Tuesday, June 23, 2009

ಸಂಪತ್ತು ಶಬ್ದದ ಸರಿಯಾದ ಅರ್ಥ ತಿಳಿದು ಜೀವನ ನಡೆಸಿರಿ

ಸಂಪತ್ತು ಎನ್ನುವ ಶಬ್ದದ ಸರಿಯಾದ ಅರ್ಥ ವನ್ನು ೫.೫ ಕನ್ನಡಿಗರು ತಿಳಿದು ಕೊಳ್ಳುವ ಅವಶ್ಯಕತೆ ಈಗ ಬಂದಿದೆ .
ಏಕೆಂದರೆ ಸಾಮಾನ್ಯ ಜನತೆ ನಗದು ಹಣ ,ಬ್ಯಾಂಕ್ ನಲ್ಲಿ ಇರುವ ಠೇವಣಿ ,ಚಿನ್ನಾಭರಣ ,ಬೆಳ್ಳಿ ಆಸ್ತಿ ಸ್ಥಿರ ಚರ ಇತ್ಯಾದಿ ತಿಳಿದು ಕೊಳ್ಳುತ್ತಾರೆ ಆದರೆ ಉಳುವ ರೈತ ಕಾರ್ಖಾನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕ /ಉದ್ಯಮಿ ಮುಕ್ಖ್ಯವಾಗಿ ದೇಶದ ರಕ್ಷಣೆ ಮಾಡುವ ವೀರಯೋಧ ನಾಗರೀಕರರಕ್ಷಣೆ ಮಾಡುವ ಪೋಲಿಸ್ ಇಲಾಖೆ ,ನದಿಗಳು /ಅಣೆಕಟ್ಟು ಗಳು ,ಅಣು ವಿಜ್ಞಾನಿಗಳು
ವೈದ್ಯಕೀಯ /ಶಿಕ್ಷಕರು ಅಲ್ಲದೆ ಮುಂದಿನ ಭವ್ಯ ಭಾರತದ ಪ್ರಜೆ ಗಳಾಗಿರುವ ಇಂದಿನ ಮಕ್ಕಳು ಮತ್ತು ಅವರ ಹೆತ್ತವರು .
ಸಾರ್ವಜನಿಕ ಸಂಪತ್ತು /ಆಸ್ತಿ ಗಳಾದ ಬಸ್ /ರೈಲ್ /ವಿಮಾನ ಇತ್ಯಾದಿ
ಕೊನೆಯದಾಗಿ ಮನುಷ್ಯ ,ಪ್ರಾಣಿ ಪಕ್ಷಿ ಸಮೂಹ /ವನ /ಪುರಾತನ ಮರ ಹೀಗೆ ಬರೆದರೆ ಅಂತ್ಯ ಇಲ್ಲದಂತಹ ರಾಶಿ ಕಂಡು ಬರುತ್ತದೆ .
ನಮ್ಮ ಸುಂದರ ಮೈಸೂರಿನಲ್ಲಿ ರಸ್ತೆ ಅಗಲೀಕರಣ ದ ನೆಪ ದಲ್ಲಿ ಸಂಪತ್ತು ನಾಶ ವಾಗುವುದನ್ನುಗಮನಿಸಿದಾಗ
ಮೈಸೂರು ಚಾರಿತ್ರಿಕ /ಪ್ರೇಕ್ಷಣಿಯ ಹಿನ್ನಲೆ ಕಲೆ ಯ ಪೋಷಣೆಯ ನಗರ ಸೌಂದರ್ಯ ಕೆಡುವುದನ್ನು ನಿಲ್ಲಿಸ ಬೇಕು .
ಕಾರಂಜಿ ಕೆರೆ ,ಮ್ರಗಾಲಯ ಪ್ರಕ್ರತಿ ಸಂಪನ್ಮೂಲ ವನ್ನು ಕೆಡಿಸಬಾರದು.
ಮ್ರಗಾಲಯದ ಪ್ರಾಣಿ /ಪಕ್ಷಿ ಗಳಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ .
ರಾಜಕೀಯ ಲಾಭಕ್ಕಾಗಿ ಜನತೆ ಪ್ರತಿ ಭಟನೆ ನಡೆಸಿ ಸಾರ್ವಜನಿ ಕ ಆಸ್ತಿ /ಸಂಪತ್ತು ಹಾಳುಮಾಡುವುದನ್ನು ಜನತೆ ವಿರೋಧಿಸ ಬೇಕು .
ಇದು ಅಭಿವ್ರದ್ಧಿ ಯ ಮೂಲ ಮಂತ್ರ ವಾಗಿದೆ .ಸಂಪತ್ತು ಶಬ್ದ ದ ಅರ್ಥವನ್ನು ಜನತೆ ಮತ್ತು ಸರಕಾರ ತಿಳಿದು ಕೊಂಡರೆ /ನಡೆದರೆ
ನಮ್ಮ ಭವ್ಯ ಭಾರತದ ನವ ನಿರ್ಮಾಣ ವಾಗುವುದು .ಎಲ್ಲರೂ ಸಹಕರಿಸಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

Friday, June 19, 2009

ಇಂದು ಜೂನ್ ೧೯ ಅಪ್ಪಂದಿರ ದಿನಾಚರಣೆ

ಇಂದು ಜೂನ್ ೧೯ ಅಪ್ಪಂದಿರ ದಿನ ಆಚರಣೆ ಬಹು ಸೊಗಸು ಮತ್ತು ಎಲ್ಲಾ ಅಪ್ಪಂದಿರಿಗೆ ಆನಂದ ದಾಯಕ ದಿನವಾಗಿದೆ .
ತಮ್ಮ ವಿವಾಹ ಜೀವನ ಮೆಲುಕು ಹಾಕಿ ಪ್ರಥಮ ಬಾರಿಗೆ ಮಗು ಹುಟ್ಟಿ ಅದರ ಜೊತೆ ಸರಸ /ಮಗುವಿನ ಚೆಸ್ಟೆ /ತುಂಟತನ ಗಳ
ಸಂಪೂರ್ಣ ಅನುಭವ ಮತ್ತೆ ಯೋಚಿಸಿದಾಗ ಅಲ್ಲದೆ ಅದರ ಅರೋಗ್ಯ ಸ್ವಲ್ಪ ಏರು ಪೆರು ಆದಾಗ ಮನೆಯಲ್ಲಿ ಭಯದ ವಾತಾವರಣ ಮತ್ತು ಚೇತರಿಕೆ ಆದಾಗ ನಿಟ್ಟುಸಿರು ಬಿಟ್ಟು ಭಗವಂತನ ಜೊತೆ ಪ್ರಾರ್ಥನೆ ಇತ್ಯಾದಿ ಗಳನ್ನೂ ನೆನಪು ಮಾಡಿಕೊಂದಾಗ ಅಪ್ಪನ ಸ್ಥಾನ ಎಷ್ಟು ಅಮೂಲ್ಯ /ಕಷ್ಟ ತರವಾಗಿದೆ ಎನ್ನುವುದು ಅರಿವಾಗುವುದು .ಇದು ಇಲ್ಲಿಗೆ ಪೂರ್ಣ ವಾಗಿಲ್ಲ .ಮಕ್ಕಳ ವಿಧ್ಯಾಭ್ಯಾಸ ಜವಾಬ್ದಾರಿ ಶಿಸ್ತಿನಜೀವನ ,ಸಮಯ ಪರಿಪಾಲನೆ ಉತ್ತಮ ನಾಗರಿಕ ನಾಗಿ ಭವ್ಯ ಭಾರತದ ಪ್ರಜೆ ಯಾಗಿ ಮಾಡುವ ಜವಾಬ್ದಾರಿ ಎಲ್ಲಾ ಅಪ್ಪಂದಿರಿಗೆ /ಅಮ್ಮಂದಿರಿಗೂ ಸಮ ಪಾಲು ಇರುವುದನ್ನು ಇಲ್ಲಿ ಮರೆಯ ಬಾರದು.
ಇತ್ತೀಚೆಗಿನ ಅಪರಾಧ ಪ್ರಕರಣ ಗಳನ್ನೂ ನೋಡಿದರೆ ಅಪ್ಪಂದಿರು ಯಾವುದೊ ತಪ್ಪು ಮಾಡಿರುವರೋ ಎನ್ನುವ ಪ್ರಶ್ನೆ ಸ್ವಾಭಾವಿಕ ವಾಗಿ ಉಧ್ಭವ ವಾಗುತ್ತದೆ .
ಸಮಯ ಪ್ರಜ್ಞೆ ಜೀವನ ದಲ್ಲಿ ಬಹು ಮುಖ್ಯವಾಗಿದೆ .
ಅಶಿಸ್ತು/ಅಶಾಂತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ತಂದೆ /ತಾಯಿ ಮತ್ತು ಗುರುಗಳ ಸ್ಥಾನಕ್ಕೆ ಕುಂದು ಬರದಂತಹ ಆದರ್ಶ ಸಮಾಜ ರಚನೆ ಯಾಗಲಿ ಮತ್ತು ಎಲ್ಲಾ ಅಪ್ಪಂದಿರಿಗೆ ಸುಖ ಶಾಂತಿ ಮತ್ತು ನೆಮ್ಮದಿಯ ಬದುಕು ನೀಡಲಿ ಎಂದು ನಾವೆಲ್ಲರೂ ಪರಮಾತ್ಮ ನನ್ನು ಪ್ರಾರ್ತಿಸೋಣ ಬನ್ನಿ .
ನಾಗೇಶ್ ಪೈ
ಭವ್ಯ ಭಾರತ ನವ ನಿರ್ಮಾಣ ವೇದಿಕೆ .ಮೈಸೂರು .
ಜೈ ಕರ್ನಾಟಕ

Monday, June 15, 2009

ಉತ್ತಮ ಮತ್ತು ಆದರ್ಶ ಸಮಾಜ ರಚನೆ ಯಾಗ ಬೇಕು .

ಉತ್ತಮ ಮತ್ತು ಆದರ್ಶ ಸಮಾಜ ರಚನೆಯಾಗಬೇಕು .
ಇದು ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರಿನ ಮುಖ್ಯ ಗುರಿಯಾಗಿರುವುದು .ಇದನ್ನು ಸಾಧಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ .ಇದಕ್ಕೆ ಸಾರ್ವಜನಿಕರ ಸಹಕಾರ ಕೋರಲಾಗಿದೆ .
ಇದಕ್ಕೆಹೆಚ್ಚು ಒಳ್ಳೆಯ ಬೀಜ ಮತ್ತು ಗೊಬ್ಬರ ದ ಅವಶ್ಯಕತೆ ನಮಗಿದೆ .ಒಳ್ಳೆಯ ಫಸಲು ಬರುವುದರಿಂದ ದೇಶ ಸಮ್ರದ್ಧಿಯಾಗುವುದು .ಇದೆ ರೀತಿ ಮಾನವ ಜನಾಂಗ ದಲ್ಲಿ ವಂಶ ದಲ್ಲಿ ಕೀರ್ತಿ ತರುವಂತಹ ಮಕ್ಕಳು ಸುಸಂಸ್ಕ್ರತ ರಾದರೆ ಮುಂದಿನ ವಿದ್ಯಾವಂತ ಪೋಷಕ ರಾಗಿ ಸಮಾಜ /ರಾಜ್ಯ ಅಲ್ಲದೇ ಭವ್ಯ ಭಾರತದ ಕೀರ್ತಿ ಪತಾಕೆ ಅತಿ ಎತ್ತರ ಹಾರಿಸಬೇಕು.
ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಬೇಕು ಹಾಗೂ ನಿಗದಿತ ಸಮಯದಲ್ಲಿ ನೌಕರಿ,ಮದುವೆ,ಮನೆ ಕಟ್ಟುವುದು ಇನ್ನಿತರ ಕಾರ್ಯ ಕ್ರಮ ನಡೆಯ ಬೇಕು .ಇದಕ್ಕೆ ಪೋಷಕರ ಜವಾಬ್ದಾರಿ ಮಹತ್ತರ ವಾದದ್ದು .ಕೆಲವು ವಿಷಯ ಗಳಲ್ಲಿ ಹೆತ್ತವರು ಮಕ್ಕಳ ಬಗ್ಗೆ ನಿಯಂತ್ರಣ ಕಳೆದು ಕೊಳ್ಳ ಬಾರದು ಸಂಯಮ ದಿಂದ ಹೊಂದಾಣಿಕೆ ಯಿಂದ ಸಮತೋಲನ ಕಾಯ್ದು ಕೊಂಡು ಸುಖಿ ಸಂಸಾರ ನಡೆಸ ಬೇಕು .ಇ ಮಾತು ಅತ್ತೆ ಸೊಸೆ ಯರ ಸಂಬಂಧ ದಲ್ಲಿ ,ಗಂಡ ಹೆಂಡತಿ ಸಂಬಂಧ ದಲ್ಲಿ ಅನ್ವಯ ವಾಗುವುದು .
ಕಾಲಚಕ್ರ ಉರುಳಿದ ಹಾಗೇ ಸಮಯಕ್ಕೆ ಸರಿಯಾಗಿ ಬದಲಾವಣೆ ಆಗುವುದು ಸಹಜ ಕ್ರಿಯೆ .ಮತ್ತು ಮನುಷ್ಯನು ಅಭಿವ್ರದ್ಧಿ ಯನ್ನು ಗಮನ ದಲ್ಲಿ ಇಟ್ಟು ತನ್ನನ್ನು ತಾನು ಬದಲಾಯಿಸಿ ಕೊಳ್ಳುವುದು ವಿವೇಕಿ ಯ ಮೊದಲ ಆಧ್ಯತೆ .
೨ ಮಕ್ಕಳು ತಮ್ಮ ಹೆತ್ತವರ ಮೇಲಿನ ಕರ್ತವ್ಯ ಯ ಮರೆಯ ಬಾರದು .
ಮೊಮ್ಮಕಳ ಆರೈಕೆ ಮತ್ತು ಸುರಕ್ಷಿತೆ ದ್ರಸ್ಟಿಯಿಂದ ಅಜ್ಜಿ /ತಾತ ಮನೆಯಲ್ಲಿ ಇರುವುದು .ಇಳಿ ವಯಸ್ಸಿನಲ್ಲಿ ಮಕ್ಕಳ ಜೊತೆ ಇರುವುದು ಒಳ್ಳೆಯ ಮಾರ್ಗ ವಾಗಿದೆ .ಕೆಲವು ಮಕ್ಕಳು ಹೆತ್ತವರನ್ನು ವ್ರದ್ಧಾಶ್ರಮ ಸೇರಿಸುವ ಯೋಜನೆ ಹಾಕಲು ಯತ್ನಿಸುತ್ತಾರೆ .ಇದು ಸರಿಯೇ ? ಸ್ವಲ್ಪ ಯೋಚಿಸಿ .
ಇದರ ಬಗ್ಗೆ ಹೆಚ್ಚಿನ ಅಧ್ಯಯನ ಬೇಕಾಗಿದೆ .ನಿಜ ಪರಿಸ್ತಿತಿ ತಿಳಿದು ಕೊಂಡ ಮೇಲೆ ಯೋಗ್ಯವಾದ ತಿರ್ಮಾನ ತೆಗೆದು ಕೊಳ್ಳ ಬಹುದು .ಚರ್ಚೆ ಯಲ್ಲಿ ನೀವೂ ಭಾಗವಹಿಸಿ ಮತ್ತು ಸಲಹೆ /ಅಭಿಪ್ರಾಯ ಬರೆಯಿರಿ .
ಸ್ವಾಗತ ವನ್ನು ಕೋರುವ
ನಿಮ್ಮವನೇ ಆದ
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು
ವಂದನೆ ಗಳು
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :.

Sunday, June 7, 2009

ವಿದೇಶ ದಲ್ಲಿ ವ್ಯಾಸಂಗ ಮತ್ತು ನೌಕರಿಎಷ್ಟು ಸುರಕ್ಷಿತ ನೀವೇ ಯೊಚಿಸಿ

ಭವ್ಯ ಭಾರತ ನಿರ್ಮಾಣ ದಲ್ಲಿ ಯುವ ಜನತೆ ಯ ಪಾತ್ರ ಬಹು ಮುಖ್ಯ ವಾಗಿದೆ .ಇ ಪೀಳಿಗೆ ದೇಶದ ಸರ್ವಾಂಗ್ಹೀನ ಬೆಳವಣಿಗೆಗೆ ಟೊಂಕ ಕಟ್ಟಿ ನಿತ್ತಿದೆ .ಇದು ಒಂದು ಆಶಾದಾಯಕ ಬೆಳವಣಿಗೆ ಯೂ ಹೌದು .ಆದರೆ ಈಗ ಇ ಜನತೆ ಯನ್ನು ಕಾಡುತ್ತಿರುವ ಬಹು ಮುಖ್ಯ ವಾದ ಪ್ರಶ್ನೆ
ವಿದೇಶ ಗಳಲ್ಲಿ ವಿಧ್ಯಾಭ್ಯಾಸ ಮುಂದುವರಿಸುವುದು ಸರಿಯೇ ? ಮತ್ತು ಅದು ಎಷ್ಟು ಸುರಕ್ಷಿತ ವಾಗಿದೆ ?
ಅರ್ಥಿಕ ಹಿಂಜರಿತ ದ ನಡುವೆ ಉದ್ಯೋಗವಕಾಶ ಮುಂದೆ ವಿದೇಶ ನೆಲದಲ್ಲಿ ಇರುವುದೇ
ಸಂಕಷ್ಟ ದಲ್ಲಿ ಸಿಲುಕಿದ ವಿಧ್ಯಾರ್ಥಿ ಗಳ ಮುಂದಿನ ನಡೆ ಏನು ?
ಇಂತಹ ಸಾವಿರಾರೂ ಪ್ರಶ್ನೆ ಉಧ್ಭವಿಸಿದೆ .ಇದು ನಿಜಕ್ಕೂ ರಾಜ್ಯ ಮತ್ತು ಕೇಂದ್ರ ಸರಕಾರ ದಲ್ಲಿ ತಳಮಳ ಉಂಟು ಮಾಡಿದೆ .ಇದನ್ನು ಸರಿಪಡಿಸಲು ಆಶಾ ದಾಯಕ ಕಿರಣ ವೆಂದರೆ ಕೇಂದ್ರ ಸಂಪುಟ ದಲ್ಲಿ ನಮ್ಮವರೇ ಆದ ಶ್ರೀಯುತ ಕೃಷ್ಣ ಆವರು ವಿದೇಶಾಂಗ ಖಾತೆ ಹೊಂದಿರುವುದು .ಇವರು ಸಮರ್ಥ ವಾಗಿ ಪರಿಸ್ಥಿತಿ ಯನ್ನು ನಿಭಾಯಿಸ ಬಲ್ಲರು ಎನ್ನುವ ನಂಬಿಕೆ ಸರಕಾರ ಹಾಗೂ ಜನತೆ ಯಲ್ಲಿ ಇದೆ .ಜನಾಂಗೀಯ ದ್ವೇಷ ಕ್ಕೆ ಆಸ್ಟ್ರೇಲಿಯ ,ಅಮೇರೀಕಾ ಇನ್ನಿತರ ದೇಶ ಗಳಲ್ಲಿ ನಮ್ಮ ಯುವಕ /ಯುವತಿ ಯರು ಬಲಿಯಾಗುತ್ತಿರುವುದು ಶೋಚನಿಯ .ದೇಶವಿಡಿ ಇ ಸಮಸ್ಯೆ ಗೆ ಪರಿಹಾರ ಹುಡುಕಲು ಸರ್ವ ಪ್ರಯತ್ನ ಮಾಡಬೇಕು .ಹ
ಇದು ತಾತ್ಕಲವೂ /ನಿರಂತರವೂ ಹೇಳುವುದು ಕಷ್ಟಕರ .ಆದರೆ ನಮ್ಮ ಪ್ರಯತ್ನ ಜಾರಿಯಲ್ಲಿ ಇರಲಿ .
ಯುವಜನತೆ ಯ ಜೀವನ ಹಾದಿ ಸುಗಮ ವಾಗಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಮ್ಮ ದೇಶ ಪ್ರೇಮ ನಮ್ಮ ರಕ್ತ ದಲ್ಲಿ ಉಕ್ಕಿ ಹರಿಯಲಿ .
ಜೈ ಹಿಂದ್ .
ಭಾರತ್ ಮಾತಾ ಕೀ ಜೈ
ನಾಗೇಶ್ ಪೈ .

Wednesday, June 3, 2009

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳೆಯರು

ಭವ್ಯ ಭಾರತದ ನವ ನಿರ್ಮಾಣ ದಲ್ಲಿ ಮಹಿಳಾ ಮಣಿ ಗಳು ಉನ್ನತ ಸ್ಥಾನ ಏರಿರುವುದು ನಿಜಕ್ಕೂ ಹರ್ಷ ದಾಯಕ ಮತ್ತು ಶ್ಲಾಗನೀಯ.ಇದನ್ನು ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸ ಬೇಕು .
೧ ದೇಶದ ಪ್ರಥಮ ರಾಷ್ಟ್ರಪತಿ : ಶ್ರೀಮತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್
೨ ಕಾಂಗ್ರೆಸ್ ಅಧ್ಯಕ್ಷೆ : ಶ್ರೀಮತಿ ಸೋನಿಯಾ ಗಾಂಧಿ
೩ ಪ್ರಥಮ ಲೋಕ ಸಭಾ ಸ್ಪೀಕರ್ : ಶ್ರೀಮತಿ ಮೀರಾಕುಮಾರ್
೪ ರೈಲ್ವೆ ಮಂತ್ರಿ : ಶ್ರೀಮತಿ ಮಮತಾ ಬೇನ್ನರ್ಜೀ
೫ ಲೋಕ ಸಭಾ ವಿರೋಧ ಪಕ್ಷ ಉಪ ನಾಯಕಿ : ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಇನ್ನಿತರರು .
ಇಲ್ಲಿ ಮುಖ್ಯವಾಗಿ ಇ ಸ್ಥಾನದ ಸದುಪಯೋಗ ಪಡಿಸಿ ಮಹಿಳಾ ಬಿಲ್ ಪಾಸ್ಮಡಿ shekadavaru ೧/೩ ಸ್ಥಾನ ಗಳಿಸಲು ಯಶಸ್ವಿ ಯಾಗ ಬೇಕು .ಮತ್ತು ಇದನ್ನು ಪುರುಷರ ಬಗ್ಗೆ ವಿರೋಧ ಪ್ರಕಟಿಸಿ ದುರ್ಬಳಕೆ ಮಾಡಿಕೊಳ್ಳ ಬಾರದು.
ಸಮಾಜ /ರಾಜ್ಯ ಮತ್ತು ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ಇಬ್ಬರೂ ಸೇರಿ ದುಡಿದಾಗ ಗಾಂಧಿ ತಾತನ ಆತ್ಮಕ್ಕೆ ಶಾಂತಿ ಸಿಗುವುದರಲ್ಲಿ ಎರಡನೇ ಮಾತೇಇಲ್ಲ .
೨೦೨೦ ರ ಒಳಗ್ಗೆ ಅಭಿವ್ರದ್ಧಿ ಕಾಣುವ ಮಾಜಿ ರಾಷ್ಟ್ರ ಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಕನಸು ನೆನಸಾಗ ಬಹುದು .
ಇದೆ ರೀತಿ ಯಲ್ಲಿ ನಮ್ಮ ರಾಜ್ಯ ದಲ್ಲಿ ಕೂಡ ಆಡಳಿತ ಪಕ್ಷ ಭಿನ್ನ ಅಭಿ ಪ್ರಾಯಗಳನ್ನೂ ತೊರೆದು ಒಳ್ಳೆಯ ಆಡಳಿತ ದೊಂದಿಗೆ ತಮ್ಮ ೫ ವರ್ಷ ಯಶಸ್ವಿ ಯಾಗಿ ಮುಗಿಸ ಬೇಕು .
ವಿರೋಧ ಪಕ್ಷ ಗಳೂಕೂಡ ಅನಾವಶ್ಯಕ ವಾಗಿ ಆಡಳಿತ ಪಕ್ಷ ದೊಡನೆ ಜಗಳ ಮಾಡಿ ರಾಜ್ಯದ ಅಭಿವ್ರದ್ಧಿ ಕುಂಟಿತ ಮಾಡುವುದು ಸರಿಯಲ್ಲ .
ಇನ್ನೂ ಮುಖ್ಯ ವಾದವಿಷಯ ವೆಂದರೆ ರಾಜ್ಯ ಮತ್ತು ಕೇಂದ್ರ ಸರಕಾರ ಪೂರಕ ವಾಗಿ ವರ್ತಿಸಿ ದೇಶದ ಜನತೆ ಯ ವಿಕಾಸ ಯೋಜನೆಯ ಕಡೆಗೆ ಮತ್ತು ಕಾರ್ಯ ರೂಪ ದಲ್ಲಿ ಹೆಚ್ಚಿನ ಸಂಸದ್ ಸಮಯ ,ಹಣ ವಿನಿಯೋಗಿಸ ಬೇಕು .
ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಳೆಗೆ ೯ ಮಾಸ ತುಂಬುವ ಇ ವೇದಿಕೆ ಸದಸ್ಯರ ಶುಭ ಹಾರೈಕೆ ಗಾಗಿ ಕಾಯುತ್ತಿದೆ .
ಜೈ ಹಿಂದ್
ನಾಗೇಶ್ ಪೈ .

Tuesday, June 2, 2009

ಮುಖ್ಯ ಮಂತ್ರಿಗಳಿಗೆ ಮತ್ತೆ ತಲೆ ನೋವು ಏಕೆ ಬೇಕು ?

ಕರ್ನಾಟಕ ರಾಜ್ಯ ದಲ್ಲಿ ಭಾರತೀಯಜನತಾ ಪಕ್ಷ ದಕ್ಷಿಣ ಭಾರತ ದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ .
ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಇನ್ನಿತರ ಪ್ರಮುಖ ಸದಸ್ಯರಿಗೆ ಮಂತ್ರಿ ಪದವಿ ಕೊಡದೆ ಇರುವುದು ಮುಖ್ಯ ಮಂತ್ರಿ ಅವರ ನಿರ್ಧಾರ ,ರೆಡ್ಡಿ ಸಹೋದರರ ಬಗ್ಗೆ ಮರ್ಯಾದೆ ಕೊಡದೆ ಹಾಗೂ ಎಲ್ಲಾ ಸದಸ್ಯರಿಗೆ ಆಡಳಿತ ದಲ್ಲಿ ಸಮಾನ ಅವಕಾಶ ಸಿಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ .ಇದು ವಿರೋಧ ಪಕ್ಷ ಗಳಿಗೆ ಕೇಂದ್ರ ದ ಸಹಾಯ ಇರುವುದರಿಂದ ಸದನ ದಲ್ಲಿ ಗಲಾಟೆ ಎಬ್ಬಿಸಲು ಒಂದು ಪ್ರಮುಖ ವಿಷಯ ವಾಗಿದೆ .ಸ್ವತಂತ್ರ ಅಭ್ಯರ್ತಿ /ಮಂತ್ರಿ ದನಿ ಗೂಡಿಸಿರುವುದು ಮುಖ್ಯ ಮಂತ್ರಿ ಮತ್ತು ಅವರ ಹಿತೈಷಿ ಗಳಿಗೆ ತಲೆ ನೋವಾಗಿದೆ .ಈಗ ಮುಖ್ಯ ಮಂತ್ರಿ ಗಳು ತಮ್ಮ ಪ್ರತಿಷ್ಟೆ /ಕುಟುಂಬ ರಾಜಕೀಯದ ಬಗ್ಗೆ ವಾಲದೇ ರಾಜ್ಯದ ಜನರ ಮತ್ತು ಪಕ್ಷದ ಅಭಿವ್ರದ್ಧಿ ಗೆ ಹೆಚ್ಚು ಗಮನ ಕೊಡ ಬೇಕು .ರಾಜ್ಯದ ಜನತೆಯ ಸೇವಕ ಎಂದು ಪ್ರಮಾಣಿಸ ಬೇಕು .ಕೇವಲ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು .
ಲೋಕ ಸಭೆ ಚುನಾವಣಾ ಫಲಿತಾಂಶ ಒಂದೇ ಮುಖ್ಯ ವಲ್ಲಾ.ಇನ್ನೂ ೪ ವರ್ಷ ಆಡಳಿತ ನಡೆಸ ಬೇಕು .ವಿಧಾನ ಮಂಡಲ ಸದಸ್ಯರು /ಸಂಪುಟ ಆತ್ಮ ವಿಶ್ವಾಸಕ್ಕೆ ತೆಗೆದು ಕೊಂಡರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಸಾಧ್ಯ.ಕೇಂದ್ರದ ನಾಯಕ ರೊಡನೆ ಚರ್ಚೆ ಮಾಡಬೇಕು .ಲಿಂಗಾಯತ ಸಮಾಜ ಮತ್ತು ಕುರುಬ ಸಮಾಜಇತ್ಯಾದಿ ಜಾತೀಯತೆ ವಿಷಯ ಗಳನ್ನೂ ರಾಜ ಕಾರಣ ಮತ್ತು ಆಡಳಿತ ದಲ್ಲಿ ತರಲೇ ಬಾರದು.ಇದು ನಮ್ಮ ಇ ಭಿನ್ನ ಮತಕ್ಕೆಮೂಲ ಕಾರಣ ವಾಗಿದೆ .ಪಕ್ಷೆತ ರ ಶಾಸಕ ಸಾಥ ನೀಡಿರುವುದು ಮುಖ್ಯ ಮಂತ್ರಿ ಗಳ ನಿದ್ದೆ ಕೆಡಿಸಿದೆ .
ಮುಖ್ಯ ಮಂತ್ರಿ ಗಳು ರಾಜ್ಯಕ್ಕೆ ದೆಹಲಿ ಯಿಂದ ವಾಪಸಾದ ನಂತರ ಸಮಸ್ಯೆ ಗೆ ಪರಿಹಾರ ಸಿಗಬಹುದು ಎನ್ನುವುದು ನಮ್ಮ ಹಾರೈಕೆ .
ನಮ್ಮ ಸುಂದರ ಮೈಸೂರು .
ನಾಗೇಶ್ ಪೈ
ಸಿರಿ ಕನ್ನಡಂ ಗೆಲ್ಗೆ
ಜಯ ಹೇ ಕರ್ನಾಟಕ ಮಾತೇ.