Wednesday, April 29, 2009

ಶೇಕಡಾವಾರುಮತ ದಾನದಲ್ಲಿ ಹಿನ್ನಡೆ ಸಾಧ್ಯತೆ .

ಇಂದಿನ ಮತ ದಾನ ನಿಧಾನಗತಿ ಯಲ್ಲಿ ಸಾಗುತ್ತಿದೆ .ಕರ್ನಾಟಕ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಜರುಗಿಸಲು ಸಂಸಾರ ಸಮೇತ ರಾಗಿ ಮತ ಪೆಟ್ಟಿಗೆ ಯಹತ್ತಿರ ಬಂದರೂ ಮತ ಚಲಾವಣೆ ಗುಪ್ತ ವಾಗಿರ ಬೇಕು ಎಂದು ಪ್ರಕಟಿಸಿದ್ದಾರೆ .
ಇದನ್ನು ಮಾಜಿ ಪ್ರಧಾನಿ ಉಲ್ಲಂಗ್ಹಿಸಿದ್ದನ್ನು ಮಾಧ್ಯಮದವರು ಚಿತ್ರೀಕರಣ ಮಾಡಿ ಜನತೆ ಗೆ ತೋರಿಸಿದ್ದಾರೆ.ಇದು ಅವರ ವ್ಯಕ್ತಿತ್ವ ವನ್ನು ಬಿಂಬಿಸಿದ್ದನ್ನು ನೋಡಿದಾಗ ಸಂಸದರಾಗಿ ಏನು ಮಾಡಿಯಾರು ? ಕಲ್ಪನೆ ದೇಶದ ಜನತೆಗೆ ಸಿಗುತ್ತದೆ .
ಶೇಕಡಾವರು ಮತ ದಾನ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿದೆ .ಇದಕ್ಕೆ ಕಾರಣ ಹಲವು
ನಾನು ಮತ ದಾನ ಮಾಡಿ ಬರುವಾಗ ಸಂದರ್ಶಿಸಿದಾಗ
೧ ಯಾರಿಗೆ ವೋಟು ಹಾಕಿದ್ದಾರೆ ಏನಂತೆ ಎಲ್ಲರೂ ಮಾಡು ವುದು ಒಂದೇ ಅವರ ಸ್ವಾರ್ಥ ವೋಟು ಬೇಡ ,ನಮ್ಮ ಉದ್ಯೋಗ ನೋಡುವ ಬನ್ನಿ ಹೀಗಾಗಿ ಅಯೋಗ್ಯ ವ್ಯಕ್ತಿ ಗೆ ಪರೋಕ್ಷ ವಾಗಿ ಸಹಾಯ ವಾಗುವುದು.
ಸರಕಾರಿ ರಜಾ ಘೋಷಿಸಿದ್ದರೂ ಟಿವಿ ,ಚಲನ ಚಿತ್ರ ನೋಡುವುದು ಮಾಡುತ್ತಿದ್ದಾರೆ .
೨ ವಿಧ್ಯಾವಂತರು,ನಿವ್ರತ್ತ ಸರಕಾರಿ ಅಧಿಕಾರಿ ಗಳು ಮತ್ತು ಪ್ರಜಾ ಪ್ರಭುತ್ವದ ಕಳಕಳಿ ಇರುವವರು ತಮ್ಮ ಹೆಸರು ಪಟ್ಟಿ ಯಲ್ಲಿ ಬಿಟ್ಟು ಹೋಗಿರುವುದು ,ಆಇಡೀ ಕಾರ್ಡ್ ಒದಗಿಸಲು ಸಾಧ್ಯವಾಗದೆ ಇರುವುದು ಇತ್ಯಾದಿ ಗಮನಿಸಿದರೆ ಯೋಗ್ಯ ವ್ಯಕ್ತಿ ಗೆ ಅನ್ಯಾಯ ವಾಗುವುದರಲ್ಲಿ ಸಂಶಯ ವಿಲ್ಲ .
ಇದು ನಮ್ಮ ದೇಶದ ಈಗಿನ ಸ್ಥಿತಿ .ಇದನ್ನು ಸರಿ ಪಡಿಸಲು ಯುವಜನತೆಗೆ ಕರೆ ನೀಡಲಾಗಿದೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ
ಜೈ ಹಿಂದ್

No comments: