Tuesday, June 23, 2009

ಸಂಪತ್ತು ಶಬ್ದದ ಸರಿಯಾದ ಅರ್ಥ ತಿಳಿದು ಜೀವನ ನಡೆಸಿರಿ

ಸಂಪತ್ತು ಎನ್ನುವ ಶಬ್ದದ ಸರಿಯಾದ ಅರ್ಥ ವನ್ನು ೫.೫ ಕನ್ನಡಿಗರು ತಿಳಿದು ಕೊಳ್ಳುವ ಅವಶ್ಯಕತೆ ಈಗ ಬಂದಿದೆ .
ಏಕೆಂದರೆ ಸಾಮಾನ್ಯ ಜನತೆ ನಗದು ಹಣ ,ಬ್ಯಾಂಕ್ ನಲ್ಲಿ ಇರುವ ಠೇವಣಿ ,ಚಿನ್ನಾಭರಣ ,ಬೆಳ್ಳಿ ಆಸ್ತಿ ಸ್ಥಿರ ಚರ ಇತ್ಯಾದಿ ತಿಳಿದು ಕೊಳ್ಳುತ್ತಾರೆ ಆದರೆ ಉಳುವ ರೈತ ಕಾರ್ಖಾನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕ /ಉದ್ಯಮಿ ಮುಕ್ಖ್ಯವಾಗಿ ದೇಶದ ರಕ್ಷಣೆ ಮಾಡುವ ವೀರಯೋಧ ನಾಗರೀಕರರಕ್ಷಣೆ ಮಾಡುವ ಪೋಲಿಸ್ ಇಲಾಖೆ ,ನದಿಗಳು /ಅಣೆಕಟ್ಟು ಗಳು ,ಅಣು ವಿಜ್ಞಾನಿಗಳು
ವೈದ್ಯಕೀಯ /ಶಿಕ್ಷಕರು ಅಲ್ಲದೆ ಮುಂದಿನ ಭವ್ಯ ಭಾರತದ ಪ್ರಜೆ ಗಳಾಗಿರುವ ಇಂದಿನ ಮಕ್ಕಳು ಮತ್ತು ಅವರ ಹೆತ್ತವರು .
ಸಾರ್ವಜನಿಕ ಸಂಪತ್ತು /ಆಸ್ತಿ ಗಳಾದ ಬಸ್ /ರೈಲ್ /ವಿಮಾನ ಇತ್ಯಾದಿ
ಕೊನೆಯದಾಗಿ ಮನುಷ್ಯ ,ಪ್ರಾಣಿ ಪಕ್ಷಿ ಸಮೂಹ /ವನ /ಪುರಾತನ ಮರ ಹೀಗೆ ಬರೆದರೆ ಅಂತ್ಯ ಇಲ್ಲದಂತಹ ರಾಶಿ ಕಂಡು ಬರುತ್ತದೆ .
ನಮ್ಮ ಸುಂದರ ಮೈಸೂರಿನಲ್ಲಿ ರಸ್ತೆ ಅಗಲೀಕರಣ ದ ನೆಪ ದಲ್ಲಿ ಸಂಪತ್ತು ನಾಶ ವಾಗುವುದನ್ನುಗಮನಿಸಿದಾಗ
ಮೈಸೂರು ಚಾರಿತ್ರಿಕ /ಪ್ರೇಕ್ಷಣಿಯ ಹಿನ್ನಲೆ ಕಲೆ ಯ ಪೋಷಣೆಯ ನಗರ ಸೌಂದರ್ಯ ಕೆಡುವುದನ್ನು ನಿಲ್ಲಿಸ ಬೇಕು .
ಕಾರಂಜಿ ಕೆರೆ ,ಮ್ರಗಾಲಯ ಪ್ರಕ್ರತಿ ಸಂಪನ್ಮೂಲ ವನ್ನು ಕೆಡಿಸಬಾರದು.
ಮ್ರಗಾಲಯದ ಪ್ರಾಣಿ /ಪಕ್ಷಿ ಗಳಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ .
ರಾಜಕೀಯ ಲಾಭಕ್ಕಾಗಿ ಜನತೆ ಪ್ರತಿ ಭಟನೆ ನಡೆಸಿ ಸಾರ್ವಜನಿ ಕ ಆಸ್ತಿ /ಸಂಪತ್ತು ಹಾಳುಮಾಡುವುದನ್ನು ಜನತೆ ವಿರೋಧಿಸ ಬೇಕು .
ಇದು ಅಭಿವ್ರದ್ಧಿ ಯ ಮೂಲ ಮಂತ್ರ ವಾಗಿದೆ .ಸಂಪತ್ತು ಶಬ್ದ ದ ಅರ್ಥವನ್ನು ಜನತೆ ಮತ್ತು ಸರಕಾರ ತಿಳಿದು ಕೊಂಡರೆ /ನಡೆದರೆ
ನಮ್ಮ ಭವ್ಯ ಭಾರತದ ನವ ನಿರ್ಮಾಣ ವಾಗುವುದು .ಎಲ್ಲರೂ ಸಹಕರಿಸಿ
ನಾಗೇಶ್ ಪೈ
ಜೈ ಕರ್ನಾಟಕ /ಹಿಂದ್

No comments: