ನಮ್ಮ ಆಡಳಿತ ಸರಕಾರ ಮತ್ತು ಪ್ರಜೆಗಳ ಸಂಬಂಧ ತಾಯಿ ಮತ್ತು ಮಗುವಿನ ಸಂಬಂಧ ಇದ್ದ ಹಾಗೆ.
ಹೇಗೆ ತಾಯಿ ಮಗುವಿನ ಆರೈಕೆ ಯ ವಿಚಾರ ಅತ್ತಾಗ ಹಾಲು ಕೂಡಿಸಿ ಅಲ್ಲದೆ ಆರೋಗ್ಯದ ಗಮನ ತೆಗೆದು ಕೊಂಡು ಬೆಳೆಸಿ ಮುಂದೆ ಭಾರತದ ಪ್ರಜೆ ಯಾಗಿ ಮಾಡುವಳು .ಇದೇ ರೀತಿಯಾಗಿ ನಮ್ಮ ಸರಕಾರವೂ ತನ್ನ ಪ್ರಜೆಗಳ ಸರ್ವತೋಮುಖ ಅಭಿವ್ರದ್ಧಿ ಗಾಗಿ ಯೋಜನೆ ಮಾಡಿ ಕಾರ್ಯರೂಪಕ್ಕೆ ತರಬೇಕು .
ಇತ್ತೀಚೆಗಿನ ದಿನಗಳಲ್ಲಿ ಸಾರ್ವಜನಿಕರು /ಕಾರ್ಮಿಕರು ಚಳವಳಿ ಮಾಡಿ ತಮ್ಮ ಬೇಡಿಕೆ ಗಳನ್ನೂ ಒಪ್ಪಿಸ ಬೇಕಾಗಿದೆ .
ಪೆಟ್ರೋಲ್ /ಡೀಸೆಲ್ ಬಗ್ಗೆ ನಡೆದ ಚಳವಳಿ ಉದಾರಣೆ.
ಕಾಳಸಂತೆ ಮತ್ತು ಅವಶ್ಯಕತೆ ಗಿಂತ ಹೆಚ್ಚು ದಾಸ್ತಾನು .ಬೆಲೆಏರಿಕೆ ವಿವಾದ ಇತ್ಯಾದಿ ನಾಗರೀಕರ ನಿದ್ದೆ ಕೆಡಿಸಿದೆ .
ನಮ್ಮ ಮೈಸೂರಿನಲ್ಲಿ ಜಿಲ್ಲಾಧಿಕಾರಿಯವರ ಕಾರ್ಯ ದಕ್ಷತೆಯಿಂದಾಗಿ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ .ಆದರೆ ಲಾರಿ ಮಾಲೀಕರ ಸಂಪು ನಿಲ್ಲಿಸುವುದರಲ್ಲಿ ವಿಜಯಿ ಯಾಗಬೇಕು .
ಇದರಿಂದಾಗಿ ದಿನ ನಿತ್ಯದ ಆಗತ್ಯ/ಬಳಕೆ ವಸ್ತುಗಳ ಸರಬರಾಜು ಇಲ್ಲದೇ ಕಷ್ಟ ಪಡುವಂತಾಗಿದೆ .
ಪತ್ರಿಕೆ /ಮಾಧ್ಯಮ/ವಿರೋಧ ಪಕ್ಷಗಳ ಆರೋಗ್ಯಕರ ಟೀಕೆ ಗಳನ್ನು ಸರಿ ಪಡಿಸುವುದನ್ನು ಆಡಳಿತ ಪಕ್ಷವು ಕಲಿಯಬೇಕು .ಆದರೆ ಇದನ್ನು ಮುಂದೆ ಬರುವ ಲೋಕ ಸಭೆಯ ಚುನಾವಣೆಗೆ ಅಸ್ತ್ರವಾಗಿ ರಾಜಕೀಯ ಪಕ್ಷಗಳು ಉಪಯೋಗಿಸಬಾರದು.
೧ ನಮ್ಮ ಸುಂದರ ಮೈಸೂರು .೨ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ನಿವೇದನೆ .
ನಾಗೇಶ್ ಪೈ
ಸರ್ವೇ : ಜನ ಸುಕಿನೋ ಭವಂತು :
Saturday, January 10, 2009
Subscribe to:
Post Comments (Atom)
No comments:
Post a Comment