ಇಡೀ ಭಾರತ ಒಗ್ಗಟ್ಟಿನಲ್ಲಿ ಸಂಸತ್ತಿನ ಉಭಯ ಸದನಗಳು ಪಕ್ಷ ಭೇಧ ವನ್ನು ಮರೆತು ಭಯೋತ್ಪಾದಕರ ವಿರುದ್ದ ಸಮರ ಸಾರಿದೆ .ಇದು ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ತೋರಿಸಿದೆ .ಮಾತ್ರ ವಲ್ಲದೆ ಉಭಯ ಸದನಗಳು ಸಂವಿಧಾನದಲ್ಲಿ ಉಗ್ರರ /ನಕ್ಷಲಿಯರ ಸಂಪೂರ್ಣ ನಾಶ ಕ್ಕಾಗಿ ಕಾನೂನು ಮಂಡಿಸಿ ಈಗ ಭವ್ಯ ಭಾರತದ ರಾಷ್ಟ್ರ ಪತಿ ಯವರ ಸಮ್ಮುಖ ದಲ್ಲಿ ಹಸ್ತಾಕ್ಷರ ಕ್ಕಾಗಿ ಕಾಯುತ್ತಿದೆ .
ಈ ತನ್ಮಧ್ಯೆ ಕೇಂದ್ರದ ಅಲ್ಪ ಸಂಖ್ಯಾತರ ಕಲ್ಯಾಣ ಮಂತ್ರಿ ಆಗಿರುವ ಎ .ಅರ್ ಅಂತುಲೆ ಯವರ ವಿವಾದಾತ್ಮಕ [ಉಗ್ರ ನಿಗ್ರಹ ಪಡೆಯ ಮುಖ್ಯಸ್ಥ ಹೇಮಂತ ಕರ್ಕರೆ ಯವರ ಸಾವು ] ಹೇಳಿಕೆ ದೇಶದ ಜನರ ಒಗ್ಗಟ್ಟಿನಲ್ಲಿ ಬಿರುಕು ತಂದಿದೆ .ಇದು ಕಾಂಗ್ರೆಸ್ ಪಕ್ಷದ ನಿರ್ಧಾರವೋ ಅಥವಾ ಅಂತುಲೆಯವರ ಸ್ವಂತ ಅಭಿಪ್ರಾಯವೋ ಎಂದು ಜನತೆಗೆ ಕಾಡುತ್ತಿದೆ .
ಇವರು ಹಗರಣ ಗಳಲ್ಲಿ ಯಾವಾಗಲು ಇರುತ್ತಾರೆ .೧೯೮೨ ರಲ್ಲಿ ಮಹಾರಾಷ್ಟ್ರ ಮುಖ್ಯ ಮಂತ್ರಿಯಾಗಿದ್ದಾಗ ಸಿಮೆಂಟ್ ಹಗರಣದಲ್ಲಿ ಅವರು ರಾಜಿನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು .ಬಾಂಬೆ ಹೈಕೋರ್ಟ್ ತಪ್ಪಿತಸ್ಥ ಎಂದು ಘೋಷಿಸಿದೆ .ಈಗ ಪುನಃ ರಾಜಿನಾಮೆ ನೀಡಿ ದ್ದಾರೆ .
ಇವರ ಆದರ್ಶದ ಬಗ್ಗೆ ಜನರೇ ತೀರ್ಪು ನೀಡಲಿ .
ಇದರಿಂದಾಗಿ ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಷ್ಟೆ ಗೆ ಲಾಭ ವಾಗುವುದೇ ಅಥವಾ ವಿರುದ್ದ ಜನರು ಬೇರೆ ಪಕ್ಷದ ಕಡೆಗೆ ವಾಲುವರೇ ಸಮಯ ನಿರ್ಧರಿಸಲಿದೆ .
ಕಾಂಗ್ರೆಸ್ ಪಕ್ಷವು ಅಂತುಲೆಯವರ ರಾಜಿ ನಾಮೇ ಸ್ವಿಕರಿಸಿದರೆ ಮಾತ್ರ ಸ್ವಲ್ಪ ಮಟ್ಟಿಗೆ ಜನರ ಮೆಚ್ಚುಗೆ ಪಡೆಯಬಹುದು .
ಮಂತ್ರಿ ಮಂಡಲ ದಲ್ಲಿ ನಿಸ್ವ್ವಾರ್ತಿ ದೇಶ ಪ್ರೇಮಿ ಇರಬೇಕೆ ವಿನಃ
ಇಂಥವರು ಇರ ಬಾರದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆಯು ಸರ್ವತೋಮುಖ ಬೆಳವಣಿಗೆ ಯನ್ನು ಬಯಸುತ್ತಿದೆ .
ನಾಗೇಶ್ ಪೈ
ಇಲ್ಲಿ ರಾಜಕೀಯಕ್ಕೆ ಪ್ರವೇಶವಿಲ್ಲ .
Friday, December 19, 2008
Subscribe to:
Post Comments (Atom)
No comments:
Post a Comment