Thursday, January 7, 2010

ಭಜನೆ ಯೊಂದು ಭಗವಂತನನ್ನು ಸಮಿಪಿಸುವ ಮಾರ್ಗ ವಾಗಿದೆ

ಹರಿ ನಾಮ ಸಂಕೀರ್ತನೆ ಭಜನೆ ಭಗವಂತ ನನ್ನು ಮೆಚ್ಚಿಸಿಸಮಿಪಿಸುವ ಅತ್ಯಂತ ಸುಲಭ ಮಾರ್ಗ ವಾಗಿದೆ .ನಟ ಸಾರ್ವಭೌಮ ವರ ನಟ ಡಾ ರಾಜ್ ಕುಮಾರ್ ನಟಿಸಿರುವ ಚಲನ ಚಿತ್ರ ಭಕ್ತ ಕುಂಬಾರ ದಲ್ಲಿ ಇದನ್ನು ಜನತೆಯ ಮನ ಸೂರೆಗೊಳ್ಳುವ ರೀತಿಯಲ್ಲಿ ನಿರ್ದೇಶಕರು ಚಿತ್ರಿಸಿರುವುದನ್ನು ನೀವೆಲ್ಲರೂ ಕಂಡು ಸಂಗೀತದ ಸವಿ ಯನ್ನು ಅನುಭವಿಸಿದ್ದಿರಿ .
ಮುಖ್ಯವಾಗಿ ಮಹಾರಾಷ್ಟ್ರ ದಲ್ಲಿ ಮರಾಟಿ ,ಕರ್ನಾಟಕ ದಲ್ಲಿ ಕನ್ನಡ ಭಾಷೆಯಲ್ಲಿ ಅಭಂಗ ಗಳನ್ನೂ ಭಾರತ ರತ್ನ ಪಂಡಿತ್ ಭೀಮಸೇನ್ ಜೋಷಿ ಯವರ ದ್ವನಿ ಸುರುಳಿ ಕೇಳಿ ಅನಂದಿಸಿರುವುದನ್ನು ಇಲ್ಲಿ ಸ್ಮರಿಸಬಹುದು .
ಕೇಂದ್ರ ಬಿಂದುವಾದ ಪಂಢರಾಪುರ ಪಾಂಡುರಂಗನು ಭಕ್ತ ರನ್ನು ಸದಾ ರಕ್ಷಣೆ ಕೊಡುತ್ತಾನೆ .ಪಶ್ಚಿಮ ಕರಾವಳಿಯ ಗೌಡ ಸಾರಸ್ವತ ಸಮಾಜದ ಜನರ ಮನೆ ಯಲ್ಲಿ /ದೇವಸ್ತಾನ ಗಳಲ್ಲಿ ಇಂದಿಗೂ ರಾತ್ರಿ ಭೋಜನದ ಮೊದಲು ಭಜನೆ ಮಾಡುವ ಸಂಪ್ರದಾಯಯೊಂದಿಗೆ ಬೆಳೆಸಿ ಕೊಂಡು ಬಂದಿರುತ್ತಾರೆ .
ವರ್ಷಕ್ಕೊಮ್ಮೆ ಕಾರ್ಕಳ ,ಕುಂದಾಪುರ ,ಬಂಟ್ವಾಳ ,ಮಂಗಳೂರು ಇತ್ಯಾದಿ ಊರಿನ ವೆಂಕಟರಮಣ ದೇವಸ್ತಾನ ಗಳಲ್ಲಿ ಅಹೋರಾತ್ರಿ ತಾಳ ಗಳ ಶಬ್ದ ನಿಲ್ಲಿಸದೆ ಭಜನೆ ಸಪ್ತಾಹ [೭ ದಿನ ವಾರ ಪೂರ್ತಿ ] ವಿಜೃಂಭಣೆ ಯಿಂದ ನಡೆಸುತ್ತಾರೆ .ಇಲ್ಲಿ ಗಂಡಸರು ,ಹೆಂಗಸರು ,ಮಕ್ಕಳು ಮತ್ತು ವಯೋವ್ರದ್ಧರು ಭಾಗವಹಿಸುತ್ತಾರೆ .
ಹಿಮ್ಮೇಳದಲ್ಲಿ ಹಾರ್ಮೊನಿಯುಂ ,ತಬಲಾ ಮುಖ್ಯವಾಗಿ ತಾಳ ವಾಧ್ಯ ಇತುತ್ತದೆ .
ದೇವರ ಮಂಟಪದ ಎದುರುಗಡೆ ಎತ್ತರ ವಾ ದ ದೀಪ ಸ್ಥಂಭದಲ್ಲಿ ಸದಾ ಜ್ಯೋತಿ ಬೆಳಗುತ್ತಾ ಇರುತ್ತದೆ .
ವಾರದ ಕೊನೆಯಲ್ಲಿ /ನಡುವೆ ಭಜನೆಯೊಂದಿಗೆ ನೃತ್ಯ ಮಾಡುತ್ತಾರೆ .ಕೀರ್ತನೆ ಜೊತೆ ಭಗವಂತನಲ್ಲಿ ಮೈ ಮರೆಯುತ್ತಾರೆ .
ಪುರಂದರದಾಸರು ,ಸಂತ ತುಕಾರಾಂ ನಾಮ್ ದೇವ್ ಮಹಾರಾಜ್ ದಾಸ ಶ್ರೇಷ್ಟ ರ ಕೆರ್ತನೆ ಹಾಡುತ್ತಾರೆ .ಇಲ್ಲಿ ಭಾಷಾ ಭೇಧ ಮರೆತು ಭಜನೆ ಯಲ್ಲಿ ಮಗ್ನ್ನರಾಗಿ ಭಗವಂತ ನ ನ್ನು ಸಮೀಪಿಸಿ ಮೋಕ್ಷ ಮಾರ್ಗ ಕಾಗಿ ಕಾಯುತ್ತಾರೆ .
ಜೈ ಶ್ರೀ ಪಾಂಡುರಂಗ ವಿಟ್ಟಲ ರಕುಮಾಯಿ.
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ನಾಗೇಶ್ ಪೈ ಕುಂದಾಪುರ .

No comments: