ಪರಿಸರ ಪ್ರೇಮ ಮತ್ತು ಪ್ರಜ್ಞೆ ಬೆಳೆಸುವ ಅಭಿಯಾನ ದಲ್ಲಿ ನೀವೆಲ್ಲರೂ ಭಾಗವಹಿಸಿ
ಇದು ಹಿಂದಿನ ಕಾಲದಿಂದಲೂ ನಡೆದು ಬಂದಿದೆ .
ಸಾಮ್ರಾಟ್ ಅಶೋಕ್ ಇದಕ್ಕೆ ಮಾದರಿ ಆಗಿದ್ದಾರೆ.ಅವರು ತಮ್ಮ ರಾಜ್ಯ ಭಾರ ಕಾಲದಲ್ಲಿ ರಸ್ತೆ ಯಎರಡು ಬದಿಯಲ್ಲಿ ಪಾದಚಾರಿ ಗಳಿಗೆ ನೆರಳು ನಿಡುವ ಮರ ಗಳನ್ನೂ ನೆಡುವ ಪದ್ಧತಿ ಯನ್ನು ಜಾರಿಗೆ ತಂದರು
ಉದ್ಯಾನ ನಗರಿ ಬೆಂಗಳೂರು ಮತ್ತು ಮೈಸೂರಿನಲ್ಲಿ ೭೦ ರ ದಶಕ ದಲ್ಲಿ ಹೊಸ ಲೇಔಟ್ ಮಾಡುವಾಗ ಜಯನಗರ .ಸಿದ್ದಾರ್ಥನಗರ [ಮೈಸೂರಿನಲ್ಲಿ ] ನಗರ ಸಭೆ ಗಳು ಆಸಕ್ತಿ ವಹಿಸಿ ಇದನ್ನು ಕಾರ್ಯ ರೂಪಕ್ಕೆ ತಂದರು .
ಶಾಲೆ ,ಕಾಲೇಜ್ ಗಳಲ್ಲಿ ಪ್ರತಿ ವರ್ಷವೂ ವನ ಮಹೋತ್ಸವ ಆಚರಿಸಿ ಗಿಡ /ಮರಗಳ ಸಂಖ್ಯೆ ಹೆಚ್ಚಿವೆ .
ಶ್ರಿಯುತ್ ನಾರಾಯಣ ಮೂರ್ತಿ ಇನ್ಫೋಸಿಸ್ ಇದಕ್ಕೆ ಹೆಚ್ಚಿನ ಆಧ್ಯತೆ ನೀಡಿ ತಮ್ಮ ಸಂಸ್ಥೆ ಯ ಆವರಣ ಗಳಲ್ಲಿ ವಿಶೇಷ ಅಥಿತಿ ಗಳನ್ನೂ ಆಹ್ವಾನಿಸಿ ಅವರ ಹೆಸರಿಟ್ಟುಸಸಿ ನೆಟ್ಟು ಪರಿಸರ ಪ್ರಜ್ಞೆ ಯನ್ನು ಬೆಳೆಸಿ ಕೊಂಡುಬಂದಿರುವುದು ಸ್ವಾಗತಾರ್ಹ .
ಇ ಉನ್ನತ ಆದರ್ಶ ಗಳನ್ನೂ ಈಗಿನ ಯುವ ಜನತೆ ಮುಂದರಿಸ ಬೇಕು .
ಈಗ ಫಾಸ್ಟ್ ಫುಡ್ ಗೆ ಜನತೆ ಹೆಚ್ಚಿನ ಒಲವೂ ತೋರಿಸುತ್ತಿದ್ದಾರೆ .ಸಾಂಬಾರ್ ,ಚುಟ್ನಿಕೂಡ ಪ್ಲಾಸ್ಟಿಕ್ ಚೀಲ ಗಳಲ್ಲಿ ಕಟ್ಟಿ ಕೊಡುತ್ತಿದ್ದಾರೆ.ಪ್ಲಾಸ್ಟಿಕ್ ಕೂಡ ಪರಿಸರ ಮಾಲಿನ್ಯ ಹೆಚ್ಚಿಸುತ್ತದೆ ,ಕಾರ್ಖಾನೆ ಗಳಿಂದ ಹೊರ ಬರುವ ಹೋಗೆ ಮತ್ತು ವೇಸ್ಟ್ ಜನರ ಅರೋಗ್ಯ ಕೆಡಿಸುವುದು .ವಾಹನ ಗಳ ಸಂಖ್ಯೆ ನಗರ ಪ್ರದೇಶ ಗಳಲ್ಲಿ ಹೆಚ್ಚಿರುವುದರಿಂದ ಪರಿಸರ ಕೆಡುತ್ತಿದೆ .
ಪ್ರಜ್ಞಾವಂತ ನಾಗರೀಕರು ಇ ಬಗ್ಗೆ ಪ್ರತಿಭಟನೆ ನಡೆಸಿ ತಮ್ಮ ವಿರೋಧ ಪ್ರಕಟಿಸಿ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.ಇ ಸಾಮೂಹಿಕ ಪ್ರಯತ್ನಕ್ಕೆ ನಾವೆಲ್ಲರೂ ಕೈ ಜೋಡಿಸ ಬೇಕು .
ಪ್ರಯತ್ನ ದಲ್ಲಿ ಸಫಲತೆ ಕಾಣ ಬಹುದು .ಆದರೆ ಒಗ್ಗಟ್ಟಿನಲ್ಲಿ ಬಲವಿದೆ ಎಂದು ನಾವೆಲ್ಲರೂ ಪ್ರದರ್ಶಿಸ ಬೇಕು .
ನಮಸ್ಕಾರ .
ನಾಗೇಶ್ ಪೈ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
Saturday, May 2, 2009
Subscribe to:
Post Comments (Atom)
1 comment:
ಸರ್,
ನಿಮ್ಮ ಬ್ಲಾಗ ಬಹಳ ಇಷ್ಟವಾಯಿತು.... ಯುವ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಗುತ್ತಲಿದ್ದೀರಿ ನಿಮಗೆ ಯಶಸ್ಸು ಸಿಗಲಿ..... ಹಾಗೆ ಜನ ಸಾಮಾನ್ಯರು ಎಚ್ಚೆತ್ತುಕೊಳ್ಳುವಂತಾಗಲಿ...
Post a Comment