Tuesday, March 3, 2009

ಪಾಕ್ ನೆಲದಲ್ಲಿ ಉಗ್ರರ ಕ್ರಿಕೆಟ್ ತಂಡದ ಮೇಲೆ ಧಾಳಿ .

ಭಯೋತ್ಪಾದಕರ ನೆರಳು ಈಗ ಪಾಕ್ ನೆಲದಲ್ಲಿ ಕಂಡು ಬಂದಿದೆ .
ನಿನ್ನೆ ಬೆಳಿಗ್ಗೆ ನಡೆದ ಉಗ್ರರ ಸಿಂಹಳಿಯರ ಕ್ರಿಕೆಟ್ ತಂಡದ ಸದಸ್ಯರ ಮೇಲೆ ನಡೆದ ಧಾಳಿ ಜಾಗತಿಕ ಶಾಂತಿ ಕೆದಡಿದೆ.
ವಿಶ್ವದ ಎಲ್ಲಾ ರಾಷ್ಟ್ರ ಗಳು [ಭಾರತವೂ ಸೇರಿ ]ಇದನ್ನು ಖಂಡಿಸಿವೆ .ಮತ್ತು ಭಯೋತ್ಪಾದಕರ ಸಂಪೂರ್ಣ ನಾಶಕ್ಕೆ ಶಿಗ್ರ ಕ್ರಮ ಕೈ ಗೊಳ್ಳುವಂತೆ ವಿಶ್ವ ಸಮುದಾಯ ವನ್ನು ಮನವಿ ಮಾಡಿದೆ .ಈಗ ಪುನಃ ಪಾಕ್ ಸರಕಾರವೂ ಭಾರತದ ಮೇಲೆ ಗೂಭೆ ಕೂರಿಸುವ ಪ್ರಯತ್ನ ಮಾಡಿದೆ .ಭಯೋತ್ಪಾದನೆ ಅಳಿಸಿ ವಿಶ್ವ ವನ್ನು ಉಳಿಸಿ ಅಭಿಯಾನ ಘೋಷಣೆ ಮಾಡಿದ ನಮ್ಮ ಭಾರತ ದೇಶವು ವಿಶ್ವ ಶಾಂತಿ ಗಾಗಿ ಸ್ವಾಮಿ ವಿವೇಕಾನಂದ,ಮಹಾತ್ಮ ಗಾಂಧೀಜಿ ಯವರ ಸಿದ್ಧಾಂತ ವನ್ನು ಇಡೀ ಜಗತ್ತಿಗೆ ಸಾರುತ್ತಲೇ ಬಂದಿರುವಾಗ ಪಾಕ್ ತನ್ನ ಹಳೇ ಚಾಳಿ ಬಿಡದೇ ಭಯೋತ್ಪಾದನೆ ಯನ್ನು ಪ್ರಚೋದನೆ ನೀಡುವುದು ದುರದ್ರಸ್ಟಕರ ಸಂಗತಿ .
ಇದನ್ನು ವಿಶ್ವದ ಎಲ್ಲಾ ರಾಷ್ಟ್ರಗಳು ಮನವರಿಕೆ ಮಾಡಿ ಕೊಂಡಿವೆ .ವಿಶ್ವ ದಲ್ಲಿ ಅತೀ ಹೆಚ್ಚು ಮಾನ್ಯತೆ ಹೊಂದೀರುವ ಟೀಂ ಇಂಡಿಯಾ ದ ರಕ್ಷಣೆ ನಮ್ಮೆಲರ ಅಧ್ಯ ಕರ್ತವ್ಯ .ನಮ್ಮ ಕೇಂದ್ರ ಸರಕಾರ ಮತ್ತು ಕ್ರಿಕೆಟ್ ಮಂಡಳಿಗಳು ಇದರ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ತೆಗೆದು ಕೊಳ್ಳ ಬೇಕೆಂದು ಪ್ರಾರ್ಥಿಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು .
ನಾಗೇಶ್ ಪೈ .
ಜೈ ಹಿಂದ್ .

No comments: