Friday, October 2, 2009

ಪಿತಾಮಹಾ ಮಹಾತ್ಮಾ ಗಾಂಧೀಜಿ ಜಯಂತಿ

ಇಂದು ಭವ್ಯ ಭಾರತದ ನಿರ್ಮಾಣ ಕರ್ತ್ರ ಪಿತಾಮಹ ಗಾಂಧೀಜಿ ಜಯಂತಿ .
ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಮುಖ್ಯ ಪಾತ್ರ ವಹಿಸಿದ್ದರು
ವಿಶ್ವ ಸಮುದಾಯ ಕ್ಕೆ ಶಾಂತಿ ,ಸತ್ಯ ,ಅಹಿಂಷೆ,ಧರ್ಮ ಪಾಟ ಕಲಿಸಿ ಮುಂದಾಳುತನ ವಹಿಸಿ ಮಾರ್ಗ ದರ್ಶನ ಮಾಡಿರುತ್ತಾರೆ
ಇವರನ್ನು ಜನ್ಮ ದಿನದಂಡು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ವಾಗಿರುವುದು ಅಲ್ಲದೇ ಅವರ ಸಿದ್ಧಾಂತ ಪಾಲಿಸ ಬೇಕು .
ಏನೇ ಭಿನ್ನಭಿ ಪ್ರಾಯ ಗಳಿದ್ದರೂ ದೇಶದ ಹಿತ ಮತ್ತು ಸರ್ವತೋಮುಖ ಅಭಿವ್ರದ್ಧಿ ಗಮನ ದಲ್ಲಿ ಇಟ್ಟುಯುವಜನತೆ ಮುಂದೆ ಸಾಗುತ್ತಾರೆ ಎನ್ನುವ ಆಶಾ ಭಾವನೆ ನನ್ನಲ್ಲಿ ಸದಾ ಇರುವುದು .ಕೇವಲ ಇದು ಆಚರಣೆ ,ರಜೆ ಮಾಡುವುದರಿಂದ ಶ್ರದ್ಧಾಂಜಲಿ ಅರ್ಥ ಪೂರ್ಣ ವಾಗಲಾರದು .ಮೂಲ ಸಿದ್ಧಾಂತ ಗಳನ್ನೂ ಪ್ರತಿಯೊಬ್ಬನ ಜೀವನದಲ್ಲಿ ಅಳವಡಿಸಿ ಕೊಳ್ಳ ಬೇಕು .
ಸತ್ಯ ಮೇವ ಜಯತೇ
ಸರ್ವೇ ಜನ : ಸುಕಿನೋ ಭವಂತು :
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಾಪುರ ಮತ್ತು ಚಿಕಾಗೋ ನಗರ ಅಮೇರೀಕಾ.
ಜೈ ಹಿಂದ್

Monday, September 28, 2009

ಬಾಲಗೋಕುಲಂ ಮಕ್ಕಳ ವಿಕಾಸ ಕಾರ್ಯ ಕ್ರಮ

ಬಾಲಗೋಕುಲಂ ಇದು ಒಂದು ಅಮೇರೀಕಾದಲ್ಲಿ ವಾಸಿಸುವ ಭಾರತೀಯರು ತಮ್ಮ ಮಕ್ಕಳ ವಿಕಾಸ ಮತ್ತು ದೇಶದ ಸಂಸ್ಕ್ರತಿ ಯನ್ನು ಮಕ್ಕಳಿಗೆ ಪರಿಚಯಿಸಿ ಬೆಳೆಸುವ ಕಾರ್ಯ ಕ್ರಮ ವಾಗಿದೆ .ಇದು ಮಕ್ಕಳ ಮಾನಸಿಕ ,ದೈಹಿಕ ಹಾಗೂ ಆರೋಗ್ಯಕರ ಬೆಳವಣಿಗೆ ಆಗಿದೆ .ಹಿಂದೂ ಸ್ವಯಂ ಸೇವಕ ಸಂಘದ ವತಿಯಿಂದ ಅಮೇರಿಕಾದ ಬಹು ಭಾಗದಲ್ಲಿ ಯುವಜನತೆ ವಾರದ ಕೊನೆಯಲ್ಲಿ ಭಾನುವಾರ ರಜಾ ದಿನದಂದು ನಡೆಸುತ್ತಾರೆ .ಮಕ್ಕಳಿಗೆ ಬದಲಾವಣೆ ಸಿಗುತ್ತದೆ .ಯೋಗ ನಾಟಕ ,ಸಂಸ್ಕ್ರತಿ ,ಪುರಾಣ ,ರಾಮಾಯಣ ಇತ್ಯಾದಿ ಕಲಿಸಿ ನಾವು ಭಾರತೀಯರು ಎನ್ನುವ ಅನುಭವ ,ಹಿರಿಯರ ಮಾರ್ಗ ದರ್ಶನ ವಾಗಲಿದೆ .ಭಾಷೆ ,ಜಾತಿ ಗೊಂದಲ ವಿರಲಾರದು .ರಾಜಕೀಯ ಸುಳಿಯುವುದಿಲ್ಲ
ಇಲ್ಲಿ ಉತ್ಹ್ಸಾಯಿ ತರುಣರು ,ವಿವಾಹಿತರು ಬೆಳೆಸಿ ಕೊಂಡು ಬಂದಿರುವ ಕಾರ್ಯ ಕ್ರಮವನ್ನು ಕುಟುಂಬ ಸಮೇತರಾಗಿ ಭಾಗವಹಿಸಿ ಆನಂದ ಪಡುವುದರಿಂದ ಸಮಯ ಸದುಪಯೋಗ ವಾಗುತ್ತದೆ .ನಾವು ಭಾರತೀಯರು ಎನ್ನುವ ಭಾವನೆ ಎಲ್ಲರಲ್ಲೂ ಮೂಡಿ ದೇಶ ಪ್ರೇಮ ,ಶಿಸ್ತು ಮತ್ತು ಅರೋಗ್ಯ ಸಂಪಾದಿಸ ಬಹುದು .ವಿದೇಶ ದಲ್ಲಿ ವಾಸಿಸಿ ಭವ್ಯ ಭಾರತದ ನವ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿ ಕೊಟ್ಟಂತೆ .ಮುಂದಿನ ಪೀಳಿಗೆ ನಮ್ಮ ಕಲೆ ,ಪುರಾಣ ಮತ್ತು ಸಂಸ್ಕ್ರತಿ ಮರೆಯ ಬಾರದು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ನಾಗೇಶ್ ಪೈ ಚಿಕಾಗೋ ನಗರ .

Friday, September 25, 2009

ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಮಾನ ವಿವಾದ

ಅದಷ್ಟೂ ಬೇಗ ಗಾಂಧಿ ಯವರಿಗೆ ಸದ್ಭುದ್ಧಿ ಕೊಟ್ಟು ತಾಯಿ ಚಾಮುಂಡೇಶ್ವರಿ ಕನ್ನಡ ಭಾಷೆ ಶಾಸ್ತ್ರಿಯ ಸ್ಥಾನ ಮಾನ ಕ್ಕಾಗಿ ಇರುವ ತೊಂದರೆ ನಿವಾರಣೆಯಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಮ್ಮ ಸುಂದರ ಮೈಸೂರು.

Tuesday, September 15, 2009

ಸರ್ ಎಂ ವಿಶ್ವೆಶ್ವರೈಯ್ಯ ಸವಿ ನೆನಪು -ಜನ್ಮ ದಿನ ಆಚರಣೆ

ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಸರ್ ಎಂ ವಿಶ್ವೆಶ್ವರೈಯ್ಯ ಅವರ ಜನ್ಮ ದಿನ ಆಚರಣೆಯ ಪ್ರಯುಕ್ತ ಅವರ ಸ್ಮರಣೆ ಮಾತ್ರವಲ್ಲದೆ ಯುವಜನತೆ ಮಾರ್ಗ ದರ್ಶನದಲ್ಲಿ ಮುಂದುವರಿಯುವ ಸಂಕಲ್ಪ ಮಾಡುತ್ತದೆ .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ಮಾಡುವುದರಲ್ಲಿ ಫಲ ಕಾರಿ ಯಾಗಲಿ ಎಂದು ಹಾರೈಸುವುದು.
ನಾಗೇಶ್ ಪೈ .

Saturday, August 8, 2009

navellaroo bharathiyaroo

ಮತ್ತೂರು ಕೃಷ್ಣಮೂರ್ತಿ ಭಾರತೀಯವಿದ್ಯಾ ಭವನ ಅವರ ಲೇಖನ ಇಂದು ವಿಜಯ ಕರ್ನಾಟಕ ದಿನ ಪತ್ರಿಕೆ ಯಲ್ಲಿ ಶ್ರೀಯುತ ವಿಶ್ವೇಶ್ವರ ಭಟ್ ರು ಪ್ರಕಟಿಸಿದ್ದಕ್ಕೆ ನಾನು ನಾಗೇಶ್ ಪೈ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು /ಸಿಂಗಪೂರಿನಲ್ಲಿ ಸ್ವಾಗತಿಸುತ್ತೇನೆ .ಕವಿ ಗಳಾದ ತಿರುವಳ್ಳವರ್ ಮತ್ತು ಸರ್ವಜ್ಞ ರು ನಮ್ಮ ದೇಶದ ಸಂಸ್ಕ್ರತಿ ಮತ್ತು ಭಾಷೆಗೆ ಕೊಟ್ಟ ಕೊಡುಗೆ ಯನ್ನು ರಾಜ್ಯ/ದೇಶ ಎಂದಿಗೂ ಮರೆಯ ಬಾರದು.ಇ ಕವಿ ಗಳ ಬಗ್ಗೆ ಗೌರವ ತೋರಿಸಿದಾಗ ನಮ್ಮನ್ನು ನಾವೇ ಗೌರವಿಸಿದ ಹಾಗೇಅಲ್ಲವೇ ಇಲ್ಲಿ ಎರಡು ರಾಜ್ಯ ಮತ್ತು ಮುಖ್ಯ ಮಂತ್ರಿ ಗಳು ಒಮ್ಮತಕ್ಕೆ ಬಂದು ಪ್ರತಿಮೆ ಸ್ಥಾಪನೆಗೆ ಒಲವು ತೋರಿದಾಗ ಚಳವಳಿ ಅಗತ್ಯವೇ .ಇಲ್ಲಿ ಸಣ್ಣ ಪುಟ್ಟ ರಾಜಕೀಯ ಭಾಷಾ ಗೊಂದಲ ಹಾಗೂ ಸ್ವಾಭಿಮಾನ ಇರ ಬಹುದು .ಈಗ ನೀರಿನ /ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಇತ್ಯಾದಿ ಸಮಸ್ಯೆ ಗಳನ್ನು ಬಗೆ ಹರಿಸುವ ಸಮಯ ಬಂದಾಗ ಯಾವುದನ್ನು ಅರಿಸುತ್ತಿರಿ ?
೧ ಚಳವಳಿ
೨ ಸಮಸ್ಯೆ ಗಳ ಪರಿಹಾರ
೩ ಶಾಂತಿ ,ಸಮನ್ವ್ಯಯ
೩ ಬರುವ ಆಗಸ್ಟ್ ೧೫ ಸ್ವಾತಂತ್ಯ್ರ ದಿನಾಚರಣೆ ದೇಶ ಪ್ರೇಮದ ಧ್ಯೋತಕ ವಾಗಿ.
ಭಾರತಾಂಬೆ ಯ ಮಕ್ಕಳು ಸರಿ ಸಮಾನ .
ಆರೋಗ್ಯಕರ ಸ್ಪರ್ದೆ ಇರ ಬೇಕು .
ನಮ್ಮ ದೇಶ ಪ್ರಗತಿಯತ್ತ ಸಾಗಲಿ .
ಜೈ ಹಿಂದ್
ನಾಗೇಶ್ ಪೈ

Monday, August 3, 2009

ಭಾರತ ಮತ್ತು ಚೀನಾ ಭಾಂಧವ್ಯ

ಭಾರತ ಮತ್ತು ಚೀನಾ ರಾಷ್ಟ್ರಗಳ ಭಾಂಧವ್ಯ .
ಇವೆರಡು ರಾಷ್ಟ್ರ ಗಳು ವಿಶ್ವದ ಜನ ಸಂಖ್ಯಾ ಸ್ಪೋಟ ದಲ್ಲಿ ಅತೀಹೆಚ್ಚು ಸಂಖ್ಯಾ ಬಲ ಹೊಂದಿವೆ .
ಸರಕಾರ ಆಡಳಿತ ದಲ್ಲಿ ಎರಡು ತದ್ವಿರುದ್ಧ ಸಿದ್ಧಾಂತ ಹೊಂದಿವೆ .
ಚೀನಾ ಕಮ್ಯುನಿಸಂ ಮತ್ತು ನಮ್ಮ ಭವ್ಯ ಭಾರತ ಪ್ರಜಾ ಪ್ರಭುತ್ವ ದ ನಂಬಿಕೆ ಯನ್ನು ಉಳಿಸಿ ಕೊಂಡು ಬಂದಿರುವ ಹೆಮ್ಮೆಯ ದೇಶ ವಾಗಿದೆ .ಇವೆರಡು ದೇಶಗಳು ಪ್ರಪಂಚದ ವ್ಯಾಪಾರ ವಹಿವಾಟು ಗಳಲ್ಲಿ ಪ್ರತಿ ಸ್ಪರ್ಧಿ ಗಳಾಗಿವೆ .ಚೀನಾ ದೇಶದಲ್ಲಿ ತಯಾರಿಸಿದ ಅಗತ್ಯ ವಸ್ತು ಗಳು ಭಾರತ ದಲ್ಲಿನ ಮಳಿಗೆ ಗಳಲ್ಲಿ ಕಡಿಮೆ ಬೆಲೆಯಲ್ಲಿ ಲಭಿಸುವುದರಿಂದ ಭಾರತೀಯರಿಗೆ ವಿದೇಶ ವ್ಯಾಮೋಹ ಸ್ವಲ್ಪ ಮಟ್ಟಿಗೆ ಕಡಿಮೆ ಯಗಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ನಮ್ಮ ದೇಶ ದ ನಗರ ಪ್ರದೇಶ ಗಳಲ್ಲಿ ರು ೪೯/- ಮತ್ತು ೩೦/- ರಲ್ಲಿ ಮಾರುವ ಅಂಗಡಿ ಗಳು ಜನರನ್ನು ಆಕರ್ಷಿಸುತ್ತವೆ .ಇದಕ್ಕೆ ಮೂಲ ಕಾರಣ ಚೀನಾದ ಪ್ರತಿಯೊಂದು ಮನೆಯಲ್ಲಿ ಗುಡಿ ಕೈಗಾರಿಕೆ ಯಾಗಿ ವಸ್ತು ಗಳನ್ನೂ ಮನೆಯಲ್ಲಿ ಮಾಡುವುದರಿಂದ ಜನರಿಗೆ ಉದ್ಯೋಗ ಕೊಟ್ಟ ಹಾಗೆ ಆಗುತ್ತದೆ .ಸೋಮಾರಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಧಾರಿಸಿದೆ .ಒಂದೇ ಪ್ಪಕ್ಷ ವಾಗಿ ಜಗಳ ಕಡಿಮೆ ಸ್ವಾರ್ಥವೂ ಕಡಿಮೆ ಜನ ಸಂಖ್ಯೆ ಹೆಚ್ಚಾದರೂ ದುಡಿಯುವ ಜನ ತಿನ್ನುವ ಕೈಗಳಿಗಿಂತ ಹೆಚ್ಚು .
ನನ್ನ ರಾಜ್ಯ /ದೇಶದ ಮೇಲೆ ಸ್ವಾಭಿಮಾನ ವಿದ್ದರೂ ನನಗೆ ಇ ವಿಷಯ ಪ್ರಕಟಿಸುವುದು ಪ್ರಸ್ತುತ ಅನಿಸಿದೆ .
ಲಿಂಗ ಪತ್ಯೆಮತ್ತು ಸಂತಾನ ಹರಣ ನಿಷೇಧ ನಮಗೆ ಬೇಕೇ ಬೇಡವೂ ಚೀನಿಯರು ಯೋಚಿಸುವುದಿಲ್ಲ
ಕಾರಣ ದುಡಿಯುವ ಕೈಗಳು ಅಧಿಕ ಉಣ್ಣುವ ಕೈಗಳು ಕಡಿಮೆ .
ಸಾರಾಂಶ : ಆಲಸಿ ಗಳಾಗದೆ ದೇಶದ ಅರ್ಥಿಕ ಪರಿಸ್ತಿತಿ ಸುಭದ್ರ ವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ .
ಪ್ರಜಾ ಪ್ರಭುತ್ವ ಎಂದಿಗೂ ಮೆರೆಯಲಿ .
ಜೈ ಹಿಂದ್
ನಾಗೇಶ್ ಪೈ .
ನಮ್ಮ ದೇಶದ ಪ್ರಜೆ ಗಳು ಚೀನಾ ದಲಿ ಉದ್ಯೋಗ ದಲ್ಲಿ ದುಡಿಯುತ್ತಿದ್ದಾರೆ ಇದು ನಮ್ಮ ಭಾಂದವ್ಯ ಹೆಚ್ಚಿಸುತ್ತಿದೆ .

Thursday, July 30, 2009

munde baruva habbagalu mattu Acharane.-sugamavagali.

ಭವ್ಯ ಭಾರತದ ದಲ್ಲಿ ಧರ್ಮ ಗಳು ಮತ್ತು ಸಂಬಂಧ ಪಟ್ಟ ಹಬ್ಬಗಳ ಆಚರಣೆ .
ಭಾರತದ ಪ್ರತಿಯೊಬ್ಬ ಪ್ರಜೆಗೆ ತಮ್ಮ ತಮ್ಮ ಧರ್ಮ ಹಾಗೂ ಅವುಗಳ ಸಂಬಂಧ ಪಟ್ಟ ಹಬ್ಬಗಳನ್ನು ಆಚರಣೆ ಮಾಡುವ ಅಧಿಕಾರ ವನ್ನು ಸಂವಿಧಾನ ದಲ್ಲಿ ಕೊಡಲಾಗಿದೆ .ಆದರೆ ಕೆಲವು ಕಿಡಿ ಗೇಡಿಗಳು ಇದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿ ಸಮಾಜ /ರಾಷ್ಟ್ರ ದ್ರೋಹ ಬಗೆದಿರುವುದನ್ನು ಅಲ್ಲದೆ ಆಸ್ತಿ /ಜೀವ ಹಾನಿ ಮಾಡಿರುವುದು ಇತ್ತೀಚೆಗಿನ ದಿನ ಗಳಲ್ಲಿ ಕಂಡು ಬಂದಿದೆ .ಪೋಲಿಸ್ ವ್ಯವಸ್ಥೆ ಮತ್ತು ಜಿಲ್ಲಾಧಿಕಾರಿ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ .ಸಫಲರಾಗಿ ಶಾಂತಿ ಯನ್ನು ಕಾಪಾಡಿ ಕೊಂಡು ಬಂದಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ತಪ್ಪಿತಸ್ತರನ್ನು ಭಂಧಿಸಿ ಶಿಕ್ಷೆ ಕೊಟ್ಟರೆ ಭಯದ ವಾತಾವರಣ ಉಂಟಾಗಿ ಅಪರಾಧ ಗಳ ಸಂಖ್ಯೆ ಇಳಿಮುಖ ವಾಗಬಹುದು .ಇಲ್ಲಿ ಮುಖ್ಯವಾಗಿ ರಾಜಕಾರಣಿ /ರಾಜಕೀಯ ಪ್ರವೇಶ ನಿಷೇಧ .
ಹಿಂದೂ ಧರ್ಮ ದಲ್ಲಿ ಹಬ್ಬ ಗಳ ಮತ್ತು ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಯಲ್ಲಿ ಹೆಚ್ಚು ಸಂಖ್ಯೆ ಯಲ್ಲಿ ಕಾಣಬಹುದು .
ನಮ್ಮ ಸಂಸ್ಕ್ರತಿ ಯನ್ನು ಉಳಿಸಿಕೊಳ್ಳಲು ಹಬ್ಬಗಳು ಸಹಾಯ ಕಾರಿಯಾಗಿದೆ.ದೈವಿಕ ಭಾವನೆ ಹೆಚ್ಚಿಸುತ್ತಿದೆ .
ಇಲ್ಲಿ ನಾಗರೀಕರಿಗೆ ವಿಶ್ವದ ಅರ್ಥಿಕ ಹಿನ್ನಡೆ ಬಲವಾದ ಪೆಟ್ಟು ಕೊಟ್ಟಿದೆ .
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗ ಹಾಗೂ ಕೆಳಗಿನವರಿಗೆ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೆ ಹಬ್ಬ ಆಚರಣೆ ಕಷ್ಟ ಕರ .
ಕೆಲವು ರಾಜ್ಯ ಮತ್ತು ಪ್ರದೇಶ ಗಳಲ್ಲಿ ಎಲ್ಲಾ ಧರ್ಮದವರು ಎಲ್ಲಾ ಹಬ್ಬ ಗಳನ್ನೂ ಒಟ್ಟಿಗೆ ಸೇರಿ ಆಚರಿಸುವ ಪದ್ಧತಿ ಕಂಡು ಬಂದಿದೆ .ಸರ್ವ ಧರ್ಮ ಸಮ್ಮಿಲನ ಆಗಿರುವುದು ವಿವಿಧತೆ ಯಲ್ಲಿ ಏಕತೆ ಯ ಧ್ಯೋತಕ ವಾಗಿದೆ .
ಎಲ್ಲರೂ ಸೇರಿ ವಿಚಾರ ಮಾಡಿ ಹಿತ ದ್ರಸ್ಟಿಯಿಂದ ಒಮ್ಮತಕ್ಕೆ ಬರಬೇಕು .ಸರಕಾರವೂ ಕೈ ಜೋಡಿಸಿದಾಗ ಇದು ಕಷ್ಟ ಸಾಧ್ಯ ವೇನೂ ಅಲ್ಲ .
ಧರ್ಮ ಗುರುಗಳ ಸಹಕಾರವು ಬೇಕಾಗದೆ .
ಮುಂದೆ ಬರುವ ಎಲ್ಲಾ ಹಬ್ಬಗಳು ಜನರ ನೆಮ್ಮದಿಯನ್ನು ಕೆಡಿಸದೆ ಶಾಂತಿ ,ಸೌಹಾರ್ದ ಬೆಳಸಿ ಅಭ್ಯುದಯದ ಕಡೆ ಸಾಗಲಿ ಇದು ನಮ್ಮ ಹಾರೈಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .
ಜೈ ಹಿಂದ್