Friday, March 13, 2009

ಭಾರತದ ಮುಂದಿನ ಪ್ರಧಾನಿ ಯಾರು ?

ತ್ರತೀಯ ರಂಗದ ಪ್ರಧಾನಿ ಅಭ್ಯರ್ಥಿಗೆ ೧೫ ನೇ ಲೋಕ ಸಭೆ ಯಲ್ಲಿ ಪುನಃ ಪ್ರವೇಶ ಸಿಗ ಬಹುದೇ ?
ನಿನ್ನೆ ದಾಬಸ್ ಪೇಟೆ ಯಲ್ಲಿ ನಡೆದ ಬ್ರಹತ್ ಸಭೆ ಸಭೆಯ ನಂತರ ದೇಶದ ಮತ್ತು ಕರ್ನಾಟಕ ಜನತೆ ಗೆ ಕಾಡಿದ ಬಹು ದೊಡ್ಡ ಪ್ರಶ್ನೆಯಾಗಿದೆ .ಇಷ್ಟು ದಿನ ಸುಮ್ಮನೆ ಆಗಿದ್ದ ಪೂರ್ವ ಪ್ರಧಾನಿ ಶ್ರೀಯುತ ಎಚ್ ಡಿದೇವೇ ಗೌಡರು ಏಕಾಏಕಿ ತಮ್ಮ ಕತ್ತಿಮಸೆದು ಯುದ್ಧ ಕ್ಕೆ ಸನ್ನದ್ಧ ರಾಗಿರುವುದನ್ನು ನೋಡಿದರೆ ೧೯೯೬ ಚರಿತ್ರೆ ಪುನಃ ರಚಿಸುವುದೇ ? ಜಾತಕ,ದೇವರು ಶಾಸ್ತ್ರ ನಂಬಿದ ಗೌಡ ರಿಗೆ ಇದು ಹೊಸದೇನಲ್ಲ .ಸೊಸೆಗೆ ವಿಧಾನ ಸಭೆಯ ಸದಸ್ಯ ಸ್ಥಾನ ಸಿಕ್ಕಿರುವುದು ಒಂದು ನಿದರ್ಶನ ವಾಗಿದೆ .ಇಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳು ಸವಿವರವಾಗಿ ಗೌಡರ ಸಂಸದ್ ನಲ್ಲಿ ಮಾಡಿದ ಸಾಧನೆ ,ಕ್ಷೇತ್ರ /ರಾಜ್ಯ ದ ಮೇಲಿನ ಆಸಕ್ತಿ ಯನ್ನು ಅಲ್ಲದೆ ಸಂಸದ್ ಸದಸ್ಯ ನ ಹಣದ ಬಳಕೆ /ಉಪಯೋಗಿಸಿದ್ದು ,ಹಾಜರಾತಿ ಇತ್ಯಾದಿ ಪ್ರಕಟಿಸಿದೆ .
ಭಾರತದ ದಲ್ಲಿ ಮೇಧಾವಿ ಅಟಲ್ ಬಿಹಾರಿ ವಾಜಪೇಯೀ ಯವರ ಭಾರತೀಯ ಜನತಾ ಪಕ್ಷ .ಡಾ ಮನ್ಮೋಹನ್ ಸಿಂಗ್ ಅವರ ಕಾಂಗ್ರೆಸ್ ದೇಶದ ಸರ್ವತೋಮುಖ ಅಭಿವ್ರದ್ಧಿ ಗಾಗಿ ದುಡಿ ದಿದೆ.ಹೀಗಿರುವಾಗ ಗೌಡ ರ ಪ್ರಯತ್ನ ಸಫಲ ವಾಗುವುದೇ ಕಾದು ನೋಡ ಬೇಕಾಗಿದೆ .
ಸರ್ವೇ ಜನ ಸುಕಿನೋ ಭವಂತು :
ದೇಶವು ಯೋಗ್ಯ ನಿಸ್ವಾರ್ಥಿ ಪ್ರಧಾನಿ ಯನ್ನು ಕಾಣಲಿ ಎಂದು ಹಾರೈಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

No comments: