Friday, January 16, 2009

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ . ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬ

ಉತ್ತರ ಕರ್ನಾಟಕ ಭಾಗದ ಕನ್ನಡಿಗರಿಗೆ ಸಿಹಿ ಸುದ್ದಿ
ವಿಧಾನ ಮಂಡಲದ ಅಧಿವೇಶನ ಇಂದು ಬೆಳಗಾವಿಯಲ್ಲಿ .
ಇ ಭಾಗದ ಕನ್ನಡಿಗರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಸಾಹಸ ,ಧೈರ್ಯ ಮತ್ತು ಬಲಿದಾನಕ್ಕೆ ಹೆಸರುವಾಸಿ ಯಾಗಿದ್ದಾರೆ .ಈಗಲೂ ರೈತ ,ವೀರ ಯೋಧ ಮತ್ತು ಕಾರ್ಮಿಕ ಜನಾಂಗ ದೇಶ /ರಾಜ್ಯ ಕಲ್ಯಾಣ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ .ಪ್ರಮುಕ ರಾಜಕಾರಣಿಗಳು /ಮಂತ್ರಿಗಳು /ಮುಖ್ಯ ಮಂತ್ರಿಗಳು ಆರಿಸಿ ಬಂದಿದ್ದಾರೆ .ವಿಷಾದನೀಯ ವಿಷಯ ಇಲ್ಲಿಂದ ಆರಿಸಿಬಂದ ವಿಧಾನ ಸಭಾ ಸದಸ್ಯರು /ಸಂಸದರು ಇ ಭಾಗದ ಜನತೆಗೆ ಕೊಟ್ಟಿದ್ದೇನು ಮತ್ತು ಇನ್ನೂ ಏಕೆ ಹಿಂದುಳಿದಿದೆ ?
ಪ್ರಕ್ರತಿ ವಿಕೋಪವು ಕಾರಣವೇ
ರಾಜಕೀಯ ಪಕ್ಷಗಳು ಮತ್ತು ಅವರ ಲಾಭ /ನಷ್ಟ ವು ಕಾರಣವೇ ಅಥವಾ ಆಡಳಿತ ಸರಕಾರಗಳ ನಿರ್ಲಕ್ಷ ವೇ
ಇದರ ಬಗ್ಗೆ ಚಿಂತನೆ ಅಗತ್ಯ .
ಈಗ ನಡೆಯುವ ಸದನದ ಕಲಾಪದಲ್ಲಿ ಶಕ್ತಿ ಪ್ರದರ್ಶನ /ದ್ವೇಷ ಮಾಡದೇ ಎಲ್ಲಾ ಪಕ್ಷಗಳು ಒಟ್ಟಾಗಿ ಇ
ಭಾಗದ ಜನರಿಗೆ ನ್ಯಾಯ ಕೊಡಿಸಿ ಆತ್ಮ ಹತ್ಯೆ ಚಳವಳಿ ತಡೆದು ನಂಜುಂಡಪ್ಪ ವರದಿ ಅನುಷ್ಟಾನ ,ಅತಿವ್ರಷ್ಟಿ ,ಬರಗಾಲ ಕ್ಕೆ ಸರಿಯಾದ ಸಮಯದಲ್ಲಿ ಸಹಾಯ ಹಸ್ತ ಕೊಟ್ಟು ೧೪ ವಿಧೇಯಕಗಳನ್ನು
ಮಂಡಿಸಿದ್ದಾರೆ .
ರಾಜ್ಯಪಾಲರ ಭಾಷಣಕ್ಕೆ ಮರ್ಯಾದೆ ಕೊಟ್ಟು ರಾಜ್ಯದ ಸರ್ವತೋಮುಖ ಅಭಿವ್ರದ್ದಿ ಗಾಗಿ ದುಡಿಯಬೇಕು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ಜೈ ಕರ್ನಾಟಕ ಮಾತೆ :

No comments: