Tuesday, December 8, 2009

ತ್ಯಾಗ ,ಬಲಿದಾನದ ಪ್ರವ್ರತ್ತಿ ಬೆಳೆಯಲಿ

ವ್ಯಕ್ತಿತ್ವ ವಿಕಾಸ -ಭಾಗ -೧ [ಸಂಗ್ರಹಿಸಿರುವುದು ]
ಚರಿತ್ರೆ ಅಂತರ್ಜಾಲದಲ್ಲಿ ಲಭ್ಯ
ಬ್ರೀಟಿಶರೆ ಭಾರತ ಬಿಟ್ಟು ತೊಲಗಿರಿ ಎನ್ನುವ ಕೂಗು ನಮ್ಮ ದೇಶದ ಮೂಲೆ ಮೂಲೆ ಯಿಂದ ಕೇಳಿ ಬರುತ್ತಿತ್ತು . ಅಂದಿನ ಯುವಕರು ಸರ್ವ ತ್ಯಾಗ ,ಬಲಿದಾನದ ಭಾವನೆ ಯಿಂದ ಸರ್ವ ಜಾತಿ /ಧರ್ಮ ಮತ್ತು ಹೆಣ್ಣು ಗಂಡು ಲೆಕ್ಕಿಸದೆ ಗುರಿಯೊಂದೆ ಕೇವಲ ಭಾರತಕ್ಕೆ ಸ್ವಾತಂತ್ರ್ಯ ಬೇಕು .ವಯಸ್ಸನ್ನು ನೋಡದೆ ಸಂಗ್ರಾಮ ದಲ್ಲಿ ಧುಮುಕಿದರು .ಅದರ ಫಲ ವಾಗಿ ಸಿಕ್ಕಿದ ಸ್ವಾತಂತ್ರ್ಯಕ್ಕೆ ೬೨ ವರುಷ ಕಳೆದವು .ಆ ಸಮಯದಲ್ಲಿ ಎಲ್ಲಾ ಭಾಷೆ ಮಾತನಾಡುವವರು ಒಂದಾಗಿದ್ದರು .
ಹಣ ,ಸ್ಥಾನ ಪದವಿಗಾಗಿ ಹಾತೊರೆಯದೆ ಜಪಿಸುವ ಮಂತ್ರ ಒಂದೇ 'ನಮಗೆ ಸ್ವಾತಂತ್ರ್ಯ ಬೇಕು ' ಇಲ್ಲಿ ಇರುವ ಮನೋಭಾವನೆಯನ್ನು ಇಂದಿನ ಯುವಕರು ದಯವಿಟ್ಟು ಗಮನಿಸಿ .
ಆದರೆ ಚುನಾವಣೆ ಬಂತು ಆಕ್ಷಣವೇ ಹಣದ ಪ್ರಭಾವ ಶುರು .ಇಲ್ಲಿ ಯಾವ ಪಕ್ಷ ಮುಖ್ಯವಲ್ಲ .ವೀಡಿಯೊ ಚಿತ್ರಣ ನೀವು ಇ ಮೊದಲು ನೋಡಿರ ಬಹುದು .ಪುನರಾವರ್ತನೆ ಆಗುವುದು ನಿಜ.
ವ್ಯಕ್ತಿತ್ವ ವಿಕಾಸದಲ್ಲಿ ಸಭ್ಯತೆ ನಾಗರೀಕತೆ ಬಹು ಮುಖ್ಯ .ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ನಡೆದುಕೊಳ್ಳುವ ರೀತಿಯನ್ನು ಇಲ್ಲಿ ಬರೆಯುವುದು ನನಗೆ ಸರಿ ಎಂದು ಕಾಣಿಸಲಾರದು .ಏಕೆಂದರೆ ಮಾಧ್ಯಮ ಗಳು ಚಿತ್ರೀಕರಣ ಮಾಡಿ ಜನರ ಮುಂದೆ ಇಡುತ್ತಾರೆ .
ಸಭ್ಯತೆ ,ತ್ಯಾಗ ಮತ್ತು ಬಲಿದಾನದ ಪಾಟ ಎಲ್ಲಿ ಹೋಗಿದೆ .ಕೇವಲ ಚರಿತ್ರೆ ಪುಸ್ತಕ ಖರಿದಿಸಿ ಓದಿದಾಗ ಸಿಗಬಹುದು .ಈಗಿನ ಯುವಜನತೆ ಭವ್ಯ ಭಾರತ ನಿರ್ಮಾಣ ಮಾಡಬಲ್ಲರೆ .ಅಥವಾ ಕುಟುಂಬ ರಾಜಕಾರಣ ಮಾಡುತ್ತ ಮುಖ್ಯಮಂತ್ರಿ /ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿ ಸ್ಥಾನಕ್ಕಾಗಿ ಹಂಬಲಿಸುತ್ತ ಪ್ರಜೆ ಗಳ ಹಿತ ವನ್ನು ಮಣ್ಣು ಮಾಡುತ್ತಾರೆಯೇ ಎನ್ನುವ ಪ್ರಶ್ನ್ನೆ ಉಧ್ಭವ ವಾಗುವುದು ಸಹಜ .
ಒಳ್ಳೆಯದನ್ನೇ ಬಯಸುವ ನಾವು ಆಶಾವಾದಿಗಳು.
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

No comments: