Friday, February 27, 2009

ಸತ್ಯ ನಾರಾಯಣ ಪೂಜಾ ಅಟ್ ಮೈಸೂರ್

Iam extremely thankful for our Samaj members having accepted my invitation& attended
our Pooja to make it a success.
Please browse sites:
1 http://gsbmysore.ind.cc
2 http://groups.yahoo.com/groups/GSB_Mysooru
The Pooja with bhajan,Arathi.debate on joint /nuclear family was interesting.
The programe was concluded with Lunch.
well attended by our GSB members and local friends.
OUR samaj will have development activities periodically.
sarve jana sukino bhavanthu.
Nagesh Pai family Mysore.

Thursday, February 19, 2009

ಮೈಸೂರು ಮೇಯರ್ ಚುನಾವಣೆ

ನಮ್ಮ ಸುಂದರ ಮೈಸೂರು .
ಇಂದು ನಡೆದ ಪಾಲಿಕೆ ಮೇಯರ್ ಚುನಾವಣೆ ಯನ್ನು ಗಮನಿಸಿದಾಗ ಇಲ್ಲಿ ಕೇವಲ ಖುರ್ಚಿಗಾಗಿ ಹೊಡೆದಾಟ ದ ಬಗ್ಗೆ ಪ್ರಾಮುಖ್ಯತೆ ಬಿಟ್ಟರೆ ಯಾರಿಗೂ ಅಭಿವ್ರದ್ಧಿ ಯ ಕಾಳಜಿ ಕಂಡು ಬಂದಿಲ್ಲ .ಪಕ್ಷಗಳ ಕೆಸರೆರಚಾಟ .
ಇಲ್ಲಿ ಮುಖ್ಯವಾದ ಸಮಸ್ಯೆ ಗಳನ್ನೂ ಹೇಗೆ ಎದುರಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕಾಗಿದೆ .ಮೈಸೂರಿನ ಜನತೆ ಗೆ ಪಕ್ಷ ಮುಖ್ಯ ವಲ್ಲ .ಅವರು ಮಾಡುವ ಮುಂದಿನ ಸುಧಾರಣೆ .
ನಾವೆಲ್ಲರೂ ಭವಿಷ್ಯದ ಬಗ್ಗೆ ಶುಭ ಚಿಂತನೆ ಮಾಡುವ
೧ ನಮ್ಮ ಸುಂದರ ಮೈಸೂರು .
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು .

Saturday, February 14, 2009

ಇಂದು ವಿಶ್ವ ದಾದ್ಯಂತ ಆಚರಿಸುವ ಪ್ರೇಮಿ ಗಳ ದಿನಾಚರಣೆ ಯಾಗಿದೆ .ಇದನ್ನು ಒಂದು ದಿನ ಆಚರಿಸಿದಾಗ ಪ್ರೇಮ ಮತ್ತು ಪ್ರೀತಿಯ ಅರ್ಥ ಅರಿತಂಥಾಗುವುದೇ ? ಮಗ ತಾಯಿಗೆ ತೋರಿಸುವ ಮಾತ್ರ ಪ್ರೇಮ

ಇಂದು ವಿಶ್ವ ದಾದ್ಯಂತ ಆಚರಿಸುವ ಪ್ರೇಮಿ ಗಳ ದಿನಾಚರಣೆ ಯಾಗಿದೆ .ಇದನ್ನು ಒಂದು ದಿನ ಆಚರಿಸಿದಾಗ ಪ್ರೇಮ ಮತ್ತು ಪ್ರೀತಿಯ ಅರ್ಥ ಅರಿತಂಥಾಗುವುದೇ ?
ಮಗ ತಾಯಿಗೆ ತೋರಿಸುವ ಮಾತ್ರ ಪ್ರೇಮ ,
ಅಣ್ಣ ತಂಗಿಗೆ ತೋರಿಸುವ ಪ್ರೇಮ .
ಹೆಂಡತಿ ತನ್ನ ಗಂಡನಿಗೆ ತೋರಿಸುವ ಪ್ರೇಮ ,
ದೇಶದ ಪ್ರಜೆ ತನ್ನ ಕರ್ತವ್ಯ ಪಾಲಿಸಲು ಮಾಡ ಬೇಕಾದ ರಾಷ್ಟ್ರ ಪ್ರೇಮ .
ಭಯೋತ್ಪಾದನೆ ವಿರುದ್ಧ ಹೋರಾಡಿ ಹುತಾತ್ಮ ರಾದ ಸ್ಸೈನಿಕರ ದೇಶ ಪ್ರೇಮ ಇತ್ಯಾದಿ ಗಳ ಬಗ್ಗೆ ಅಧ್ಯಯನ ಮಾಡಿದರೆ ಪ್ರೇಮ ಎಂಬ ಶಬ್ದದ ಬಗ್ಗೆ ಜ್ಞಾನ ಬಂದು
ಶ್ರೀ ರಾಮ ಸೇನೆ /ಶಿವ ಸೇನೆ ಯವರು ಮಾಡಿದ ನಿರ್ಭಂಧ ಇದಕ್ಕೆ ಉತ್ತರವಾಗಿ ಪಿನ್ಕ್ಕ್ ಚಡ್ಡಿ ಯ ರವಾನೆ ತಪ್ಪು ಜ್ಞಾನೋದಯ ವಾಗುವುದು .
ಯಶೋದೆ ಶ್ರೀಕೃಷ್ಣ ನ ಪ್ರೇಮ ,ರಾಧಾ ಮಾಧವನ ಪ್ರೇಮ ಇದು ಪುರಾಣ ಮತ್ತು ಚರಿತ್ರೆ ಯಲ್ಲಿ ಉಲ್ಲೇಖ ಓದಿದಾಗ ಪ್ರೇಮದ ಬಗ್ಗೆ ಗೌರವ/ಅಭಿಮಾನ ಹುಟ್ಟುವುದು ಸಹಜ .
ಪ್ರೇಮಿ ಗಳೇ ನಿಮ್ಮ ಇ ಮಹತ್ಹ್ವದ್ದ ಆಚರಣೆ ಯ ಬಗ್ಗೆ ತಿಳಿದವರು ಯಾರೂ ಅಡಚಣೆ ಮಾಡಲಾರರು .ಆದರೆ ನೀವೆಲ್ಲರೂ ಇದನ್ನು ದುರುಪಯೋಗ ಮಾಡ ಬಾರದು.
ವಿಧ್ಯಾಭ್ಯಾಸ /ಉದ್ಯೋಗ ಮಾಡುವ ಪವಿತ್ರ ಸ್ಥಾನ ವನ್ನುಹೆಣ್ಣು /ಗ್ಗಂಡು ಮಕ್ಕಳು ಆಕರ್ಷಣೆ ಗಾಗಿ ಅನುರಾಗವಾಗಿ ಮದುವೆ ಭಂಧನ ದಲ್ಲಿ ಮುಕ್ತಾಯ ಗೊಂಡ ನಿದರ್ಶನ ಗಳು ಇವೆ .ಇತ್ತೀಚೆಗಿನ ದಿನ ಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಯಾಗಿ ಪ್ರೇಮ ವಿವಾಹಕ್ಕೆ ಪ್ರಾಮುಖ್ಯತೆ ಬಂದಿದೆ .
ದಯವಿಟ್ಟು ಪ್ರೇಮಿಗಳ ಸ್ವಾತಂತ್ರ್ಯ ಕ್ಕೆ ಅಡ್ಡಿ ಮಾಡದಿರಿ .
ಯುವ ಜನಾಂಗ ಸುಸಂಸ್ಕ್ರಥ ಸಮಾಜ ರಚನೆ ಮಾಡಿ ಭವ್ಯ ಭಾರತದ ನಿರ್ಮಾಣ ಮಾಡಿ
ದೇಶ ದ ಸುಭಧ್ರ ಅಡಿಗಲ್ಲು ಹಾಕಲಿ
ಭಾರತ ಮಾತೆಯೇ ನಿನಗೆ ಜಯವಾಗಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Wednesday, February 11, 2009

ಸದನ ಗಳಲ್ಲಿ ಕೋಲಾಹಲ /ಲೋಕ ಸಭಾ ಚುನಾವಣೆ .

ವಿಶ್ವ ದಲ್ಲಿ ಭವ್ಯ ಭಾರತ ಅತೀ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರ ವಾಗಿದೆ .ಇ ಹೆಗ್ಗಳಿಕೆ ಯನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ನಮ್ಮ ದೇಶದ ಪ್ರಜೆ /ವಿಧಾನ ಸಭೆ ಸದಸ್ಯ /ಸಂಸದ ರ ಮೇಲೆ ಇದೆ .
ಪತ್ರಿಕೆ /ಮಧ್ಯಮ ಗಳ ವರದಿ /ಚಿತ್ರಣ ಓದಿ /ನೋಡಿದಾಗ ನಮಗೆ ತುಂಬಾ ಬೇಸರವಾಗಿ ರಾಜಕೀಯ ಎಷ್ಟು ಕೀಳು ಮಟ್ಟಿಗೆ ಇಳಿದಿರುವುದನ್ನು ಗಮನಿಸಬಹುದು .ಗೆಲ್ಲುವ ಕುದುರೆ ಗಳನ್ನೂ ಆರಿಸುವ ಯೋಚನೆಯಲ್ಲಿ ರಾಜಕೀಯ ಪಕ್ಷಗಳು ತೊಡಗಿದ್ದಾರೆ ವಿನಃ ಪ್ರತಿನಿಧಿ ಗಳು ರಾಜ್ಯದ /ಕೇಂದ್ರದಲ್ಲಿ ದೇಶದಲ್ಲಿ ಅಭಿವ್ರದ್ಧಿ ಯಬಗ್ಗೆ ಹೋರಾಡಬಲ್ಲರು ನೋಡುವುದಿಲ್ಲ .
ಉತ್ತರ ಪ್ರದೇಶ /ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯ ಗಳು ಉದಾರಣೆಯಾಗಿದೆ .
ಲೋಕ ಸಭಾ ಚುನಾವಣೆ ಸಮೀಪಿಸಿದೆ .ಈಗ ಇದೇ ಕಸರತ್ತನ್ನು ಮಾಡಲು ಎಲ್ಲಾ ರಾಜಕೀಯ ಪಕ್ಷ ಗಳು ತೊಡಗಿವೆ .ಇಲ್ಲಿ ಕೊಲೆ ಇತ್ಯಾದಿ ಮೊಕದ್ದಮೆ ಗಳಲ್ಲಿ ಸಿಲುಕಿರುವ ಅಯೋಗ್ಯರು ತಮ್ಮ ಪ್ರಭಾವ ದಿಂದ ಚುನಾವಣೆ ಕಣ ಕ್ಕೆ ಇಳಿದಿದ್ದಾರೆ .ಇಂತವರನ್ನು ಪ್ರಮುಖ ರಾಜಕೀಯ ಪಕ್ಷಗಳು ಪೋಷಣೆ ಮಾಡುವುದು ದುರದ್ರಸ್ಟಕರ.
ಪ್ರಜಾ ಪ್ರಭುತ್ವ ದ ರಕ್ಷಣೆ ಯಾಗ ಬೇಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಿಯೋಗ್ಯ ಪ್ರತಿ ನಿಧಿ ಗಳನ್ನೂ ಆರಿಸಿ ಲೋಕ ಸಭೆ ಗೆ ಕಳುಹಿಸಿ .
ಗೆಲ್ಲುವುದು ಮುಖ್ಯವಲ್ಲ ಆದರೆ ದೇಶದ ಸರ್ವತೋಮುಖ ಅಭಿವ್ರದ್ಧಿ ಪ್ರಮುಖ ವಾಗಿರಲಿ .
ಜೈ ಹಿಂದ್ .

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ . ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವ

ಕರ್ನಾಟಕದ ರಾಜ್ಯದ ರಾಜಕೀಯ ಪಕ್ಷ ಗಳಲ್ಲಿ ಒಂದು ನಿವೇದನೆ .
ಯುವ ಜನಾಂಗದಲ್ಲಿ ದೇಶ ಪ್ರೇಮ ಮತ್ತು ಒಗ್ಗಟ್ಟು ಪ್ರದರ್ಶನ ಮಾಡುವ ಮಹತ್ತಾದ ಸಾಧನೆ ಯಲ್ಲಿ ಹೊಲಸು ರಾಜಕೀಯ ಮತ್ತು ಚುನಾವಣೆ ಪ್ರಚಾರಕ್ಕಾಗಿ ಶಾಂತಿಯ ,ಶಿಸ್ತಿನ ವಾತಾವರಣ ದಯವಿಟ್ಟು ಕೆಡಿಸಬೇಡಿ .
ರಾಜ್ಯಗಳು /ಕೇಂದ್ರ ಸರಕಾರವೂ ಭಯೋತ್ಪಾದನೆ ವಿರುದ್ಧ ಸಮರ ಸಾರಿರುವಾಗ ಸರಕಾರ ಪ್ರಾಯೋಜಿತ ಭಯೋತ್ಪಾದನೆ ವಿರೋಧಿ ವಿಧ್ಯಾರ್ಥಿ ಜಾಗ್ರತಿ ಅಭಿಯಾನ ಕಾರ್ಯ ಕ್ರಮಕ್ಕೆ ಅಡ್ಡಿ ಪಡಿಸುತ್ತಿರುವುದು ದೇಶ ಪ್ರೇಮಿಗಳ ಮನಸ್ಸಿಗೆ ತುಂಬಾ ನೋವನ್ನು ಉಂಟು ಮಾಡಿದೆ .
ಪ್ರಚಲಿತ ವಿದ್ಯ ಮಾನಗಳಾದ ಪಬ್ ಧಾಳಿ ,ಪ್ರೇಮಿಗಳ ದಿನಾಚರಣೆ ಇತ್ಯಾದಿ ಸಮಸ್ಯೆ ಗಳಲ್ಲಿ ಯುವಕ /ಯುವತಿ ಯರನ್ನು ಸರಿಯಾದ ಮಾರ್ಗ ದರ್ಶನ ಮಾಡುವ ಜವಾಬ್ದಾರಿ ಸಮಾಜ ಆಡಳಿತ /ವಿರೋಧ ಪಕ್ಷದ್ದಾಗಿದೆ .
ಇದನ್ನು ಬಿಟ್ಟು ಪ್ರತಿ ಭಟನೆ ಗಳಲ್ಲಿ ಯುವ ಜನಾಂಗದ ಆದರ್ಶ ಕೆಡಿಸಬಾರದು .
ವಿಶ್ವ ಅರ್ಥಿಕ ಸಮಸ್ಯೆ ಗಳಲ್ಲಿ ಸಂಕಸ್ತ ದಲ್ಲಿ ಇರುವಾಗ ಯುವ ಜನಾಂಗಕ್ಕೆ ಧೈರ್ಯ ತುಂಬಬೇಕು .
ಕಾನೂನು ಕೈ ಗೆತ್ತಿ ಕೊಲ್ಲಬಾರದು .
ಬಾಪೂಜಿ ಯವರ ಶಾಂತಿ ,ಶಿಸ್ತು ,ಸಂಯಮ ಮತ್ತು ಕಾನೂನು ಪರಿಪಾಲನೆ ಅತಿ ಅಗತ್ಯ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ದಯವಿಟ್ಟು ಸಹಕರಿಸ ಬೇಕೆಂದು ಪ್ರಾರ್ಥನೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .ಮೈಸೂರು

Tuesday, February 10, 2009

ಪ್ರೇಮಿ ಗಳ ದಿನಾಚರಣೆ ಬೇಕೆ ? ಬೇಡವೇ ?

ಪ್ರೇಮಿ ಗಳ ದಿನಾಚರಣೆ ಯನ್ನು ಯುವಕ /ಯುವತಿ ಯರು ಆಚರಿಸುವ ವಿಚಾರ ಈಗ ಸಮಾಜ ದಲ್ಲಿ ಚರ್ಚೆ ಯ ವಿಷಯ ವಾಗಿ ದ್ವಂದ್ವ ತಪ್ಪು /ಒಪ್ಪು ಗಳಾಗಿ ಉತ್ತಮ ಸಮಾಜಕ್ಕೆ ಕಳಂಕ ವಾಗಿದೆ .ಇದನ್ನು ಸರಿಯಾದ ರೀತಿ ಯಲ್ಲಿ ಆಚರಿಸಿ ಕಾನೂನು /ನೀತಿ ಪಾಲನೆ ಮಾಡುವುದರಲ್ಲಿ ಸಮಾಜ /ಸರಕಾರ ಕ್ಕೆ ಪೂರಕ ವಾಗಿರ ಬೇಕು .ಯುವ ಜನಾಂಗದ ಸ್ವಾತಂತ್ರ್ಯ ವನ್ನು ಕಸಿದು ಕೊಳ್ಳ ಬಾರದು.ಸಮಸ್ಯೆ ಯಾಗದೆ ಹಬ್ಬ ವಾಗಬೇಕು .
ಇಲ್ಲಿ ಯುವ ಜನಾಂಗ ಕ್ಕೆ ತಿಳಿಯಲು ಬಯಸುವುದೇನೆಂದರೆ
ನಾನು ಅಮೇರಿಕಾ ಪ್ರವಾಸ ಮಾಡಿದಾಗ ವಿದೇಶಿಯರು ನಮ್ಮ ಭಾರತಿಯ ಸಂಸ್ಕೃತಿ ಯ /ಆಚರಣೆ ಬಗ್ಗೆ ಗೌರವ ಮತ್ತು ಸಂಗೀತ /ಯೋಗ ಇತ್ಯಾದಿ ಗಳ ಅಧ್ಯಯನ ಹಾಗೂ ಅನುಕರಣೆ ನೋಡಿದರೆ ತುಂಬಾ ಆನಂದ /ಆಶ್ಚರ್ಯ ವಾಗುತ್ತಿದೆ .ಮಹಿಳೆ ಯರು ಸೀರೆ ಉಡುವುದು /ಭರತನಾಟ್ಯ ,ತಬಲಾ ವಾದನ ಬಗ್ಗೆ ಕಲಿಯುವ ಮನಸ್ಸು ನೋಡಿದಾಗ ನಮ್ಮ ಸಂಸ್ಕ್ರತಿ ಯ ಬಗ್ಗೆ ಹೆಮ್ಮೆ ಪಡಬೇಕಾಗಿದೆ .
ಇಲ್ಲಿ ತದ್ವಿರುದ್ಧ ವಾಗಿ ಇ ಸುಸಂಕ್ರತಿ ತ್ಯಾಗ ಮಾಡಿ ವಿದೇಶಿ ವ್ಯಾಮೋಹ ಕ್ಕೆ ನಾವು ಬಲಿಯಗಿದ್ದೇವೆ .
ನಾನು ವಿದೇಶ ಸುತ್ತಿದಾಗ ಒಂದು ವಿಷಯ ಅನುಭವ ಮಾಡಿದ್ದೂ ಏನೆಂದರೆ
ದೇಶ ಪ್ರೇಮ /ಸಂಸ್ಕೃತಿ ಗೆ ಧಕ್ಕೆ ಯಾಗಬಾರದು.
ವಾಸಿಸಲು ಆಚರಿಸಲು ಭವ್ಯ ಭಾರತವೇ ಚೆನ್ನ ಆದರೆ ಪ್ರವಾಸಕ್ಕೆ ಸ್ವಲ್ಪ ಸಮಯಕ್ಕೆ ಸಂಚಾರಕ್ಕೆ ವಿದೇಶ ವು ತಾತ್ಕಾಲಿಕ ಸುಖ ಕೊಡುತ್ತದೆ .
ವಿದೇಶಿಯರು ಮಹಾತ್ಮ ಗಾಂಧೀಜಿ ಯವರ ಸತ್ಯ ,ಶಾಂತಿ ಮತ್ತು ಅಹಿಂಸೆ ಸಿದ್ಧಾಂತ /ಭಗವದ್ಗೀತೆ ಯ ನೀತಿ ಯ ಅನುಕರಣೆ ಮಾಡು ತಿದ್ದಾರೆ ಇಲ್ಲಿ .ಯುವ ಜನಾಂಗ ಪಾಶ್ಚಾತ್ಯ ಸಂಸ್ಕ್ರತಿ ಗೆ ಮರುಳಾಗಿದ್ದಾರೆ.
ಪ್ರಸಕ್ತ ಅರ್ಥಿಕ ಸಮಸ್ಯೆ ಸುಧಾರಣೆ ಯಾಗ ಬಹುದು .
ಒಗ್ಗಟ್ಟಿನ ಮಂತ್ರ ಜಪಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Saturday, February 7, 2009

ಷಿಗ್ರಗುಣಮುಖ ವಾಗಲು ಹಾರೈಕೆ .

ಪೂರ್ವ ಪ್ರಧಾನಿ ಕವಿ ಅಟಲ್ ಬಿಹಾರಿ ವಾಜಪಾಯಿ ಯವರು ಅನಾರೋಗ್ಯ ದಿಂದ ಬಳಲುತಿದ್ದಾರೆ .
ನಮ್ಮ ದೇಶದ ಪ್ರಜೆಗಳು ಪಕ್ಷ ಭೇಧ ವನ್ನು ಮರೆತು ತಮ್ಮ ದೇಶ ಕ್ಕಾಗಿ ನವ ನಿರ್ಮಾಣ ಮಾಡಲು ಮತ್ತು ಯುವ ಜನಾಂಗ ವನ್ನು ಕಟ್ಟಿ ಬೆಳಸಿದ ಮಹಾನ್ ನಾಯಕನ ಶಿಗ್ರ ಗುಣ ಮುಖ ವಾಗುವ ಹಾರೈಕೆ ಬಯಸುತ್ತಿದ್ದಾರೆ.
ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ಥಿಸಿ ಅವರು , ಆರೋಗ್ಯ ದಲ್ಲಿ ಚೇತರಿಸಿಕೊಳ್ಳಲಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಶುಭ ಹಾರೈಕೆ .
ನಮ್ಮ ಸುಂದರ ಮೈಸೂರು .

Wednesday, February 4, 2009

ಅಮ್ರತ ಮಹೋತ್ಸವ ಕ .ಸಾ.ಪ

ಭಯೋತ್ಪಾದನೆ ಅಳಿಸಿ ಸಮಗ್ರ ಭಾರತ ಉಳಿಸಿ ಅಭಿಯಾನ ಒಂದು ರಾಜಕೀಯ ಪಕ್ಷದ ಆಸ್ತಿ ಯಾಗಿಲ್ಲ .
ಇದು ದೇಶದ ಪ್ರತಿಯೊಬ್ಬ ಭಾರತೀಯನು ತನ್ನ ದೇಶ ಭಕ್ತಿ ಯನ್ನು ಪ್ರದರ್ಶಿಸುವ ಸಂಕೇತ ವಾಗಿದೆ .
ಇಲ್ಲಿ ರಾಷ್ಟ್ರಿಯ ಪಕ್ಷಗಳು ಜಗಳ ವಾಡುವಪ್ರಶ್ನೆ ಇಲ್ಲ .ಇದನ್ನು ಅರಿತ ಪಾಕಿಸ್ಥಾನ ಮತ್ತು ವಿರೋಧಿ ರಾಷ್ಟ್ರಗಳು
ತಮ್ಮ ಲಾಭಕ್ಕಾಗಿ ಉಪಯೋಗಿಸಿದರೆ ದೇಶದ ಪ್ರಜೆಗಳ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಬಹುದು .
ಮುಂಬರುವ ಲೋಕಸಭಾ ಚುನಾವಣೆಯ ದ್ರಷ್ಟಿ ಯಿಂದ ರಾಜಕೀಯ ಪಕ್ಷಗಳು ಮಾಡುವ ಇ ಚುನಾವಣೆ ಪ್ರಚಾರ ತುಂಬಾ ವಿಷಾದನೀಯ ಹಾಗೂ ಖಂಡನೀಯ .
ನಿನ್ನೆ ಮಾಧ್ಯಮ/ಪತ್ರಿಕೆ ನೇರ ಪ್ರಸಾರ ಮಾಡಿದ ಪ್ರತಿಭಟನೆ ಚಿತ್ರ ಗಳನ್ನೂ ನೋಡಿದ ಸಾರ್ವಜನಿಕರು
ಬೇಸರ ವ್ಯಕ್ತ ಪಡಿಸಿ ಒಗ್ಗಟ್ಟಿನಲ್ಲಿ ಬಲವಿದೆ .ಇದು ಯಾವ ಕಾರಣದಲ್ಲೂ ಸುಳ್ಳಾಗಬಾರದು .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ಕೇಂದ್ರ ಸರಕಾರವೂ ಘೋಷಣೆ ಮಾಡಿದ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ -ಮಾನ
ಇದನ್ನು ಕನ್ನಡ ಸಾಹಿತ್ಯ ಪರಿಷತ್ ನ ಅಮ್ರತ ಮಹೋತ್ಸವದ ಚರ್ಚೆಯ ಮುಖ್ಯ ವಿಷಯ ವಾಗಿ ಸಂಪೂರ್ಣ ಲಾಭ ಪಡೆಯಲು ಅಗತ್ಯ ಕಾರ್ಯ ಕ್ರಮ ರೂಪಿಸಿ ಅನುಷ್ಟಾನ ತರ ಬೇಕು .
ಸಿರಿ ಕನ್ನಡಂ ಗೆಲ್ಗೆ
ಜೈ ಭುವನೇಶ್ವರಿ .
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಕನ್ನಡವೇ ಸತ್ಯ .
ಜೈ ಹಿಂದ್

Tuesday, February 3, 2009

ಕನ್ನಡ ಸಾಹಿತ್ಯ ಪರಿಷತ್ -ಅಮ್ರತ ಮಹೋತ್ಸವ

ಇಂದು ವಿಶ್ವ ಕ್ಯಾನ್ಸರ್ ದಿನ .
ಇದರ ಮಹತ್ವ ವನ್ನು ಪ್ರತಿಯೊಬ್ಬ ಭಾರತೀಯನು ತಿಳಿದು ಕೊಳ್ಳುವ ಅವಶ್ಯ ಕತೆ ಇದೆ .
ಇದು ಬರೇ ಆಚರಣೆಗೆ ಸಿಮಿತ ವಾಗಿರ ಬಾರದು.ಕಾಯಿಲೆ ಬರುವ ಮುನ್ನ ತಪಾಸಣೆ ಅಗತ್ಯ .
ಮುಖ್ಯವಾಗಿ ಮಹಿಳೆಯರು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಿ ಅನುಭವಿ ವೈದ್ಯರ ಜೊತೆ ಸಂಪರ್ಕ ಇಟ್ಟು ಮುಂಜಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರುವ ಭೀಕರ ದುರಂತ ವನ್ನು ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯ ವಾಗುವ ನಂಬಿಕೆ ನನಗಿದೆ .
೨ ಕನ್ನಡ ಸಾಹಿತ್ಯ ಪರಿಷತ್ ಅಮ್ರತ ಮಹೋತ್ಸವ .ಸಮ್ಮೇಳನ ಚಾರಿತ್ರಿಕ ಹಿನ್ನಲೆ ಇರುವ ಚಿತ್ರದುರ್ಗ ದಲ್ಲಿ .
ಇ ಸಮ್ಮೇಳನ /ಸಮಾರಂಭಗಳು ಕೇವಲ ಡಾಮ್ಬಿಕ ಜೀವನದ ಪ್ರದರ್ಶನ ವಾಗಿರದೇ
ಸಾಹಿತ್ಯ ಮತ್ತು ಕಲೆ ಯ ಬೆಳವಣಿಗೆ ಗೆ ಪೂರಕ ವಾಗಿರ ಬೇಕು .
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ,ಮಾನದ ಗೌರವ ಕೇಂದ್ರದ ಘೋಷಣೆ ಯ ಸಂಪೂರ್ಣ ಲಾಭ ಪಡೆಯ ಬೇಕು .
ಇನ್ನೊಂದು ಮುಖ್ಯ ವಾದ ವಿಚಾರ ಇಲ್ಲಿ ಚರ್ಚೆ ಮಾಡ ಬೇಕಾಗಿರುವುದು ಏನೆಂದರೆ
ಹಾಲಿಮತ್ತು ಮಾಜಿ ಸಾಹಿತಿ /ಕವಿಗಳ ನಡೆಸುವ ಜೀವನ ಅವರ ಹಣ ಕಾಸು /ಮಾನಸಿಕ ಪರಿಸ್ಥಿತಿ ಇತ್ಯಾದಿಗಳ ಗಮನ ತೆಗೆದು ಕೊಳ್ಳುವ ಸಂಪೂರ್ಣ ಜವಾಬ್ದಾರಿ
ಸಾರ್ವಜನಿಕರು /ಸರಕಾರ ಮಾಡ ಬೇಕಾದ ಧನ ಸಹಾಯ .ಕೇವಲ ಅವರು ಮಾಡ ಬೇಕಾಗಿರುವುದನ್ನು /ಮಾಡಿರುವುದನ್ನು ಲೆಕ್ಕಿಸದೆ ,ಹಿರಿಯ ಸಾಹಿತಿ /ಕವಿ ಗಳ ಮಾ ಶಾ ಶನ ಹೆಚ್ಚಿಸುವ ಬಗ್ಗೆ ಸರಕಾರ ಸಂಪುಟ ದಲ್ಲಿ ನಿರ್ಧರಿಸಬೇಕು .
ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದು ಕೊಂಡ ತಿರ್ಮಾನ ಗಳು ಅನುಷ್ಟಾನವಾದಾಗ ಮಾತ್ರ ಇದು ಸಾರ್ಥಕ .ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಏರಲಿ ಹಾರಲಿ ನಮ್ಮ ಇ ಕನ್ನಡ ಧ್ವಜವು
ಜೈ ಕರ್ನಾಟಕ
ಜೈ ಹಿಂದ್

ಕನ್ನಡ ಸಾಹಿತ್ಯ ಪರಿಷತ್ -ಅಮ್ರತ ಮಹೋತ್ಸವ

ಇಂದು ವಿಶ್ವ ಕ್ಯಾನ್ಸರ್ ದಿನ .
ಇದರ ಮಹತ್ವ ವನ್ನು ಪ್ರತಿಯೊಬ್ಬ ಭಾರತೀಯನು ತಿಳಿದು ಕೊಳ್ಳುವ ಅವಶ್ಯ ಕತೆ ಇದೆ .
ಇದು ಬರೇ ಆಚರಣೆಗೆ ಸಿಮಿತ ವಾಗಿರ ಬಾರದು.ಕಾಯಿಲೆ ಬರುವ ಮುನ್ನ ತಪಾಸಣೆ ಅಗತ್ಯ .
ಮುಖ್ಯವಾಗಿ ಮಹಿಳೆಯರು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಿ ಅನುಭವಿ ವೈದ್ಯರ ಜೊತೆ ಸಂಪರ್ಕ ಇಟ್ಟು ಮುಂಜಾಗ್ರತೆ ವಹಿಸಿದಾಗ ಮಾತ್ರ ಮುಂದೆ ಬರುವ ಭೀಕರ ದುರಂತ ವನ್ನು ತಡೆಯುವುದರಲ್ಲಿ ಸ್ವಲ್ಪ ಮಟ್ಟಿಗೆ ಸಹಾಯ ವಾಗುವ ನಂಬಿಕೆ ನನಗಿದೆ .
೨ ಕನ್ನಡ ಸಾಹಿತ್ಯ ಪರಿಷತ್ ಅಮ್ರತ ಮಹೋತ್ಸವ .ಸಮ್ಮೇಳನ ಚಾರಿತ್ರಿಕ ಹಿನ್ನಲೆ ಇರುವ ಚಿತ್ರದುರ್ಗ ದಲ್ಲಿ .
ಇ ಸಮ್ಮೇಳನ /ಸಮಾರಂಭಗಳು ಕೇವಲ ಡಾಮ್ಬಿಕ ಜೀವನದ ಪ್ರದರ್ಶನ ವಾಗಿರದೇ
ಸಾಹಿತ್ಯ ಮತ್ತು ಕಲೆ ಯ ಬೆಳವಣಿಗೆ ಗೆ ಪೂರಕ ವಾಗಿರ ಬೇಕು .
ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ,ಮಾನದ ಗೌರವ ಕೇಂದ್ರದ ಘೋಷಣೆ ಯ ಸಂಪೂರ್ಣ ಲಾಭ ಪಡೆಯ ಬೇಕು .
ಇನ್ನೊಂದು ಮುಖ್ಯ ವಾದ ವಿಚಾರ ಇಲ್ಲಿ ಚರ್ಚೆ ಮಾಡ ಬೇಕಾಗಿರುವುದು ಏನೆಂದರೆ
ಹಾಲಿಮತ್ತು ಮಾಜಿ ಸಾಹಿತಿ /ಕವಿಗಳ ನಡೆಸುವ ಜೀವನ ಅವರ ಹಣ ಕಾಸು /ಮಾನಸಿಕ ಪರಿಸ್ಥಿತಿ ಇತ್ಯಾದಿಗಳ ಗಮನ ತೆಗೆದು ಕೊಳ್ಳುವ ಸಂಪೂರ್ಣ ಜವಾಬ್ದಾರಿ
ಸಾರ್ವಜನಿಕರು /ಸರಕಾರ ಮಾಡ ಬೇಕಾದ ಧನ ಸಹಾಯ .ಕೇವಲ ಅವರು ಮಾಡ ಬೇಕಾಗಿರುವುದನ್ನು /ಮಾಡಿರುವುದನ್ನು ಲೆಕ್ಕಿಸದೆ ,ಹಿರಿಯ ಸಾಹಿತಿ /ಕವಿ ಗಳ ಮಾ ಶಾ ಶನ ಹೆಚ್ಚಿಸುವ ಬಗ್ಗೆ ಸರಕಾರ ಸಂಪುಟ ದಲ್ಲಿ ನಿರ್ಧರಿಸಬೇಕು .
ಸಾಹಿತ್ಯ ಸಮ್ಮೇಳನ ದಲ್ಲಿ ತೆಗೆದು ಕೊಂಡ ತಿರ್ಮಾನ ಗಳು ಅನುಷ್ಟಾನವಾದಾಗ ಮಾತ್ರ ಇದು ಸಾರ್ಥಕ .ಶುಭ ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಏರಲಿ ಹಾರಲಿ ನಮ್ಮ ಇ ಕನ್ನಡ ಧ್ವಜವು
ಜೈ ಕರ್ನಾಟಕ
ಜೈ ಹಿಂದ್

Monday, February 2, 2009

ನಡೆದಾಡುವ ದೇವರು ಶ್ರೀ ಶ್ರೀ ಶಿವ ಕುಮಾರ್ ಸ್ವಾಮೀಜಿ

ಕರ್ನಾಟಕ ರತ್ನ ಡಾಶ್ರೀ ಶ್ರೀ ಶಿವ ಕುಮಾರ್ ಸ್ವಾಮಿ ಸಿದ್ಧ ಗಂಗಾ ಮಠ ತುಮಕೂರ್ ಅವರ ೧೦೨ ನೇಜನ್ಮ ದಿನ ಶತಮಾನೋತ್ಸವ ಸಮಾರಂಭಮತ್ತು ವಿಧ್ಯಾರ್ಥಿ ನಿಲಯ ಉಧ್ಘಾಟನೆ ಬಹಳ ಅದ್ಧೂರಿ ಯಾಗಿ ನಡಯಿತು.ಘನತೆ ವೆತ್ತ ರಾಷ್ಟ್ರ ಪತಿ ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್ ಸಾನಿಧ್ಯ ವಹಿಸಿದರು .
ಪರಮ ಪೂಜ್ಯ ಸ್ವಾಮೀಜಿ ಯವರನ್ನು ಗೌರವಿಸಿದರು .
ಘನತೆವೆತ್ತ ರಾಜ್ಯಪಾಲ ಶ್ರೀ ರಾಮೇಶ್ವರ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು .
ಸ್ವಾಮೀಜಿಯವರ ದಿನಚರಿ ಮುಂಜಾನೆ ೨.೩೦ ವೇಳೆಗೆ ಪ್ರಾರಂಭ .ದಿನವಿಡೀ ಬಿಡುವಿಲ್ಲದ ಕಾರ್ಯ ಕ್ರಮಗಳು .ನಡೆದಾಡುವ ದೇವರು ಎಂಬ ಖ್ಯಾತಿ ಯಿಂದ ಪ್ರಖ್ಯಾತಿ .
ಕಾಯಕವೇ ಕೈಲಾಸ .ದಯೆ ಯೇಧರ್ಮದ ಮೂಲ ವೈಯ್ಯಾ .ಎಂಬ ಮಾತನ್ನು ಕ್ರಿಯಾ ರೂಪಕ್ಕೆ ತಂದ ಮಹಾನ್ ಪುರುಷ ರಾಗಿದ್ದಾರೆ .
ತ್ರಿವಿಧ ದಾಸೋಹಂ ಮತ್ತು ಶಿಕ್ಷಣ ಕ್ಷೇತ್ರ ದಲ್ಲಿ ಸಾಧಿಸಿ ಮಾರ್ಗ ದರ್ಶನ ಮಾಡಿ ಮಾದರಿ ಸಮಾಜವನ್ನು ಶ್ರಷ್ಟಿ ಮಾಡಿರುತ್ತಾರೆ .
ಸಮಾರಂಭ ಸಾಂಗವಾಗಿ ನೆರವೇರಿಸಲು ಸಂಚಾಲಕರು ವ್ಯವಸ್ಥೆ ಮಾಡಿರುತ್ತಾರೆ .
ದಿನಾಂಕ ,೩ ಮತ್ತು ೪ ಫೆಬ್ರವರಿ ೨೦೦೯ ರಂದು ನಡೆಯಲಿದೆ .
ನಮ್ಮ ರಾಜ್ಯದ /ಭವ್ಯ ಭಾರತದ ಒಂದು ಮಹತ್ ಕಾರ್ಯವಾಗಿದೆ .
ಇದರ ಸಂಪೂರ್ಣ ಯಶಸ್ಸಿಗೆ ಹಾರೈಸೋಣ ಬನ್ನಿ
ಸ್ವಾಮೀಜಿ ಯವರು
ಸ್ವಾಮಿ ವಿವೇಕಾನಂದ ,ಬಾಪೂಜಿ ಯವರ ಸಿದ್ಧಾಂತ ಗಳನ್ನೂ ಪಾಲಿಸಲು ಯುವ ಜನಾಂಗ ಕ್ಕೆ ಕರೆ ಕೊಟ್ಟಿರುತ್ತಾರೆ .
೧೦೨ ನೇ ವಯಸ್ಸಿನಲ್ಲಿ ಕನ್ನಡಕದ ಸಹಾಯವೀಲ್ಲದೆ ಓದಬಲ್ಲರು .
ಅವರ ಜಗಜ್ಯೋತಿ ಬಸವೇಶ್ವರ ಅವರ ಬಸವ ಸಿದ್ಧಾಂತ
ಶಿಸ್ತು ,ಸಂಯಮ ಮೂರ್ತಿ ಸ್ವಾಮೀಜಿ ಯವರನ್ನು ಗೌರವಿಸುವುದಲ್ಲದೆಅವರ ಮಾರ್ಗ ದರ್ಶನ ದಲ್ಲಿ ಮುಂದೆ ನಡೆಯೋಣ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ
ಜೈ ಹಿಂದ್ .