Saturday, November 15, 2008

ಈಗ ಮಕ್ಕಳ ದಿನಾಚರಣೆ ಮುಂದೇನು ?

ಮಕ್ಕಳ ದಿನಾಚರಣೆ ಕೇವಲ ನವೆಂಬರ್ ೧೪ ಕ್ಕೆ ಮಾತ್ರ ಸೀಮಿತ ವಾಗಿ ಇರಬಾರದು .ಇದು ಒಂದು ನಿರಂತರ ಅಭಿವ್ರದ್ಧಿ ಯ ಹಾಗೂ ಮಕ್ಕಳ ಭವಿಷ್ಯದ ಬಗ್ಗೆ ಸರಕಾರವು ಮಾಡಲೇ ಬೇಕಾದ ಕರ್ತವ್ಯವು ಹೌದು .
ಇದರಲ್ಲಿ
೧ ಪೋಷಕರು
೨ ಶಿಕ್ಷಕರೂ
೩ ನಮ್ಮ ಸಮಾಜ
೪ ರಾಜ್ಯ /ಕೇಂದ್ರ ಸರಕಾರದ ಸಂಪೂರ್ಣ ಜವಾಬ್ದಾರಿ ಇದೆ .
ಪೋಷಕರು ಮಕ್ಕಳ ಚಿಕ್ಕಂದಿ ನಿಂದಲೇ ಅವರನ್ನು ಭಾರತೀಯ ಸಂಸ್ಕ್ರತಿ ಯ ಜೊತೆಗೆ ಉತ್ತಮ ಪ್ರಜೆಯಾಗುವ ಶಿಕ್ಷಣ ಮನೆಯಲ್ಲಿ ಕೊಟ್ಟರೆ ಮಾತ್ರ ದೇಶದ ನಾಗರಿಕ ರಾಗಬಹುದು
ಇವರಿಗೆ ಮಾರ್ಗ ದರ್ಶನದ ಅವಶ್ಯಕತೆ ಇದೆ .
ಈಗ ಹೆತ್ತವರು ಅವರ ಸ್ವಂತ ವಿಷಯದಲ್ಲಿ ತೊಡಗಿಸಿ ಮಕ್ಕಳನ್ನು ನೋಡಿ ಕೊಳ್ಳುವ ಕೆಲಸ ನೌಕರರರಿಗೆ ವಹಿಸಿ ತಮ್ಮ ಉದ್ಯೋಗ ಕ್ಕೆ ಹೋಗುತ್ತಾರೆ .ಇದು ತಪ್ಪಲ್ಲ .ಆದರೆ ಇವರ ಗಮನ ಕ್ಕೇಸದಾ ಬಿಟ್ಟು ಹೋಗ ಬಾರದು .
ಅಧ್ಯಾಪಕರು ತಮ್ಮ ವಿಧ್ಯಾರ್ಥಿ ಗಳನ್ನೂ ಸುಸಂಸ್ಕ್ರಥ ನಾಗರಿಕನಾಗಿ ಮಾಡುವ ಮಹತ್ತರ ಜವಾಬ್ದಾರಿ ಹೊರಬೇಕು .
ಸಮಾಜ /ಸರಕಾರ ಕ್ಕೂ ಇವರ ಮೇಲೆ ನಿಗಾ ಇಡುತ್ತ ಎಡವಿದಾಗ ಸರಿ ದಾರಿ ತೋರಿಸಿ ದೇಶದ ಮುಂದಿನ ಸತ್ಪ್ರಜೆ ಮಾಡಬೇಕು .ನೀವು ನೋಡುವ ಹಾಗೆ ಉಗ್ರರ ಉಪಟಳ ವಿರಲಾರದು .ನಕ್ಷಲರ ಭೀತಿ ಇರುವುದಿಲ್ಲ .
ಕೊನೆಯದಾಗಿ ನಗರಗಳ ಕೊಳಚೆ ಪ್ರದೇಶದ ಮಕ್ಕಳ ಸುಧಾರಣೆಗಾಗಿ ಸರಕಾರವು ಸೂಕ್ತ ಕ್ರಮ ತೆಗೆದುಕೊಳ್ಳಬೇಕು .
ಭವ್ಯ ಭಾರತದ ನವ ನಿರ್ಮಾಣಕ್ಕೆ ಇದು ನಾಂದಿ ಯಾಗ ಬೇಕು .
ಶುಭಮಸ್ತು
ಸರ್ವೇ ಜನ ಸುಕಿನೋ ಭವಂತು :
ನಾಗೇಶ್ ಪೈ
ಜೈ ಹಿಂದ್

No comments: