Tuesday, June 2, 2009

ಮುಖ್ಯ ಮಂತ್ರಿಗಳಿಗೆ ಮತ್ತೆ ತಲೆ ನೋವು ಏಕೆ ಬೇಕು ?

ಕರ್ನಾಟಕ ರಾಜ್ಯ ದಲ್ಲಿ ಭಾರತೀಯಜನತಾ ಪಕ್ಷ ದಕ್ಷಿಣ ಭಾರತ ದಲ್ಲಿ ಮೊದಲ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ .
ವಿಧಾನ ಸಭಾ ಸ್ಪೀಕರ್ ಜಗದೀಶ್ ಶೆಟ್ಟರ್ ಇನ್ನಿತರ ಪ್ರಮುಖ ಸದಸ್ಯರಿಗೆ ಮಂತ್ರಿ ಪದವಿ ಕೊಡದೆ ಇರುವುದು ಮುಖ್ಯ ಮಂತ್ರಿ ಅವರ ನಿರ್ಧಾರ ,ರೆಡ್ಡಿ ಸಹೋದರರ ಬಗ್ಗೆ ಮರ್ಯಾದೆ ಕೊಡದೆ ಹಾಗೂ ಎಲ್ಲಾ ಸದಸ್ಯರಿಗೆ ಆಡಳಿತ ದಲ್ಲಿ ಸಮಾನ ಅವಕಾಶ ಸಿಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ .ಇದು ವಿರೋಧ ಪಕ್ಷ ಗಳಿಗೆ ಕೇಂದ್ರ ದ ಸಹಾಯ ಇರುವುದರಿಂದ ಸದನ ದಲ್ಲಿ ಗಲಾಟೆ ಎಬ್ಬಿಸಲು ಒಂದು ಪ್ರಮುಖ ವಿಷಯ ವಾಗಿದೆ .ಸ್ವತಂತ್ರ ಅಭ್ಯರ್ತಿ /ಮಂತ್ರಿ ದನಿ ಗೂಡಿಸಿರುವುದು ಮುಖ್ಯ ಮಂತ್ರಿ ಮತ್ತು ಅವರ ಹಿತೈಷಿ ಗಳಿಗೆ ತಲೆ ನೋವಾಗಿದೆ .ಈಗ ಮುಖ್ಯ ಮಂತ್ರಿ ಗಳು ತಮ್ಮ ಪ್ರತಿಷ್ಟೆ /ಕುಟುಂಬ ರಾಜಕೀಯದ ಬಗ್ಗೆ ವಾಲದೇ ರಾಜ್ಯದ ಜನರ ಮತ್ತು ಪಕ್ಷದ ಅಭಿವ್ರದ್ಧಿ ಗೆ ಹೆಚ್ಚು ಗಮನ ಕೊಡ ಬೇಕು .ರಾಜ್ಯದ ಜನತೆಯ ಸೇವಕ ಎಂದು ಪ್ರಮಾಣಿಸ ಬೇಕು .ಕೇವಲ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು .
ಲೋಕ ಸಭೆ ಚುನಾವಣಾ ಫಲಿತಾಂಶ ಒಂದೇ ಮುಖ್ಯ ವಲ್ಲಾ.ಇನ್ನೂ ೪ ವರ್ಷ ಆಡಳಿತ ನಡೆಸ ಬೇಕು .ವಿಧಾನ ಮಂಡಲ ಸದಸ್ಯರು /ಸಂಪುಟ ಆತ್ಮ ವಿಶ್ವಾಸಕ್ಕೆ ತೆಗೆದು ಕೊಂಡರೆ ಮಾತ್ರ ರಾಜ್ಯದ ಸರ್ವತೋಮುಖ ಅಭಿವ್ರದ್ಧಿ ಸಾಧ್ಯ.ಕೇಂದ್ರದ ನಾಯಕ ರೊಡನೆ ಚರ್ಚೆ ಮಾಡಬೇಕು .ಲಿಂಗಾಯತ ಸಮಾಜ ಮತ್ತು ಕುರುಬ ಸಮಾಜಇತ್ಯಾದಿ ಜಾತೀಯತೆ ವಿಷಯ ಗಳನ್ನೂ ರಾಜ ಕಾರಣ ಮತ್ತು ಆಡಳಿತ ದಲ್ಲಿ ತರಲೇ ಬಾರದು.ಇದು ನಮ್ಮ ಇ ಭಿನ್ನ ಮತಕ್ಕೆಮೂಲ ಕಾರಣ ವಾಗಿದೆ .ಪಕ್ಷೆತ ರ ಶಾಸಕ ಸಾಥ ನೀಡಿರುವುದು ಮುಖ್ಯ ಮಂತ್ರಿ ಗಳ ನಿದ್ದೆ ಕೆಡಿಸಿದೆ .
ಮುಖ್ಯ ಮಂತ್ರಿ ಗಳು ರಾಜ್ಯಕ್ಕೆ ದೆಹಲಿ ಯಿಂದ ವಾಪಸಾದ ನಂತರ ಸಮಸ್ಯೆ ಗೆ ಪರಿಹಾರ ಸಿಗಬಹುದು ಎನ್ನುವುದು ನಮ್ಮ ಹಾರೈಕೆ .
ನಮ್ಮ ಸುಂದರ ಮೈಸೂರು .
ನಾಗೇಶ್ ಪೈ
ಸಿರಿ ಕನ್ನಡಂ ಗೆಲ್ಗೆ
ಜಯ ಹೇ ಕರ್ನಾಟಕ ಮಾತೇ.

No comments: