ವಿಶ್ವದ ಪ್ರಮುಖ ೩೧ ಪ್ರವಾಸಿಗರ ತಾಣ ದ ಪಟ್ಟಿಯನ್ನು ಅಮೇರಿಕಾದ ಪ್ರಸಿದ್ಧದ ಪತ್ರಿಕೆ ನ್ಯೂ ಯಾರ್ಕ್ ಟೈಮ್ ಸ ಸುರ್ವೆ ಮಾಡಿ ಪ್ರಕಟಿಸಿರುವುದನ್ನು
ನಮ್ಮ ಸುಂದರ ಮೈಸೂರಿನ ಸಂಜೆ ಅಂಗ್ಲ ಪತ್ರಿಕೆ ಸ್ಟಾರ್ ಆಫ್ ಮೈಸೂರ್ ಕರ್ನಾಟಕ ರಾಜ್ಯದ ಹಾಗೂ ಅಂತರ್ಜಾಲದಲ್ಲಿ ಓದುವ ವಿಶ್ವದ ಎಲ್ಲಾ ಮಿತ್ರರಿಗೆ
ಸಂತಸದ ಸುದ್ಧಿ ತಿಳಿಸಿದೆ .ಪಟ್ಟಿಯಲ್ಲಿ ೪ ನೇ ಸ್ಥಾನ ದಲ್ಲಿ ನಮ್ಮ ಸುಂದರ ಮೈಸೂರನ್ನು ಕಾಣ ಬಹುದು .ಇನ್ನೊಂದು ಗರಿ ಮೈಸೂರ್ ನಗರ ಕಿರೀಟಕ್ಕೆ ಸೇರಿದೆ .
ಮುಖ್ಯವಾಗಿ ಮಹಾರಾಜರ ಅರಮನೆ,ಜಯ ಚಾಮರಾಜೇಂದ್ರ ಮ್ರಗಾಲಯ,ಬ್ರಂದಾವನ,ಬೆಟ್ಟದ ಮೇಲೆ ನೆಲಸಿರುವ ತಾಯಿ ಚಾಮುಂಡೇಶ್ವರಿ ದೇವಿ ಮಂದಿರ
ಸ್ಟಾರ್ ಹೋಟೆಲ್ ಗಳು ಪ್ರವಾಸಿಗರನ್ನು ಆಕರ್ಷಿಸಿ ಇ ಕೀರ್ತಿ ಯನ್ನು ತಂದಿದೆ .ಲಂಡನ್ ನ ಮೇಣದ ಮ್ಯುಸಿಯುಂ ನ ನಂತರ ದ್ವಿತೀಯ ಸ್ಥಾನ ಪಡೆದಿದೆ .
ಮೈಸೂರ್ ರಾಜರ ಕಾಲದಲ್ಲಿ ರಾಜಧಾನಿ ಯಾಗಿರುವ ನಗರ ದಸರೆ ಯಿಂದ ಆಗ್ರಾದ ತಾಜ್ ಮಹಲ್ ಸಂದರ್ಶಿಸುವ ಪ್ರವಾಸಿಗರ ಸಂಖ್ಯೆಯನ್ನು ಮಿರಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ .
ಎಲ್ಲಾ ರಾಜಕೀಯ ಪಕ್ಷಗಳು ನಾಡಿನ ಜನತೆ ಸೇರಿ ದುಡಿದಾಗ ಇನ್ನೂ ಹೆಚ್ಚಿನ ಕೀರ್ತಿ ಪಡೆದು ಮೊದಲನೇ ಸ್ಥಾನಕ್ಕಾಗಿ ಬಯಸಬಹುದು .ವಿಮಾನ ,ರೈಲ್ವೆ ಮತ್ತು ಬಸ್ ಸೌಕರ್ಯ ನೈಸ್ ವಿವಾದ ಮುಗಿದು ಮೈಸೂರಿನ ತನಕ ರಸ್ತೆ ಜೋಡಣೆ .
ವಾಹನಗಳ ನಿಲುಗಡೆ ವ್ಯವಸ್ತೆ ,ನೀರು,ವಿಧ್ಯುತ್ ಮತ್ತು ಪ್ರವಾಸಿಗರಿಗೆ ನಿಲ್ಲಲು ಸೌಕರ್ಯ ಸರಿಯಾದ ಅನುಕೂಲಕರ ವಾತಾವರಣ ಬೇಕು .ಅತಿಥಿ ದೇವೋ ಭವ,ಹೆಣ್ಣು ಮಕ್ಕಳಿಗೆ ಗೌರವ ಚಿಕ್ಕ ವರಿಗೆ ಆಟದ ಮನೋರಂಜನೆ ನೀಡಬೇಕು .
ಕನ್ನಡ ನಾಡಿಗೆ ಸಿಕ್ಕಿರುವ ಇ ಸ್ಥಾನ ಹೆಮ್ಮೆಯ ವಿಷಯ .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ.
ಇದು ನಮ್ಮ ಸುಂದರ ಮೈಸೂರು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ
Friday, January 15, 2010
Subscribe to:
Post Comments (Atom)
No comments:
Post a Comment