Tuesday, June 21, 2011

ದೇವಸ್ಥಾನ ಗಳಲ್ಲಿ ರಾಜಕಾರಣಿಗಳ ಚರ್ಚೆ ಬೇಡ

ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ದೇವಸ್ಥಾನ ಗಳನ್ನೂ ರಾಜಕೀಯಕ್ಕೆ ತರಬಾರದು .
ರಾಜಕೀಯದಲ್ಲಿ ಸ್ವಾರ್ಥಕ್ಕಾಗಿ ಮುಖ್ಯಮಂತ್ರಿ ಪದವಿಗಾಗಿ ಪಕ್ಷಗಳು ಒಬ್ಬರ ಮೇಲೆ ಇನ್ನೊಬ್ಬರು ಬೀಳುವ ಖುರ್ಚಿಗಾಗಿ ಹೊರಾಟ ನಿರಂತರವಾಗಿ ನಡೆದು ರಾಜ್ಯದ ಜನತೆಗೆ ಒಂದು ರೀತಿಯಲ್ಲಿ ಮೋಜು ಮತ್ತು ಬೇಸರವನ್ನು ಉಂಟು ಮಾಡಿದೆ .ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆಯವರು ಸ್ಥಳದ ಮಹಾತ್ಮೆ ಮತ್ತು ಪ್ರಮಾಣ ಮತ್ತು ಆಣೆಯ ಬಗ್ಗೆ ವಿವರಣೆ ಮಾಜಿ ಮತ್ತು ಹಾಲಿ ಮುಖ್ಯಮಂತ್ರಿ ಗಳಿಗೆ ವಿವರ ಕೊಟ್ಟರು .
ಈಗ ಬರುವ ಭಾನುವಾರ ಇದು ನಡೆಯುವುದೇ ಕಾದು ನೋಡಬೇಕು .
ಇಂತಹ ಸನ್ನಿವೇಶ ರಾಜ್ಯದಲ್ಲಿ ಮುಂದೆ ಬರಬಾರದು .
ಪತ್ರಿಕೆ ಮತ್ತು ಮಾಧ್ಯಮಗಳ ಮುಖ ಪುಟಗಳಲ್ಲಿ ಬಂದು ಜನರ ಚರ್ಚೆಯ ವಸ್ತು .
ಇ ವಿಷಯದಲ್ಲಿ ತರಿಗೆ ಹಣ ಮತ್ತು ಸಮಯ ಕಳೆಯುವುದು ಸಮಂಜಸವಲ್ಲ.
ಅಭಿವ್ರದ್ಧಿ ಕೆಲಸ ಇರುವಾಗ ಪ್ರಜೆಗಳಿಂದ ಆರಿಸಿಕೊಂಡು ವಿಧಾನಸಭೆ ಪ್ರವೇಶ ಮಾಡಿ, ದೇವಸ್ಥಾನ ಗಳಲ್ಲಿ ಆಣೆ ಪ್ರಮಾಣ ಮಾಡುವ ಕಾರ್ಯಕ್ರಮ ವಿರೊಧಿಸಿ .
ಪ್ರತಿಜ್ನೆ ಸ್ವೀಕಾರ ಮಾಡಿದ ಮೇಲೆ ಆಡಳಿತ ಅವಧಿಯಲ್ಲಿ ಪುನಃ ಇದರ ಅವಶ್ಯಕತೆ ಬರುವುದಿಲ್ಲ .
ದೇವರ ಮುಂದೆ ಬೇಡುವ ಅಧಿಕಾರ ಮಾತ್ರ ಇದೆ .
ಕರ್ನಾಟಕ ರಾಜ್ಯ ಮತ್ತು ಜನತೆಯನ್ನು ದೇವರು ಕಾಪಾಡಲಿ ಎಂದು ಬೇಡಿಕೊಳೋಣ .
ಕುಂದಾಪುರ ನಾಗೇಶ್ ಪೈ .

No comments: