Friday, April 17, 2009

ದಯವಿಟ್ಟು ತಪ್ಪದೇ ಮತ ದಾನದಲ್ಲಿ ಭಾಗವಹಿಸಿ .

ಸಾರ್ವತ್ರಿಕ ಚುನಾವಣೆ -೨೦೦೯
ಮತದಾನ ದಲ್ಲಿ ಎಲ್ಲರೂ ಭಾಗವಹಿಸಿರಿ ಮತ್ತು ನಿಮ್ಮ ಅಧಿಕಾರ ಪ್ರದರ್ಶಿಸಿ -ಅಭಿಯಾನ .
ಲೋಕ ಸಭಾ ಚುನಾವಣೆ ೫ ವರ್ಷಕ್ಕೆ ಒಂದು ಸಲ ಬರುವುದರಿಂದ ಮತದಾನ ಬಹಳ ಮಹತ್ವ ಪಡೆದಿದೆ .ನಿಮ್ಮ ಅಧಿಕಾರ ನೀವೂ ಮರೆಯ ಬಾರದು.ಮರೆತರೆ ಪುನಃ ೫ ವರ್ಷ ಕಾಯುವ ಪ್ರಸಂಗ ಬರ ಬಹುದು .
ನಿಮ್ಮ ನಿಮ್ಮ ಕ್ಷೇತ್ರ ದ ಸರ್ವತೋಮುಖ ಬೆಳವಣಿಗೆಗೆ ನೀವು ಕಾರಣ ರಾಗುವಿರಿ.
ಸಮರ್ಥ ನಾಯಕನ ಅವಶ್ಯಕತೆ ನಮಗಿದೆ .
ಭವ್ಯ ಭಾರತದ ನವ ನಿರ್ಮಾಣ ವಾಗ ಬೇಕು .
ರಾಜ್ಯ ಮತ್ತು ರಾಷ್ಟ್ರ ಕ್ಕೆ ಜನ ಬೆಂಬಲ ವಿಲ್ಲದೆ ಏನೂ ಅಭಿವ್ರದ್ಧಿ ಯಗಲಾರದು .
ದಯವಿಟ್ಟು ಚುನಾವಣೆಯಲ್ಲಿ ಭಾಗವಹಿಸಿ ನಿಮ್ಮ ಮತವನ್ನು ಯೋಗ್ಯ /ಧಕ್ಷ ಅಭ್ಯರ್ಥಿಗೆ ಹಾಕಿ ಸಂಸದ ರಾಗಿ ಗೆಲ್ಲಿಸಿರಿ .
ಜೈ ಹಿಂದ್ .
ನಾಗೇಶ್ ಪೈ ಕುಂದಾಪುರ .

1 comment:

Nagesh pai Kundapur said...

ನಮ್ಮ ಇ ಭಾರತದ ಪ್ರಮುಖ ನಗರ ಗಳಾದ ಮುಂಬೈ ,ಕಲ್ಕತ್ತಾ,ನವ ದೆಹಲಿ ,ಚೆನ್ನೈ ಮತ್ತು ಬೆಂಗಳೂರು ಇತ್ಯಾದಿ ಗಳಲ್ಲಿ ಯ ಬಹು ಪಾಲು ಜನತೆ ಹಳ್ಳಿಗಳಿಂದ ತಮ್ಮ ಹೊಟ್ಟೆ ಪಾಡಿಗಾಗಿ ಬಂದಿರುತ್ತಾರೆ . ವಾಸಿಸಲು ಸ್ಥಳಾವಕಾಸ ಇಲ್ಲದೇ ಇರುವುದರಿಂದ ಕೊಳಚೆ ಪ್ರದೇಶ ಗಳನ್ನೂ ಅವಲಂಬಿಸಿರುತ್ತಾರೆ .ಇಂಥಹ ಪ್ರದೇಶ ಗಳು ದಿನೇ ದಿನೇ ಹೆಚ್ಚು ತ್ತಿವೆ .ಇಲ್ಲೀ ಮತ ದಾರರ ಸಂಖ್ಯೆ ರಾಜ ಕಾರಣಿಗಳ ಗಮನ ಸೆಳೆದಿರುವುದು ವಿಶೇಷ .ಕೇವಲ ಚುನಾವಣೆ ಸಮಯ ದಲ್ಲಿ ನೆನಪಿಸುವುದು ಹಾಸ್ಯಾಸ್ಪದ ವು ಹೌದು ಅಲ್ಲದೆ ಬೇಸರವನ್ನು ಉಂಟು ಮಾಡಿದೆ .ಈಗ ಪಾದಚಾರಿ ಗಳಾಗಿ ಹೋಗಿ ಅವರ ಮತ ವನ್ನು ಯಾಚಿಸುತ್ತಾರೆ.ಹಣ,ಹೆಂಡ ,ಮತ್ತು ಸೀರೆ ಯ ಆಮಿಷ ತೋರಿಸಿದ ಘಟನೆ ಗೆ ಸಂಧರ್ಭ ವು ಇದೆ .
ಮುಖ್ಯ ವಾಗಿ ರಾಜ ಕಾರಣಿಗಳು ಚುನಾವಣೆ ನಂತರ ಮರೆತು ಬಿಡುತ್ತಾರೆ .
ಪ್ರಜ್ಞಾವಂತರು ಇದನ್ನು ಕೊಳಚೆ ನಿವಾಸಿ ಗಳ ಗಮನಕ್ಕೆ ತರಬೇಕು .ಪ್ರಜಾ ಪ್ರಭುತ್ವ ದಲ್ಲಿ ಪ್ರತಿಯೊಬ್ಬರೂ ಮತ ದಾನ ಮಾಡುವುದು ಅತ್ಯಂತ ಮಹತ್ವ ಪೂರ್ಣ ಕೆಲಸವಾಗಿದೆ .ಬಹು ಮತದ ಆಧಾರದ ಮೇಲೆ ಸರಕಾರ ಅಧಿಕಾರಕ್ಕೆ ಬರುವುದರಿಂದ ಪ್ರತಿಯೊಂದು ಮತವು ಅತ್ಯಂತ ಅಮೂಲ್ಯ ಆಗುತ್ತದೆ .
ರಾಷ್ಟ್ರದ ಭದ್ರತೆ ಗಾಗಿ ,ಅಭಿವ್ರದ್ಧಿ ಗಾಗಿ ಹೋರಾಡುವ ಯೋಗ್ಯ /ಧಕ್ಷ ಅಭ್ಯರ್ತಿ ಗಳಿಗೆ ಮತ ನೀಡಿ .
ದಿನಾಂಕ ೨೩ ಗುರುವಾರ ಮತ ಗಟ್ಟಳೆಗಳಲ್ಲಿ ಮತ ಚಲಾಯಿಸಿ ರಾಷ್ಟ್ರ ಧರ್ಮ ಅನುಸರಿಸ ಬೇಕು.
ಭವ್ಯ ಭಾರತದ ನವ ನಿರ್ಮಾಣ ಮಾಡೋಣ ಬನ್ನಿ .
ಕುಂದಾಪುರ ನಾಗೇಶ್ ಪೈ .