Wednesday, December 16, 2009

ಶಿಸ್ತಿನ ಜೀವನ ,ಮಾತಿನ ಪರಿಪಾಲನೆ ಸುಗಮ ಜೀವನಕ್ಕೇಹದಿ

ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೩ ಶಿಸ್ತು ,ಸಂಯಮ ನುಡಿದಂತೆ ನಡೆಯುವುದು ,ಕರ್ತವ್ಯ ನಿಸ್ಟೆ ,ಅರ್ಪಣೆ ಮನೋಭಾವ ಬಾಲ್ಯ ದಲ್ಲಿ ಶಾಲಾ /ಕಾಲೇಜ್ ನಲ್ಲಿ ತರಬೇತಿ ಹೊಂದಿ ಜೀವನ ದಲ್ಲಿ ಕರಗತ ಮಾಡಿಕೊಂಡರೆ ಅದರ ಸಂಪೂರ್ಣ ಲಾಭ ವಿಮಾಯೋಜನೆ ಹಾಗೇಕೊನೆ ತನಕ ನಿವತ್ತಿ ವೇತನ ದ ರೂಪದಲ್ಲಿ ಸಿಗುವುದು .ಉದಾಹರಣೆ :ನಾನು ನೀಲಗಿರಿ ಜಿಲ್ಲೆಯಲ್ಲಿ ಬ್ಯಾಂಕ್ ಉಧ್ಯೋಗದಲ್ಲಿ ಇರುವಾಗ ದಿವಂಗತ ಫೀಲ್ಡ್ ಮಾರ್ಷ ಲ್ ಮಾಣೆಕ್ ಷಃ ಅವರನ್ನು ಭೇಟಿ ಮಾಡುವ ಸಂಧರ್ಭ ಸಮಯ ಮುಂಜಾನೆ ೧೦.೩೦ .ನಾವು ೧೦ ಘಂಟೆ ಯಲ್ಲಿ ಅವರ ಭೇಟಿಯ ಬಾಲ್ಕನಿ ಯಲ್ಲಿ ಕಾಯುತ್ತಿದ್ದೆವು .ಸಮಯ ೧೦.೩೦ಕ್ಕೆ ಸರಿಯಾಗಿ ಅವರು ಭೇಟಿಯ ಪೂರ್ಣ ಸಮ ವಸ್ತ್ರ ದಲ್ಲಿ ಕಾಣಿಸಿ ವಿನಯತೆಯಿಂದ ನಮ್ಮನ್ನು ಮಾತನಾಡಿಸಿದರು. ನಾವು ಗಮನಿಸಬೇಕಾದ ವಿಷಯ ಸಮಯ ಪ್ರಜ್ನೆ .ರೈಲ್ವೆ /ವಿಮಾನದಲ್ಲಿ ಪ್ರಯಾಣಿಸುವವರು ಸಮಯ ತಪ್ಪಿದರೆ ಎಷ್ಟು ತೊಂದರೆಗೆ ಒಳಗಾಗುತ್ತಿರಿಎನ್ನುವ ಬಗ್ಗೆ ನಿಮಗೆ ತಿಳಿದಿದೆ .ನಾಳೆ ಮಾಡುವ ಎಲ್ಲಾಕೆಲಸಗಳನ್ನು ಇಂದು ಯೋಜನೆ ಹಾಕಿ ಪೂರ್ವ ತಯ್ಯಾರಿ ಮಾಡಿ ಕೊಂಡಾಗಗಾಬರಿ ಆಗುವ ಪ್ರಮೇಯ ಬರುವದಿಲ್ಲ .ಕೆಲಸದ ಒತ್ತಡ ,ಸಮಯದ ಅಭಾವ ಇದ್ದರೂ ಯೋಜನೆ ಹಾಕಿದರೆ ಸುಸೂತ್ರ ವಾಗಿ ನಡೆಯುವುದರಲ್ಲಿ ಏನೂ ಸಂಧೇಹವಿರಲಾರದು .ಗುರುತಿನ ಕಾರ್ಡ್ ,ಕನ್ನಡಕ ,ಫೋನ್ ಕಾರಿನ ಕೀಲಿ ಇತ್ಯಾದಿ ಮರೆಯದೆ ಕಚೇರಿ ಯನ್ನು ಸಮಯದಲ್ಲಿ ತಲುಪಿದಾಗ ದಿನದ ಕೆಲಸದಲ್ಲಿ ತ್ರಪ್ತಿ ಸಿಗುತ್ತದೆ ತಿಂಗಳ ಕೊನೆಯಲ್ಲಿ ಸಂಭಳಸಿಗುವುದು .ಅಡಿಗೆ ಮನೆಯಲ್ಲಿ ಟೀ/ಕಾಫಿ ಮಾಡುವಾಗ ಸಕ್ಕರೆ ಬದಲು ಉಪ್ಪು ಹಾಕಿ ರುಚಿ ಕೆಡಿಸಿದ ಘಟನೆ ಕೇಳಿರಬಹುದು .ಯಾವ ಪದಾರ್ಥ ಎಲ್ಲಿ ಇಡಬೇಕು ಎಂದು ನಿರ್ಧರಿಸಿದಾಗ ಹುಡುಕುವ ಕೆಲಸವಿಲ್ಲ ಮತ್ತು ತಪ್ಪಾಗಲಾರದು .ವರ್ಕ್ ಟುಪ್ಲಾನ್ ಪ್ಲಾನ್ ಟು ವರ್ಕ್ [ಕೆಲಸ ಮಾಡುವಾಗ ಯೋಜನೆ ,ಯೋಜನೆಯಂತೆ ಕೆಲಸ ] ಸುಲಭ ಮತ್ತು ಸಂತೋಷ ,ನೆಮ್ಮದಿಯ ಜೀವನಕ್ಕೆ ಹಾದಿ.ಇ ದಾರಿಯಲ್ಲಿ ನಡೆದವರು ಜೀವನ ಪೂರ್ತಿ ಅರೋಗ್ಯ ,ಮನಸ್ಸು ಚೆನ್ನಾಗಿ ಇಟ್ಟುಅಧಿಕ ವರ್ಷ ಬಾಳಿ ಬದುಕುವುದು ಮಾತ್ರವಲ್ಲದೆ ಕುಟುಂಬದ ಎಲ್ಲಾ ಸದಸ್ಯರನ್ನು ಚೆನ್ನಾಗಿ ಸಂತೋಷ ವಾಗಿ ನೋಡಿಕೊಳ್ಳುತ್ತಾರೆ
ನೀವು ಪುಣ್ಯಕೋಟಿ ಗೋವಿನ ನಾಟಕ ನೋಡಿರಬಹುದು ಅಥವಾ ಹಾಡು ಮಾಧ್ಯಮ/ಪುಸ್ತಕ ಗಳಲ್ಲಿ ಓದಿರಬಹುದು .
ಸಂದೇಶ ಮಾತಿನಂತೆ ನಡೆದುಕೊಳ್ಳಬೇಕು ಇದು ಪ್ರತಿಯೊಬ್ಬ ಮನುಷ್ಯ ಜಾತಿ /ಸಮಾಜ ಮತ್ತು ಸರಕಾರಕ್ಕೆ ಅನ್ವಯ ವಾಗುವುದು .
ಉಧ್ಯೋಗ ದಲ್ಲಿ ಅರ್ಪಣೆ ,ನಿಸ್ಟೆ ಮನೋಭಾವ ಇರುವವರಿಗೆ ಯಶಸ್ಸು ಖಂಡಿತ .
ಇದು ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್

No comments: