Wednesday, April 29, 2009

ಶೇಕಡಾವಾರುಮತ ದಾನದಲ್ಲಿ ಹಿನ್ನಡೆ ಸಾಧ್ಯತೆ .

ಇಂದಿನ ಮತ ದಾನ ನಿಧಾನಗತಿ ಯಲ್ಲಿ ಸಾಗುತ್ತಿದೆ .ಕರ್ನಾಟಕ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸಂಸಾರ ಸಮೇತ ರಾಗಿ ಮತ ಪೆಟ್ಟಿಗೆ ಯಹತ್ತಿರ ಬಂದರೂ ಮತ ಚಲಾವಣೆ ಗುಪ್ತ ವಾಗಿರ ಬೇಕು ಎಂದು ಪ್ರಕಟಿಸಿದ್ದಾರೆ .
ಇದನ್ನು ಮಾಜಿ ಪ್ರಧಾನಿ ಉಲ್ಲಂಗ್ಹಿಸಿದ್ದನ್ನು ಮಾಧ್ಯಮದವರು ಚಿತ್ರೀಕರಣ ಮಾಡಿ ಜನತೆ ಗೆ ತೋರಿಸಿದ್ದಾರೆ.ಇದು ಅವರ ವ್ಯಕ್ತಿತ್ವ ವನ್ನು ಬಿಂಬಿಸಿದ್ದನ್ನು ನೋಡಿದಾಗ ಸಂಸದರಾಗಿ ಏನು ಮಾಡಿಯಾರು ? ಕಲ್ಪನೆ ದೇಶದ ಜನತೆಗೆ ಸಿಗುತ್ತದೆ .
ಶೇಕಡಾವರು ಮತ ದಾನ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿದೆ .ಇದಕ್ಕೆ ಕಾರಣ ಹಲವು
ನಾನು ಮತ ದಾನ ಮಾಡಿ ಬರುವಾಗ ಸಂದರ್ಶಿಸಿದಾಗ
೧ ಯಾರಿಗೆ ವೋಟು ಹಾಕಿದ್ದಾರೆ ಏನಂತೆ ಎಲ್ಲರೂ ಮಾಡು ವುದು ಒಂದೇ ಅವರ ಸ್ವಾರ್ಥ ವೋಟು ಬೇಡ ,ನಮ್ಮ ಉದ್ಯೋಗ ನೋಡುವ ಬನ್ನಿ ಹೀಗಾಗಿ ಅಯೋಗ್ಯ ವ್ಯಕ್ತಿ ಗೆ ಪರೋಕ್ಷ ವಾಗಿ ಸಹಾಯ ವಾಗುವುದು.
ಸರಕಾರಿ ರಜಾ ಘೋಷಿಸಿದ್ದರೂ ಟಿವಿ ,ಚಲನ ಚಿತ್ರ ನೋಡುವುದು ಮಾಡುತ್ತಿದ್ದಾರೆ .
೨ ವಿಧ್ಯಾವಂತರು,ನಿವ್ರತ್ತ ಸರಕಾರಿ ಅಧಿಕಾರಿ ಗಳು ಮತ್ತು ಪ್ರಜಾ ಪ್ರಭುತ್ವದ ಕಳಕಳಿ ಇರುವವರು ತಮ್ಮ ಹೆಸರು ಪಟ್ಟಿ ಯಲ್ಲಿ ಬಿಟ್ಟು ಹೋಗಿರುವುದು ,ಆಇಡೀ ಕಾರ್ಡ್ ಒದಗಿಸಲು ಸಾಧ್ಯವಾಗದೆ ಇರುವುದು ಇತ್ಯಾದಿ ಗಮನಿಸಿದರೆ ಯೋಗ್ಯ ವ್ಯಕ್ತಿ ಗೆ ಅನ್ಯಾಯ ವಾಗುವುದರಲ್ಲಿ ಸಂಶಯ ವಿಲ್ಲ .
ಇದು ನಮ್ಮ ದೇಶದ ಈಗಿನ ಸ್ಥಿತಿ .ಇದನ್ನು ಸರಿ ಪಡಿಸಲು ಯುವಜನತೆಗೆ ಕರೆ ನೀಡಲಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್

Monday, April 27, 2009

ಮರೆಯದೇಗುರುವಾರ ೩೦ ರಂದು ಮತ ದಾನ ಮಾಡಿ

ರಾಜ್ಯದ ಜನತೆ ಚುನಾವಣೆಯನ್ನು ಭಯಿಷ್ಕರಿಸುವುದು ಸರಿಯಲ್ಲ .ಇಲ್ಲವೇ ದ್ವಂದ್ವ ದಲ್ಲಿ ಸಿಲುಕಿ ತಪ್ಪು ಚಿಹ್ನೆ ಆರಿಸಿ ಮತ ದಾನ ಮಾಡುವುದರಿಂದ ಆಯೋಗ್ಯ ಅಭ್ಯರ್ತಿ ಗೆ ಬೆಂಬಲ ನೀಡಿ ಅಪ್ರತ್ಯಕ್ಷ ವಾಗಿ ಧಕ್ಷ ಸಂಸದ ನಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ .ಯೋಚಿಸಿ ದೇಶಕ್ಕೆ ಸುಭದ್ರ ,ಸರ್ವತೋಮುಖ ಅಭಿವ್ರದ್ಧಿ ಗಾಗಿ ಮತ್ತು ನಾಗರಿಕರೀಕರಿಗೆ ಮೂಲಭೂತ ಶೌಖರ್ಯಗಳಾದ ನೀರು,ವಿಧ್ಯುತ್ತ್ ,ರಸ್ತೆ ,ಆಸ್ಪತ್ರೆ ಮತ್ತು ವಿಧ್ಯಾಭ್ಯಾಸ ಒದಗಿಸ ಬೇಕು .ಇದರ ಬಗ್ಗೆ ೫ ವರ್ಷ ಶ್ರಮಿಸುವ
ಸಂಸದ ನಿಧಿ ಯನ್ನು ಸದ್ಬಳಕೆ ಮಾಡ ಬೇಕು .ಸಿಕ್ಕಿರುವ ಸಮಯಾವಕಾಶ ಗೈರು ಹಾಜರಿ ಪ್ರತಿ ಭಟನೆ ಯಲ್ಲಿ ಕಳೆಯಬಾರದು
ಸರಿಯಾದ ವ್ಯಕ್ತಿ .
ಪಕ್ಷ ಆರಿಸಿ

ಚೌ....ಚೌ....'ಬಾತ್': ದೀಪದ ಕೆಳಗಿನ ಕತ್ತಲ ಕರಾಳತೆ!!

ಚೌ....ಚೌ....'ಬಾತ್': ದೀಪದ ಕೆಳಗಿನ ಕತ್ತಲ ಕರಾಳತೆ!!

ಶೂ ಎಸೆತ ಪ್ರಕರಣ ಖಂಡಿಸ ಬೇಕು ನಿಲ್ಲಿಸ ಬೇಕು

ಅಮೆರಿಕ ಮಾಜಿ ಅಧ್ಯಕ್ಷ ಜಾರ್ಜ ಬ್ಹುಶ್ರ ರ ಮೇಲೆ ಶೂ ಎಷೆತ ದಿಂದ ಪ್ರಾರಂಭ ವಾಗಿ ದಿನೇ ದಿನೇ ಪ್ರಕರಣ ಗಳು ಹೆಚ್ಚುತ್ತಾಇವೆ .ಯುವಜನತೆ ಅಭಿವ್ರದ್ಧಿ ಮತ್ತು ಭವಿಷ್ಯದ ಬಗ್ಗೆ ಜಾಗರಿಕರಗಿರುವುದರಿಂದ ರಾಜಕಾರಣಿಗಳ ಪೊಳ್ಳು ಆಶ್ವಾಸನೆ ಗೆ ಬೇಸರ ಬಂದು ತಮ್ಮ ವಿರೋಧ ಪ್ರಕಟಿಸುವ ರೀತಿ ಇದಾಗಿದೆ .
ಆದರೆ ಇದನ್ನು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಖಂಡಿಸುತ್ತಿದೆ .ಬೇರೆ ಉಪಾಯ ಹುಡುಕಿ ಸ್ವಾರ್ಥ ರಾಜಕಾರಣಿ ಗಳಿಗೆ ಪಾಟ ಕಲಿಸ ಬೇಕು .
ಕುಂದಾಪುರ ನಾಗೇಶ್ ಪೈ

Sunday, April 26, 2009

ಮಹಾ ಚುನಾವಣೆ -ಸ್ವಿಸ್ಸ್ ಬ್ಯಾಂಕ್ ಕಪ್ಪು ಹಣ

ಸ್ವಿಸ್ಸ್ ಬ್ಯಾಂಕ್ ನಲ್ಲಿ ೫೦ ಮಂದಿ ಭಾರತೀಯರ ಠೇವಣಿ ವಿಚಾರ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಿಸಿ ಬಿಸಿ ವಿಚಾರ ದೇಶದಾದ್ಯಂತ ಚರ್ಚೆಯ ಹಾಗೂ ಚುನಾವಣಾಅಸ್ತ್ರ ವನ್ನಾಗಿ ರಾಜಕೀಯ ಪಕ್ಷ ಗಳು ಬಳಸಿ ಕೊಂಡಿವೆ .
ಕಪ್ಪು ಹಣ ವಾಪಸು ತರ ಬೇಕು ಎನ್ನುವುದು ಬಿ ಜೆ ಪಿ ಪ್ರಧಾನಿ ಅಭ್ಯರ್ತಿ ಅಧ್ವಾನಿಯವರ ಅಭಿಮತ .
ಮನಮೋಹನ್ ಸಿಂಗ್ ಈಗ ೧೦೦ ದಿನಗಳಲ್ಲಿ ತರಿಸುವುದಾಗಿ ಹೇಳುತ್ತಿದ್ದಾರೆ .
೧೪೦೦ ಠೇವಣಿ ದಾರರ ಪೈಕಿ ೬೦೦ ಮಂದಿ ಮಾತ್ರ ನಮ್ಮವರು .ಇ ಹಿನ್ನಲೆ ಯಲ್ಲಿ ಈಗ ಇದು ಚುನಾವಣೆ ಸಮಯದಲ್ಲಿ
ಬಂದಿರುವುದರಿಂದ ಸಾರ್ವಜನಿಕ ಚರ್ಚೆ ಯ ವಿಷಯ ವಾಗಿದೆ .ಇದು ನಿಜವೋ ಸುಳ್ಳೋ ಮುಖ್ಯ ವಲ್ಲ .
ಆದರೆ ೧೫ ನೇ ಲೋಕ ಸಭೆ ಜೂನ್ ೨ ರಂದು ಘಟನೆ ಆದಬಳಿಕ ಮುಖ್ಯ ವಿಷಯ ವಾಗುವುದೇ ಅಥವಾ ಮುಚ್ಹಿ ಹೋಗುವುದೇ ಕಾಲವೇ ನಿರ್ಧರಿಸ ಬೇಕು .ಬರುವ ಆಡಳಿತ ಪಕ್ಷಕ್ಕೆ ಸಂಸದ್ ನಲ್ಲಿ ತೀರ್ಮಾನ ತೆಗೆದು ಕೊಳ್ಳುವ ಸಾಧ್ಯತೆ ಇದೆಯೇ ಎಂದು ಭಾರತದ ಜನತೆ ಕಾತರ ದಿಂದ ಇದೆ .
ಚುನಾವಣೆ ಮುಗಿದ ಮೇಲೆ ಯಾವ ಹಂತ ತಲುಪ ಬಹುದು .
ಬ್ಯಾಂಕ್ ನಲ್ಲಿ ಹಣ ಇಟ್ಟವರು ಯಾರು ? ಎಂಬ ಕುತೂಹಲ ಕಾಡುತ್ತಿದೆ .
ಗೋಪ್ಯ ವಿಷಯ ವಾಗಿರುವುದರಿಂದ ಪ್ರಶ್ನೆ ಪ್ರಶ್ನೆ ಯಾಗಿ ಉಳಿಯ ಬಹುದು
ಇ ಕಪ್ಪು ಹಣ ವನ್ನು .
ದೇಶದ ಅಭಿವ್ರದ್ಧಿ ಗಾಗಿ ಬಳಸಿದರೆ ಉತ್ತಮ .
ಭವ್ಯ ಭಾರತದ ನವ ನಿರ್ಮಾಣ ವಾಗಲಿ ಎಂದು ಹಾರೈಸುವ
ನಾಗೇಶ್ ಪೈ
ಜೈ ಹಿಂದ್

Saturday, April 25, 2009

ಮತ ದಾನದಲ್ಲಿ ಹಿಂಜರಿತ -ಮರು ಕಳಿಸ ಬಾರದು.

ದಿನಾಂಕ ೨೩ ರಂದು ನಡೆದ ಮತ ದಾನ ವಿಶ್ಲೇಷಣೆ ಮತ್ತು ಶೇಕಡಾ ವಾರು ಸಂಖ್ಯೆ ಗಮನಿಸಿದಾಗ ಹಿಂದಿನ ೨೦೦೪ ರ ಲೋಕ ಸಭಾ ಚುನಾವಣೆ ಯಲ್ಲಿ ನಗರ ಪ್ರದೇಶ ಮುಖ್ಯವಾಗಿ ರಾಜಧಾನಿ ಬೆಂಗಳೂರಿ ನಲ್ಲಿ ಹಿಂಜರಿತ ಕಾಣುತ್ತಿರುವುದು ತುಂಬಾ ವಿಷಾದನೀಯ.ಇದು ಮುಂದಿನ ಗುರುವಾರ ದಿನಾಂಕ ೩೦ ರಂದು ಮರುಕಳಿಸ ಬಾರದು.ಇ ಬಗ್ಗೆ ಚುನಾವಣೆ ಆಯೋಗ ಸಂಬಂಧ ಪಟ್ಟ ಅಧಿಕಾರಿಗಳು /ರಾಜ್ಯ ಸರಕಾರ ಅಧ್ಯಯನ ಮಾಡಿ ಕ್ರಮ ತೆಗೆದು ಕೊಳ್ಳ ಬೇಕು .
ಪ್ರಜಾ ಪ್ರಭುತ್ವ ದಲ್ಲಿ ಮತ ದಾನ ಮಹತ್ವ ಪಡೆದಿರುವಾಗ ಮತದಾನ ಭಾಹಿಷ್ಕರಿಸುವುದು ಅಥವಾ ಶೇಕಡಾವಾರು ಇಳಿತ ದೇಶದ ಗಂಭೀರ ವಾತಾವರಣ ವಾಗಿದೆ .ನಾಗರೀಕರಲ್ಲಿ ಅಭ್ಯರ್ತಿ ಗಳ ಮೇಲೆ ನಂಬಿಕೆ /ವಿಶ್ವಾಸ ವಿಲ್ಲವೇ
ಮತ ಯಂತ್ರ ಗಳು ಕೈ ಕೊಟ್ಟಿವೆಯೇ.
ಭಾರತೀಯ ಎಲ್ಲಾ ನಾಗರೀಕರೂ ತಮ್ಮ ಹಕ್ಕನ್ನು ಚಲಾಯಿಸ ಬೇಕು ಮತ್ತು ಉತ್ತಮ ಅಭ್ಯರ್ತಿ ಆಯ್ಕೆ ಮಾಡ ಬೇಕು ೫ ವರ್ಷ ಸ್ಥಿರ ಸರಕಾರ ಕೊಡಬೇಕು .ದೇಶದ ಮುಂದೆ ಇ ರುವ ಬೆಲೆ ಏರಿಕೆ ,ಭಯೋತ್ಪಾದನೆ /ನಕ್ಸಲರ ಹಾವಳಿ ,ಪ್ರಜೆ ಗಳ ರಕ್ಷಣೆ ಇತ್ಯಾದಿ ಸಮಸ್ಯೆ ಗಳನ್ನುಎದುರಿಸಲು ಯೋಗ್ಯ /ಧಕ್ಷ ಸಂಸದರ ಅವಶ್ಯಕತೆ ಈಗ ನಮಗಿದೆ .
ಕಾಲ ಇನ್ನೂಕಾಲ ಮಿಂಚಿ ಹೋಗಿಲ್ಲಾ.ದಿನಾಂಕ ೩೦ ರ ಮತ ದಾನ ದಲ್ಲಿ ಪೂರ್ಣಪ್ರಮಾಣ ದಲ್ಲಿ ಭಾಗವಹಿಸಿ ಬಹು ಮತ ದಲ್ಲಿ ಆರಿಸಿ ಅಭ್ಯರ್ತಿ ಗಳನ್ನು ಸುಭದ್ರ ಸರಕಾರಕ್ಕೆ ನಾಂದಿ ಹಾಡಿ.ಭವ್ಯ ಭಾರತ ನವ ನಿರ್ಮಾಣ ಮಾಡಿ
ರಾಜ್ಯ ಚುನಾವಣಾ ಆಯೋಗ ಸಹಕರಿಸುವಾಗ ಜನತೆ ಸದುಪಯೋಗ ಮಾಡಿಕೊಳ್ಳ ಬೇಕು . .
ವಂದನೆ ಗಳು .
ಕುಂದಾಪುರ ನಾಗೇಶ್ ಪೈ

Thursday, April 23, 2009

೨ ಮಹಾನ್ ವ್ಯಕ್ತಿ ಗಳ ಜನ್ಮ ದಿನಾಚರಣೆ

೨ ಮಹಾನ್ ವ್ಯಕ್ತಿ ಗಳ ಜನ್ಮ ದಿನಾಚರಣೆ
೧ ಚಲನ ಚಿತ್ರ ರಂಗ ದ ವರ ನಟ ನಟ ಸಾರ್ವಭೌಮ ಡಾ ರಾಜ್ ಕುಮಾರ ದಾದಾ ಸಾಹೇಬ್ ಫಾಲ್ಕೆ ಪುರಸ್ಕ್ರಥ ರ ೮೧ ನೇಜನ್ಮ ದಿನ
೨ ಭಾರತದ ಕ್ರಿಕೆಟ್ ರಂಗದ ಮಾನ್ರಿಕ ಸಚಿನ್ ತೆಂಡೂಲ್ಕರ್ ರ ೩೮ ನೇ ಜನ್ಮ ದಿನಾಚರಣೆ ರಾಜ್ಯ /ರಾಷ್ಟ್ರ ದಾದ್ಯಂತ ಅಭಿಮಾನಿಗಳು ಆಚರಿಸುತ್ತಾರೆ .
ಇ ಅದ್ದೂರಿ ಸಮಾರಂಭ ದಲ್ಲಿ
ಭವ್ಯ ಭಾರತದ ನವ ನಿರ್ಮಾಣ
೨ ನಮ್ಮ ಸುಂದರ ಮೈಸೂರು ಮತ್ತು
ಚಂದನ ವಾಹಿನಿ ಸಂಪರ್ಕ ಸೇತು
ಸಂತೋಷ ಸಮಾರಂಭ ದಲ್ಲಿ ಭಾಗವಹಿಸಿ ಶುಭ ಹಾರೈಸುತ್ತದೆ.
ಕುಂದಾಪುರ ನಾಗೇಶ್ ಪೈ .

Friday, April 17, 2009

ದಯವಿಟ್ಟು ತಪ್ಪದೇ ಮತ ದಾನದಲ್ಲಿ ಭಾಗವಹಿಸಿ .

ಸಾರ್ವತ್ರಿಕ ಚುನಾವಣೆ -೨೦೦೯
ಮತದಾನ ದಲ್ಲಿ ಎಲ್ಲರೂ ಭಾಗವಹಿಸಿರಿ ಮತ್ತು ನಿಮ್ಮ ಅಧಿಕಾರ ಪ್ರದರ್ಶಿಸಿ -ಅಭಿಯಾನ .
ಲೋಕ ಸಭಾ ಚುನಾವಣೆ ೫ ವರ್ಷಕ್ಕೆ ಒಂದು ಸಲ ಬರುವುದರಿಂದ ಮತದಾನ ಬಹಳ ಮಹತ್ವ ಪಡೆದಿದೆ .ನಿಮ್ಮ ಅಧಿಕಾರ ನೀವೂ ಮರೆಯ ಬಾರದು.ಮರೆತರೆ ಪುನಃ ೫ ವರ್ಷ ಕಾಯುವ ಪ್ರಸಂಗ ಬರ ಬಹುದು .
ನಿಮ್ಮ ನಿಮ್ಮ ಕ್ಷೇತ್ರ ದ ಸರ್ವತೋಮುಖ ಬೆಳವಣಿಗೆಗೆ ನೀವು ಕಾರಣ ರಾಗುವಿರಿ.
ಸಮರ್ಥ ನಾಯಕನ ಅವಶ್ಯಕತೆ ನಮಗಿದೆ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ರಾಜ್ಯ ಮತ್ತು ರಾಷ್ಟ್ರ ಕ್ಕೆ ಜನ ಬೆಂಬಲ ವಿಲ್ಲದೆ ಏನೂ ಅಭಿವ್ರದ್ಧಿ ಯಗಲಾರದು .
ದಯವಿಟ್ಟು ಚುನಾವಣೆಯಲ್ಲಿ ಭಾಗವಹಿಸಿ ನಿಮ್ಮ ಮತವನ್ನು ಯೋಗ್ಯ /ಧಕ್ಷ ಅಭ್ಯರ್ಥಿಗೆ ಹಾಕಿ ಸಂಸದ ರಾಗಿ ಗೆಲ್ಲಿಸಿರಿ .
ಜೈ ಹಿಂದ್ .
ನಾಗೇಶ್ ಪೈ ಕುಂದಾಪುರ .

Tuesday, April 14, 2009

ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಜನ್ಮ ದಿನ .

ಭಾರತ ಸಂವಿಧಾನ ಶಿಲ್ಪಿ ಬಿ ಅರ್ ಅಂಬೇಡ್ಕರ್ ಅವರ ೧೧೮ ನೇ ಜನ್ಮ ದಿನಾಚರಣೆ ಯನ್ನು ದೇಶದಾದ್ಯಂತ ಅದ್ಧೂರಿ ಯಾಗಿ ಆಚರಿಸಲಾಯಿತು .
ಸಾರ್ವತ್ರಿಕ ಚುನಾವಣೆ ಸಮಯ ದಲ್ಲಿ ಇ ದಿನ ಬಂದಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ .
ಅಂಬೇಡ್ಕರ್ ರ ಪುತ್ತಳಿ ಗೆ ಹಾರ ಹಾಕಿ ಸನ್ಮಾನಿಸಲು ಜನತೆಗೆ ಹರ ಸಾಹಸ ಪಡ ಬೇಕಾಯಿತು .
ಸಾಲು ಸಾಲಾಗಿ ಬಂದು ತಮ್ಮ ಗೌರವ ಸಲ್ಲಿಸಿದರು.
ಇಲ್ಲಿ ವಿಶೇಷ ವೇನೆಂದರೆ .ಡಾ ಮನ ಮೋಹನ್ ಸಿಂಗ್ ಮತ್ತು ಎಲ್ ಕೆ ಅಧ್ವಾನಿ ಒಂದೇ ವೇದಿಕೆ ಯನ್ನು ಹಂಚಿ ಕೊಂಡು
ಚುನಾವಣಾ ಎದುರಾಳಿ ಗಳಾಗಿ ವರ್ತಿಸಿರುವುದು ಜನತೆ ಯನ್ನು ಬೇಸರಿಸಿದೆ .
ಅಂಬೇಡ್ಕರ ವ್ಯಕ್ತಿತ್ವ ಮತ್ತು ಸಾಧನೆ ಗುಣ ಗಾನ ಮಾಡಿ ಜನ್ಮ ದಿನ ಆಚರಣೆ ಒಂದು ಅವರ ಸ್ಮರಣೆಯ ಮಾರ್ಗ ವಾಗಿದೆ .
೧ ಭವ್ಯ ಭಾರತದ ನವ ನಿರ್ಮಾಣ
೨ ನಮ್ಮ ಸುಂದರ ಮೈಸೂರು
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ ವು ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿ .
ಅವರ ಸಿದ್ಧಾಂತ ಮತ್ತು ಮಾರ್ಗ ದರ್ಶನ ದಲ್ಲಿ ನಡೆಯುವ ಪ್ರಯತ್ನ ಮಾಡುತ್ತಿದೆ .
ಜನ್ಮ ದಿನ ಶುಭ ಹಾರೈಸುವ

ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .

Monday, April 13, 2009

ಮತ ಚಲಾಯಿಸಿ ಧಕ್ಷ ಅಭ್ಯರ್ತಿ ಆರಿಸಿ ಗೆಲ್ಲಿಸಿರಿ .

ಮಹಾ ಚುನಾವಣೆ ಸಮೀಪಿಸುತ್ತಿದೆ .ರಾಜಕೀಯ ಪಕ್ಷ ಗಳು ಪ್ರಚಾರ ಮತ್ತು ಚುನಾವಣೆ ಪ್ರಣಾಳಿಕೆ ಬಿಡುಗಡೆ ತರಾತುರಿ ಯಲ್ಲಿ
ಸಭೆ ಗಳಲ್ಲಿ ಏನು ಮಾತಾಡು ತ್ತಾರೆ ಎಂದು ಅರಿ ವಾಗದೆ ಕಡಿ ,ಬಡಿ ಅಂತಹ ಅಸಂವಿಧಾನ ಶಬ್ದ ಉಪಯೋಗಿಸುವುದು ಅಲ್ಲದೆ ಪಾದರಕ್ಷೆ ಎಸೆಯುವುದು ನಾಗರಿಕ ತನವಲ್ಲಾ .ಪೋಲಿಸ್ ಮಧ್ಯ ಪ್ರವೇಶ ಮಾಡಿ ಶಾಂತಿ ಕದಡುವುದರಿಂದ ಪ್ರಜಾ ಪ್ರಭುತ್ವ ಕ್ಕೆ ಧಕ್ಕೆ ಯಾಗುತ್ತಿದೆ .
ಪ್ರಜ್ಞಾವಂತ ನಾಗರೀಕರು ತಮ್ಮ ಮತ ಚಲಾಯಿಸಿ ತಮ್ಮ ಅಧಿಕಾರ ಏನು ಎಂಬುದನ್ನು ತೋರಿಸ ಬೇಕು .
ಆದರೆ ಮೊದಲು ದಕ್ಷ ಅಭ್ಯರ್ತಿ ಯಾರು ಸರಿಯಾಗಿ ನಿರ್ಧಾರಕ್ಕೆ ಬರ ಬೇಕು .ಕ್ಷೇತ್ರದ ಕಾಳಜಿ ಇದೆಯೇ ಅಭಿವ್ರದ್ಧಿ ಮಾಡ ಬಲ್ಲರೆ ಅಥವಾ ಸಂಸದರ ಹಣ ದುರ್ಬಳಕೆ ಆಗಬಹುದೇ ?
ಸರಿಯಾದ ಪಕ್ಷ ವನ್ನು ಬಲ ಪಡಿಸಿ ಸುಭದ್ರ ಸರ ಕಾರ ವಾಗ ಬಹುದೇ ಮತ್ತು ಪ್ರಣಾಳಿಕೆ ಗಳು ಕಾರ್ಯ ರೂಪಕ್ಕೆ ಬಾರದೇ ಪುಸ್ತಕ ವಾಗಿ ಓದಲು ಮಾತ್ರ ಸುಖ ಕೊಡ ಬಹುದು .ಇದು ವೋಟು ಬ್ಯಾಂಕ್ ರಾಜ ಕಾರಣ ವಾಗ ಬಾರದು.
ಜನತೆ ಎಚ್ಚರ ವಹಿಸಿ ಆಮಿಷ ಕ್ಕೆ ಒಳಗಾಗದೆ ಮತ ಚಲಾಯಿಸಿದಾಗ ಭವ್ಯ ಭಾರತದ ನವ ನಿರ್ಮಾಣ ವಾಗುತ್ತದೆ .
ದಯವಿಟ್ಟು ಮತ ಚಲಾಯಿಸಿ ಯೋಗ್ಯ ನಿಸ್ವಾರ್ಥಿ ಸಂಸದ ರನ್ನು ಗೆಲ್ಲಿಸಿ .
ಇದುವೇ ಪ್ರಜಾ ಪ್ರಭುತ್ವದ ಮೂಲ ಮಂತ್ರ .
ಜೈ ಹಿಂದ್
ನಾಗೇಶ್ ಪೈ ಕುಂದಾಪುರ.

Saturday, April 11, 2009

ವರ ನಟ ನಟ ಸಾರ್ವಭೌಮ ಡಾರಾಜ್ ಕುಮಾರ್ ಪುಣ್ಯ ತಿಥಿ

ಇಂದು ವರ ನಟ ನಟ ಸಾರ್ವಬೌಮ ಡಾ ರಾಜ್ ಕುಮಾರ್ ಅವರ ಪುಣ್ಯ ತಿಥಿ .
ಅಭಿ ಮಾನಿ ದೇವರುಗಳೇ ,
ಎಂದು ಸಂಭೋಧಿಸುವ ಇ ಮಹಾನ್ ನಾಯಕ ನಟ ಇಂದು ನಮ್ಮ ಜೊತೆ ಜೀವಂತ ವಾಗಿ ಇಲ್ಲದೆ ಇದ್ದರೂ ಎಲ್ಲರ ಮನಸ್ಸಿನಲ್ಲಿ
ಅಬಾಲ ವ್ರದ್ಧರ ಆಕರ್ಷಣೆಯ ನಟ ರಾಗಿದ್ದಾರೆ .
ಇಲ್ಲಿ ಅವರ ಕೀರ್ತಿ ಹೆಚ್ಚಲು ಕಾರಣ ಸದಾ ನಗುತ್ತ ಸೌಮ್ಯ ಸ್ವಭಾವ .ಸಾಮಾನ್ಯ ವಾಗಿ ಇವರಿಗೆ ವೈರಿ ಇಲ್ಲ ಎನ್ನ ಬಹುದು .
ರಾಜಕೀಯ ದಲ್ಲಿ ಸೇರದೆ ಮತ್ತು ಪಕ್ಷ ಗಳ ಬಗ್ಗೆ ಆಸಕ್ತಿ ತೋರಿಸದೆ ಹಾಡುಗಾರಿಕೆ ,ನ್ರತ್ಯ ಮತ್ತು ನಟನೆ ಇತ್ಯಾದಿ ಕರಗತ ಮಾಡಿ ಕನ್ನಡ ಕ್ಕಾಗಿ ಜೀವನ ಪರ್ಯಂತ ದುಡಿದು ಸಾವನ್ನಪ್ಪಿದ್ದಾರೆ .
೧ ನಮ್ಮ ಸುಂದರ ಮೈಸೂರು
೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೩ ಚಂದನ ವಾಹಿನಿ ಸಂಪರ್ಕ ಸೇತು
ಆರ್ಕುಟ್ ಸಮುದಾಯ [ಕಮ್ಯುನಿಟಿ ] ಬಳಗ
ಶ್ರದ್ಧಾಂಜಲಿ ಅರ್ಪಿಸುತ್ತಿದೆ .
ಕರ್ನಾಟಕ ಜನತೆ ಮತ್ತು ಸರಕಾರ ಅವರನ್ನು ಸ್ಮರಿಸಿ ಜೀವಂತ ವಾಗಿ ಉಳಿಸಲಿ ಎಂದು ಹಾರೈಸುವ
ನಾಗೇಶ್ ಪೈ ಕುಂದಾಪುರ.
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.

Friday, April 10, 2009

ಕನ್ನಡ ಭಾಷೆ ಬಳಸಿ ಮತ್ತು ಅಭಿವ್ರದ್ಧಿ ಪಡಿಸಿ

ಭಾಷೆಯ ಅಭಿವ್ರದ್ಧಿ ಹೇಗೆ ಸಾಧ್ಯ ?
ಇದು ಚಂದನ ವಾಹಿನಿ ಸಂಪರ್ಕ ಸೇತು ಕರ್ನಾಟಕ ಜನತೆ ಯ ಮುಂದಿಟ್ಟಿರುವ ಪ್ರಮುಖ ಪ್ರಶ್ನೆ ಮತ್ತು ಸಮಾಧಾನ /ಸಲಹೆ ಕೂಡ ನಮ್ಮಲ್ಲಿ ಇದೆ .
೧ ಚಲನ ಚಿತ್ರ ಇದು ಬಹು ಮುಖ್ಯ ವಾಗಿದೆ .ಜನ ಸಾಮಾನ್ಯರಿಗೆ ಇಲ್ಲಿ ಹೆಚ್ಚು ಆಸಕ್ತಿ ಇರುವುದರಿಂದ ನಾವು ಮತ್ತು ಸರಕಾರ ಪ್ರೋತ್ಸಾಹಿಸಿದರೆ ಭಾಷೆ ಅಭಿವ್ರದ್ಧಿ ಆಗುತ್ತದೆ .
ವಾರ್ತಾ ಪತ್ರಿಕೆ ಗಳನ್ನೂ ದಿನ ನಿತ್ಯವೂ ಓದುವ ಹವ್ಯಾಸ ಇಟ್ಟು ಕೊಳ್ಳ ಬೇಕು .
ಟಿವಿ ಮಾಧ್ಯಮ ಪ್ರಚಲಿತ ವಿದ್ಯ ಮಾನಗಳನ್ನು ಮನೆ ಮನೆಗೂ ತಲುಪಿಸುವ ಸಾಧನ .ಇದನ್ನು ನೋಡುವ ವ್ಯವಸ್ಥೆ ಹಳ್ಳಿ ಗೂ ತಲುಪಿಸಿ ರೈತರಿಗೆ ಸಹಾಯ ಮಾಡ ಬೇಕು .
ಸಂಗೀತ /ನಾಟಕ ಯಕ್ಷಗಾನ ಇತ್ಯಾದಿ ಜನರ ಸಂಪರ್ಕ ದಿಂದ ಭಾಷೆ ಯ ಮತ್ತು ಕಲೆಯ ಅಭಿವ್ರದ್ಧಿ ಸಾಧ್ಯ.
ಮನೆ ಮತ್ತು ಕುಟುಂಬ ಹಾಗೂ ಶಾಲೆ ಕಾಲೇಜ್ ಗಳಲ್ಲಿ ಮಾಧ್ಯಮ /ಭಾಷೆ ಪ್ರಮುಖ ಸ್ಥಾನ ವಹಿಸಿದೆ .
ಪ್ರವಾಸೋಧ್ಯಮ ಇಲ್ಲಿ ಕೂಡ ಭಾಷೆ ಯ ಮುಖಾಂತರ ಒಬ್ಬರನ್ನೋಬರು ಸಂಪರ್ಕಿಸ ಬಹುದು .
ಕೊನೆಯ ದಾಗಿ ಆಡಳಿತ ನಡೆಸಲು ಭಾಷೆಯ ಅಗತ್ಯ ವಿದೆ .
ಕೇಂದ್ರ ಸರಕಾರ ಕನ್ನಡ ಕ್ಕೆ ಶಾಸ್ತ್ರಿಯ ಸ್ಥಾನ ಮತ್ತು ಸನ್ಮಾನ ಕೊಟ್ಟಿರುವ ಸಂಧರ್ಬ ದಲ್ಲಿ ಹೆಚ್ಚು ಹೆಚ್ಚು ಕನ್ನಡ ಭಾಷೆ ಯನ್ನು ಬಳಸಿ ಕನ್ನಡ ಪ್ರೋತ್ಸಾಹಿಸಿ .
ಚಂದನ ವಾಹಿನಿ ಸಂಪರ್ಕ ಸೇತು ಬಳಗ ಪ್ರಕಟಣೆ
ನಾಗೇಶ್ ಪೈ ಕುಂದಾಪುರ
ಧನ್ಯವಾದಗಳು .
ಅಂತರ್ಜಾಲದಲ್ಲಿ ಕನ್ನಡ ಬಳಸಿರಿ .

Wednesday, April 8, 2009

ಚಂದನ ವಾಹಿನಿ ಕನ್ನಡ 'ಸಂಪರ್ಕ ಸೇತು '

'ಚಂದನ ವಾಹಿನಿ ' ಸಂಪರ್ಕ ಸೇತು
.
ಕನ್ನಡ ಭಾಷೆಯ ಸರ್ವತೋಮುಖ ಬೆಳವಣಿಗೆ ಗಾಗಿ ಕನ್ನಡಿಗರನ್ನು ಒಂದುಗೂಡಿಸುವ ಚಿಕ್ಕ ಪ್ರಯತ್ನ .
ಮೈಸೂರು ಆಕಾಶವಾಣಿ ಮತ್ತು ಬೆಂಗಳೂರು ದೂರ ದರ್ಶನ ತನ್ನದೇ ಆದ ಇತಿಹಾಸ ಹೊಂದಿದೆ .
ಇದು ಒಂದು ಆರ್ಕುಟ್ ಸಮುದಾಯ [ಕಮ್ಯುನಿಟಿ ] ಆಗಿದೆ .ಇ ಟಿವಿ ಚಾನೆಲ್ ವೀಕ್ಷಿಸುವ ಅಭಿಮಾನಿಗಳ ಸಮೂಹ .
ರಾಜ್ಯದ ವಿಕಾಸಕ್ಕಾಗಿ ಅರೋಗ್ಯ ರಕ್ಷಣೆ ,ಕಾನೂನು ಸಲಹೆ ,ಸಮಾಚಾರ ಪ್ರವಾಸಿ ಕೇಂದ್ರಗಳ ಮಾಹಿತಿ ಇತ್ಯಾದಿ ವಿಷಯ ಗಳನ್ನೂ ಜನತೆ ಯ ಮನೆ ಮನೆಗೂ ತಲುಪಿಸುವ ಮಾಧ್ಯಮವಾಗಿದೆ .
ಇದನ್ನು ಸದುಪಯೋಗಿಸುವ ಪಡಿಸುವ ಜವಾಬ್ದಾರಿ ನಮ್ಮದು .
ತಮ್ಮ ಸಲಹೆ /ಸೂಚನೆ ಗಳನ್ನೂ ಸ್ವಾಗತಿಸುತ್ತೇವೆ .

Tuesday, April 7, 2009

ಭಗವಾನ್ ಮಹಾವೀರ್ ಜಯಂತಿಯ ಶುಭಾಶಯಗಳು

ಇಂದು ಭಗವಾನ್ ಮಹಾವೀರರ ಜಯಂತಿ ವಿಶ್ವದಾದ್ಯಂತ ಜೈನ್ ಸಮುದಾಯ ಬಹೂ ಅದ್ದೂರಿಯಾಗಿ ಆಚರಿಸುತ್ತಾರೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆjain ಸಮಾಜ ಭಾಂದವರಿಗೆ ಹಾರ್ದಿಕ ಶುಭಾಶಯಗಳು
೨ ವಿದೇಶಿ ನೆಲ [ನ್ಯೂಜಿಲ್ಯಾಂಡ್ ] ನಲ್ಲಿ ೪೦ ವರ್ಷಗಳ ನಂತರ ಟೀಂ ಇಂಡಿಯಾ ದ ಕ್ರಿಕೆಟ್ ನ ವಿಜಯ ದುಂದುಭಿ.
ಧೋನಿ ಬಳಗದ ಇ ಸಾಧನೆ ವಿಶ್ವದ ಕ್ರಿಕೆಟ್ ಪ್ರಿಯರಿಂದ ಬಹು ಮೆಚ್ಚಿಗೆ ಪಡೆದಿದೆ .
ನಾವೆಲ್ಲರೂ ಸೇರಿ ವಿಜಯೋತ್ಸವ ಆಚರಿಸೋಣ .
ಇಗ ಮಕ್ಕಳಿಗೆ ಬೇಸಿಗೆಯ ರಜಾ ದಿನಗಳು ಪ್ರಾರಂಬವಾಗಲಿವೆ.
ಪ್ರವಾಸ ,ಬೇಸಿಗೆ ಶಿಬಿರ ಕ್ಕೆಮಕ್ಕಳನ್ನು ಕಳುಹಿಸುವುದು ಬದಲಾವಣೆ ,ಅರೋಗ್ಯ ದ್ರಸ್ಟಿಯಿಂದ ಬಹು ಉತ್ತಮ .
ಎಲ್ಲಾ ಕುಟುಂಬ ದ ಸದಸ್ಯರು ಇದಕ್ಕಾಗಿ ಕಾಯುತ್ತ ಇರುತ್ತಾರೆ .
ಜನತೆ /ಸರಕಾರ ಇದನ್ನು ಹುರುದುಂಬಿಸಬೇಕು .
ಸುಖಮಯ ಸಂಸಾರ ಕ್ಕೆ ಇದು ನಾಂದಿಯಾಗಲಿ ಎಂದು ಹಾರೈಸುವ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಸರ್ವೇ :ಜನ ಸುಕಿನೋ ಭವಂತು : .

Saturday, April 4, 2009

ಹೊಸ ಲೋಕಸಭಾ ಸಂಸದರಿಂದ ಜನತೆ ಯ ಆಕಾಂಕ್ಷೆ .

ಸಾರ್ವತ್ರಿಕ ಚುನಾವಣೆ -೨೦೦೯ .ಮತ ಚಲಾಯಿಸಿ ಮತ್ತು ಪ್ರಜಾ ಪ್ರಭುತ್ವ ಉಳಿಸಿ .
ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳನ್ನೂ ಅನಾವರಣ ಮಾಡಲಾಗಿದೆ .
ಎಲ್ಲಾ ಪಕ್ಷಗಳು ಅಭಿವ್ರದ್ಧಿ ಮಂತ್ರ ಜಪಿಸಿವೆ .
ಇಂದಿನ ಮಕ್ಕಳು ನಾಳೆಯ ಪ್ರಜೆಗಳು .ಇವರ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲಾ .
ಒಂದು ಪಕ್ಷದ ಮೇಲೆ ಇನ್ನೊಂದು ಸವಾರಿ,
೨ ರು ಗೆ ಅಕ್ಕಿ ಬಡವರಿಗೆ ವಿತರಣೆ ಇತ್ಯಾದಿ ಘೋಷಣೆ .ಇದು ಸಾಧ್ಯವೇ?
ಇವೆಲ್ಲ ಕ್ಷೇತ್ರದ ಅಭ್ಯರ್ತಿ ಮತ್ತು ಪಕ್ಷದ ನಿರ್ಧಾರಕ್ಕೆ ಮುಖ್ಯವಾಗಿದೆ .ಇ ಸುಳ್ಳು ಮತ್ತು ಆಗದೇ ಇರುವ ಭರವಸೆ ಗಳನ್ನೂ ನಂಬಿ ಜನತೆ ಮತ ಚಲಾಯಿಸುವರೆ ಕಾದು ನೋಡ ಬೇಕಾಗಿದೆ .
ಎರಡನೇ ಯದಾಗಿ ಆರಿಸಿ ಬಂದ ಸರಕಾರ ದಲ್ಲಿ ಸಂಸದರು ತಮ್ಮ ತಮ್ಮ ಕ್ಸೇತ್ರ ಗಳಲ್ಲಿ ಕಾಮಗಾರಿ ಮುಗಿಸದಂತ
ಮಂತ್ರಿ ಗಳು ಶಂಕು ಸ್ಥಾಪನೆ ಮಾಡಿ ಹಣವನ್ನು ಸಂಪೂರ್ಣ ಉಪಯೋಗಿಸಿ
ಉದಾಹರಣೆ ಗಾಗಿ ಶಾಲಾ ,ಆಸ್ಪತ್ರೆ ಕಟ್ಟಡ ಗಳು ,ರಸ್ತೆ ಅಭಿವ್ರದ್ಧಿ ,ರೈಲ್ವೆ ಮತ್ತು ವಿಮಾನ ನಿಲ್ದಾಣ ಗಳ ಕೆಲಸ ಹೊಸ ಪಕ್ಷ /ಸರಕಾರಗಳು ಯೋಜನೆ ಗಳನ್ನೂ ಮುಕ್ತ ಮನಸ್ಸಿನಿಂದ ಮುಗಿಸಿ ಜನತೆ ಯ ಮನಸ್ಸನ್ನು ಗೆಲ್ಲುವರೇ
ಕೆಲವು ಹಳ್ಳಿ ಗಳಲ್ಲಿ ಮಕ್ಕಳು ರಸ್ತೆ ನಿರ್ಮಾಣ ಮಾಡದೇ ಶಾಲೆಗೆ ಹೋಗದೆ ವಿಧ್ಯಾಭ್ಯಾಸ ನಿಂತಿರುವುದು ಗಮನಕ್ಕೆ ಬಂದಿದೆ .ಕುಡಿಯುವ ನೀರು, ವಿಧ್ಯುತ್ ಪೂರೈಕೆ ಮುಂತಾದ ಮೂಲ ಭೂತ ಸೌಕರ್ಯ ಕೊರತೆ ಜನತೆ ಯನ್ನು ಕಾಡುತ್ತಿದೆ .
೧೫ ನೇ ಲೋಕ ಸಭಾ ಸಂಸದರು ಇ ಬಗ್ಗೆ ಕಾಳಜಿ ವಹಿಸಬೇಕಾಗಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮನವಿ .
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಭಾರತ್

Friday, April 3, 2009

ಶ್ರೀ ರಾಮ ನವಮಿ ಹಬ್ಬದ ಶುಭಾಶಯ ಗಳು .

ಪವಿತ್ರ ಮರ್ಯಾದಾ ಪುರುಶೂತ್ತಮ ಶ್ರೀ ರಾಮನ ಜನ್ಮ ದಿನ ದ ಹಾರ್ದಿಕ ಶುಭಾಶಯಗಳು .
ಶ್ರೀ ರಾಮ ನವಮಿ ಅಂದರೆ ಕೋಸಂಬರಿ ಮತ್ತು ಬೆಲ್ಲದ ನಿಂಬೆ ಹಣ್ಣಿನ ಪಾನಕದ ಸವಿ ರುಚಿ .
ಶ್ರೀ ರಾಮನ ಆದರ್ಶಗಳು
೨ ಪಿತ್ರ ವಾಕ್ಯ ಪರಿಪಾಲನೆ ಈಗಿನ ಯುವ ಜನತೆ ಹೆತ್ತವರನ್ನು ಹೇಗೆ ನೋಡಿ ಕೊಳ್ಳುತ್ತಾರೆ ಸ್ವಲ್ಪ ಗಮನಿಸಿ .
ಏಕ ಪತ್ನಿ ವ್ರತತ್ಸ .ಪತಿ ಪತ್ನಿ ಸಂಬಂಧ ಒಂದು ನೋಟ ಮತ್ತು ಒಬ್ಬರನೊಬ್ಬರು ಮರ್ಯಾದೆ ಕೊಡುವ ರೀತಿ .
ರಾಜ್ಯ ಭಾರ ಈಗಿನ ಆಡಳಿತಕ್ಕೆ ಒಂದು ಸವಾಲ್ .ಅದಕ್ಕೆ ಹೇಳುವುದು ರಾಮ ರಾಜ್ಯ ವಾಗಬೇಕು .ಪ್ರಜೆ ಗಳು ಸುಖ ಶಾಂತಿ ನೆಮ್ಮದಿ ಜೀವನ ನಡೆಸೋದು .ಈಗ ಭಯೋತ್ಪಾದನೆ ಭೀತಿ ಯಿಂದ ಜನತೆ ಬಾಂಬ್ ಭಯ ದಿಂದ ತತ್ತರಿಸಿ ಹೋಗಿದ್ದಾರೆ .
ಭರತನ ಭ್ರಾತ್ರ ಪ್ರೇಮ .ಈಗ ಕುಟುಂಬ ದಲ್ಲಿ ಹಣ ,ಅಸ್ತಿ ಗಾಗಿ ಜಗಳ .
ಶ್ರೀ ರಾಮನ ಆದರ್ಶ ಗಳನ್ನೂ ಪಾಲಿಸುವ ಪ್ರಯತ್ನ ಸಾಧ್ಯ ವೆ ?
ಈಗಿನ ಸಮಾಜ ದಲ್ಲಿ ಹೆಚ್ಚುವ ವಿವಾಹ ವಿಚ್ಹೆಧನ ಮರು ಮದುವೆ.ಒಂದು ಆಟ ವಾಗಿದೆ .ಸಪ್ತ ಪದಿ ಯ ಮಹತ್ವ ಅಳಿಸಿ ಹೋಗಿದೆ .
ನನ್ನ ಹುಟ್ಟೂರು ಕುಂದಾಪುರ ದಲ್ಲಿ ರಥೋತ್ಸವ ಮತ್ತು ೭ ದಿನದ ಜಾತ್ರೆ ಸಡಗರ .ಕೊನೆಯ ದಿನ ಓಕಳಿ ಆಟ ಜನರ ಮನಸ್ಸನ್ನು ಸೂರೆ ಗೊಂಡಿದೆ .
ಆದರೆ ಚುನಾವಣೆ ಸಮಯ ವಾಗಿರುವುದರಿಂದ ಮನಸ್ಸು ಎರಡು ಕಡೆ ಹಂಚಿದೆ .
ಶ್ರೀ ರಾಮಚಂದ್ರನು ಭಕ್ತರ ಇಸ್ತ್ತಾರ್ಥ ಸಿದ್ಧಿ ಮಾಡಲಿ ಎಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .

Thursday, April 2, 2009

ವನ್ಯ ಪ್ರಾಣಿಗಳ ದತ್ತು ಸ್ವೀಕಾರ ಮ್ರಗಾಲಯದ ಯೋಜನೆ

ಮೈಸೂರು ಮ್ರಗಾಲಯದ ನೂತನ ಯೋಜನೆ ವನ್ಯ ಪ್ರಾಣಿ ಸಂರಕ್ಷಣೆ ಮತ್ತು ದತ್ತು ಸ್ವೀಕಾರ ಬಹಳ ಪ್ರಚಾರ ಮಾತ್ರವಲ್ಲದೆ ಸಾರ್ವಜನಿಕರ ಆಕರ್ಷಣೆಗೆ ಒಳಗಾಗಿದೆ .ಇ ಯೋಜನೆ ಯಿಂದಾಗಿ ಪ್ರತಿ ವರ್ಷವೂ ಲಾಭ ದೆಡೆಗೆ ದಾಪು ಕಾಲು ಹಾಕುತ್ತಿದೆ .
ಸಾರ್ವಜನಿಕರು ಮುಖ್ಯವಾಗಿ ರಾಜಕಾರಣಿ ಗಳು ,ಚಲನ ಚಿತ್ರ ನಟ /ನಟಿಯರು ,ಪ್ರತಿಭಾನ್ವಿತರು ,ಸಮಾಜ ಸೇವೆಯಲ್ಲಿ ತೊಡಗಿದವರು ಪತ್ರ ಕರ್ತರು ಇತ್ಯಾದಿ ತಮ್ಮ ತಮ್ಮ ಹುಟ್ಟು ಹಬ್ಬ ಸಮಾರಂಭ ಗಳ ಸವಿ ನೆನಪಿ ಗಾಗಿ ವನ ಮಹೋತ್ಸವ ಆಚರಿಸಿದ ಮಾದರಿಯಲ್ಲಿ ತಮ್ಮ ಕುಟುಂಬ ಸಮೇತರಾಗಿ ಮ್ರಗಾಲಯಕ್ಕೆ ಭೇಟಿ ನೀಡಿ ತಮಗೆ ಇಷ್ಟ ವಾದ ವನ್ಯ ಪ್ರಾಣಿಯನ್ನು ದತ್ತು ಸ್ವೀಕಾರ ಮಾಡಿ ಒಂದು ವರ್ಷದ ಖರ್ಚನ್ನು ಪಾವತಿ ಮಾಡಿ .ಹುಟ್ಟು ಹಬ್ಬ ಆಚರಿಸುತ್ತಾರೆ .ಇ ಮೊದಲು ಆಹಾರ ಕ್ಕಾಗಿ ಕಷ್ಟ ಪಡುತ್ತಿರುವ ಇ ಮೂಕ ಪ್ರಾಣಿ ಗಳು ಸಂತೋಷ ವಾಗಿರುತ್ತವೆ .
ಇ ಆದಾಯದಿಂದಾಗಿ ಮ್ರಗಾಲಯದ ಒಳಗೆ ನೌಕರರು/ಅಧಿಕಾರಿ ಗಳು ವೀಕ್ಷಣೆಗೆ ಬರುವ ಎಲ್ಲಾ ಪ್ರವಾಸಿ /ಪ್ರೇಕ್ಷಕರನ್ನು ಹರ್ಷ ಉಲ್ಲಾಸ ರನ್ನಾಗಿ ಮಾಡುತ್ತಿದೆ .
ಇಂದಿನ ಅಧುನಿಕ ಯುಗ ದಲ್ಲಿ ಕೆಲವು [ಗುಬ್ಬಚ್ಚಿ ] ಸಂತತಿ ಗಳು ನಾಶ ದ ಅಂಚಿ ನಲ್ಲಿ ಇವೆ ,ಮನುಷ್ಯ ತನ್ನ ಸ್ವಾರ್ಥ ಕ್ಕಾಗಿ ಕಾಡಿನ ನಾಶ ವಾಗಿ ಪರಿಸರ ಕೆಟ್ಟು ಹೋಗಿ ಅನವ್ರಸ್ಟ್ಟಿಗೆ ಕಾರಣವಾಗಿ ರೈತರ ಆತ್ಮ ಹತ್ಯೆ ಗಳು ಹೆಚ್ಚಿವೆ .
ಈಗಲಾದರೂ ಜನತೆ /ಸರಕಾರ ಒಳ್ಳೆಯ ಯೋಜನೆಗೆ ಹೆಚ್ಚು ಪ್ರಚಾರ ನೀಡಬೇಕು .
ಇದು ನಮ್ಮ ಸುಂದರ ಮೈಸೂರು ಮತ್ತು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಯ ಪ್ರಕಟಣೆ .
ಜೈ ಕರ್ನಾಟಕ /ಭಾರತ್