Thursday, July 30, 2009

munde baruva habbagalu mattu Acharane.-sugamavagali.

ಭವ್ಯ ಭಾರತದ ದಲ್ಲಿ ಧರ್ಮ ಗಳು ಮತ್ತು ಸಂಬಂಧ ಪಟ್ಟ ಹಬ್ಬಗಳ ಆಚರಣೆ .
ಭಾರತದ ಪ್ರತಿಯೊಬ್ಬ ಪ್ರಜೆಗೆ ತಮ್ಮ ತಮ್ಮ ಧರ್ಮ ಹಾಗೂ ಅವುಗಳ ಸಂಬಂಧ ಪಟ್ಟ ಹಬ್ಬಗಳನ್ನು ಆಚರಣೆ ಮಾಡುವ ಅಧಿಕಾರ ವನ್ನು ಸಂವಿಧಾನ ದಲ್ಲಿ ಕೊಡಲಾಗಿದೆ .ಆದರೆ ಕೆಲವು ಕಿಡಿ ಗೇಡಿಗಳು ಇದನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಿ ಸಮಾಜ /ರಾಷ್ಟ್ರ ದ್ರೋಹ ಬಗೆದಿರುವುದನ್ನು ಅಲ್ಲದೆ ಆಸ್ತಿ /ಜೀವ ಹಾನಿ ಮಾಡಿರುವುದು ಇತ್ತೀಚೆಗಿನ ದಿನ ಗಳಲ್ಲಿ ಕಂಡು ಬಂದಿದೆ .ಪೋಲಿಸ್ ವ್ಯವಸ್ಥೆ ಮತ್ತು ಜಿಲ್ಲಾಧಿಕಾರಿ ಇದನ್ನು ತಡೆಗಟ್ಟಲು ಪ್ರಯತ್ನಿಸುತ್ತದೆ .ಸಫಲರಾಗಿ ಶಾಂತಿ ಯನ್ನು ಕಾಪಾಡಿ ಕೊಂಡು ಬಂದಿರುವುದನ್ನು ನೀವೆಲ್ಲರೂ ಗಮನಿಸಿರ ಬಹುದು .ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ತಪ್ಪಿತಸ್ತರನ್ನು ಭಂಧಿಸಿ ಶಿಕ್ಷೆ ಕೊಟ್ಟರೆ ಭಯದ ವಾತಾವರಣ ಉಂಟಾಗಿ ಅಪರಾಧ ಗಳ ಸಂಖ್ಯೆ ಇಳಿಮುಖ ವಾಗಬಹುದು .ಇಲ್ಲಿ ಮುಖ್ಯವಾಗಿ ರಾಜಕಾರಣಿ /ರಾಜಕೀಯ ಪ್ರವೇಶ ನಿಷೇಧ .
ಹಿಂದೂ ಧರ್ಮ ದಲ್ಲಿ ಹಬ್ಬ ಗಳ ಮತ್ತು ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಯಲ್ಲಿ ಹೆಚ್ಚು ಸಂಖ್ಯೆ ಯಲ್ಲಿ ಕಾಣಬಹುದು .
ನಮ್ಮ ಸಂಸ್ಕ್ರತಿ ಯನ್ನು ಉಳಿಸಿಕೊಳ್ಳಲು ಹಬ್ಬಗಳು ಸಹಾಯ ಕಾರಿಯಾಗಿದೆ.ದೈವಿಕ ಭಾವನೆ ಹೆಚ್ಚಿಸುತ್ತಿದೆ .
ಇಲ್ಲಿ ನಾಗರೀಕರಿಗೆ ವಿಶ್ವದ ಅರ್ಥಿಕ ಹಿನ್ನಡೆ ಬಲವಾದ ಪೆಟ್ಟು ಕೊಟ್ಟಿದೆ .
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯಮ ವರ್ಗ ಹಾಗೂ ಕೆಳಗಿನವರಿಗೆ ವಸ್ತುಗಳನ್ನು ಖರೀದಿ ಮಾಡಲು ಸಾಧ್ಯವಾಗದೆ ಹಬ್ಬ ಆಚರಣೆ ಕಷ್ಟ ಕರ .
ಕೆಲವು ರಾಜ್ಯ ಮತ್ತು ಪ್ರದೇಶ ಗಳಲ್ಲಿ ಎಲ್ಲಾ ಧರ್ಮದವರು ಎಲ್ಲಾ ಹಬ್ಬ ಗಳನ್ನೂ ಒಟ್ಟಿಗೆ ಸೇರಿ ಆಚರಿಸುವ ಪದ್ಧತಿ ಕಂಡು ಬಂದಿದೆ .ಸರ್ವ ಧರ್ಮ ಸಮ್ಮಿಲನ ಆಗಿರುವುದು ವಿವಿಧತೆ ಯಲ್ಲಿ ಏಕತೆ ಯ ಧ್ಯೋತಕ ವಾಗಿದೆ .
ಎಲ್ಲರೂ ಸೇರಿ ವಿಚಾರ ಮಾಡಿ ಹಿತ ದ್ರಸ್ಟಿಯಿಂದ ಒಮ್ಮತಕ್ಕೆ ಬರಬೇಕು .ಸರಕಾರವೂ ಕೈ ಜೋಡಿಸಿದಾಗ ಇದು ಕಷ್ಟ ಸಾಧ್ಯ ವೇನೂ ಅಲ್ಲ .
ಧರ್ಮ ಗುರುಗಳ ಸಹಕಾರವು ಬೇಕಾಗದೆ .
ಮುಂದೆ ಬರುವ ಎಲ್ಲಾ ಹಬ್ಬಗಳು ಜನರ ನೆಮ್ಮದಿಯನ್ನು ಕೆಡಿಸದೆ ಶಾಂತಿ ,ಸೌಹಾರ್ದ ಬೆಳಸಿ ಅಭ್ಯುದಯದ ಕಡೆ ಸಾಗಲಿ ಇದು ನಮ್ಮ ಹಾರೈಕೆ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ನಾಗೇಶ್ ಪೈ .
ಜೈ ಹಿಂದ್

No comments: