕೆಯ ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಭಾಗ -೬ ನಮ್ಮ ಸುಂದರ ಕರಾವಳಿ ನೋಟ .
ಕುಂದಾಪುರನಾಗೇಶ್ ಪೈ
ಜೈ ಕರ್ನಾಟಕ ಮಾತೆ.

Friday, January 22, 2010

ನಮ್ಮ ಕರ್ನಾಟಕ ರಾಜ್ಯದ ಸುಂದರ ಕರಾವಳಿ NH

ನಮ್ಮ ಸುಂದರ ಕರ್ನಾಟಕ ಕರಾವಳಿ ಪ್ರದೇಶ -ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೫ [ರಾಷ್ಟ್ರೀಯ ಹೆದ್ದಾರಿ -೧೭
ನಮ್ಮ ಇ ಕರಾವಳಿ ಪ್ರದೇಶವು ಗೋವಾ ಮತ್ತು ಕೇರಳ ಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶ ದಲ್ಲಿ ಹಬ್ಬಿ ನಿಸರ್ಗ ಸೌಂದರ್ಯ ವನ್ನು ಪ್ರವಾಸಿಗರಿಗೆ ನಿರಂತರ ವಾಗಿ ಉಣೀಸುತ್ತಿದೆ.
ಉಪ್ಪು ,ಸಿಹಿ ನೀರಿನ ಹವೆ ಆರೋಗ್ಯಕ್ಕೆ ಮತ್ತು ಮಳೆ ನಾಗರೀಕರನ್ನು ಸಂಕಟಕ್ಕೆ ಸಿಲುಕಿಸಿದರೂ ದಸ್ಟ ಪುಸ್ಟರಾಗಿ ಮೇಧಾವಿ ಚುರುಕು ಬುದ್ಧಿ ಯವರಾಗಿ ಕಷ್ಟ ಸಹಿಸುವ ಪ್ರವ್ರತ್ತಿ ಯವರು .
ಇಲ್ಲಿ ಕಲೆ ,ಯಕ್ಷಗಾನ ,ವಿಧ್ಯಾಭ್ಯಾಸ ,ಅರೋಗ್ಯ ,ಶಿಸ್ತಿನ ಜೀವನಕ್ಕೆ ಹೆಸರು ಪಡೆದಿದೆ .ಹೆಚ್ಚು ಅಂಕ ಪಡೆಯುವ ಜಿಲ್ಲೆ ಎನ್ನುವ ಬಿರುದು ಪಡೆದಿರುವುದು .ವಾಯು ಮಾರ್ಗ ರಸ್ತೆ ರೈಲ್ವೆ ಹಾಗೂ ಜಲ ಮಾರ್ಗ ಸೌಕರ್ಯ ವಿರುವುದರಿಂದ ವ್ಯಾಪಾರ ದಲ್ಲಿ ಸರ್ವೋನ್ನತಿ ಕಂಡಿದೆ .ಮುಂಬೈ ಮತ್ತು ಮಂಗಳೂರು ,ಕಾರವಾರ ಬಂದರು ಗಳು ಮತ್ಸ್ಯ ವ್ಯವಸಾಯ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶಕ್ಕೆ ಹಣಕಾಸು ವಿಭಾಗ ದಲ್ಲಿ ನಿವ್ವಳ ಲಾಭ ತಂದಿದೆ .
ಶ್ರೀಯುತ ಟಿ ಎ ಪೈ ಯವರು ಕೇಂದ್ರ ರೈಲ್ವೆ ಮಂತ್ರಿ ಯಾಗಿರುವಾಗ ರೈಲ್ವೆ ಮಾರ್ಗ ದಲ್ಲಿ ಸಂಚಾರ ದಿಂದಾಗಿ ವ್ಯಾಪಾರ ವಹಿವಾಟು ಹೆಚ್ಚಿಸಿದೆ .ಈಗಿನ ಕೇಂದ್ರ ರೈಲ್ವೆ ಮಂತ್ರಿ ಕನ್ನಡಿಗ ರಾಗಿ ನಾವೆಲ್ಲರೂ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡೋಣ .
ಕರಾವಳಿ ಪ್ರದೇಶದ ಯುವಜನತೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ನಗರ ಪ್ರದೇಶ ಗಳಾದ ಮುಂಬೈ ,ಚೆನ್ನೈ ,ಬೆಂಗಳೂರು ,ಕೋಲ್ಕತ್ತಾ ಸೇರಿದ್ದಾರೆ .ಸಾಮಾನ್ಯವಾಗಿ ಹೋಟೆಲ್ ,ಬ್ಯಾಂಕ್ ,ರೈಲ್ವೆ ವಿಭಾಗ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಕರಾವಳಿ ಪ್ರದೇಶ ದಲ್ಲಿ ,ಕೊಂಕಣಿ ,ತುಳು ಮತ್ತು ಕನ್ನಡ ಭಾಷೆ ಮಾತನಾಡುವ ಎಲ್ಲಾ ಹಿಂದೂ ,ಮುಸ್ಲಿಂ ,ಕ್ರಿಸ್ಟಿಯನ್ ರು ಇದ್ದಾರೆ
ಸುಂದರ ದೇವಸ್ಥಾನ ಗಳು ವರ್ಷಕ್ಕೊಮ್ಮೆ ರಥೋತ್ಸವ ,ಜಾತ್ರೆ ವಿಜೃಂಭಣೆ ಯಾಗಿ ನಡಯುತ್ತಿದೆ .ಈಗ ಮಂಗಳೂರು ಪೇಟೆಯ ವೆಂಕಟ ರಮಣ ದೇವಸ್ಥಾನದಲ್ಲಿ ರಥ ಸಪ್ತಮಿ .
ಗೌಡ ಸಾರಸ್ವತ ಸಮಾಜ ಭಾನ್ಧವರು ವೈಭವ ದಿಂದ ತೇರು ಹಬ್ಬ ಆಚರಿಸುತ್ತಾರೆ
ನಮ್ಮ ಯುವ ಜನತೆ ಸಾರ್ವಜನಿಕ ವಾಗಿ ಆಚರಿಸುವ ಹಬ್ಬದಲ್ಲಿ ಭಾಗವಹಿಸಿ ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುತ್ತಾರೆ .
ಕರ್ನಾಟಕ ರಾಜ್ಯ ಸರಕಾರವು ಕರಾವಳಿ ಉತ್ಸವ ಆಚರಿಸುತ್ತಿದೆ
ನಾವೆಲ್ಲರೂ ಪಕ್ಷ /ಜಾತಿ ಮತ್ತು ಧರ್ಮ ಭೇಧ ಮರೆತು ರಾಜ್ಯದ ಸರ್ವಾಂಗೀಣ ಬೆಳವಣಿಗೆಗಾಗಿ ದುಡಿಯೋಣ ಸಂತೋಷ ದಲ್ಲಿ ಸೇರೋಣ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್ .
ನಾಗೇಶ್ ಪೈ .
naama

Tuesday, January 19, 2010

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮ ಶ್ರೀ ವಿ .ಕೆ ಮೂರ್ತಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮
ಭಾರತೀಯಚಲನ ಚಿತ್ರದ ಅತೀಶ್ರೇಷ್ಟ ಪುರಸ್ಕಾರ ಇದಾಗಿದೆ .ದಾದಾ ಸಾಹೇಬ್ ಫಾಲ್ಕೆ ಯವರು ಸ್ವತಃ ಛಾಯಾ ಗ್ರಾಹಕರಾಗಿದ್ದರು.ಇವರ ಹೆಸರಿನಲ್ಲಿ ಪ್ರತಿ ವರ್ಷ ಇ ಪುರಸ್ಕಾರ ನೀಡಲಾಗುತ್ತಿದೆ.
೨೦೦೮ ನೇ ಸಾಲಿನ ಪ್ರಶಸ್ತಿ ಕನ್ನಡಿಗರಾದ ಹೆಸರಾಂತ ಹಿರಿಯ ಛಾಯಾಗ್ರಾಹಕ ಶ್ರೀಯುತ ವಿ .ಕೆ ಮೂರ್ತಿ ಅವರಿಗೆ ಲಭಿಸಿದೆ .
ವರ ನಟ ಡಾ ರಾಜ್ ಕುಮಾರ್ ಕನ್ನಡ ದಲ್ಲಿ ಮೊದಲಿಗರು .ದ್ವಿತೀಯ ಸ್ಥಾನ ದಲ್ಲಿ ಮೂರ್ತಿ .
ನಮ್ಮ ಸುಂದರ ಮೈಸೂರಿನಲ್ಲಿ ಜನಿಸಿದ ಇವರು ಶಿಕ್ಷಣ ಮುಗಿಸಿ ಮುಂಬೈ ನಲ್ಲಿ ಹಿಂದಿ ಚಲನ ಚಿತ್ರ ದಲ್ಲಿ ಛಾಯಾ ಗ್ರಾಹಕ ರಾಗಿ ಜೀವನ ವ್ರತ್ತಿ ನಡೆಸಿದರು .ರಾಜಾಹರೀಶ್ ಚಂದ್ರ ಮೊದಲಾದ ಚಿತ್ರ .ಸಿನಿಮಾ ಸ್ಕೋಪ್ ನಲ್ಲಿ ಮೊದಲಿಗ .
ಎಸ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಹೂವು ಹಣ್ಣು ಕನ್ನಡ ಚಲನ ಚಿತ್ರ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಇದು ೫೬ ನೇ ಫಾಲ್ಕೆ ಪ್ರಶಸ್ತಿ ಆಗಿದೆ .
ಈಗ ನಿವ್ರತ್ತಿ ನಂತರ ಬೆಂಗಳೂರಿನಲ್ಲಿ ನೆಲಸಿರುತ್ತಾರೆ .
ಇನ್ನೂ ಹೆಚ್ಚಿನ ಪ್ರಶಸ್ತಿ ಇವರ ಮಡಿಲಿಗೆ ಸೇರಲಿ .
ಇವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವುದು ಮೈಸೂರಿಗೆ ,ಕರ್ನಾಟಕ ರಾಜ್ಯ ಹಾಗೂ ಭವ್ಯ ಭಾರತದ ಜನತೆಗೆ ಹೆಮ್ಮೆಯ ವಿಷಯವಾಗಿದೆ .
ಭಗವಂತನು ಶ್ರೀಯುತ ಮೂರ್ತಿ ಅವರಿಗೆ ಆಯುರಾರೋಗ್ಯ ಕೊಟ್ಟು ಹೆಚ್ಚು ಹೆಚ್ಚು ಕಲಾಸೇವೆ ಮಾಡುವಂತಾಗಲಿ .
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .

Monday, January 18, 2010

ಅಗಲಿದ ಕನ್ನಡ ಚಲನ ಚಿತ್ರ ತಾರೆಯರಿಗೆ ಶ್ರದ್ಧಾಂಜಲಿ .

ಕನ್ನಡ ಚಲನ ಚಿತ್ರ ಪ್ರಮುಖ ಪ್ರಸಿದ್ಧ ತಾರೆಯರಾದ ವರನಟ ನಟಸಾರ್ವಭೌಮ ಡಾ ರಾಜ್ ಕುಮಾರ್ ,ಶ್ರೀಮತಿಯರಾದ ಪಂಡರಿ ಬಾಯಿ ,ಮಿನುಗು ತಾರೆ ಕಲ್ಪನಾ ,ಸಾಹಸ ಸಿಂಹ ವಿಷ್ಣು ವರ್ಧನ್ ಅವರನ್ನು ಹಿಂಬಾಲಿಸಿದ ಚಾಮಯ್ಯ ಮೇಸ್ಟ್ರು ಕೆ ಎಸ ಅಶ್ವಥ್ .ಬಾಲಕೃಷ್ಣ ,ನರಸಿಂಹ ರಾಜು ,ಎಂ ಪಿ ಶಂಕರ್ ,ಶಂಕರ್ ನಾಗ್ ,ದಿನೇಶ್ ಇನ್ನಿತರ ಎಲ್ಲಾ ಕಲಾವಿದರನ್ನು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು ಮತ್ತು
೩ ಚಂದನ ವಾಹಿನಿ ಸಂಪರ್ಕ ಸೇತು
ತಮ್ಮ ದುಃಖವನ್ನು ಪ್ರಕಟಿಸುತ್ತದೆ .
ಅಗಲಿದ ಗಣ್ಯರ ಬಗ್ಗೆ ಸಂತಾಪ ವ್ಯಕ್ತ ಪಡಿಸಿ ಮ್ರತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತ ನನ್ನು ಪ್ರಾರ್ಥಿಸುತ್ತದೆ .
ನಾಗೇಶ್ ಪೈ

Friday, January 15, 2010

ಪ್ರವಾಸಿಗರ ತಾಣ ವಿಶ್ವದಲ್ಲಿ ೪ ನೇ ಸ್ಥಾನ ನಮ್ಮ ಸುಂದರ ಮೈಸೂರು

ವಿಶ್ವದ ಪ್ರಮುಖ ೩೧ ಪ್ರವಾಸಿಗರ ತಾಣ ದ ಪಟ್ಟಿಯನ್ನು ಅಮೇರಿಕಾದ ಪ್ರಸಿದ್ಧದ ಪತ್ರಿಕೆ ನ್ಯೂ ಯಾರ್ಕ್ ಟೈಮ್ ಸ ಸುರ್ವೆ ಮಾಡಿ ಪ್ರಕಟಿಸಿರುವುದನ್ನು
ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ
ಸಂತಸದ ಸುದ್ಧಿ ತಿಳಿಸಿದೆ .ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು .ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ .
ಮುಖ್ಯವಾಗಿ ಮಹಾರಾಜರ ಅರಮನೆ,ಜಯ ಚಾಮರಾಜೇಂದ್ರ ಮ್ರಗಾಲಯ,ಬ್ರಂದಾವನ,ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ
ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ .ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ .
ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ .
ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು .ವಿಮಾನ ,ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ .
ವಾಹನಗಳ ನಿಲುಗಡೆ ವ್ಯವಸ್ತೆ ,ನೀರು,ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು .ಅತಿಥಿ ದೇವೋ ಭವ,ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು .
ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಇದು ನಮ್ಮ ಸುಂದರ ಮೈಸೂರು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ

Wednesday, January 13, 2010

ರಾಜಕಾರಿಣಿಗಳೇ ನಿಮ್ಮ ನಾಲಿಗೆ ಮೇಲೆ ಹತೋಟಿ ಇರಲಿ

ಎಳ್ಳು ,ಬೆಲ್ಲ ತಿಂದು ಕಹಿ ಎಲ್ಲಾ ಮರೆತು ಒಳ್ಳೆಯ ಮಾತನಾಡುವ ಸಂಸ್ಕೃತಿ ಬೆಳೆಸಿ ಕೊಂಡುಸುಖವಾಗಿ
ಸಂಕ್ರಾಂತಿ ಹಬ್ಬ ಆಚರಿಸಿ .ವ್ಯಕ್ತಿತ್ವ ವಿಕಾಸ ಮಾಡಿಕೊಳ್ಳಿ .ಯುವ ಜನತೆ ಭವ್ಯ ಭಾರತದ ನವ ನಿರ್ಮಾಣದಲ್ಲಿ ಬೆನ್ನೆಲುಬು ಆಗಿರುವುದರಿಂದ ಮಾತಿನಲ್ಲಿ ಮತ್ತು ಬರಹದಲ್ಲಿ ನಿಯಂತ್ರಣ ಕಳೆದು ಕೊಳ್ಳ ಬಾರದು.ಚಾರಿತ್ರ್ಯ ವಧೆಯಾಗಿ ಜೀವನದ ಉದ್ಧಕ್ಕೂ ಇದು ಪರಿಣಾಮ ಬಿರ ಬಹುದು .ಮಾತು ಮಾಣಿಕ್ಯ .ಬತ್ತಳಿಕೆಯಿಂದ ಬಿಟ್ಟ ಬಾಣ ,ಚೆಲ್ಲಿದ ಹಾಲು ,ನಾಲಿಗೆಯಿಂದ ಹೊರ ಬಿದ್ದ ಅಸಂವಿಧಾನ ಶಬ್ದ ಪುನಃ ಪಡೆಯಲು ಸಾಧ್ಯವಿಲ್ಲ .
ಸಂಕ್ರಾಂತಿ ಶುಭಾಶಯಗಳು .
ನಾಗೇಶ್ ಪೈ .

Thursday, January 7, 2010

ಭಜನೆ ಯೊಂದು ಭಗವಂತನನ್ನು ಸಮಿಪಿಸುವ ಮಾರ್ಗ ವಾಗಿದೆ

ಹರಿ ನಾಮ ಸಂಕೀರ್ತನೆ ಭಜನೆ ಭಗವಂತ ನನ್ನು ಮೆಚ್ಚಿಸಿಸಮಿಪಿಸುವ ಅತ್ಯಂತ ಸುಲಭ ಮಾರ್ಗ ವಾಗಿದೆ .ನಟ ಸಾರ್ವಭೌಮ ವರ ನಟ ಡಾ ರಾಜ್ ಕುಮಾರ್ ನಟಿಸಿರುವ ಚಲನ ಚಿತ್ರ ಭಕ್ತ ಕುಂಬಾರ ದಲ್ಲಿ ಇದನ್ನು ಜನತೆಯ ಮನ ಸೂರೆಗೊಳ್ಳುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿರುವುದನ್ನು ನೀವೆಲ್ಲರೂ ಕಂಡು ಸಂಗೀತದ ಸವಿ ಯನ್ನು ಅನುಭವಿಸಿದ್ದಿರಿ .
ಮುಖ್ಯವಾಗಿ ಮಹಾರಾಷ್ಟ್ರ ದಲ್ಲಿ ಮರಾಟಿ ,ಕರ್ನಾಟಕ ದಲ್ಲಿ ಕನ್ನಡ ಭಾಷೆಯಲ್ಲಿ ಅಭಂಗ ಗಳನ್ನೂ ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ದ್ವನಿ ಸುರುಳಿ ಕೇಳಿ ಅನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು .
ಕೇಂದ್ರ ಬಿಂದುವಾದ ಪಂಢರಾಪುರ ಪಾಂಡುರಂಗನು ಭಕ್ತ ರನ್ನು ಸದಾ ರಕ್ಷಣೆ ಕೊಡುತ್ತಾನೆ .ಪಶ್ಚಿಮ ಕರಾವಳಿಯ ಗೌಡ ಸಾರಸ್ವತ ಸಮಾಜದ ಜನರ ಮನೆ ಯಲ್ಲಿ /ದೇವಸ್ತಾನ ಗಳಲ್ಲಿ ಇಂದಿಗೂ ರಾತ್ರಿ ಭೋಜನದ ಮೊದಲು ಭಜನೆ ಮಾಡುವ ಸಂಪ್ರದಾಯಯೊಂದಿಗೆ ಬೆಳೆಸಿ ಕೊಂಡು ಬಂದಿರುತ್ತಾರೆ .
ವರ್ಷಕ್ಕೊಮ್ಮೆ ಕಾರ್ಕಳ ,ಕುಂದಾಪುರ ,ಬಂಟ್ವಾಳ ,ಮಂಗಳೂರು ಇತ್ಯಾದಿ ಊರಿನ ವೆಂಕಟರಮಣ ದೇವಸ್ತಾನ ಗಳಲ್ಲಿ ಅಹೋರಾತ್ರಿ ತಾಳ ಗಳ ಶಬ್ದ ನಿಲ್ಲಿಸದೆ ಭಜನೆ ಸಪ್ತಾಹ [೭ ದಿನ ವಾರ ಪೂರ್ತಿ ] ವಿಜೃಂಭಣೆ ಯಿಂದ ನಡೆಸುತ್ತಾರೆ .ಇಲ್ಲಿ ಗಂಡಸರು ,ಹೆಂಗಸರು ,ಮಕ್ಕಳು ಮತ್ತು ವಯೋವ್ರದ್ಧರು ಭಾಗವಹಿಸುತ್ತಾರೆ .
ಹಿಮ್ಮೇಳದಲ್ಲಿ ಹಾರ್ಮೊನಿಯುಂ ,ತಬಲಾ ಮುಖ್ಯವಾಗಿ ತಾಳ ವಾಧ್ಯ ಇತುತ್ತದೆ .
ದೇವರ ಮಂಟಪದ ಎದುರುಗಡೆ ಎತ್ತರ ವಾ ದ ದೀಪ ಸ್ಥಂಭದಲ್ಲಿ ಸದಾ ಜ್ಯೋತಿ ಬೆಳಗುತ್ತಾ ಇರುತ್ತದೆ .
ವಾರದ ಕೊನೆಯಲ್ಲಿ /ನಡುವೆ ಭಜನೆಯೊಂದಿಗೆ ನೃತ್ಯ ಮಾಡುತ್ತಾರೆ .ಕೀರ್ತನೆ ಜೊತೆ ಭಗವಂತನಲ್ಲಿ ಮೈ ಮರೆಯುತ್ತಾರೆ .
ಪುರಂದರದಾಸರು ,ಸಂತ ತುಕಾರಾಂ ನಾಮ್ ದೇವ್ ಮಹಾರಾಜ್ ದಾಸ ಶ್ರೇಷ್ಟ ರ ಕೆರ್ತನೆ ಹಾಡುತ್ತಾರೆ .ಇಲ್ಲಿ ಭಾಷಾ ಭೇಧ ಮರೆತು ಭಜನೆ ಯಲ್ಲಿ ಮಗ್ನ್ನರಾಗಿ ಭಗವಂತ ನ ನ್ನು ಸಮೀಪಿಸಿ ಮೋಕ್ಷ ಮಾರ್ಗ ಕಾಗಿ ಕಾಯುತ್ತಾರೆ .
ಜೈ ಶ್ರೀ ಪಾಂಡುರಂಗ ವಿಟ್ಟಲ ರಕುಮಾಯಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .

Tuesday, January 5, 2010

ಕನ್ನಡಕ್ಕೆ ಶಾಸ್ತ್ರೀಯಸ್ಥಾನ ಮಾನವಿವಾದ ಬಗೆಹರಿಸಲು ಸಹಕರಿಸಿ

ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ತಾನ ಮಾನ ಸಿಗಲೇ ಬೇಕು ಎನ್ನುವ ಒಕ್ಕೊರಳ ದನಿ ವಿಶ್ವದ ಪ್ರತಿಯೊಬ್ಬ ಕನ್ನಡಿಗನ ಬಾಯಲ್ಲಿ ಬರಲೇ ಬೇಕು .ಪಕ್ಷ ಭೇಧ ಮರೆತು ವಿಧಾನ ಮಂಡಲ /ಸಂಸದ್ ನಲ್ಲಿ ಚರ್ಚಿಸಿ ನ್ಯಾಯಾಲಯದ ಗಮನಕ್ಕೆ ಬಂದು ಮದ್ರಾಸ್ ಕೋರ್ಟು ತೀರ್ಮಾನ ಕನ್ನಡಿಗರ ಪರವಾಗಲಿ ಎಂದು ಹಾರೈಸುವ
ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Monday, January 4, 2010

ನವ ವರುಷ ಹರ್ಷದಾಯಕವಾಗಲಿ .

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ ಸುಖ ,ನೆಮ್ಮದಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .

http://bharathanirman.blogspot.com

Friday, January 1, 2010

ನವ ವರ್ಷ ಶುಭಾಶಯಗಳು -2010

ವಿಶ್ವದ ಎಲ್ಲಾ ಕನ್ನಡ ಭಾಂಧವರಿಗೆ,
ಕುಂದಾಪುರ ನಾಗೇಶ್ ಪೈ ಮಾಡುವ ನಮಸ್ಕಾರಗಳು .
ನನ್ನ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಚಂದನ ವಾಹಿನಿ ಸಂಪರ್ಕ ಸೇತು ಮತ್ತು
ನಮ್ಮ ಸುಂದರ ಮೈಸೂರು ಲೇಖನ ಗಳನ್ನೂ ಓದಿ ಪ್ರೋತ್ಸಾಹಿಸಿ ದ ಕ್ಕಾಗಿ
ನನ್ನ ಅನತಾನಂತ ವಂದನೆಗಳು.
ನವ ವರುಷ ೨೦೧೦ ಶುಭಾಶಯಗಳು .
ನೂತನ ವರ್ಷ ಕುಟುಂಬದ ಎಲ್ಲಾ ಸದಸ್ಯರಿಗೆ / ಗೆಳೆಯ ರಿಗೆ ಸುಖ ,ನೆಮ್ಮದಿ ಶಾಂತಿ ಮತ್ತು ಪ್ರಗತಿಪರ ಜೀವನ ಕರುಣಿಸಲಿ .ಎಂದು ಸದಾ ಹಾರೈಸುವ
ನಿಮ್ಮವನೇ
ನಾಗೇಶ್ ಪೈ .
ಆದರ್ಶ ಸಮಾಜ ,ಮಾದರಿ ರಾಜ್ಯ ಮತ್ತು ಭವ್ಯ ಭಾರತ ಎಲ್ಲರೂ ಸೇರಿ ನಿರ್ಮಾಣ ಮಾಡೋಣ ,ಬನ್ನಿ
ಜೈ ಹಿಂದ್ .