Tuesday, July 14, 2009

ಭ್ರಷ್ಟಾಚಾರ ನಿರ್ಮೂಲನೆ ನಮ್ಮ ರಾಜ್ಯದಲ್ಲಿ ಹೇಗೆ ಸಾಧ್ಯ .

ನಮ್ಮ ಸುವರ್ಣ ಕರ್ನಾಟಕ ರಾಜ್ಯದಲ್ಲಿ ದಿನ ಬೆಳಗಾಗು ತ್ತಿದಂತೆ ನಿವ್ರತ್ತ ನ್ಯಾಯ ಮೂರ್ತಿ ಲೋಕಾಯುಕ್ತ ಡಾಸಂತೋಷ್ ಹೆಗ್ಡೆ ಮತ್ತು ಅವರ ಪಂಗಡ ದವರು ಕಾರ್ಯ ನಿರತ ರಾಗುತ್ತಾರೆ.ಇದು ಕರಾವಳಿ ಯಲ್ಲಿ ಬೆಸ್ತರುಸಮುದ್ರ ,ಸಾಗರಗಳಲ್ಲಿ ಮೀನು ಹಿಡಿಯಲು ಹೋದ ಹಾಗೆ.ಇಲ್ಲಿ ಅಜ ಗಜಾಂತರ ವೈತ್ಯಾಸಇರುವುದನ್ನು ನಾವು ಕಾಣಬಹುದು. ಬೆಸ್ತರು ಜೀವನೋಪಾಯ ಕ್ಕಾಗಿ ದಿನವಿಡೀ ದುಡಿಯುವುದರಿಂದ ಸಿಗುವುದು ಅಷ್ಟಕ್ಕಷ್ಟೆ .ಆದರೆ ಇಲ್ಲಿ ಲೋಕಾಯುಕ್ತ ರ ಬಲೆ ಗೆ ಸಿಕ್ಕಿರುವ ತಿಮಿಂಗಿಲ ಗಳ ಸಂಖ್ಯೆ ಅಪಾರ .
ಭ್ರಷ್ಟಾಚಾರ ದಲ್ಲಿ ಸಿಕ್ಕಿ ಬಿದ್ದಿರುವ ಸರಕಾರಿ ನೌಕರ/ಪೋಲಿಸ್ ಉನ್ನತ ಅಧಿಕಾರಿ ವರ್ಗ ಇವರ ಬಲೆಗೆ ಬಿದ್ದು ವಿಲ ವಿಲನೆ ಒದ್ದಾಡಿ ಕೊನೆಗೆ ನ್ಯಾಯಾಲಯ ಒಪ್ಪಿಸಿರುವುದನ್ನುದಿನ ನಿತ್ಯ ಪತ್ರಿಕೆ /ಮಾಧ್ಯಮಗಳಲ್ಲಿ ಓದಬಹುದು.
ನಿಂತ ನೀರಿನಲ್ಲಿ ಯಾವಾಗಲು ಸೊಳ್ಳೆ ಗಳ ಉತ್ಪತ್ತಿ ಯಾಗುತ್ತದೆ .ಇದರಿಂದ ಸಾಂಕ್ರಾಮಿಕ ರೋಗ ಗಳು ಹರಡುವುದು ಡೆಂಗ್ಯು ,ಚಿವರ ಕನ್ ಗುನ್ಯ ಮತ್ತು ಇತ್ತೀಚಿಗೆ ಹಂದಿ ಜ್ವರ ಪ್ರಪಂಚ ದಲ್ಲಿ ಹರಡುತ್ತಿದೆ .ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರ ಸೇರಿ ನಿರ್ಮೂಲನೆಗೆ ಪ್ರಯತ್ನ ಮಾಡಬೇಕು .ಸೊಳ್ಳೆ ಗಳ ಸಂಪೂರ್ಣ ನಾಶ ವಾಗಬೇಕು.
ನಮ್ಮ ರಾಜ್ಯ ದಲ್ಲಿ ಇದಕ್ಕಿಂತ ದೊಡ್ಡ ಮಹಾಮಾರಿ ರೋಗ ಭ್ರಷ್ಟಾಚಾರ .ಇಲ್ಲಿ ರಾಜ್ಯದ ವಿಧಾನ ಸಭಾ ಸದಸ್ಯ ಮತ್ತು ಸಂಸದ ರು ಸುಮ್ಮನಿರುವುದೇಕೆ .ಇವರ ಪರೋಕ್ಷ ಸಹಕಾರ ವೇಕೆ .ಲಾಭ ದಲ್ಲಿ ಸಿಂಹ ಪಾಲು ಇರುವ ಲಕ್ಷಣ ಗಳು ಕಂಡು ಬರುವುದಿಲ್ಲವೆ ?
ನಿಧಾನವಾಗಿ ಯೋಚಿಸಿ ನಿಮ್ಮ ಉತ್ತರ ಇ ನನ್ನ ಭವ್ಯ ಭಾರತ ನವ ನಿರ್ಮಾಣ ವೇದಿಕೆ ಯಲ್ಲಿ ಪ್ರಕಟಿಸಿ.
ಸರಕಾರ ಶ್ರೀಯುತ ಸಂತೋಷ್ ಹೆಗ್ಡೆ ಯವರ ಕಾರ್ಯ ವೈಖರಿ ಪ್ರಶಂಸಿಸಿ ಅವರ ಕೆಲಸ ಸುಗುಮ ವಾಗಿ ಮಾಡಿ ತಪ್ಪಿತ್ತಸ್ತರನ್ನುಶಿಕ್ಷೆ ಗೆ ಗುರಿ ಪಡಿಸ ಬೇಕು .
ಬಡತನ ರೇಖೆ ಗಿಂತ ಕೆಳಗೆ ಇರುವ ಜನರು ಒಂದು ತುತ್ತಿನ ಜೀವನಕ್ಕಾಗಿ ಹೊರಡುವ ಇ ಸಮಯದಲ್ಲಿ ಇ ಭ್ರಷ್ಟಾಚಾರ ಜೀವನ ನಡೆಸುವ ಇ ಶ್ರೀಮಂತರನ್ನು ಪಾಟ ಕಲಿಸ ಬೇಡವೇ?
ನಾಗೇಶ್ ಪೈ .

No comments: