Tuesday, January 19, 2010

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮ ಶ್ರೀ ವಿ .ಕೆ ಮೂರ್ತಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ -೨೦೦೮
ಭಾರತೀಯಚಲನ ಚಿತ್ರದ ಅತೀಶ್ರೇಷ್ಟ ಪುರಸ್ಕಾರ ಇದಾಗಿದೆ .ದಾದಾ ಸಾಹೇಬ್ ಫಾಲ್ಕೆ ಯವರು ಸ್ವತಃ ಛಾಯಾ ಗ್ರಾಹಕರಾಗಿದ್ದರು.ಇವರ ಹೆಸರಿನಲ್ಲಿ ಪ್ರತಿ ವರ್ಷ ಇ ಪುರಸ್ಕಾರ ನೀಡಲಾಗುತ್ತಿದೆ.
೨೦೦೮ ನೇ ಸಾಲಿನ ಪ್ರಶಸ್ತಿ ಕನ್ನಡಿಗರಾದ ಹೆಸರಾಂತ ಹಿರಿಯ ಛಾಯಾಗ್ರಾಹಕ ಶ್ರೀಯುತ ವಿ .ಕೆ ಮೂರ್ತಿ ಅವರಿಗೆ ಲಭಿಸಿದೆ .
ವರ ನಟ ಡಾ ರಾಜ್ ಕುಮಾರ್ ಕನ್ನಡ ದಲ್ಲಿ ಮೊದಲಿಗರು .ದ್ವಿತೀಯ ಸ್ಥಾನ ದಲ್ಲಿ ಮೂರ್ತಿ .
ನಮ್ಮ ಸುಂದರ ಮೈಸೂರಿನಲ್ಲಿ ಜನಿಸಿದ ಇವರು ಶಿಕ್ಷಣ ಮುಗಿಸಿ ಮುಂಬೈ ನಲ್ಲಿ ಹಿಂದಿ ಚಲನ ಚಿತ್ರ ದಲ್ಲಿ ಛಾಯಾ ಗ್ರಾಹಕ ರಾಗಿ ಜೀವನ ವ್ರತ್ತಿ ನಡೆಸಿದರು .ರಾಜಾಹರೀಶ್ ಚಂದ್ರ ಮೊದಲಾದ ಚಿತ್ರ .ಸಿನಿಮಾ ಸ್ಕೋಪ್ ನಲ್ಲಿ ಮೊದಲಿಗ .
ಎಸ ವಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಹೂವು ಹಣ್ಣು ಕನ್ನಡ ಚಲನ ಚಿತ್ರ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಇದು ೫೬ ನೇ ಫಾಲ್ಕೆ ಪ್ರಶಸ್ತಿ ಆಗಿದೆ .
ಈಗ ನಿವ್ರತ್ತಿ ನಂತರ ಬೆಂಗಳೂರಿನಲ್ಲಿ ನೆಲಸಿರುತ್ತಾರೆ .
ಇನ್ನೂ ಹೆಚ್ಚಿನ ಪ್ರಶಸ್ತಿ ಇವರ ಮಡಿಲಿಗೆ ಸೇರಲಿ .
ಇವರಿಗೆ ಫಾಲ್ಕೆ ಪ್ರಶಸ್ತಿ ಬಂದಿರುವುದು ಮೈಸೂರಿಗೆ ,ಕರ್ನಾಟಕ ರಾಜ್ಯ ಹಾಗೂ ಭವ್ಯ ಭಾರತದ ಜನತೆಗೆ ಹೆಮ್ಮೆಯ ವಿಷಯವಾಗಿದೆ .
ಭಗವಂತನು ಶ್ರೀಯುತ ಮೂರ್ತಿ ಅವರಿಗೆ ಆಯುರಾರೋಗ್ಯ ಕೊಟ್ಟು ಹೆಚ್ಚು ಹೆಚ್ಚು ಕಲಾಸೇವೆ ಮಾಡುವಂತಾಗಲಿ .
ನಮ್ಮ ಸುಂದರ ಮೈಸೂರು
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .
ಜೈ ಹಿಂದ್ .

No comments: