Sunday, January 24, 2010

ಕಂಬಳ ಕರಾವಳಿ ರೈತರ ಒಂದು ಮನೋರಂಜನ್

ಕಂಬಳ ಇದು ಒಂದು ಕರಾವಳಿ ರೈತರ ಮನೋರಂಜನೆ ಮತ್ತು ಅಧಿಕ ಭತ್ತದ ಪಸ ಲಿಗೆ ಭಗವಂತನಲ್ಲಿ ಸಲ್ಲಿಸುವ ಹರಕೆಯಾಗಿದೆ
ಕರಾವಳಿ ಯಲ್ಲಿ ವಾಸಿಸುವ ರೈತರು ನಮ್ಮ ರಾಜ್ಯದ ಅನ್ನದಾತ .
ಇವರು ರಾಜ್ಯದಲ್ಲಿ ತೆಂಗು ,ಗೇರುಮತ್ಸ್ಯ ,ಭತ್ತಇತ್ಯಾದಿ ಕೃಷಿ ಯಿಂದ ರಾಜ್ಯದ ಜನತೆ ಗೆ ಆಹಾರ ಉತ್ಪಾದನೆಯಲ್ಲಿ ನೆರವಾಗುತ್ತಾರೆ .
ಮುಂಜಾನೆಯಿಂದ ಸಾಯಂಕಾಲ ದುಡಿಯುವಾಗ ರೈತರಿಗೆ ದಣಿವು ಆಗಿ ಸಂಪೂರ್ಣ ಮನೋರಂಜನೆಯ ಅಗತ್ಯ ವಿದೆ ..
ನ್ರತ್ಯ ,ಹಾಡು ಯಕ್ಷಗಾನ ,ತಾಳಮದ್ದಲೆ ,ಹೂವಿನ ಕೋಲು ,ಗೊಂಬೆಯಾಟ ಇತ್ಯಾದಿ ಸರಳ ಮಾಧ್ಯಮದಿಂದ ಸಾಮೂಹಿಕವಾಗಿ ಸೇರಿ ರಾತ್ರಿ ಕಳೆದು ಮಾರನೇ ದಿನದ ದುಡಿಮೆ ಗೆ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ .ಅ
ನನ್ನ ಚಿಕ್ಕಂದಿನಲ್ಲಿ ವಿಧ್ಯುತ್ ದೀಪದ ಬೆಳಕು ಕರಾವಳಿ ಜನರಿಗೆ ಇರಲಿಲ್ಲಾಸೀಮೆ ಎಣ್ಣೆ ,ಗಾಸ್ ಲೈಟ್ ನಲ್ಲಿ ಕಾರ್ಯ ಕ್ರಮ ಗಳು ನಡೆಯುತಿದ್ದವು
ಮೊದಲನೆಯದು ಯಕ್ಷಗಾನ .ಇಲ್ಲಿ ಜ್ಞಾನ ಪೀಟ ಪ್ರಶಸ್ತಿ ವಿಜೇತ ಕವಿ ಡಾಕೋಟ ಶಿವರಾಮ ಕಾರಂತರ ಹೆಸರು ಕೇಳದವರಿಲ್ಲ .ಸ್ವತಃ ಯಕ್ಷಗಾನ ಪಾತ್ರ ಧಾರಿಯಾಗಿ ನಟಿಸಿ ಕಲೆಯನ್ನು ಜನರಿಗೆ ಪರಿಚಯಿಸಿದ್ದಾರೆ .
ಕರಾವಳಿ ಜನತೆಗೆ ಕಲೆ ನೀರುಕುಡಿದಸ್ಟು ಸುಲಭ .ಇಲ್ಲಿ ಧರ್ಮಸ್ಥಳ ,ಸಾಲಿಗ್ರಾಮ ,ಪೆರ್ಡೂರುಮೇಳಗಳು ಪ್ರಮುಖವಾಗಿವೆ .
೨ ನೆಯ ದು ಹೂ ಕೋಲು ಇಲ್ಲಿ ಬಣ್ಣ ವಿಲ್ಲ ರಂಗ ಸ್ಥಳ ಕುಣಿತ ವಿಲ್ಲದೆ ಭಾಗವತರು ಪುರಾಣದ ಕೆಲವು ಭಾಗಗಳನ್ನು ಆರಿಸಿ ಸಾರ್ವಜನಿಕರಿಗೆ ಪರಿಚಯ ಮಾಡುತ್ತಾರೆ .ಪಾತ್ರ ಧಾರಿಗಳು ಇರುತ್ತಾರೆ .ಗದ್ದೆಯಲ್ಲಿ
೩ ನೆಯದು ಗೊಂಬೆಯಾಟ .ಇದು ಒಂದು ಯಕ್ಷಗಾನವೇ .ಆದರೆ ಮನುಷ್ಯರ ಬದಲು ಗೊಂಬೆ ಗಳು ಪೌರಾಣಿಕ ಪ್ರಸಂಗಗಳನ್ನು ಜನರ ಮುಂದಿಡುತ್ತಾರೆ .ಇಲ್ಲಿ ಭಾಗವತರು ಪ್ರಸಂಗ ಹೇಳುವಾಗ ಪುರಾಣ ದಲ್ಲಿ ಬರುವ ಪಾತ್ರಗಳನ್ನುಗೊಂಬೆಗಳು ಕುಣಿದು ತೋರಿಸುತ್ತಿವೆ .
ಈಗ ಕಂಬಳಗಳ ಬಗ್ಗೆ ತಿಳಿಯೋಣವೆ ?
ನೂರಾರು ವರ್ಷಗಳ ಇತಿಹಾಸ ಇರುವ ಕರ್ನಾಟಕ ಕರಾವಳಿ ರೈತರ ಪಂದ್ಯವಾಗಿದೆ .ಸಾಮಾನ್ಯವಾಗಿ ಮನುಷ್ಯರ ಓಟ ಮತ್ತು ಪಂದ್ಯದ ಬಗ್ಗೆ ನೀವೆಲ್ಲರೂ ಕೇಳಿದ್ದಿರಿ .ಆದರೆ ಇ ಕಂಬಳದಲ್ಲಿ ರೈತರು ಮತ್ತು ಕೋಣಗಳಜೊತೆಯಾದ ಪಾತ್ರವಿದೆ .ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವಿನ ಪಂದ್ಯವಾಗಿರುತ್ತದೆ.ಒಂದನೇ ಪಸಲು ತೆಗೆದ ನಂತರ ಗದ್ದೆಯ ಮಣ್ಣು ಹದ ಮಾಡಬೇಕಾಗುತ್ತದೆ ..ಮಳೆ ಬರುವುದರಿಂದ ಗದ್ದೆಯಲ್ಲಿ ಕೆಸರು ತುಂಬಿರುತ್ತದೆ ಹಲ ಓಡಿಸಲು ಕಷ್ಟಕರ .ರೈತನು ಕೋಣ ಸೇರಿ ಮಣ್ಣು ಭತ್ತದ ಬಿತ್ತನೆಗಾಗಿ ಒಂದು ಓಟದ ಸ್ಪರ್ದೆ ಇಟ್ಟಿರುತ್ತಾರೆ .೨ ಜೊತೆ ಕೋಣ ಇಬ್ಬರು ರೈತರು ಬಾರುಕೋಲಿನ ಸಹಾಯದಿಂದ ಎತ್ತನ್ನು ಒಡಿಸಿತಾವೂ ಓಡುತ್ತಾರೆ.ಪ್ರಥಮ ಜೋಡಿಗೆ ಬಹುಮಾನ ಘೋಷಿಸುತ್ತಾರೆ .
ಇಲ್ಲಿ ಕಂಬಳ ಸಮಿತಿ ರಚಿಸಿದ್ದಾರೆ .ಸಮಿತಿಯ ಕಡೆಯಿಂದ ೧೭ ಕಂಬಳಗಳುನಡೆಯಲಿವೆ .ವಂಡಾರ [[ ಕುಂದಾಪುರ ]ಕದ್ರಿ [ಮಂಗಳೂರು] ಕೆಲವು ರೈತರು ಒಳ್ಳೆಯ ಪಸಲು ಬಂದು ನಮ್ಮ ನಾಡಿಗೆಶುಭ ವಾಗಲಿ ಎಂದು ಭಗವಂತ ನಿಗೆ ಹರಕೆ ಹೊತ್ತು ಹರಕೆ ಪೂರೈಸುವ ಸಲುವಾಗಿ ಕಂಬಳ ಪಂದ್ಯದ ಏರ್ಪಾಡು ಮಾಡಿರುತ್ತಾರೆ .ಇತ್ತೀಚೆಗಿನ ದಿನಗಳಲ್ಲಿ ಬೆಟ್ಟಿಂಗ್ ಕೋಳಿ ,ಕುದುರೆಯಿಂದ ಕಂಬಳದ ಕೋಣಗಳ ಮೇಲೂ ಬಂದಿದೆ .
ಜನರು ಹುಚ್ಚರೋ ಜಾತ್ರೆ ,ಕಂಬಳ ಅಥವಾ ಕೈ ಯಲ್ಲಿ ಆಡುವ ಲಕ್ಷ್ಮಿ ಮಹಿಮೆಯೋ ತಿಳಿಯ ಲಾಗದು .
ಇದು ನಮ್ಮ ಭವ್ಯ
ಭಾರತದ ನವ ನಿರ್ಮಾಣ ವೇದಿಕೆಯ ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಭಾಗ -೬ ನಮ್ಮ ಸುಂದರ ಕರಾವಳಿ ನೋಟ .
ಕುಂದಾಪುರನಾಗೇಶ್ ಪೈ
ಜೈ ಕರ್ನಾಟಕ ಮಾತೆ.

No comments: