Friday, January 22, 2010

ನಮ್ಮ ಕರ್ನಾಟಕ ರಾಜ್ಯದ ಸುಂದರ ಕರಾವಳಿ NH

ನಮ್ಮ ಸುಂದರ ಕರ್ನಾಟಕ ಕರಾವಳಿ ಪ್ರದೇಶ -ವ್ಯಕ್ತಿತ್ವ ವಿಕಾಸ ಸಂಗ್ರಹ ಮಾಲಿಕೆ -೫ [ರಾಷ್ಟ್ರೀಯ ಹೆದ್ದಾರಿ -೧೭
ನಮ್ಮ ಇ ಕರಾವಳಿ ಪ್ರದೇಶವು ಗೋವಾ ಮತ್ತು ಕೇರಳ ಗಳ ನಡುವೆ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ವಿಶಾಲ ಪ್ರದೇಶ ದಲ್ಲಿ ಹಬ್ಬಿ ನಿಸರ್ಗ ಸೌಂದರ್ಯ ವನ್ನು ಪ್ರವಾಸಿಗರಿಗೆ ನಿರಂತರ ವಾಗಿ ಉಣೀಸುತ್ತಿದೆ.
ಉಪ್ಪು ,ಸಿಹಿ ನೀರಿನ ಹವೆ ಆರೋಗ್ಯಕ್ಕೆ ಮತ್ತು ಮಳೆ ನಾಗರೀಕರನ್ನು ಸಂಕಟಕ್ಕೆ ಸಿಲುಕಿಸಿದರೂ ದಸ್ಟ ಪುಸ್ಟರಾಗಿ ಮೇಧಾವಿ ಚುರುಕು ಬುದ್ಧಿ ಯವರಾಗಿ ಕಷ್ಟ ಸಹಿಸುವ ಪ್ರವ್ರತ್ತಿ ಯವರು .
ಇಲ್ಲಿ ಕಲೆ ,ಯಕ್ಷಗಾನ ,ವಿಧ್ಯಾಭ್ಯಾಸ ,ಅರೋಗ್ಯ ,ಶಿಸ್ತಿನ ಜೀವನಕ್ಕೆ ಹೆಸರು ಪಡೆದಿದೆ .ಹೆಚ್ಚು ಅಂಕ ಪಡೆಯುವ ಜಿಲ್ಲೆ ಎನ್ನುವ ಬಿರುದು ಪಡೆದಿರುವುದು .ವಾಯು ಮಾರ್ಗ ರಸ್ತೆ ರೈಲ್ವೆ ಹಾಗೂ ಜಲ ಮಾರ್ಗ ಸೌಕರ್ಯ ವಿರುವುದರಿಂದ ವ್ಯಾಪಾರ ದಲ್ಲಿ ಸರ್ವೋನ್ನತಿ ಕಂಡಿದೆ .ಮುಂಬೈ ಮತ್ತು ಮಂಗಳೂರು ,ಕಾರವಾರ ಬಂದರು ಗಳು ಮತ್ಸ್ಯ ವ್ಯವಸಾಯ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಮ್ಮ ದೇಶಕ್ಕೆ ಹಣಕಾಸು ವಿಭಾಗ ದಲ್ಲಿ ನಿವ್ವಳ ಲಾಭ ತಂದಿದೆ .
ಶ್ರೀಯುತ ಟಿ ಎ ಪೈ ಯವರು ಕೇಂದ್ರ ರೈಲ್ವೆ ಮಂತ್ರಿ ಯಾಗಿರುವಾಗ ರೈಲ್ವೆ ಮಾರ್ಗ ದಲ್ಲಿ ಸಂಚಾರ ದಿಂದಾಗಿ ವ್ಯಾಪಾರ ವಹಿವಾಟು ಹೆಚ್ಚಿಸಿದೆ .ಈಗಿನ ಕೇಂದ್ರ ರೈಲ್ವೆ ಮಂತ್ರಿ ಕನ್ನಡಿಗ ರಾಗಿ ನಾವೆಲ್ಲರೂ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡೋಣ .
ಕರಾವಳಿ ಪ್ರದೇಶದ ಯುವಜನತೆ ತಮ್ಮ ಚಿಕ್ಕ ವಯಸ್ಸಿನಲ್ಲಿ ಹುಟ್ಟಿದ ಊರು ಬಿಟ್ಟು ಹೊಟ್ಟೆ ಪಾಡಿಗಾಗಿ ನಗರ ಪ್ರದೇಶ ಗಳಾದ ಮುಂಬೈ ,ಚೆನ್ನೈ ,ಬೆಂಗಳೂರು ,ಕೋಲ್ಕತ್ತಾ ಸೇರಿದ್ದಾರೆ .ಸಾಮಾನ್ಯವಾಗಿ ಹೋಟೆಲ್ ,ಬ್ಯಾಂಕ್ ,ರೈಲ್ವೆ ವಿಭಾಗ ದಲ್ಲಿ ಸೇವೆ ಸಲ್ಲಿಸಿದ್ದಾರೆ .
ಕರಾವಳಿ ಪ್ರದೇಶ ದಲ್ಲಿ ,ಕೊಂಕಣಿ ,ತುಳು ಮತ್ತು ಕನ್ನಡ ಭಾಷೆ ಮಾತನಾಡುವ ಎಲ್ಲಾ ಹಿಂದೂ ,ಮುಸ್ಲಿಂ ,ಕ್ರಿಸ್ಟಿಯನ್ ರು ಇದ್ದಾರೆ
ಸುಂದರ ದೇವಸ್ಥಾನ ಗಳು ವರ್ಷಕ್ಕೊಮ್ಮೆ ರಥೋತ್ಸವ ,ಜಾತ್ರೆ ವಿಜೃಂಭಣೆ ಯಾಗಿ ನಡಯುತ್ತಿದೆ .ಈಗ ಮಂಗಳೂರು ಪೇಟೆಯ ವೆಂಕಟ ರಮಣ ದೇವಸ್ಥಾನದಲ್ಲಿ ರಥ ಸಪ್ತಮಿ .
ಗೌಡ ಸಾರಸ್ವತ ಸಮಾಜ ಭಾನ್ಧವರು ವೈಭವ ದಿಂದ ತೇರು ಹಬ್ಬ ಆಚರಿಸುತ್ತಾರೆ
ನಮ್ಮ ಯುವ ಜನತೆ ಸಾರ್ವಜನಿಕ ವಾಗಿ ಆಚರಿಸುವ ಹಬ್ಬದಲ್ಲಿ ಭಾಗವಹಿಸಿ ಸಮಾಜದ ಬೆಳವಣಿಗೆಯಲ್ಲಿ ಶ್ರಮಿಸುತ್ತಾರೆ .
ಕರ್ನಾಟಕ ರಾಜ್ಯ ಸರಕಾರವು ಕರಾವಳಿ ಉತ್ಸವ ಆಚರಿಸುತ್ತಿದೆ
ನಾವೆಲ್ಲರೂ ಪಕ್ಷ /ಜಾತಿ ಮತ್ತು ಧರ್ಮ ಭೇಧ ಮರೆತು ರಾಜ್ಯದ ಸರ್ವಾಂಗೀಣ ಬೆಳವಣಿಗೆಗಾಗಿ ದುಡಿಯೋಣ ಸಂತೋಷ ದಲ್ಲಿ ಸೇರೋಣ ಬನ್ನಿ .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್ .
ನಾಗೇಶ್ ಪೈ .
naama

No comments: