Wednesday, February 4, 2009

ಅಮ್ರತ ಮಹೋತ್ಸವ ಕ .ಸಾ.ಪ

ಭಯೋತ್ಪಾದನೆ ಅಳಿಸಿ ಸಮಗ್ರ ಭಾರತ ಉಳಿಸಿ ಅಭಿಯಾನ ಒಂದು ರಾಜಕೀಯ ಪಕ್ಷದ ಆಸ್ತಿ ಯಾಗಿಲ್ಲ .
ಇದು ದೇಶದ ಪ್ರತಿಯೊಬ್ಬ ಭಾರತೀಯನು ತನ್ನ ದೇಶ ಭಕ್ತಿ ಯನ್ನು ಪ್ರದರ್ಶಿಸುವ ಸಂಕೇತ ವಾಗಿದೆ .
ಇಲ್ಲಿ ರಾಷ್ಟ್ರಿಯ ಪಕ್ಷಗಳು ಜಗಳ ವಾಡುವಪ್ರಶ್ನೆ ಇಲ್ಲ .ಇದನ್ನು ಅರಿತ ಪಾಕಿಸ್ಥಾನ ಮತ್ತು ವಿರೋಧಿ ರಾಷ್ಟ್ರಗಳು
ತಮ್ಮ ಲಾಭಕ್ಕಾಗಿ ಉಪಯೋಗಿಸಿದರೆ ದೇಶದ ಪ್ರಜೆಗಳ ಒಗ್ಗಟ್ಟಿನಲ್ಲಿ ಬಿರುಕು ಕಾಣಿಸಬಹುದು .
ಮುಂಬರುವ ಲೋಕಸಭಾ ಚುನಾವಣೆಯ ದ್ರಷ್ಟಿ ಯಿಂದ ರಾಜಕೀಯ ಪಕ್ಷಗಳು ಮಾಡುವ ಇ ಚುನಾವಣೆ ಪ್ರಚಾರ ತುಂಬಾ ವಿಷಾದನೀಯ ಹಾಗೂ ಖಂಡನೀಯ .
ನಿನ್ನೆ ಮಾಧ್ಯಮ/ಪತ್ರಿಕೆ ನೇರ ಪ್ರಸಾರ ಮಾಡಿದ ಪ್ರತಿಭಟನೆ ಚಿತ್ರ ಗಳನ್ನೂ ನೋಡಿದ ಸಾರ್ವಜನಿಕರು
ಬೇಸರ ವ್ಯಕ್ತ ಪಡಿಸಿ ಒಗ್ಗಟ್ಟಿನಲ್ಲಿ ಬಲವಿದೆ .ಇದು ಯಾವ ಕಾರಣದಲ್ಲೂ ಸುಳ್ಳಾಗಬಾರದು .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ಕೇಂದ್ರ ಸರಕಾರವೂ ಘೋಷಣೆ ಮಾಡಿದ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ -ಮಾನ
ಇದನ್ನು ಕನ್ನಡ ಸಾಹಿತ್ಯ ಪರಿಷತ್ ನ ಅಮ್ರತ ಮಹೋತ್ಸವದ ಚರ್ಚೆಯ ಮುಖ್ಯ ವಿಷಯ ವಾಗಿ ಸಂಪೂರ್ಣ ಲಾಭ ಪಡೆಯಲು ಅಗತ್ಯ ಕಾರ್ಯ ಕ್ರಮ ರೂಪಿಸಿ ಅನುಷ್ಟಾನ ತರ ಬೇಕು .
ಸಿರಿ ಕನ್ನಡಂ ಗೆಲ್ಗೆ
ಜೈ ಭುವನೇಶ್ವರಿ .
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಕನ್ನಡವೇ ಸತ್ಯ .
ಜೈ ಹಿಂದ್

No comments: